Belagavi News:
ಚಾಮರಾಜನಗರ, ಜೂನ್ 15: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪವಿತ್ರ ಪುಣ್ಯಕ್ಷೇತ್ರವಾದ Male Mahadeshwara Hills ನಲ್ಲಿ ಸೋಮವಾರ ಅಮಾವಾಸ್ಯೆಯ ವಿಶೇಷ ಸಂಯೋಗದ ಹಿನ್ನೆಲೆಯಲ್ಲಿ ಭಕ್ತರ ಮಹಾಪೂರವೇ ಹರಿದು ಬಂದಿದೆ.
ಸಾಮಾನ್ಯವಾಗಿ ಪ್ರತಿ ಸೋಮವಾರದಂದು ಮಾದಪ್ಪನಿಗೆ ವಿಶೇಷ ಪೂಜೆ ಹಾಗೂ ಕೈಂಕರ್ಯಗಳು ನಡೆಯುತ್ತವೆ. ಆದರೆ ಈ ಬಾರಿ ಸೋಮವಾರದಂದೇ ಅಮಾವಾಸ್ಯೆ ಒದಗಿ ಬಂದಿರುವ ಕಾರಣ, ರಾಜ್ಯದ ವಿವಿಧ ಜಿಲ್ಲೆಗಳ ಮೊಲೆ ಮೊಲೆಗಳಿಂದ ಸಾವಿರಾರು ಭಕ್ತರು ಮಾದಪ್ಪನ ದರ್ಶನಕ್ಕಾಗಿ ಬೆಟ್ಟಕ್ಕೆ ಆಗಮಿಸಿದ್ದಾರೆ.
ದರ್ಶನಕ್ಕಾಗಿ ದೀರ್ಘ ಸಾಲು ಗಳು ನಿರ್ಮಾಣವಾಗಿದ್ದು, ಸಂಪೂರ್ಣ ಬೆಟ್ಟ ಪ್ರದೇಶ ಭಕ್ತಿ ಭಾವದಿಂದ ಕಂಗೊಳಿಸುತ್ತಿದೆ. ಭಕ್ತರು "ಮಾದಪ್ಪನ ಕೃಪೆ ಸಿಗಲಿ" ಎಂಬ ನಂಬಿಕೆಯಿಂದ ವಿಶೇಷ ಪೂಜೆಗಳಲ್ಲಿ ಭಾಗವಹಿಸುತ್ತಿದ್ದು, ಧಾರ್ಮಿಕ ವಾತಾವರಣವು ಗಂಭೀರ ಭಕ್ತಿ ಭಾವದಿಂದ ತುಂಬಿದೆ.
ಅಮಾವಾಸ್ಯೆಯ ವಿಶೇಷ ದಿನವಾದ ಇಂದು ಮುಂಜಾನೆಯಿಂದಲೇ Male Mahadeshwara Hills ನಲ್ಲಿ ಶ್ರೀ ಮಹದೇಶ್ವರ ಸ್ವಾಮಿಗೆ ವಿಶೇಷ ಎಣ್ಣೆ ಮಜ್ಜನ (ಅಭಿಷೇಕ) ಹಾಗೂ ಅತ್ಯಂತ ಆಕರ್ಷಕ ಪುಷ್ಪಾಲಂಕಾರಗಳನ್ನು ನೆರವೇರಿಸಲಾಯಿತು. ಭಕ್ತಿ ಭಾವದಿಂದ ನಡೆದ ಈ ಧಾರ್ಮಿಕ ಕಾರ್ಯಕ್ರಮವು ಸಂಪೂರ್ಣ ಬೆಟ್ಟವನ್ನು ಪವಿತ್ರ ವಾತಾವರಣದಿಂದ ಕಂಗೊಳಿಸಿತು.
ಸಹಸ್ರಾರು ಭಕ್ತರು ಏಕಕಾಲದಲ್ಲಿ ಬೆಟ್ಟಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ಜನಸಾಗರದಿಂದ ತುಂಬಿ ತುಳುಕುತ್ತಿದೆ. KSRTC ಬಸ್ ಗಳ ಮೂಲಕ ನಿರಂತರವಾಗಿ ಭಕ್ತರು ಆಗಮನ ಮುಂದುವರಿಯುತ್ತಿದ್ದು, ದೇವಾಲಯ ಸುತ್ತಮುತ್ತ ಭಾರಿ ಭಕ್ತ ಸಾಗರದ ದೃಶ್ಯ ಕಂಡು ಬಂದಿದೆ.
Also Read:
ಚಿಕ್ಕಮಗಳೂರು ಕ.ಸಾ.ಪದ ಸಮಾಜಮುಖಿ ಕಾರ್ಯ: 25 ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಸಹಾಯ