<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

" ಇದು ನನ್ನ ವೈಯಕ್ತಿಕ ಅಭಿಪ್ರಾಯ" : ಪರಮೇಶ್ವರ್ ಕುರಿತು ಕೆ.ಎನ್. ರಾಜಣ್ಣ ಹೇಳಿಕೆ

" ಇದು ನನ್ನ ವೈಯಕ್ತಿಕ ಅಭಿಪ್ರಾಯ" : ಪರಮೇಶ್ವರ್ ಕುರಿತು ಕೆ.ಎನ್. ರಾಜಣ್ಣ ಹೇಳಿಕೆ
Summary: K.N. Rajanna has made a surprising statement saying, "It is my personal opinion that Parameshwara should become the CM." This statement has led to a new debate in the state political circle, and the debate on the CM's post has come to the fore. Rajanna's opinion is receiving different reactions in various political circles.

Belagavi news:

ಬೆಂಗಳೂರು, ಮೇ 26: ಕೆ.ಎನ್. ರಾಜಣ್ಣ ಅವರು "ಸೆಪ್ಟಂಬರ್ ಕ್ರಾಂತಿ "ವಿಳಂಬದ ಕುರಿತು ಮಾತನಾಡಿ, ರಾಜಕಾರಣದಲ್ಲಿ ಇಂತಹ ಬದಲಾವಣೆಗಳು ಸಹಜ ಪ್ರಕ್ರಿಯೆ ಎಂದು ತಿಳಿಸಿದ್ದಾರೆ. ತಾವು ಮೊದಲು ಪ್ರಸ್ತಾಪಿಸಿದ "ಸೆಪ್ಟೆಂಬರ್ ಕ್ರಾಂತಿ" ವಿಳಂಬವಾಗಿದ್ದು, ಇದು ರಾಜಕೀಯದಲ್ಲಿ ಸಾಮಾನ್ಯ ಎಂದು ಅವರು ಪುನರುಚ್ಚರಿಸಿದ್ದಾರೆ.

ಬದಲಾವಣೆಗಳು ಕೇವಲ ಕಾಂಗ್ರೆಸ್ ಗೆ ಸೀಮಿತವಲ್ಲ, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳಲ್ಲೂ ಗೊಂದಲಗಳಿದ್ದು, ಮುಂದಿನ ದಿನಗಳಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದು ಕೆ. ಎನ್ .ರಾಜಣ್ಣ ಅಭಿಪ್ರಾಯ ಪಟ್ಟಿದ್ದಾರೆ.

ಮುಖ್ಯಮಂತ್ರಿಯಾದ ನಂತರ ದಲಿತ ಸಮುದಾಯಕ್ಕೆ ಅವಕಾಶ ನೀಡಬೇಕು ಹಾಗೂ ಪರಮೇಶ್ವರ ಅವರಿಗೆ ಮುಖ್ಯ ಮಂತ್ರಿ ಸ್ಥಾನ ನೀಡಬೇಕು ಎಂಬ ತಮ್ಮ ಹಿಂದಿನ ಹೇಳಿಕೆಗೆ ಈಗಲೂ ತಾವು ಬದ್ಧವಾಗಿರುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

Sponsored

ಆದರೆ, ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಮಾತ್ರ ಎಂದು ಕೆ. ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ. ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದ್ದು, ಅದರ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಚಿವರು ಹೈಕಮಾಂಡ್ ಭೇಟಿ ಮಾಡಲು ತೆರಳಿರುವುದು ಸ್ಥಾನ ಕಳೆದುಕೊಳ್ಳುವ ಭೀತಿಯಿಂದಲ್ಲ, ಬದಲಿಗೆ ಪಕ್ಷದ ಕೆಲಸಗಳಿಗೆ ತಮ್ಮನ್ನು ನಿಯೋಜಿಸುವಂತೆ ಮನವಿ ಮಾಡಲು ಎಂದು ಕೆ.ಎನ್. ರಾಜಣ್ಣ ವಿವರಿಸಿದ್ದಾರೆ.

Also Read:

ಏಳು ವಿಧಾನ ಪರಿಷತ್ ಸ್ಥಾನಗಳಿಗೆ ಎಲೆಕ್ಷನ್ ಡೇ ಫಿಕ್ಸ್ ! ಕರ್ನಾಟಕ ರಾಜಕೀಯದಲ್ಲಿ ಕುತೂಹಲ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online