belagavi news :
ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಹಡಗುಗಳಿಗೆ ಹೊಸ ಮಾರ್ಗದರ್ಶನ ನೀಡುತ್ತಿದ್ದ ಅಮೆರಿಕಾದ 'ಪ್ರಾಜೆಕ್ಟ್ ಫ್ರೀಡಂ'ಮಿಲಿಟರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಮಂಗಳವಾರ ಸಂಜೆ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿದವರು."ಪಾಕಿಸ್ತಾನ ಹಾಗೂ ಇತರ ದೇಶಗಳ ವಿನಂತಿ ಮೇರೆಗೆ, ಜೊತೆಗೆ ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಸಾಧಿಸಿದ ಮಿಲಿಟರಿ ಯಶಸ್ಸಿನ ಆಧಾರದ ಮೇಲೆ, ಈ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಾವು ಪರಸ್ಪರ ಒಪ್ಪಿಕೊಂಡಿದ್ದೇವೆ"ಎಂದು ಹೇಳಿದ್ದಾರೆ.
ಇರಾನ್ ಪ್ರತಿನಿಧಿಗಳೊಂದಿಗೆ ನಡೆಯುತ್ತಿರುವ ಮಾತು ಕಥೆಗಳು ಅಂತಿಮ ಒಪ್ಪಂದದ ಹಂತಕ್ಕೆ ತಲುಪಿದ್ದು, ಒಪ್ಪಂದದ ದಿಕ್ಕಿನಲ್ಲಿ ಮಹತ್ತರ ಪ್ರಗತಿ ಸಾಧಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಮಧ್ಯಪ್ರಾಂಚದಲ್ಲಿ ಉದ್ವಿಗ್ನತೆ ಯನ್ನು ತಮಿಳುನಾಡಿನಲ್ಲಿ ಟಿವಿ ನಾಯಕ ವಿಜಯ್ ಕಡಿಮೆ ಮಾಡಿ ಯುದ್ಧಕ್ಕೆ ತೆರೆ ಎಳೆಯುವ ಉದ್ದೇಶದಿಂದ ಇರಾನ್ ಜೊತೆ ಒಪ್ಪಂದ ಸಾಧಿಸಲು ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ, ಕೆಲ ದಿನಗಳ ಹಿಂದೆ ಆರಂಭಿಸಿದ್ದ 'ಪ್ರಾಜೆಕ್ಟ್ ಫ್ರೀಡಂ'ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ದಾಳಿಗೆ ಪ್ರತಿಕ್ರಿಯೆ ಯಾಗಿ ಇರಾನ್ ವಶಪಡಿಸಿಕೊಂಡಿದ್ದ ಕೊಲ್ಲಿಯಲ್ಲಿ ಹಾರ್ಮೋನ್ ಜಲಸಂದಿ ಮೂಲಕ ಹಡಗುಗಳು ಸುರಕ್ಷಿತವಾಗಿ ಹೊರ ಹೋಗಲು ಸಹ ಸಹಾಯ ಮಾಡುವ ಉದ್ದೇಶದಿಂದ ಅಮೇರಿಕಾ ಸೋಮವಾರ 'ಪ್ರಾಜೆಕ್ಟ್ ಫ್ರೀಡಂ' ಕಾರ್ಯಾಚರಣೆಯನ್ನು ಆರಂಭಿಸಿತು ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾರ್ಯಾಚರಣೆಯನ್ನು ಆರಂಭಿಸಿದ್ದಾಗಿ ಹೇಳಲಾಗಿದೆ. ಆದರೆ ಮಂಗಳವಾರ, ಸರ್ಕಾರ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು ಇರಾನ್ ವಿರುದ್ಧದ ಆಕ್ರಮಣಾತ್ಮಕ ಕಾರ್ಯಾಚರಣೆಗಳನ್ನು ಅಮೆರಿಕ ಪೂರ್ಣಗೊಳಿಸಿದೆ ಎಂದು ಹೇಳಿದ್ದು, ಇದನ್ನು "ಆಪರೇಷನ್ ಎಪಿಕ್ ಪ್ಯೂರಿ" ಎಂದು ಕರೆಯಲಾಗಿದೆ. ಹಾರ್ಮುಜ್ ಜಲಸಂಧಿ ಬಗ್ಗೆ ಮಾತನಾಡಿದ ಅವರು, "ಇದು ಆಕ್ರಮಣಕಾರಿ ಕಾರ್ಯಾಚರಣೆಯಲ್ಲ. ಇದು ರಕ್ಷಣಾತ್ಮಕ ಕಾರ್ಯಾಚರಣೆ. ಸರಳವಾಗಿ ಹೇಳುವುದಾದರೆ, ಮೊದಲು ನಮ್ಮ ಮೇಲೆ ಗುಂಡು ಹಾರಿಸಿದರೆ ಮಾತ್ರ ನಾವು ಪ್ರತಿಕ್ರಿಸುತ್ತೇವೆ"ಎಂದು ತಿಳಿಸಿದ್ದಾರೆ.
ಕಡಲ ಕಾರ್ಯಾಚರಣೆಗಳಲ್ಲಿ ಸಾತ್ಕಾಲಿಕ ವಿರಾಮವಿದ್ದರೂ ಇರಾನ್ ಮೇಲಿನ ಒತ್ತಡ ಮುಂದುವರಿಯುತ್ತದೆ ಎಂದು ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಹೇಳುವಂತೆ,"ದಿಗ್ಬಂಧನವು ಪೂರ್ಣ ಪ್ರಮಾಣದಲ್ಲಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯುತ್ತದೆ. ಆದರೆ ಒಪ್ಪಂದವನ್ನು ಅಂತಿಮಗೊಳಿಸಿ ಸಿಹಿ ಮಾಡಬಹುದೇ ಎಂಬುದನ್ನು ಅಂತಿಮ ಪರಿಶಿಲಿಸಲು ಪ್ರಾಜೆಕ್ಟ್ ಫ್ರೀಡಂ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ"ಎಂದು ತಿಳಿಸಿದ್ದಾರೆ.
ನಿರ್ಧಾರವನ್ನು ಪರಸ್ಪರ ಒಪ್ಪಿಗೆಯ ಮೂಲಕ ತೆಗೆದುಕೊಳ್ಳಲಾಗಿದೆ ಎಂದು ಹೇಳಿರುವ ಅವರು, ಮಾತುಕತೆಗಳ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುವುದು ಎಂದು ಸೂಚಿಸುತ್ತಾರೆ. ಅದೇ ವೇಳೆ ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಆರಂಭಿಸಿದ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದ ಸಾಧಿಸುವ ಉದ್ದೇಶದಿಂದ ಇರಾನ್ ಮೇಲೆ ಒತ್ತಡ ಹೆಚ್ಚಿಸುವ ಭಾಗವಾಗಿ, ವಾಷಿಂಗ್ಟನ್ ಇರಾನ್ ನ ಬಂದರುಗಳ ಮೇಲಿನ ದಿಗ್ಬಂಧನವನ್ನು ಮುಂದುವರೆಸಿದೆ ಎಂದು ತಿಳಿದುಬಂದಿದೆ.
Also Read: