BELAGAVI NEWS :
ರುದ್ರ ಪ್ರಯಾಗ್ (ಉತ್ತರಾಖಂಡ): ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಧಾಮಗಳನ್ನು ಒಳಗೊಂಡಿರುವ ಚಾರ್ ಧಾಮ್ ಯಾತ್ರೆಯಲ್ಲಿ ಈ ಬಾರಿ ಭಕ್ತರ ಉತ್ಸಾಹ ಗಮನಾರ್ಹವಾಗಿದೆ. ವರ್ಷದಿಂದ ವರ್ಷಕ್ಕೆ ಯಾತ್ರಿಕರ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡು ಬರುತ್ತಿದ್ದು ಈ ಬಾರಿ ಬದರಿನಾಥ್ ಮತ್ತು ಕೇದಾರನಾಥ್ ಧಾಮಗಳಲ್ಲಿ ದೇವರ ದರ್ಶನಕ್ಕೆ ಉದ್ದುದ್ದ ಸರತಿ ಸಾಲುಗಳು ನಿರ್ಮಾಣವಾಗಿವೆ.
ಉತ್ತರಾಖಂಡದ ವಿಶ್ವಪ್ರಸಿದ್ಧ ಬದರಿನಾಥ್ ಮತ್ತು ಕೇದಾರನಾಥ ಧಾಮಗಳಿಗೆ ದೇಶದ ವಿವಿಧ ಭಾಗಗಳಿಂದ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರತಿದಿನ ಸಾವಿರಾರು ಯಾತ್ರಿಕರು ಹರಿದು ಬರುತ್ತಿದ್ದು ದೇವರ ದರ್ಶನಕ್ಕಾಗಿ ತಾಳ್ಮೆಯಿಂದ ಸಾಲಿನಲ್ಲಿ ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಇತ್ತೀಚಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ 10,50,670 ಭಕ್ತರು ಕೇದಾರನಾಥ ಧಾಮಕ್ಕೆ ಭೇಟಿ ನೀಡಿ ಬಾಬಾ ಕೇದಾರನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅದೇ ರೀತಿ 8,32,903 ಯಾತ್ರಿಕರು ಬದರಿನಾಥ ಧಾಮದಲ್ಲಿ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ.
ಈ ನಡುವೆ ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳುವ ಮೊದಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಚಾರ್ ಧಾಮ್ ದೇವಾಲಯ ಮಂಡಳಿ ಯಾತ್ರಿಕರಿಗೆ ಮನವಿ ಮಾಡಿದೆ. ಯಾತ್ರಿಕರು ಮುಂಚಿತ ನೋಂದಣಿ ಮಾಡಿಕೊಂಡು ಸೂಕ್ತ ಸಿದ್ಧತೆಯೊಂದಿಗೆ ಪ್ರಯಾಣ ಆರಂಭಿಸಬೇಕು ಎಂದು ಸೂಚಿಸಲಾಗಿದೆ.
ಬೆಚ್ಚಗಿನ ಬಟ್ಟೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗುವುದು, ವಸಂತಿ ವ್ಯವಸ್ಥೆಯನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವುದು ಹಾಗೂ ಯಾತ್ರೆ ಆರಂಭಿಸುವ ಮೊದಲು ಹವಾಮಾನ ಪರಿಸ್ಥಿತಿಯನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಪ್ರಯಾಣ ಆರಂಭಿಸುವ ಮೊದಲು ತಮ್ಮ ನೊಂದಣಿಯನ್ನು ಪೂರ್ಣಗೊಳಿಸಲು ಬಿಕೆಟಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೋಹನ್ ಸಿಂಗ್ ಸಂದರ್ಶಕರನ್ನು ಒತ್ತಾಯಿಸಿದರು. ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಶೀತ ವಾತಾವರಣ ಇರುವ ಹಿನ್ನೆಲೆ ಭಕ್ತರು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಮಾನ್ಸೂನ್ ಋತು ಕ್ರಮೇಣ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಾರ್ ಧಾಮ್ ಯಾತ್ರೆಯಲ್ಲಿ ಯಾತ್ರಿಕರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಜೋಶಿಮಠ ಪ್ರದೇಶದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿದ್ದು ಯಾತ್ರೆಯ ಸುಗಮ ನಿರ್ವಹಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಧಿಕಾರಿಗಳ ಪ್ರಕಾರ, ಯಾತ್ರೆಗೆ ಹೊರಡುವ ಮೊದಲು ಭಕ್ತರು ಕಡ್ಡಾಯವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನನ್ನಿಂದ ಯಾಂತ್ರಿಕರ ಭೇಟಿ ದಾಖಲೆ ವ್ಯವಸ್ಥಿತವಾಗಿ ಉಳಿಯಲಿದ್ದು , ಇದು ಆಡಳಿತಾತ್ಮಕ ಕಾರ್ಯಚರಣೆಗಳಿಗೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ಹವಾಮಾನ ತಂಪಾಗಿರುವುದರಿಂದ ಯಾತ್ರಿಕರು ಸಾಕಷ್ಟು ಬೆಚ್ಚಗಿನ ಬಟ್ಟೆಗಳನ್ನು ಕೊಂಡೊಯ್ಯುವಂತೆ ಸಲಹೆ ನೀಡಲಾಗಿದೆ. ಜೊತೆಗೆ ವಸಂತಿ ವ್ಯವಸ್ಥೆಯನ್ನು ಮುಂಚಿತವಾಗಿ ಮಾಡಿಕೊಂಡು ಪ್ರಯಾಣ ಆರಂಭಿಸುವುದು ಅತ್ಯಂತ ಮುಖ್ಯ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಬಾರಿ ಯಾತ್ರಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೆಲವು ಸ್ಥಳಗಳಲ್ಲಿ ಭಾರಿ ಜನಸಂದಣಿ ಹಾಗೂ ದೀರ್ಘಸರತಿ ಸಾಲುಗಳು ಎದುರಾಗುವ ಸಾಧ್ಯತೆ ಇದೆ. ಆದರಿಂದ ಯಾತ್ರಿಕರು ಸಣ್ಣ ಅನಾನುಕೂಲತೆಗಳಿಗೆ ಸಿದ್ದರಾಗಿಯೇ ಯಾತ್ರೆಯನ್ನು ಕೈಗೊಳ್ಳುವಂತೆ ಚಾರ್ ಧಾಮ್ ಆಡಳಿತ ಮಂಡಳಿ ಸೂಚಿಸಿದೆ.
Also Read:
'ಟಾಕ್ಸಿಕ್' ಬಿಡುಗಡೆ ಬಗ್ಗೆ ಗೊಂದಲ:ಬಾಕ್ಸ್ ಆಫೀಸ್ ಪಂಡಿತನ ಹೇಳಿಕೆ ತಪ್ಪು ಎಂದು ಸ್ಪಷ್ಟನೆ