belagavi news :
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕಾಟಗಾಳಿ ಗ್ರಾಮದಲ್ಲಿ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡಿಸಿದಾಗ ಕಾಟಗಾಳಿಯಲ್ಲಿ ಶಸ್ತ್ರಾಸ್ತ್ರ ತಯಾರಿಕೆ ಮತ್ತು ಮಾರಾಟ ನಡೆಯುತ್ತಿರುವುದು ಪತ್ತೆಯಾಗಿದೆ. ಬಂಧಿತರಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಕರು, ಖರೀದಿದಾರರು, ಮದ್ದು - ಗುಂಡು ಪೂರೈಸಿದವರು ಹಾಗೂ ಪಿತ್ತೂರ್ ಬ್ಯಾರೆಲ್ ಗಳಿಗೆ ವೆಲ್ಡಿಂಗ್ ಮಾಡುತ್ತಿದ್ದ ವ್ಯಕ್ತಿಯು ಸೇರಿದ್ದಾರೆ.
ಕಾರ್ಯಚರಣೆಯ ವೇಳೆ 9 ಕಂಟ್ರಿ ಪಿಸ್ತೂಲ್ ಗಳು, ಜೀವಂತ ಗುಂಡುಗಳು, ಮದ್ದು ಹಾಗೂ ಪಿಸ್ತೂಲ್ ತಯಾರಿಕೆಗೆ ಬಳಸುತ್ತಿದ್ದ ವಿವಿಧ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮುಂದಿನ ತನಿಕೆಯನ್ನು ಮುಂದುವರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಟಗಾಳಿ ಗ್ರಾಮದ ಮಾರುತಿ ಶ್ರೀಕಾಂತ್ ಸುತಾರ ಸೇರಿದಂತೆ ಹಲವು ಆರೋಪಿಗಳನ್ನು ಕಂಟ್ರಿ ಪಿಸ್ತೂಲ್ ತಯಾರಿ ಹಾಗೂ ಮಾರಾಟ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಾನಾಪುರ್, ಜೋಯಿಡಾ ಹಾಗೂ ಬೆಳಗಾವಿ ತಾಲೂಕಿನ ವಿವಿಧ ಭಾಗಗಳಲ್ಲಿನ ಒಟ್ಟು ಹಲವು ಮಂದಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
2024ರಲ್ಲಿ ನಂದಗಡದಲ್ಲಿ ಕಂಟ್ರಿ ಪಿಸ್ತೂಲ್ ಬಳಸಿ ನಡೆದ ಕೊಲೆ ಪ್ರಕರಣದ ತನಿಖೆಯ ವೇಳೆ ಪ್ರಮುಖ ಸುಳಿವು ಸಿಕ್ಕಿದ್ದು, ಆ ಪಿಸ್ತೂಲ್ ತಯಾರಿಸಿದವರು ಮಾರುತಿ ಸುತಾರ ಎಂಬುದು ಬೆಳಕಿಗೆ ಬಂದಿದೆ. ಬಳಿಕ ನಡೆಸಿದ ತನಿಖೆಯಲ್ಲಿ ಆತ ಮತ್ತೆ ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದುದು ಹಾಗೂ ಮಾರಾಟದಲ್ಲೂ ತೊಡಗಿದ್ದುದು ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಪ್ರಕಾರ ಮಾರುತಿ ಸುತಾರ ಕಾಟಗಾಳಿ, ಮೊದೇಕೊಪ್ಪ ಹಾಗೂ ಬೆಳಗಾವಿ ಮಾರ್ಕಂಡೇಯ ನಗರ ಸೇರಿದಂತೆ ಹಲವು ಸ್ಥಳಗಳಲ್ಲಿ ಸುಮಾರು 8 ಪಿಸ್ತೂಲ್ ಗಳನ್ನು ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ ಮತ್ತೊಂದು ಪಿಸ್ತೂಲ್ ತಯಾರಿಸುತ್ತಿದ್ದ ವೇಳೆ ಮೇ11 ರಂದು ಆತನನ್ನು ಪೊಲೀಸರು ಬಂಧಿಸಿದ್ದರು. ತೀವ್ರ ವಿಚಾರನಿಯ ನಂತರ ಈ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿದ್ದು, ಇತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮ ಶಸ್ತ್ರಾಸ್ತ್ರ, ತಯಾರಿ ಜಾಲದ ಸಂಪೂರ್ಣ ತನಿಖೆ ಮುಂದುವರಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ, ತಯಾರಿ ಆಗುವ ಮಾರಾಟ ಜಾಲದ ತನಿಖೆಯಲ್ಲಿ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ . ರಾಮರಾಜನ್ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಹಣಕಾಸು ನೆರವು ನೀಡಿದ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರದಲ್ಲಿ ಪುಸ್ತಕ ಮಳಿಗೆ ನಡೆಸುತ್ತಿದ್ದ ವಿಶ್ವನಾಥ್ ದೇಸಾಯಿ ಬಂಧಿತರಾಗಿದ್ದಾರೆ. ಅವರು ತಮ್ಮ ಬುಕ್ ಸ್ಟಾಲ್ ಅನ್ನು ಆವರಣದಲ್ಲಿಯೇ ಟ್ರಿಗರ್, ಹೆಡ್, ನಿಪ್ಪಲ್ ಸೇರಿದಂತೆ ಬಂದೂಕು ತಯಾರಿಕೆಗೆ ಅಗತ್ಯವಾದ ಬಿಡಿ ಭಾಗಗಳನ್ನು ಮಾರುತಿಸುತ್ತಾರೆಗೆ ಮಾರಾಟ ಮಾಡುತ್ತಿದ್ದರೆಂದು ತನಿಖೆಯಲ್ಲಿ ತಿಳಿದು ಬಂದಿದೆ.
ಆತನನ್ನು ಬಂಧಿಸಿದ ವೇಳೆ 21 ಗನ್ ಭಾಗಗಳು, 5 ಹೆಡ್ ಗಳು, 5 ನಿಪ್ಪಲ್ ಗಳು, ಸೀಲಿಂಗ್ ಬೆಲ್ಟ್ , 34 ಮದ್ದು ತುಂಬಿದ ಪ್ಯಾಕೆಟ್ ಗಳು, 449 ಸೀಸದ ಗೋಲಿಗಳು, 420 ಕ್ಯಾಪ್ ಗಳು ಹಾಗೂ 48 ಜೀವಂತ್ ಕಾಡತೂಸುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕೆ. ರಾಮರಾಜನ್ ವಿವರ ನೀಡಿದ್ದಾರೆ.
ಇದೇ ವೇಳೆ ಬೆಳಗಾವಿ ನಗರದಲ್ಲಿದ್ದ ಗನ್ ಶಾಪನ್ ಪರವಾನಗಿ 2021 ರಲ್ಲೇ ಅವಧಿ ಮುಗಿದಿದ್ದರೂ, ಅಂಗಡಿಯಲ್ಲಿ ಉಳಿದಿದ್ದ ಮದ್ದು ಗುಂಡುಗಳು ಹಾಗೂ ಬಂದೂಕಿನ ಬಿಡಿ ಭಾಗಗಳನ್ನು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಈ ಅಂಗಡಿ ಮಾಲೀಕ ವಿಜಯ್ ಅನಗೋಳ್ಕರ್ ರನ್ನು ಪೊಲೀಸರು ಬಂದಿದ್ದಾರೆ.
ಅಲ್ಲದೆ ವೆಲ್ಡಿಂಗ್ ಕೆಲಸ ಮಾಡಿ ಕೊಟ್ಟಿದ್ದ ಮಹೇಶ್ ಲಕ್ಕೇಬೈಲಕರ್ ಹಾಗೂ ಪಿಸ್ತೂಲ್ ಖರೀದಿಸಿದವರು ಸೇರಿ ಒಟ್ಟು 13 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಸಂಪೂರ್ಣ ಜಾಲದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
" ಯಾವುದೇ ಕಾರಣಕ್ಕೂ ಕಂಟ್ರಿ ಪಿಸ್ತೂಲ್ ತಯಾರಿಕೆ, ಮಾರಾಟ, ಖರೀದಿ ಮತ್ತು ಬಳಸುವುದು ಗಂಭೀರ ಅಪರಾಧ. ಇದಕ್ಕೆ ಜಾಮೀನು ಕೂಡ ಸಿಗುವುದಿಲ್ಲ. ಶಿಕ್ಷೆ ಖಂಡಿತ ಆಗುತ್ತದೆ. ಅಲ್ಲದೆ ತಮ್ಮ ಸುತ್ತಮುತ್ತಲು ಯಾರಾದ್ರು ಈ ರೀತಿ ಕಂಟ್ರಿ ಪಿಸ್ತೂಲ್ ಬಳಸುವುದು ಗೊತ್ತಾದರೆ ಕೆಎಸ್ ಪಿ ಆ್ಯಪ್ ನಲ್ಲಿ ಮಾಹಿತಿ ನೀಡಬೇಕು" ಎಂದು ಸಾರ್ವಜನಿಕರಿಗೆ ಕೆ. ರಾಮರಾಜನ್ ಮನವಿ ಮಾಡಿದರು.
ಇದೆ ವೇಳೆ, ಬೈಲಹೊಂಗಲ್ ಡಿವೈಎಸ್ಪಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಖಾನಾಪುರ್ ಇನ್ಸ್ಪೆಕ್ಟರ್ ಎಲ್. ಎಚ್. ಗೌಂಡಿ ಹಾಗೂ ಸಿಬ್ಬಂದಿಯ ತಂಡವನ್ನು ಶ್ಲಾಘಿಸಿದರು.
Also Read: