<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಸರ್ಕಾರಿ ಔಷಧಿಗಳ ದುರ್ಬಳಕೆ ? ತುಮಕೂರಿನ ಸ್ಮಶಾನದಲ್ಲಿ ಮಾತ್ರೆಗಳು ಪತ್ತೆ

ಸರ್ಕಾರಿ ಔಷಧಿಗಳ ದುರ್ಬಳಕೆ ? ತುಮಕೂರಿನ ಸ್ಮಶಾನದಲ್ಲಿ ಮಾತ್ರೆಗಳು ಪತ್ತೆ
Summary: The incident of pills from a government hospital in Tumkur being found in the crematorium and Gomal area has created a stir. Doubts have been raised about the disposal and there has been a demand for an investigation into the case.

Belagavi News :

ತುಮಕೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಸೇರಿದ ಎನ್ನಲಾದ ಮಾತ್ರೆಗಳು ಸ್ಮಶಾನ ಹಾಗೂ ಗೋಮಾಳ ಪ್ರದೇಶದಲ್ಲಿ ಪತ್ತೆ ಆಗಿರುವ ಘಟನೆ ಸಾರ್ವಜನಿಕರಲ್ಲಿ ಆತಂಕ ಮತ್ತು ಸಂಚಲನ ಮೂಡಿಸಿದೆ. ಸಾರ್ವಜನಿಕರು ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪತ್ತೆಯಾದ ಔಷಧಿಗಳು ಸರ್ಕಾರಿ ಆಸ್ಪತ್ರೆಯಿಂದ ವಿತರಿಸಬೇಕಾಗಿದ್ದವೆಯೇ ಅಥವಾ ಅವುಗಳನ್ನು ನಿಯಮಬಾಹಿರವಾಗಿ ವಿಲೇವಾರಿ ಮಾಡಲಾಗಿದೆಯೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈ ಘಟನೆ ಸರ್ಕಾರಿ ಔಷಧಿಗಳ ನಿರ್ವಹಣೆ ಹಾಗೂ ವಿಲೇವಾರಿ ವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಸ್ಥಳೀಯರು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಔಷಧಿಗಳು ಹೇಗೆ ಸ್ಮಶಾನ ಮತ್ತು ಗೋಮಾಳ ಪ್ರದೇಶಕ್ಕೆ ತಲುಪಿದವು ಎಂಬುದನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಘಟನೆ ಕುರಿತು ಆರೋಗ್ಯ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ತುಮಕೂರು ಶಾಕ್ - ಬಡ ರೋಗಿಗಳಿಗೆ ಉಚಿತವಾಗಿ ನೀಡಬೇಕಿದ್ದ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು ಸ್ಮಶಾನ, ಗೋಮಾಳ ಪ್ರದೇಶದಲ್ಲಿ ಪತ್ತೆ :

ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಬೇಕಾದ ಸರ್ಕಾರಿ ಆಸ್ಪತ್ರೆಯ ಸಾವಿರಾರು ಮಾತ್ರೆಗಳು ಸ್ಮಶಾನ ಮತ್ತು ಜಾನುವಾರಗಳು ಮೇಯುವ ಗೋಮಾಳದಲ್ಲಿ ಪತ್ತೆಯಾಗಿರುವ ಅಪಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹುಲಿಕುಂಟೆ ಸಮೀಪದ ಕಾಮೇನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಇನ್ನೂ ಬಳಕೆಗೆ ಯೋಗ್ಯವಾಗಿದ್ದ ಸಾವಿರಾರು ಮಾತ್ರೆಗಳನ್ನು ಯಾರಿಗೂ ತಿಳಿಯದಂತೆ ನಿರ್ಜನ ಪ್ರದೇಶದಲ್ಲಿ ಎಸೆದಿರುವುದು ಸಾರ್ವಜನಿಕರ ತೀವ್ರ ಅಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಔಷಧಿಗಳನ್ನು ಈ ರೀತಿ ವಿಲೇವಾರಿ ಮಾಡಿರುವ ಹಿಂದೆ ನಿರ್ಲಕ್ಷವಿದೆಯೇ ಅಥವಾ ದುರ್ಬಳಕೆ ಇದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಸಂಬಂಧಿತ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರಿ ಆಸ್ಪತ್ರೆಗಳಗೆ ಪೂರೈಕೆ ಆಗುವ ಔಷಧಿಗಳ ನಿರ್ವಹಣೆ ಮತ್ತು ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಆಗ್ರಹಿಸಿದ್ದಾರೆ.

ಪ್ರಕರಣದ ಕುರಿತು ಆರೋಗ್ಯ ಇಲಾಖೆ ಸಮಗ್ರ ತನಿಖೆ ನಡೆಸಿ, ಔಷಧಿಗಳು ಹೇಗೆ ಸ್ಮಶಾನ ಮತ್ತು ಗೋಮಾಳ ಪ್ರದೇಶಕ್ಕೆ ತಲುಪಿದವು ಎಂಬುದನ್ನು ಪತ್ತೆ ಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಮಶಾನದಲ್ಲಿ ಪತ್ತೆಯಾದ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳು - ಕೆರೆ ನೀರು ಕಲುಷಿತಗೊಳ್ಳುವ ಭೀತಿ :

ಕೊರಟಗೆರೆ ತಾಲೂಕಿನ ಹುಲಿಕುಂಟೆ ಸಮೀಪದ ಕಾಮೇನಹಳ್ಳಿಯಲ್ಲಿ ಸ್ಮಶಾನ ಹಾಗೂ ಗೋಮಾಳ ಪ್ರದೇಶದಲ್ಲಿ ಪತ್ತೆಯಾದ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳ ಪ್ರಕರಣ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಾತ್ರೆಗಳು ಪತ್ತೆಯಾದ ಸ್ಥಳದ ಸಮೀಪದಲ್ಲಿ ಪ್ರಮುಖ ಕೆರೆಯೊಂದು ಇರುವುದರಿಂದ, ಮಳೆ ಬಂದರೆ ಅವುಗಳಲ್ಲಿರುವ ರಾಸಾಯನಿಕ ಅಂಶಗಳು ಕೆರೆಯ ನೀರಿಗೆ ಸೇರಿ ಗ್ರಾಮದ ಜಲಮೂಲ ಕಲುಷಿತಗೊಳ್ಳುವ ಭೀತಿ ಎದುರಾಗಿದೆ.

ಪತ್ತೆಯಾದ ಮಾತ್ರೆಗಳಲ್ಲಿ ಹೆಚ್ಚಿನವು ಮಧುಮೇಹ ನಿಯಂತ್ರಣಕ್ಕೆ ಬಳಸುವ ಔಷಧಿಗಳಾಗಿದ್ದು, ಇನ್ನೂ ಬಳಕೆಗೆ ಯೋಗ್ಯವಾಗಿದ್ದ ಮಾತ್ರೆಗಳು ಸ್ಮಶಾನದ ಜಾಗದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಈ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಮತ್ತು ಸಂಬಂಧಿತ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ, ಔಷಧಿಗಳನ್ನು ಯಾರು ಹಾಗೂ ಯಾವ ಕಾರಣಕ್ಕೆ ಈ ರೀತಿ ವಿಲೇವಾರಿ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ತಳಿಯರು ಆಗ್ರಹಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಔಷಧಿ ಸಂಗ್ರಹಣೆ, ವಿತರಣೆ ಹಾಗೂ ವಿಲೇವಾರಿ ವ್ಯವಸ್ಥೆ ಕುರಿತು ಸಮಗ್ರ ತಣಿಕೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತುಮಕೂರು ಮಾತ್ರೆ ಪ್ರಕರಣ - ಅವಧಿ ಮುಗಿಯದ ಸರ್ಕಾರಿ ಆಸ್ಪತ್ರೆಯ ಔಷಧಿಗಳು ಪತ್ತೆ ; ಹಲೋ ಪ್ರಶ್ನೆಗಳು ಉದ್ಭವ :

ಕೊರಟಗೆರೆ ತಾಲೂಕಿನ ಕಮೆನಹಳ್ಳಿಯಲ್ಲಿ ಸ್ಮಶಾನ ಹಾಗೂ ಗೋಮಾಳ ಪ್ರದೇಶದಲ್ಲಿ ಪತ್ತೆಯಾದ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳ ಪ್ರಕರಣದಲ್ಲಿ ಮತ್ತೊಂದು ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಹಳೇ ಸ್ಟಾಕ್ ಅಥವಾ ಅವಧಿ ಮುಗಿದ ಔಷಧಿಗಳನ್ನು ವಿಲಿವಾರಿ ಮಾಡಲಾಗುತ್ತದೆ. ಆದರೆ, ಇಲ್ಲಿ ಪತ್ತೆ ಆದ ಮಾತ್ರೆಗಳ ಮೇಲೆ ಆಗಸ್ಟ್ ಮತ್ತು ಸೆಪ್ಟೆಂಬರ್ 2026 ರವರೆಗೆ ಬಳಕೆಗೆ ಅವಕಾಶವಿರುವ ದಿನಾಂಕ ನಮೂದಿಸಿರುವುದು ಕಂಡು ಬಂದಿದೆ.

ಪತ್ತೆಯಾದ ಎಲ್ಲಾ ಮಾತ್ರೆಗಳ ಸ್ಟ್ರೀಪ್ ಗಳ ಮೇಲೆ "ಸರ್ಕಾರಿ ಆಸ್ಪತ್ರೆಯ ಸರಬರಾಜು " ಎಂಬುದಾಗಿ ಸ್ಪಷ್ಟವಾಗಿ ಮುದ್ರಿಸಲಾಗಿದೆ. ಇದರಿಂದ ಬಳಕೆಗೆ ಯೋಗ್ಯವಾಗಿದ್ದ ಸರ್ಕಾರಿ ಔಷಧಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದಿರುವುದು ಹೇಗೆ ಎಂಬ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಬೇಕಾದ ಔಷಧಿಗಳು ಈ ರೀತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಔಷಧಿಗಳ ನಿರ್ವಹಣೆ, ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆ ಕುರಿತು ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಔಷಧಿಗಳು ಎಲ್ಲಿಂದ ಬಂದವು ಹಾಗೂ ಯಾರು ವಿಲೇವಾರಿ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online