belagavi news:
SSLC ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿಯೇ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವುದು ಅಚ್ಚರಿಯ ಸಂಗಾತಿಯಾಗಿ ಹೊರಹೊಮ್ಮಿದೆ. ಸಾಮಾನ್ಯವಾಗಿ ತಾಯ್ನುಡಿಯಾದ ಕನ್ನಡದಲ್ಲಿ ಹೆಚ್ಚು ಅಂಕ ಗಳಿಸುವ ನಿರೀಕ್ಷೆ ಇದ್ದರು ಇತ್ತೀಚಿನ ಪಲಿತಾಂಶಗಳು ಬೇರೆ ಚಿತ್ರಗಳು ತೋರಿಸುತ್ತಿವೆ.
SSLC ಪರೀಕ್ಷೆಯಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ದ ಸುಮಾರು 19,000 ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನಲೆ ಕಾರಣಗಳನ್ನು ಅಧ್ಯಯನ ಮಾಡದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಮಿತಿ ಹಲವು ಪ್ರಮುಖ ಅಂಶಗಳನ್ನು ಗುರುತಿಸಿದೆ.
ಸಮಿತಿಯ ಪ್ರಕಾರ, ಪಠ್ಯಕ್ರಮದ ಕೊರತೆ, ಸಮರ್ಪಕ ಭಾಷಾ ಶಿಕ್ಷಕರ ಅಭಾವ ಮತ್ತು ಕನ್ನಡ ಕಲಿಕೆಗೆ ಬೇಕಾದ ಪ್ರೋತ್ಸಾಹದ ಕೊರತೆಯ ವಿದ್ಯಾರ್ಥಿಗಳ ಹಿನ್ನಡೆಗೆ ಕಾರಣವಾಗಿದೆ. ಜೊತೆಗೆ ಕನ್ನಡ ಭಾಷೆಯ ಬಳಕೆ ದಿನನಿತ್ಯ ಜೀವನದಲ್ಲಿ ಕಡಿಮೆಯಾಗುತ್ತಿರುವುದು ವಿದ್ಯಾರ್ಥಿಗಳ ಸಾಧನೆ ಮೇಲೆ ಪರಿಣಾಮ ಬೀರದೆ ಎಂದು ತಿಳಿಸಲಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಿತಿ ಕೆಲವು ಮಹತ್ವದ ಸಿಪಾರಸುಗಳನ್ನು ಮಾಡಿದ್ದು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗಗಳಲ್ಲಿ ಮೀಸಲಾತಿ ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದೆ. ಇದರ ಮೂಲಕ ಕನ್ನಡ ಭಾಷೆಯ ಉತ್ತೇಜನ ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ಹೆಚ್ಚಿಸುವುದು ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರು: ಮೇ 1:2025 -26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ -ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ದಿದ್ದ ಸುಮಾರು 19,000 ವಿದ್ಯಾರ್ಥಿಗಳು ಅನುತ್ತೀರ್ಣ ರಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾರಣಗಳನ್ನು ಅಧ್ಯಯನ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಸಮಿತಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಸಮಿತಿಯು ನೀಡಿರುವ ಶಿಫಾರಸುಗಳಲ್ಲಿ ಕನಿಷ್ಠ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯದ ವಿದ್ಯಾರ್ಥಿಗಳಿಗೆ ಸರ್ಕಾರದ ಉದ್ಯೋಗಗಳಲ್ಲಿ ಶೇ.25% ರಷ್ಟು ಮೀಸಲಾತಿ ನೀಡಬೇಕು ಎಂಬ ಪ್ರಮುಖ ಸಲಹು ಸೇರಿದೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗಲಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ಕನ್ನಡ ಭಾಷೆಯ ಅಧ್ಯಯನ ಮತ್ತು ಬಳಕೆಯನ್ನು ಬಳಪಡಿಸಲು ಈ ರೀತಿಯ ಕ್ರಮಗಳು ಅಗತ್ಯವಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಹೆಚ್ಚಿಸಲು ಸಹಾಯಕವಾಗಲಿದೆ ಎಂದು ಕೂಡ ಸಮಿತಿ ತಿಳಿಸಿದೆ.
ವಿದ್ಯಾರ್ಥಿಗಳ ಅನುತ್ತೀರ್ಣಕ್ಕೆ ಕಾರಣವೇನು?
ರಾಜ್ಯ ಮತ್ತು ಕೇಂದ್ರ ಪಠ್ಯ ಕ್ರಮಗಳ ನಡುವಿನ ಏಕರೂಪತೆಯ ಕೊರತೆ ಶಿಕ್ಷಣದ ವಿವಿಧ ಹಂತಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುತ್ತಿರುವುದು ಪ್ರಾಥಮಿಕ ಹಂತದಿಂದಲೇ ಕಲಿಕೆ ಫಲಿತಾಂಶವನ್ನು ಅಳೆಯುವ ಸಮರ್ಪಕ ಪರೀಕ್ಷೆಗಳ ಕೊರತೆ ಹಾಗೂ ಕನ್ನಡದಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳೇ ಬೇಕಾದ ಪ್ರೋತ್ಸಾಹದ ಅಭಾವವೇ ಅನುತ್ತೀರ್ಣತೆಗೆ ಪ್ರಮುಖ ಕಾರಣಗಳೆಂದು ವರದಿ ತಿಳಿಸಿದೆ. ಇದಲ್ಲದೆ, ಭಾಷಾ ಕಲಿಕೆಗೆ ಅನುಕೂಲಕರವಲ್ಲದ ಪಠ್ಯಪುಸ್ತಕಗಳ ವಿನ್ಯಾಸವು ವಿದ್ಯಾರ್ಥಿಗಳ ಕಲಿಕೆ ಮಟ್ಟವನ್ನು ಕುಂಠಿತಗೊಳಿಸುತ್ತಿದ್ದು ಇದು ಪರೀಕ್ಷಾ ಫಲಿತಾಂಶಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ಸಮಿತಿಯ ಶಿಫಾರಸುಗಳೇನು?
ತ್ರೀ ಭಾಷಾ ನೀತಿ ರದ್ದುಗೊಳಿಸಿ ದ್ವಿಭಾಷ ನೀತಿ ಅನುಸರಿಸುವುದು
ಪ್ರಾಥಮಿಕ ಹಂತದಿಂದಲೇ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಪಾರಂಗತತೆ ಕಳಿಸುವುದು
ಭಾಷಾ ಪರಿಣತಿ, ತರಬೇತಿ ಹೊಂದಿದ ಶಿಕ್ಷಕರ ನೇಮಕ
ಕನ್ನಡದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ
ವಿಷಯಾಧಾರಿತ ಪಟ್ಟೆಗಳ ಬದಲು ಭಾಷಾ ಕಲಿಕೆಯ ಹೊತ್ತು ನೀಡುವ ಪಠ್ಯಪುಸ್ತಕ ರಚನೆ
ಡಾ. ನಿರಂಜನರಾಧ್ಯ ವಿ.ಪಿ ನೇತೃತ್ವದ ಸಮಿತಿ ಕಳೆದ 10 ವರ್ಷಗಳ ಅಂಕಿ ಅಂಶಗಳನ್ನು ಪರಿಶೀಲಿಸಿ, ರಾಜ್ಯದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸ್ಥಿತಿಯನ್ನು ಅಧ್ಯಯನ ಮಾಡಿ ಈ ಶಿಫಾರಸುಗಳನ್ನು ನೀಡಿದೆ. ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ್ ಬಿಳಿಮಲೆ ಅವರು ಕನ್ನಡದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವ ಕಾರಣಗಳು ಮತ್ತು ಅಗತ್ಯ ಸುಧಾರಣೆಗಳು ಕುರಿತ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಕೆ ಮಾಡಿದ್ದಾರೆ .
Also Read: