<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ತಿರುಪತಿ ದೇಗುಲದ ಮೊದಲ ಆರತಿಗೆ ಕರ್ನಾಟಕದ ಗಣ್ಯರಿಗೆ ಅವಕಾಶ! ಸಿಎಂಡಿಕೆ ಶಿವಕುಮಾರ್ ಘೋಷಣೆ

ತಿರುಪತಿ ದೇಗುಲದ ಮೊದಲ ಆರತಿಗೆ ಕರ್ನಾಟಕದ ಗಣ್ಯರಿಗೆ ಅವಕಾಶ! ಸಿಎಂಡಿಕೆ ಶಿವಕುಮಾರ್ ಘೋಷಣೆ
Summary: Chief Minister D.K. Shivakumar said that special facilities will be provided to Karnataka's representatives and dignitaries to perform the first aarti of the Tirumala temple. The state government will soon issue a protocol order in this regard, he said, and public representatives, senior officials and other dignitaries will be allowed to perform the first aarti as per the prescribed rules.

BELAGAVI NEWS:

ತಿರುಪತಿಯಲ್ಲಿ ಕರ್ನಾಟಕಕ್ಕೆ ವಿಶೇಷ ಗೌರವ: ಗಣ್ಯರಿಗೆ ನಿತ್ಯ ಮೊದಲ ಆರತಿ ನೀಡಲು ರಾಜ್ಯ ಸರ್ಕಾರ ಆದೇಶ-ಸಿಎಂಡಿ.ಕೆ.ಶಿವಕುಮಾರ್

ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಕರ್ನಾಟಕಕ್ಕೆ ದೊರೆಯುವ ವಿಶೇಷ ಗೌರವದ ಕುರಿತು ಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ತಿರುಪತಿಯಲ್ಲಿ ಪ್ರತಿದಿನ ನಡೆಯುವ ಮೊದಲ ಆರತಿ ಕರ್ನಾಟಕದ ಪರವಾಗಿ ಸ್ವೀಕರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಆರತಿಯನ್ನು ಕರ್ನಾಟಕದ ಜನಪ್ರತಿನಿಧಿಗಳು, ಸಿರಿಯಾ ಅಧಿಕಾರಿಗಳು, ನ್ಯಾಯಾಧೀಶರು ಹಾಗೂ ಸರ್ಕಾರದ ಪರವಾಗಿ ಭೇಟಿ ನೀಡುವ ಗಣ್ಯರಿಗೆ ಶಿಷ್ಟಾಚಾರದ ಪ್ರಕಾರ ನೀಡುವಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಭಾನುವಾರ ಬೆಂಗಳೂರಿನ ಬನಶಂಕರಿ ಆರನೇ ಹಂತದ ಲಿಂಗಧೀರನಹಳ್ಳಿಯ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ತಿರುಮಲ ವೆಂಕಟೇಶ್ವರ ದೇವಸ್ಥಾನದ ಒಳ ಮುಖ್ಯದ್ವಾರದ ಬಳಿ ತೆರಳಿ ವಿಶೇಷ ಪೂಜೆ ಸಲ್ಲಿಸಲು ಕರ್ನಾಟಕದ ಮುಖ್ಯಮಂತ್ರಿ ಗೆ ವಿಶೇಷ ಅವಕಾಶವಿದೆ ಎಂದು ಹೇಳಿದರು.

ಸದ್ಯ ತಿರುಪತಿಯಲ್ಲಿ ನಡೆಯುವ ಮೊದಲ ಆರತಿಯನ್ನು ಕರ್ನಾಟಕ ಸರ್ಕಾರದ ವಿಶೇಷ ಅಧಿಕಾರಿ ಸ್ವೀಕರಿಸುತ್ತಿದ್ದಾರೆ . ಆದರೆ ಇನ್ನು ಮುಂದೆ ಸಚಿವರು, ಶಾಸಕರು, ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರು ಅಥವಾ ಸರಕಾರದ ಪರವಾಗಿ ಅಧಿಕೃತವಾಗಿ ಭೇಟಿ ನೀಡುವ ಯಾವುದೇ ಗಣ್ಯರು ಇದ್ದರೆ ಅವರಿಗೆ ಈ ಗೌರವ ದೊರೆಯುವಂತೆ ಆದೇಶ ಹೊರಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಈ ಕ್ರಮದಿಂದ ತಿರುಪತಿಯಲ್ಲಿ ಕರ್ನಾಟಕಕ್ಕೆ ಇರುವ ಐತಿಹಾಸಿಕ ಮತ್ತು ಧಾರ್ಮಿಕ ಗೌರವ ಇನ್ನಷ್ಟು ಸ್ಪಷ್ಟವಾಗಲಿದ್ದು, ರಾಜ್ಯದ ಪ್ರತಿನಿಧಿಗಳಿಗೆ ಶಿಷ್ಟಾಚಾರದ ವಿಶೇಷ ಮಾನ್ಯತೆ ದೊರೆಯಲಿದೆ ಎಂದು ಅವರು ತಿಳಿಸಿದರು.

ತಿರುಪತಿಯಲ್ಲಿ ಕರ್ನಾಟಕದ ಗಣ್ಯರಿಗೆ ವಿಶೇಷ ಆರತಿ: 'ಇದು ನನ್ನ ಅವಧಿಯ ಮುಖ್ಯ ಘೋಷಣೆ' ಎಂದು ಸಿಎಂ ಡಿಕೆ ಶಿವಕುಮಾರ್

ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, "ಎಷ್ಟೋ ಮಂದಿ ಶಾಸಕರು, ಜನಪ್ರತಿನಿಧಿಗಳು ತಿರುಪತಿಗೆ ಹೋದಾಗ ಸರಿಯಾದ ದರ್ಶನ ಸಿಗದೇ ವಾಪಸ್ ಬಂದಿದ್ದಾರೆ. ಇನ್ನು ಮುಂದೆ ದೇವರ ಮುಂದೆ ನಿಂತು ಆರತಿ ಪಡೆಯುವ ಅವಕಾಶ ದೊರೆಯಲಿದೆ. ರಾಜ್ಯದ ಸೇವೆ ಮಾಡುವ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲು ಈ ವ್ಯವಸ್ಥೆ ಮಾಡಲಾಗಿದೆ. ಇದು ನನ್ನ ಅವಧಿಯಲ್ಲಿ ಜಾರಿಯಾಗಲಿರುವ ಪ್ರಮುಖ ಘೋಷಣೆಗಳಲ್ಲಿ ಒಂದಾಗಿದೆ" ಎಂದು ತಿಳಿಸಿದರು.

ತಿರುಪತಿ ಭೇಟಿ ವೇಳೆ ಮೂಡಿದ ಆಲೋಚನೆ

ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಸಿಎಂ, "ನಾನು ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ನಮ್ಮ ಮನೆ ದೇವರಾದ ತಿರುಪತಿಗೆ ಹೋಗಿರಲಿಲ್ಲ. ಇತ್ತೀಚಿಗೆ ತಿರುಪತಿಗೆ ಭೇಟಿ ನೀಡಿದಾಗ ಈ ವಿಚಾರದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿದೆ" ಎಂದು ಹೇಳಿದರು.

ಎಸ್ಎಂ ಕೃಷ್ಣ ಅವರ ಕನಸು ನನಸಾಗಲಿಲ್ಲ

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅವಧಿಯಲ್ಲಿ ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ಸ್ಥಾಪಿಸಿ, ಭಕ್ತರಿಗೆ ಅನುಕೂಲವಾಗುವಂತೆ ಭವ್ಯ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗಿತ್ತು ಎಂದು ಸಿಎಂ ನೆನಪಿಸಿದರು.

ಎಸ್ಎಂ ಕೃಷ್ಣ ಅವರು ತಿರುಪತಿಯಲ್ಲಿ ಕರ್ನಾಟಕ ಟ್ರಸ್ಟ್ ರಚಿಸಿ, ವೈಭವಯುತ ಕನ್ನಡ ನಿರ್ಮಿಸುವ ಉದ್ದೇಶದಿಂದ ನನ್ನನ್ನು ಟ್ರಸ್ಟ್ ಅಧ್ಯಕ್ಷನನ್ನಾಗಿ ನೇಮಿಸಿದ್ದರು. ಆದರೆ ನಮ್ಮ ಸರ್ಕಾರದ ಅವಧಿ ಮುಗಿದ ಕಾರಣ ಆಯೋಜನೆ ಪೂರ್ಣಗೊಳ್ಳಲಿಲ್ಲ. ನಂತರ ನನ್ನನ್ನು ಅಧ್ಯಕ್ಷನಾಗಿ ಮುಂದುವರಿಸದ ಕಾರಣ ಆ ಕೆಲಸವು ನಿಂತು ಹೋಯಿತು"ಎಂದು ಹೇಳಿದರು

ಅಲ್ಲದೆ, ಮಹಾರಾಜರ ಕಾಲದಲ್ಲಿಯೇ ಕರ್ನಾಟಕಕ್ಕೆ ತಿರುಪತಿಯಲ್ಲಿ ಸುಮಾರು ಏಳು ಎಕರೆ ಜಾಗವನ್ನು ನೀಡಲಾಗಿತ್ತು. ಆ ಜಾಗದ ಸದ್ಬಳಕೆ ಹಾಗೂ ಕರ್ನಾಟಕ ಭಕ್ತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.

'ದ್ವಾರಕನಾಥ್ ಹೇಳಿದ ಭವಿಷ್ಯ ಬಹಿರಂಗಪಡಿಸಿದರೆ ದೊಡ್ಡ ಸುದ್ದಿಯಾಗುತ್ತದೆ' - ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಜ್ಯೋತಿಷಿ ದ್ವಾರಕನಾಥ್ ಅವರ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ದ್ವಾರಕನಾಥ್ ಅವರು ಹಿಂದೆ ಹೇಳಿದ್ದೊಂದು ಭವಿಷ್ಯವನ್ನು ಈಗ ಬಹಿರಂಗಪಡಿಸಿದರೆ ಅದು ದೊಡ್ಡ ಸುದ್ದಿ ಆಗಲಿದೆ ಎಂದು ಸಿಎಂ ಹೇಳಿದ್ದಾರೆ.

ಬೆಂಗಳೂರಿನ ಬನಶಂಕರಿ ಆರನೇ ಹಂತದಲ್ಲಿ ಲಿಂಗಧೀರನಹಳ್ಳಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,"ಜ್ಯೋತಿಷಿ ದ್ವಾರಕನಾಥ್ ಅವರು ಸುಬ್ರಮಣ್ಯ ದೇವಾಲಯ ನಿರ್ಮಿಸುವ ವಿಚಾರವನ್ನು ಹಲವು ಬಾರಿ ಹೇಳುತ್ತಿದ್ದರು. ನಾನು ಸಂದರ್ಭ ಬಂದಾಗ ಮಾಡೋಣ ಎಂದು ಹೇಳಿದ್ದೆ. ಈಗ ಆ ಸಂದರ್ಭ ಬಂದಿದೆ. ದ್ವಾರಕನಾಥ್ ಅವರು ನನಗೆ ಪೂಜ್ಯ ಗುರು ಸಮಾನರು.

ಇದೇ ವೇಳೆ, "ದ್ವಾರಕನಾಥ್ ಅವರು ಹಿಂದೆ ಒಂದು ಭವಿಷ್ಯ ನುಡಿದಿದ್ದರು. ಅದನ್ನು ನಾನು ಈಗ ಇಲ್ಲಿ ಹೇಳಿದರೆ ದೊಡ್ಡ ಸುದ್ದಿಯಾಗುತ್ತದೆ" ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು. ಆದರೆ ಆ ಭವಿಷ್ಯದ ಕುರಿತು ಹೆಚ್ಚಿನ ವಿವರಗಳನ್ನು ಅವರು ಬಹಿರಂಗಪಡಿಸಲಿಲ್ಲ.

ದೇವಾಲಯಗಳು ಭಕ್ತಿ ಮತ್ತು ಸಂಸ್ಕಾರದ ಕೇಂದ್ರಗಳು

ದೇವಾಲಯದ ಮಹತ್ವವನ್ನು ವಿವರಿಸಿದ ಮುಖ್ಯಮಂತ್ರಿ,"ದೇವಾಲಯ ಎಂದರೆ ಭಕ್ತಿ, ಶಕ್ತಿ, ಸಂಸ್ಕಾರ ಮತ್ತು ಧರ್ಮದ ನೆಲೆ. ಇದು ಭಕ್ತ ಮತ್ತು ಭಗವಂತನ ನಡುವಿನ ಆಧ್ಯಾತ್ಮಿಕ ಸಂಪರ್ಕದ ಸ್ಥಳ. ಈ ದೇವಾಲಯಕ್ಕೆ ಬರುವ ಪ್ರತಿಯೊಬ್ಬ ಭಕ್ತನಿಗೂ ಮನಶಾಂತಿ ದೊರೆಯಬೇಕು" ಎಂದು ಹೇಳಿದರು.

'ಧರ್ಮದಿಂದಲೇ ವಿಶ್ವಕ್ಕೆ ಶಾಂತಿ'

ವೀರಗಂಗಾಧರ್ ಅಜ್ಜಯ್ಯ ಅವರ ವಿಚಾರವನ್ನು ಉಲ್ಲೇಖಿಸಿದ ಸಿಎಂ, "ಮಾನವ ಧರ್ಮಕ್ಕೆ ದೇವರಲ್ಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವನ್ನು ಅವರು ನೀಡಿದ್ದರು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ಬೆಳೆಸುವಲ್ಲಿ ಧರ್ಮದ ಪಾತ್ರ ಮಹತ್ವದ್ದಾಗಿದೆ" ಎಂದರು.

'ದೇವರೊಬ್ಬ, ನಾಮ ಹಲವು'

ದ್ವಾರಕನಾಥ್ ಅವರ ಆಧ್ಯಾತ್ಮಿಕ ಚಿಂತನೆಗಳನ್ನು ಸ್ಮರಿಸಿದ ಅವರು, "ದ್ವಾರಕನಾಥ್ ಅವರು ಸುಬ್ರಹ್ಮಣ್ಯೇಶ್ವರ ದೇವಾಲಯ ನಿರ್ಮಿಸಿದ್ದಾರೆ. ಅವರ ಮನೆ ದೇವರು ಮೈಲಾರೇಶ್ವರರಾದರು, ಧರ್ಮ ಯಾವುದೇ ಆಗಲಿ ತತ್ವ ಒಂದೇ. ನಾಮ ಬೇರೆ ಬೇರೆ ಇದ್ದರೂ ದೈವ ಒಂದೇ. ಪೂಜೆ ಯಾವ ರೀತಿ ಆಗಲಿ ಭಕ್ತಿ ಒಂದೇ. ಕರ್ಮ ಬೇರೆ ಬೇರೆ ಇದ್ದರೂ ನಿಷ್ಠೆ ಒಂದೇ. ದೇವರೊಬ್ಬ, ನಾಮ ಹಲವು ಎಂಬ ಸಂದೇಶವೇ ಭಾರತೀಯ ಸಂಸ್ಕೃತಿಯ ಸಾರ" ಎಂದು ಹೇಳಿದರು

ದೇವರೊಬ್ಬ, ರೂಪಗಳು ಹಲವು; ಎಲ್ಲಾ ಪೂಜೆಗಳು ಅಂತಿಮವಾಗಿ ಭಗವಂತನಿಗೆ ಸೇರುತ್ತವೆ'- ಡಿಕೆ ಶಿವಕುಮಾರ್

ದೇವರು ವಿವಿಧ ರೂಪಗಳಲ್ಲಿ ನೆಲೆಸಿದ್ದಾನೆ. ಕಲ್ಲು, ಗೋಡೆ, ಮನುಷ್ಯ ಹಾಗೂ ಪ್ರತಿಯೊಂದು ಜೀವಿಯಲ್ಲಿಯೂ ದೈವಿಕ ಸ್ವರೂಪ ಅಡಗಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಬನಶಂಕರಿ ಆರನೇ ಹಂತದ ಲಿಂಗಧೀರನಹಳ್ಳಿಯಲ್ಲಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಅವರು ಆಧ್ಯಾತ್ಮಿಕತೆ, ಧರ್ಮ ಹಾಗೂ ಸಮಾಜದ ಸಹಭಾಗಿತ್ವ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, "ದೇವರ ರೂಪ ವಿವಿಧ ರೀತಿಯಲ್ಲಿ ಇರುತ್ತದೆ. ಕಲ್ಲು, ಗೋಡೆ, ಮನುಷ್ಯ, ಪಶು ಸೇರಿದಂತೆ ಸೃಷ್ಟಿಯ ಪ್ರತಿಯೊಬ್ಬರಲ್ಲೂ ದೈವಿಕ ಸ್ವರೂಪವಿದೆ. ಬಸವಣ್ಣ ಅವರು 'ಕಾಯಕವೇ ಕೈಲಾಸ' ಎಂದು ಹೇಳಿದ್ದಾರೆ. ವಿಧಾನಸೌಧದ ಮೇಲೆಯೂ 'ಸರ್ಕಾರದ ಕೆಲಸ ದೇವರ ಕೆಲಸ' ಎಂಬ ಸಂದೇಶ ಬರೆಯಲಾಗಿದೆ. ಜನಸೇವೆ ದೈವ ಸೇವೆ ಎಂಬುದು ನಮ್ಮ ಸಂಸ್ಕೃತಿಯ ಮೌಲ್ಯ' ಎಂದು ಹೇಳಿದರು.

'ಸುಬ್ರಹ್ಮಣ್ಯ ಶಿವನ ಮೂರನೇ ಕಲ್ಲಿನ ತೇಜಸ್ಸಿನ ಪ್ರತಿಕ'

ಸುಬ್ರಮಣ್ಯ ಸ್ವಾಮಿಯ ಮಹತ್ವವನ್ನು ವಿವರಿಸಿದ ಅವರು, "ಶಿವನ ಮೂರನೇ ಕಣ್ಣಿನ ತೇಜಸ್ಸಿನಿಂದ ಸುಬ್ರಹ್ಮಣ್ಯನು ಜನಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ನಾವು ಯಾವುದೇ ದೇವರಿಗೆ ಪೂಜೆ ಸಲ್ಲಿಸಿದರು, ಎಷ್ಟೇ ನದಿಗಳು ಹರಿದರು ಕೊನೆಗೆ ಸಮುದ್ರವನ್ನು ಸೇರುವಂತೆ ಎಲ್ಲಾ ಪ್ರಾರ್ಥನೆಗಳು ಅಂತಿಮವಾಗಿ ಅದೇ ಪರಮಾತ್ಮನನ್ನು ತಲುಪುತ್ತವೆ ಎಂದು ಹೇಳಿದರು

'ದೇವಾಲಯದ ನಿರ್ಮಾಣ ಎಲ್ಲರ ಸಹಕಾರದಿಂದಲೇ ಸಾಧ್ಯ'

ದೇವಾಲಯದ ನಿರ್ಮಾಣವು ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಸಾಧ್ಯವಾಗುವುದಿಲ್ಲ ಎಂದು ಹೇಳಿದ ಸಿಎಂ, "ಸುಬ್ರಹ್ಮಣ್ಯ ಸ್ವಾಮಿಯ ಕೃಪೆ ಎಲ್ಲರ ಮೇಲಿರಲಿ. ದೇವಸ್ಥಾನ ಕಟ್ಟುವುದು ಒಬ್ಬರಿಂದ ಸಾಧ್ಯವಿಲ್ಲ. ಸಮಾಜದ ಎಲ್ಲರೂ ಕೈಜೋಡಿಸಿದಾಗ ಮಾತ್ರ ಇಂತಹ ಪುಣ್ಯ ಕಾರ್ಯಗಳು ಯಶಸ್ವಿಯಾಗುತ್ತವೆ. ಈ ದೇವಸ್ಥಾನ ಒಬ್ಬರದ್ದಲ್ಲ, ಇದು ಜನರ ದೇವಸ್ಥಾನವಾಗಬೇಕು. ಭಕ್ತರ ಸಹಭಾಗಿತ್ವದಿಂದಲೇ ಇದು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕೇಂದ್ರವಾಗಿ ಬೆಳೆಯ ಬೇಕು" ಎಂದು ಕರೆ ನೀಡಿದರು.

ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ, ಸೇವಾ ಮನೋಭಾವ ಹಾಗೂ ಜನರ ಒಟ್ಟಿಗೆ ಮಹತ್ವವನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಶೇಷವಾಗಿ ಒತ್ತಿ ಹೇಳಿದರು.

'ಧರ್ಮವನ್ನು ಕಾಪಾಡಿದರೆ ಧರ್ಮವೇ ನಮ್ಮನ್ನು ಕಾಪಾಡುತ್ತದೆ'- ಡಿಕೆ ಶಿವಕುಮಾರ್ ಕರೆ

ಭಕ್ತಿಯ ಅಡಿಪಾಯದ ಮೇಲೆ ದೈವ ಕೃಪೆಯ ಗೋಪುರ ನಿರ್ಮಾಣವಾಗಬೇಕು. ದೇವಸ್ಥಾನಗಳು ಕೇವಲ ಕಟ್ಟಡಗಳಲ್ಲ, ಸಮಾಜವನ್ನು ಒಗ್ಗೂಡಿಸುವ ಆಧ್ಯಾತ್ಮಿಕ ಕೇಂದ್ರವಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

"ಧರ್ಮವನ್ನು ರಕ್ಷಿಸಿದರೆ ಧರ್ಮವೇ ರಕ್ಷಿಸುತ್ತದೆ"

'ಭಕ್ತಿಯ ಅಡಿಪಾಯದ ಮೇಲೆ ದೈವ ಕೃಪೆಯ ಗೋಪುರವನ್ನು ಕಟ್ಟಲು ನಾವೆಲ್ಲರೂ ಒಂದಾಗಿದ್ದೇವೆ. 'ಧರ್ಮೋ ರಕ್ಷತಿ ರಕ್ಷಿತಃ' ಎಂಬುದು ಭಾರತೀಯ ಸಂಸ್ಕೃತಿಯ ಶಾಶ್ವತ ಸಂದೇಶ. ಯಾರು ಧರ್ಮವನ್ನು ಕಾಪಾಡುತ್ತಾರೋ, ಧರ್ಮ ಅವರನ್ನು ಕಾಪಾಡುತ್ತದೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ಧರ್ಮವನ್ನು ಉಳಿಸ ಬೆಳೆಸಬೇಕು" ಎಂದು ಮುಖ್ಯಮಂತ್ರಿ ಹೇಳಿದ್ದರು.

ಯಾವುದೇ ಧರ್ಮವಾಗಿರಲಿ, ತಮ್ಮ ನಂಬಿಕೆ ಮತ್ತು ಸಂಪ್ರದಾಯವನ್ನು ಗೌರವದಿಂದ ಪಾಲಿಸಬೇಕು ಎಂದು ಹೇಳಿದ ಅವರು, "ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಜೈನ ಸೇರಿದಂತೆ ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಮೌಲ್ಯ ಮತ್ತು ಆಚರಣೆಗಳಿವೆ. ಎಲ್ಲರೂ ತಮ್ಮ ಧರ್ಮ ಮತ್ತು ಪದ್ಧತಿಯನ್ನು ಗೌರವಿಸಿ ಕಾಪಾಡಿಕೊಳ್ಳಬೇಕು. ಇದೇ ಸಾಮಾಜಿಕ ಸಾಮರಸ್ಯದ ಮೂಲ" ಎಂದು ತಿಳಿಸಿದರು.

'ದೇವಸ್ಥಾನ ನಿರ್ಮಾಣ ಎಲ್ಲರ ಜವಾಬ್ದಾರಿ'

ದೇವಾಲಯದ ನಿರ್ಮಾಣವು ಕೆಲವರ ಹೊಣೆಗಾರಿಕೆಯಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, "ದೇವಸ್ಥಾನ ನಿರ್ಮಿಸುವುದು ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ಕೆಲಸವಲ್ಲ. ಇದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ಎಲ್ಲರೂ ಕೈಜೋಡಿಸಿ ಈ ದೇವಾಲಯವನ್ನು ನಿರ್ಮಿಸಿ, ಬೆಳೆಸಿ, ಮುಂದಿನ ಪೀಳಿಗೆಗೂ ಉಳಿಸಬೇಕು"ಎಂದು ಕರೆ ನೀಡಿದರು.

'ಇದು ನಮ್ಮ ಭೂಮಿ ಪೂಜೆ, ಭಾರತೀಯ ಸಂಪ್ರದಾಯದ ಸಂಕೇತ'

"ದ್ವಾರಕನಾಥ್ ಅವರೊಂದಿಗೆ 35 ವರ್ಷಗಳ ಸಂಬಂಧ"

ಜ್ಯೋತಿಷಿ ದ್ವಾರಕನಾಥ್ ಅವರೊಂದಿಗೆ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿದ ಅವರು, "ಸಿವಿ ಶಾಸ್ತ್ರಿ ಅವರು ನನಗೆ ದ್ವಾರಕನಾಥ ಅವರನ್ನು ಪರಿಚಯ ಮಾಡಿಕೊಟ್ಟರು. ಕಳೆದ 35 ವರ್ಷಗಳಿಂದ ಅವರು ನನಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ನಮ್ಮಿಬ್ಬರ ನಡುವಿನ ಅನುಭವಗಳು, ಚರ್ಚೆಗಳು, ಮಾರ್ಗದರ್ಶನ ಮತ್ತು ಜೀವನದ ಹಲವು ಸನ್ನಿವೇಶಗಳನ್ನು ಬರೆಯಬೇಕಾದರೆ ಒಂದು ದೊಡ್ಡ ಚರಿತ್ರೆಯ ಪುಸ್ತಕವೇ ಸಿದ್ಧವಾಗುತ್ತದೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಕ್ತಿ, ಧರ್ಮ, ಸಾಮಾಜಿಕ ಒಕ್ಕೂಟ ಮತ್ತು ದೇವಸ್ಥಾನ ನಿರ್ಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುನರುಚ್ಚರಿಸಿದರು.

ಧಮ್ಕಿಗಳಿಗೆ ದ್ವಾರಕನಾಥ್ ಅವರು ಎಂದಿಗೂ ಹೆದರಿಲ್ಲ-ಸಿಎಂ ಡಿ ಕೆ ಶಿವಕುಮಾರ್ ಮೆಚ್ಚುಗೆ

'25 ವರ್ಷಗಳಿಂದ ಬಂದ ಧಮ್ಕಿಗಳಿಗೆ ಹೆದರಿಲ್ಲ'

ದ್ವಾರಕನಾಥ್ ಅವರ ಕುರಿತು ಮಾತನಾಡಿದ ಸಿಎಂ,"ದ್ವಾರಕನಾಥ್ ಅವರು ಅನೇಕ ಟೀಕೆಗಳಿಗೆ ಒಳಗಾಗಿದ್ದಾರೆ. ಮಾಧ್ಯಮಗಳಲ್ಲಿಯೂ ಅವರ ಬಗ್ಗೆ ಚರ್ಚೆಗಳು ನಡೆದಿವೆ. ಡಿಕೆ ಶಿವಕುಮಾರ್ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಆರೋಪಗಳನ್ನು ಎದುರಿಸಿದ್ದಾರೆ. ಕಳೆದ 25 ವರ್ಷಗಳಿಂದ ಅವರಿಗೆ ಹಲವು ರೀತಿಯ ಧಮ್ಕಿಗಳಿಗೆ ಬಂದಿವೆ. ಆದರೆ ಅವರು ಯಾವತ್ತೂ ಅದಕ್ಕೆ ಹೆದರಿಕೊಂಡಿಲ್ಲ" ಎಂದು ಹೇಳಿದರು.

ದ್ವಾರಕನಾಥ ಅವರ ಸಲಹೆ ಪಡೆದ ಹಲವು ಗಣ್ಯರನ್ನು ಉಲ್ಲೇಖಿಸಿದವರು, "ದೇವರಾಜ್ ಅರಸು, ಎಸ್ಎಮ್ ಕೃಷ್ಣ, ಧರ್ಮಸಿಂಗ್ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಅವರ ಸಲಹೆ ಪಡೆದಿದ್ದಾರೆ. ಸಮಾಜದ ಹಲವು ಕ್ಷೇತ್ರಗಳ ಗಣ್ಯರೊಂದಿಗೆ ಅವರು ಸಂಪರ್ಕ ಹೊಂದಿದ್ದಾರೆ" ಎಂದು ತಿಳಿಸಿದರು.

ದ್ವಾರಕನಾಥ್ ಅವರ ಭವಿಷ್ಯವಾಣಿ ಕುರಿತು ಸಿಎಂ ಹಂಚಿಕೊಂಡ ಘಟನೆ

ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಮುಖ್ಯಮಂತ್ರಿ, ಮಾಜಿ ಸಂಸದರ ಮಗ ಹಾಗೂ ತಮ್ಮ ಸ್ನೇಹಿತರಾದ ಸುಬ್ರಮಣ್ಯ ಅವರ ಕುಟುಂಬದ ಘಟನೆ ನೆನೆಸಿಕೊಂಡರು.

1993 -94 ರ ಅವಧಿಯಲ್ಲಿ ನನ್ನ ಸ್ನೇಹಿತರಾದ ಸುಬ್ರಹ್ಮಣ್ಯ ಅವರ ಪತ್ನಿಗೆ ಕ್ಯಾನ್ಸರ್ ಆಗಿತ್ತು. ಆಗ ನಾನು ಮತ್ತು ನನ್ನ ಪತ್ನಿ ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಆ ಸಮಯದಲ್ಲಿ ಇಂದಿನಷ್ಟು ವೈದ್ಯಕೀಯ ಸೌಲಭ್ಯಗಳು ಇರಲಿಲ್ಲ. ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು" ಎಂದು ಹೇಳಿದರು.

ಮುಂದುವರೆದು, "ನಾನು ಅವರ ಆಪ್ತರಿಂದ ಅವರ ಮಕ್ಕಳ ಜಾತಕವನ್ನು ತರಿಸಿ ಗುರುಗಳಾದ ದ್ವಾರಕನಾಥ್ ಅವರಿಗೆ ನೀಡಿದೆ. ಅದನ್ನು ಪರಿಶೀಲಿಸಿದ ಅವರು, ಈ ಮಕ್ಕಳ ಜಾತಕದಲ್ಲಿ ತಾಯಿಯನ್ನು ಕಳೆದುಕೊಳ್ಳುವ ಸೂಚನೆ ಇಲ್ಲ ಎಂದು ಹೇಳಿದರು. ನಂತರ ಹೊಸದುರ್ಗದ ಬಳಿ ಇರುವ ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಮತ್ತು ಹೋಮ ಮಾಡುವಂತೆ ಸಲಹೆ ನೀಡಿದರು. ಇಂದು ಆ ಮಹಿಳೆ ಆರೋಗ್ಯವಾಗಿದ್ದಾರೆ" ಎಂದು ಸಿಎಂ ತಿಳಿಸಿದರು.

ಭಕ್ತಿಯ ಮೂಲಕ ಆಧ್ಯಾತ್ಮಿಕ ಬೀಜ ಬಿತ್ತಲಾಗಿದೆ"

ದೇವಾಲಯದ ನಿರ್ಮಾಣದ ಉದ್ದೇಶವನ್ನು ವಿವರಿಸಿದ ಮುಖ್ಯಮಂತ್ರಿ, "ಭಕ್ತಿಯ ಮೂಲಕ ಆಧ್ಯಾತ್ಮದ ದೊಡ್ಡ ಬೀಜವನ್ನು ಬಿತ್ತುವ ಕೆಲಸ ಮಾಡಲಾಗಿದೆ. ಈ ಪವಿತ್ರ ಸ್ಥಳಕ್ಕೆ ಬರುವ ಪ್ರತಿಯೊಬ್ಬರಿಗೂ ಮಂಗಳ, ಶುಭ, ಆರೋಗ್ಯ, ಜ್ಞಾನ ಮತ್ತು ನೆಮ್ಮದಿ ದೊರೆಯಲಿ" ಎಂದು ಹಾರೈಸಿದರು.

ಇದೇ ವೇಳೆ, ಭಾರತೀ ತೀರ್ಥ ಮಹಾಸ್ವಾಮಿಗಳು ಹಾಗೂ ವಿದುಶೇಖರ್ ಭಾರತಿ ತೀರ್ಥ ಸ್ವಾಮೀಜಿಗಳ ಆಶೀರ್ವಾದವನ್ನು ಸ್ಮರಿಸಿದವರು, "ಈ ಪವಿತ್ರ ಸ್ಥಳದಲ್ಲಿ ಜನರಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುವಂತಾಗಲಿ" ಎಂದು ಹೇಳಿದರು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online