<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಸಲ್ಮಾನ್ ಖಾನ್ ಕುರಿತ ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ:ಏನಿದೆ ಸತ್ಯ?

ಸಲ್ಮಾನ್ ಖಾನ್ ಕುರಿತ ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ:ಏನಿದೆ ಸತ್ಯ?
Summary: The State Hotels Association has warned of a huge hike in food prices. If the situation continues, the association said that the price of idli could go up to ₹90 and masala dosa up to ₹150. The statement has sparked a debate among consumers and the hotel industry.

Belagavi news:

ಬೆಂಗಳೂರು: ಕಾರ್ಮಿಕರ ಕನಿಷ್ಠ ವೇತನವನ್ನು ಶೇ.60 ರಷ್ಟು ಹೆಚ್ಚಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ನಿರ್ಧಾರದ ಪರಿಣಾಮವಾಗಿ ರಾಜ್ಯಾದ್ಯಂತ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಲ್ಲಿ ಆಹಾರ ದರಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘ (KSHA) ಎಚ್ಚರಿಕೆ ನೀಡಿದೆ.

ಕಾರ್ಮಿಕರ ಸರಾಸರಿ ಕನಿಷ್ಠ ವೇತನವು ಈಗಿನ ಮಟ್ಟಕ್ಕಿಂತ ಸುಮಾರು ಶೇ.60ರಷ್ಟು ಹೆಚ್ಚಳವಾಗಿರುವುದರಿಂದ ಹೋಟೆಲ್ ಉದ್ಯಮದ ಮೇಲೆ ಭಾರಿ ಹೊರೆ ಬೀಳಲಿದೆ ಎಂದು ಸಂಘ ತಿಳಿಸಿದೆ. ವಿಶೇಷವಾಗಿ ಸಣ್ಣ ಹಾಗೂ ಕುಟುಂಬ ನಡೆಸುವ ಹೋಟೆಲ್ ಗಳಿಗೆ ಈ ಹೆಚ್ಚಳ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು KSHA ಅಧ್ಯಕ್ಷ ಜಿ.ಕೆ. ಶೆಟ್ಟಿ ಹೇಳಿದ್ದಾರೆ.

ಕಾರ್ಮಿಕರ ಕನಿಷ್ಠ ವೇತನ ಪರಿಸ್ಕರಣೆ ಮತ್ತು ನಿರಂತರ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮದ ವೆಚ್ಚಗಳು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೋಟೆಲ್ ಆಹಾರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘ ತಿಳಿಸಿದೆ.

Sponsored

ಈ ಕಾರಣಗಳಿಂದ ಇಡ್ಲಿ, ದೋಸೆ ಸೇರಿದಂತೆ ಸಾಮಾನ್ಯ ಉಪಹಾರಗಳ ಧರಗಳಲ್ಲಿ ಏರಿಕೆ ಅನಿವಾರ್ಯವಾಗಬಹುದು ಎಂದು ಸಂಘ ಎಚ್ಚರಿಕೆ ನೀಡಿದ್ದು. ಇದರಿಂದ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಸಾದ್ಯತೆ ಇದೆ.

ಹೋಟೆಲ್ ಆಹಾರಗಳ ಬೆಲೆಗಳು ದುಪ್ಪಟ್ಟು ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘ (KSHA) ಎಚ್ಚರಿಸಿದೆ.

ಪ್ರಸ್ತುತ ಸುಮಾರು ₹50 ಕ್ಕೆ ದೊರೆಯುತ್ತಿರುವ ಒಂದು ಪ್ಲೇಟ್ ಇಡ್ಲಿಯ ಬೆಲೆ ₹80-₹90 ಕ್ಕೆ ಏರಬಹುದು. ಅದೇ ರೀತಿ ಮಸಾಲೆ ದೋಸೆಯ ಬೆಲೆ ₹80-₹90 ರಿಂದ ₹150 ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಂಘ ತಿಳಿಸಿದೆ. ಸಸ್ಯಾಹಾರಿ ಊಟದ ಬೆಲೆ ಈಗಿನ ₹150- ₹200 ರಿಂದ ₹250- ₹300 ವರೆಗೆ ತಲುಪಬಹುದು. ಬೆಂಗಳೂರಿನಲ್ಲಿ ಪ್ರಸ್ತುತ ₹300 - ₹350 ಕ್ಕೆ ದೊರೆಯುತ್ತಿರುವ ಬಿರಿಯಾನಿ ಭಕ್ಷ್ಯ ಗಳು ಸುಮಾರು ₹500 ವರೆಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಪರಿಸ್ಕೃತ ವೇತನ ರಚನೆಯ ಪ್ರಕಾರ ವಲಯ 3 ತಾಲೂಕುಗಳಲ್ಲಿ ಕೌಶಲ್ಯರಹಿತ ಕೆಲಸಗಾರರಿಗೆ ಸುಮಾರು ₹19,300 ಮತ್ತು ವಲಯ -1 ಪ್ರದೇಶಗಳಲ್ಲಿ ಕೌಶಲ್ಯ ಪೂರ್ಣ ಕೆಲಸಗಾರರಿಗೆ ಸುಮಾರು ₹31,100ರವರೆಗೆ ವೇತನ ಇರಲಿದೆ ಎಂದು ತಿಳಿಸಲಾಗಿದೆ.

Sponsored

ಕಾರ್ಯಾಚರಣಾ ವೆಚ್ಚಗಳು ತೀವ್ರವಾಗಿ ಹೆಚ್ಚಿಸುತ್ತಿರುವುದರಿಂದ ಹೋಟೆಲ್ ವಲಯ ಈಗಾಗಲೇ ಆರ್ಥಿಕ ಒತ್ತಡದಲ್ಲಿದೆ ಎಂದು ಸಂಘ ಹೇಳಿದೆ. ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ ಕೆಲವೇ ತಿಂಗಳಲ್ಲಿ ₹1,884 ರಿಂದ ₹3,152 ಕ್ಕೆ ಏರಿಕೆಯಾಗಿದೆ. ಜೊತೆಗೆ ದಿನಸಿ ವಸ್ತುಗಳ ಬೆಲೆ, ವಿದ್ಯುತ್ ಶುಲ್ಕ ಹಾಗೂ ಕಸದ ಸೆಸ್ ಶುಲ್ಕ ಗಳ ಹೆಚ್ಚಳವೂ ಹೋಟೆಲ್ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ತಂದಿದೆ ಎಂದು KSHA ಅಧ್ಯಕ್ಷ ಜಿ .ಕೆ. ಶೆಟ್ಟಿ ತಿಳಿಸಿದ್ದಾರೆ.

"ಹೋಟೆಲ್ ಗಳು ಇತರ ವಲಯಗಳಂತೆ ಅಲ್ಲ, ನಾವು ಉದ್ಯೋಗಿಗಳಿಗೆ ಆಹಾರ, ವಸತಿ ಮತ್ತೆ ಇತರ ಸೌಲಭ್ಯಗಳನ್ನು ಒದಗಿಸುತ್ತೇವೆ. ಇಷ್ಟು ದೊಡ್ಡ ವೇತನ ಹೆಚ್ಚಳ ವಿಧಿಸುವ ಮೊದಲು ಸರ್ಕಾರವು ಹೋಟೆಲ್ ಉದ್ಯಮದ ಸ್ವರೂಪವನ್ನು ಪರಿಗಣಿಸಬೇಕಾಗಿತ್ತು" ಎಂದು ಕರ್ನಾಟಕ ರಾಜ್ಯ ಹೋಟೆಲ್ ಗಳ ಸಂಘದ (KSHA) ಅಧ್ಯಕ್ಷ ಜಿ.ಕೆ. ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಈ ತರಹ ಹಲವು ಕೈಗಾರಿಕೆಗಳಿಗಿಂತ ಭಿನ್ನವಾಗಿ ಹೋಟೆಲ್ ಸಂಸ್ಥೆಗಳು ಈಗಾಗಲೇ ಕಾರ್ಮಿಕರಿಗೆ ಆಹಾರ, ವಸತಿ, ಸಮವಸ್ತ್ರ ಮತ್ತು ತೊಳೆಯುವ ಭತ್ಯೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಸಂಘ ತಿಳಿಸಿದೆ. ಕನಿಷ್ಠ ವೇತನ ಪರಿಷ್ಕರಣೆ ಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಹೋಟೆಲ್ ಉದ್ಯಮವನ್ನು ಪ್ರತ್ಯೇಕವಾಗಿ ವರ್ಗೀಕರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು, ಆ ವಿನಂತಿಯನ್ನು ಸ್ವೀಕರಿಸಲಾಗಿಲ್ಲ ಎಂದು KSHA ಹೇಳಿದೆ.

ಈ ಹಿನ್ನಲೆಯಲ್ಲಿ ಪರಿಸ್ಥಿತ ಕನಿಷ್ಠ ವೇತನವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಿರುವ ಸಂಘ, ಸೂಕ್ತ ಕ್ರಮ ಕೈಗೊಳ್ಳದೀದ್ದರೆ ಹೋಟೆಲ್ ನಿರ್ವಹಕರಿಗೂ ಹಾಗೂ ಗ್ರಾಹಕರಿಗೂ ತೀವ್ರ ತೊಂದರೆ ಉಂಟಾಗಬಹುದು ಎಂದು ಎಚ್ಚರಿಸಿದೆ.

Sponsored

ಹೆಚ್ಚುತ್ತಿರುವ ವೆಚ್ಚಗಳು ನಿರುದ್ಯೋಗಕ್ಕೆ ಕಾರಣವಾಗಬಹುದು. ಜೊತೆಗೆ ಅನೇಕ ಕಾರ್ಮಿಕರು ಸಣ್ಣ ಅಂಗಡಿಗಳು ಮತ್ತು ಪಾದಚಾರಿ ಮಾರ್ಗದಲ್ಲಿನ ಮಾರಾಟದಂತಹ ಅಸಂಘಟಿತ ವಲಯಕ್ಕೆ ಸ್ಥಳಾಂತರಗೊಳ್ಳುವಂತೆ ಆಗಬಹುದು ಎಂದು ಸಂಘವು ಕಳವಳ ವ್ಯಕ್ತಪಡಿಸಿದೆ.

Also Read:

" ಇದು ನನ್ನ ವೈಯಕ್ತಿಕ ಅಭಿಪ್ರಾಯ" : ಪರಮೇಶ್ವರ್ ಕುರಿತು ಕೆ.ಎನ್. ರಾಜಣ್ಣ ಹೇಳಿಕೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online