Belagavi News:
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಮುಂಬೈ - ಪುಣೆ ಎಕ್ಸ್ ಪ್ರೆಸ್ ವೇಯಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಎಕ್ಸ್ಪ್ರೆಸ್ ವೇಯ ಸುರಂಗದೊಳಗೆ ಮಳೆ ನೀರು ನುಗ್ಗಿದ್ದು, ಸಮೀಪದ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ರಸ್ತೆ ಸಂಪೂರ್ಣ ಮಾಡಲಾಗಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ನೂರಾರು ವಾಹನಗಳು ಮಾರ್ಗ ಮಧ್ಯ ಸಿಲುಕಿಕೊಂಡಿದೆ.
ನಿರಂತರ ಮಳೆಯ ಹಿನ್ನೆಲೆಯಲ್ಲಿ ಗುಡ್ಡದ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಜಾರಿ ಬಿದ್ದ ಪರಿಣಾಮ ಅಧಿಕಾರಿಗಳು ಸುರಕ್ಷತಾ ದೃಷ್ಟಿಯಿಂದ ಎಕ್ಸ್ ಪ್ರೆಸ್ ವೇಯ ಈ ಭಾಗದಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಸುರಂಗದೊಳಗೆ ನೀರು ತುಂಬಿರುವ ಕಾರಣ ವಾಹನಗಳ ಸಂಚಾರ ಅಪಾಯಕಾರಿಯಾಗಿದ್ದು, ಸ್ಥಳದಲ್ಲಿ ನೀರು ಹೊರ ಹಾಕುವ ಮತ್ತು ರಸ್ತೆ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.
ಸಂಚಾರ ದಟ್ಟಣೆ ತಪ್ಪಿಸಲು ವಾಹನಗಳನ್ನು ಪರ್ಯಾಯ ಮಾರ್ಗಗಳತ್ತ ತಿರುಗಿಸಲಾಗಿದ್ದು, ಪ್ರಯಾಣಿಕರು ಅಗತ್ಯವಿದ್ದರೆ ಮಾತ್ರ ಈ ಮಾರ್ಗದಲ್ಲಿ ಪ್ರಯಾಣಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ.
ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ರಸ್ತೆ, ರೈಲು ಮತ್ತು ಸಾರ್ವಜನಿಕ ಸಾರಿಗೆ ಸೇವೆಗಳ ಮೇಲು ಪರಿಣಾಮ ಬೀರಿದೆ. ಹವಾಮಾನ ಇಲಾಖೆ ಮುಂದಿನ ಕೆಲದಿನಗಳ ವರೆಗೆ ಭಾರಿ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರುಬೇಕೆಂದು ಸೂಚಿಸಲಾಗಿದೆ.
ಮುಂಬೈ - ಪುಣೆ ಎಕ್ಸ್ಪ್ರೆಸ್ ವೇ ಸುರಂಗದಲ್ಲಿ ಜಲಪಾತದಂತೆ ನುಗ್ಗಿದ ನೀರು - ವೈರಲ್ ವಿಡಿಯೋ ನೋಡಿ ಬೆಚ್ಚಿಬಿದ್ದ ವಾಹನ ಸವಾರರು :
ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ಮುಂಬೈ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಮುಂಬೈ - ಪುಣೆ ಎಕ್ಸ್ಪ್ರೆಸ್ ವೇಯ ಹೊಸ 'ಮಿಸ್ಸಿಂಗ್ ಲಿಂಕ್ ' ಯೋಜನೆಯ ಸುರಂಗ ಮಾರ್ಗದಲ್ಲಿ ಆತಂಕಕಾರಿ ದೃಶ್ಯಗಳು ಕಂಡುಬಂದಿವೆ. ಬೆಟ್ಟದ ಮೇಲ್ಭಾಗದಿಂದ ಭಾರಿ ಪ್ರಮಾಣದ ಮಳೆ ನೀರು ಜಲಪಾತದಂತೆ ಸುರಂಗದೊಳಗೆ ಧುಮುಕಿದ್ದು ಸುರಂಗದ ಒಳಭಾಗದಲ್ಲಿ ನದಿಯಂತೆ ನೀರು ಹರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೈರಲ್ ವಿಡಿಯೋಗಳಲ್ಲಿ ಸುರಂಗದ ಮೇಲ್ಭಾಗದಿಂದ ನಿರಂತರವಾಗಿ ನೀರು ಧುಮುಕ್ಕುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಅಲ್ಲಿಂದ ಸಂಚರಿಸುತ್ತಿದ್ದ ವಾಹನ ಸವಾರರು ಆತಂಕಕ್ಕೊಳಗಾಗಿದ್ದಾರೆ. ಮಳೆಯ ತೀವ್ರತೆಗೆ ಸುರಂಗದೊಳಗಿನ ನೀರಿನ ಅರಿವು ಹೆಚ್ಚಾಗಿರುವುದು ಪ್ರಯಾಣಿಕರಲ್ಲಿ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮುಂಬೈ - ಪುಣೆ ಎಕ್ಸ್ಪ್ರೆಸ್ ಟ್ರೈನ್ ದೇಶದ ಅತ್ಯಂತ ಪ್ರಮುಖ ಮತ್ತು ಹೆಚ್ಚು ಸಂಚಾರವಿರುವ ಹೆದ್ದಾರಿಗಳಲ್ಲಿ ಒಂದಾಗಿದ್ದು, ಅದರ ಮಿಸ್ಸಿಂಗ್ ಲಿಂಕ್ ಯೋಜನೆ ಪ್ರಯಾಣದ ಸಮಯ ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ. ಆದರೆ ಭಾರಿ ಮಳೆಯ ನಡುವೆ ಸುರಂಗದೊಳಗೆ ನೀರು ನುಗ್ಗಿದ ಘಟನೆ ಯೋಜನೆಯ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದು, ಮಳೆ ಮುಂದುವರೆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಸಾಧ್ಯತೆ ಇದೆ. ವಾಹನ ಸವಾರರು ಹವಾಮಾನ ಮತ್ತು ಸಂಚಾರದ ಇತ್ತೀಚಿನ ಮಾಹಿತಿ ಪಡೆದು ಮಾತ್ರ ಈ ಮಾರ್ಗದಲ್ಲಿ ಪ್ರಯಾಣಿಸುವಂತೆ ಸಲಹೆ ನೀಡಲಾಗಿದೆ.
ಮುಂಬೈ - ಪುಣೆ ಎಕ್ಸ್ಪ್ರೆಸ್ ವೇಯಲ್ಲಿ ಭೂಕುಸಿತ - ಮಿಸ್ಸಿಂಗ್ ಲಿಂಕ್ ರಸ್ತೆ ಸಂಪೂರ್ಣ ಬಂದ್, ತಪ್ಪಿದ ಭಾರೀ ಅನಾಹುತ :
ಮುಂಬೈ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಮುಂಬೈ ಪುಣೆ ಎಕ್ಸ್ಪ್ರೆಸ್ ವೇನ ಮಿಸ್ಸಿಂಗ್ ಲಿಂಕ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಸುರಂಗ ಮಾರ್ಗದ ಸಮೀಪದ ಬೆಟ್ಟದ ಇಳಿಜಾರಿನಲ್ಲಿ ಮಣ್ಣು ಮತ್ತು ದೊಡ್ಡ ಬಂಡೆಗಳು ಕುಸಿದು ರಸ್ತೆಗೆ ಬಿದ್ದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರಮುಖ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಭೂಕುಸಿತದಿಂದ ರಸ್ತೆಯಲ್ಲಿ ಭಾರಿ ಪ್ರಮಾಣದ ಮಣ್ಣು ಹಾಗೂ ಕಲ್ಲುಗಳು ಹರಡಿಕೊಂಡಿದ್ದು, ವಾಹನ ಸಂಚಾರಕ್ಕೆ ಅಪಘಾತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣವೇ ಸಂಚಾರ ಸ್ಥಗಿತಗೊಳಿಸಿದ್ದಾರೆ. ರಸ್ತೆ ತೆರವು ಮತ್ತು ಪರಿಸ್ಥಿತಿ ಪರಿಶೀಲನೆ ಕಾರ್ಯಗಳು ನಡೆಯುತ್ತಿವೆ.
ಅದೃಷ್ಟವಶಾತ್, ಭೂಕುಸಿತ ಸಂಭವಿಸಿದ ಸಮಯದಲ್ಲಿ ಯಾವುದೇ ವಾಹನಗಳು ಆ ಭಾಗದಲ್ಲಿ ಸಿಲುಕಿರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
ಮಹಾರಾಷ್ಟ್ರದಲ್ಲಿ ಮುಂಗಾರುಮಳೆಯ ಅಬ್ಬರ ಮುಂದುವರೆದಿರುವ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶಗಳು ಮತ್ತು ಹೆದ್ದಾರಿ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರು ಹೆಚ್ಚಿನ ಎಚ್ಚರಿಕೆವಹಿಸುವಂತೆ ಸೂಚಿಸಲಾಗಿದೆ. ಮುಂಬೈ ಪುಣೆ ಎಕ್ಸ್ಪ್ರೆಸ್ ವೇ ಮೂಲಕ ಪ್ರಯಾಣಿಸುವವರು ಸಂಚಾರ ಸ್ಥಿತಿ ಪರಿಶೀಲಿಸಿ ಪ್ರಯಾಣಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮುಂಬೈ - ಪುಣೆ ಮಿಸ್ಸಿಂಗ್ ಲಿಂಕ್ ಯೋಜನೆಗೆ ಮಳೆ ಸವಾಲು - ಮೊದಲ ಮಳೆಗೆ ಸುರಂಗದೊಳಗೆ ನೀರು ನುಗ್ಗಿದ್ದು ಆತಂಕ :
ಮುಂಬೈ ಮತ್ತು ಪುಣೆ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಮಹತ್ವಕಾಂಕ್ಷಿ "ಮಿಸ್ಸಿಂಗ್ ಲಿಂಕ್ " ಯೋಜನೆಗೆ ಭಾರಿ ಮಳೆ ಸವಾಲಾಗಿ ಪರಿಣಮಿಸಿದೆ. ಖಂಡಾಲಾ ಘಾಟ್ ನ ಕಡಿದಾದ ಕಿರುಗುಗಳನ್ನು ತಪ್ಪಿಸಲು ನಿರ್ಮಿಸಲಾಗುತ್ತಿರುವ ಬೃಹತ್ ಸುರಂಗ ಮಾರ್ಗ ಮತ್ತು ಚರ್ಚೆಗೆ ಕಾರಣವಾಗಿದೆ.
ಅತ್ಯಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿರುವ ಈ ಯೋಜನೆಯ ಸುರಂಗದಲ್ಲಿ ಮಳೆ ನೀರು ಪ್ರವೇಶಿಸಿರುವ ಘಟನೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳಿಗೆ ತಲೆನೋವು ಆಗಿ ಪರಿಣಮಿಸಿದೆ. ಸುರಂಗದ ಸುರಕ್ಷತೆ, ನೀರು ನಿರ್ವಹಣಾ ವ್ಯವಸ್ಥೆ ಹಾಗೂ ನಿರ್ಮಾಣ ಗುಣಮಟ್ಟದ ಕುರಿತು ಪ್ರಶ್ನೆಗಳು ಕೇಳಿ ಬರುತ್ತಿವೆ.
ಮುಂಬೈ - ಪುಣೆ ನಡುವಿನ ಸಂಚಾರವನ್ನು ವೇಗಗೊಳಿಸುವ ಗುರಿ ಹೊಂದಿರುವ ಈ ಮಿಸ್ಸಿಂಗ್ ಲಿಂಕ್ ಯೋಜನೆ ಪೂರ್ಣಗೊಂಡ ಬಳಿಕ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಮಳೆಗಾಲದಲ್ಲಿ ಎದುರಾದ ಈ ಸಮಸ್ಯೆ ಕಾಮಗಾರಿ ಮೇಲ್ವಿಚಾರಣೆ ಬಗ್ಗೆ ಗಮನ ಸೆಳೆದಿದೆ.
ಸದ್ಯ ಸುರಂಗದೊಳಗಿನ ನೀರು ನುಗ್ಗುವಿಕೆ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂಬೈ ಮತ್ತು ಪುಣೆ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗೆ ಹೆಚ್ಚಿನ ಮಹತ್ವ ಬಂದಿದೆ.