<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಬೆಂಗಳೂರು ರಸ್ತೆಗಳಲ್ಲಿ ಹೊಸ ಕ್ರಮ:ಫುಟ್ಬಾಲ್ ತೆರವು ಬಳಿಕ ವಾಹನ ಟೋಯಿಂಗ್ ಗ್ರೀನ್ ಸಿಗ್ನಲ್ ?

ಬೆಂಗಳೂರು ರಸ್ತೆಗಳಲ್ಲಿ ಹೊಸ ಕ್ರಮ:ಫುಟ್ಬಾಲ್ ತೆರವು ಬಳಿಕ ವಾಹನ ಟೋಯಿಂಗ್ ಗ್ರೀನ್ ಸಿಗ್ನಲ್ ?
Summary: Minister Krishna Byre Gowda has given an important hint about taking towing action against vehicles parked illegally on roads and footpaths after the football encroachment clearance operation. Here is the complete information about the government's next steps

BELAGAVI NEWS :

ಪುಟ್ಬಾತ್ ತೆಲುಗು ಬೆನ್ನಲ್ಲೇ ವಾಹನ ಟೋಯಿಂಗ್ ಗೆ ಬಿಗಿ ಕ್ರಮ? ಸಚಿವ ಕೃಷ್ಣ ಬೈರೇಗೌಡ ಮಹತ್ವದ ಸುಳಿವು

ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ನಿಲ್ಲಿಸಿರುವ ವಾಹನಗಳ ವಿರುದ್ಧ ಟೋಯಿಂಗ್ ಕ್ರಮ ಕೈಗೊಳ್ಳುವ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಹತ್ವದ ಸುಳಿವು ನೀಡಿದ್ದಾರೆ.

ಪುಟ್ ಪಾತ್ ತೆರವು ಕಾರ್ಯಚರಣೆಗಳನ್ನು ವಿರೋಧಿಸಿ ಬುದುವಾರ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಗುರುವಾರ ಸಚಿವ ಕೃಷ್ಣ ಬೈರೇಗೌಡ ಬೀದಿಬದಿ ವ್ಯಾಪಾರಿಗಳ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, "ಫುಟ್ಪಾತ್ ಮೇಲೆ ನಿಲ್ಲಿಸಿರುವ ವಾಹನಗಳ ಟೋಯಿಂಗ್ ಕುರಿತು ನಾಳೆ ಪ್ರತ್ಯೇಕ ಸಭೆ ನಡೆಸಿದರು.

ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪುಟ್ಪಾತ್ ಒತ್ತುವರಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದು,ಇದರ ಮುಂದುವರಿದ ಭಾಗವಾಗಿ ಅಕ್ರಮ ಪಾರ್ಕಿಂಗ್ ಮತ್ತು ಪುಟ್ ಪಾತ್ ಮೇಲೆ ವಾಹನ ನಿಲ್ಲಿಸುವವರ ವಿರುದ್ಧವು ಕಟ್ಟುನಿಟ್ಟಿನ ಕ್ರಮ ಜಾರಿಯಾಗುವ ಸಾಧ್ಯತೆ ಇದೆ.

ಸಚಿವರ ಈ ಹೇಳಿಕೆಯಿಂದ ಫುಟ್ಪಾತ್ ಹಾಗೂ ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಶೀಘ್ರದಲ್ಲೇ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ನಡೆಯಲಿರುವ ಸಭೆಯ ಬಳಿಕ ಸರ್ಕಾರದ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಫುಡ್ ಪಾತ್ ಒತ್ತುವರಿತರು ಮುಂದುವರಿಯಲಿದೆ -ಸಚಿವ ಕೃಷ್ಣ ಬೈರೇಗೌಡ

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ನಗರದಲ್ಲಿ ಪುಟ್ ಪಾತ್ ವತುವರಿ ತೆರೆವು ಕಾರ್ಯಾಚರಣೆ ಮುಂದುವರೆಯಲಿದ್ದು,ಇದು ಯಾವುದೇ ವರ್ಗದ ವಿರುದ್ಧದ ಕ್ರಮವಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳೊಂದಿಗೆನಡೆದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,"ಬೆಂಗಳೂರುದಲ್ಲಿ ಇನ್ನು ಶೇಕಡಾ 10ರಷ್ಟು ಒತ್ತುವರಿತರು ಕಾರ್ಯವು ಪೂರ್ಣಗೊಂಡಿಲ್ಲ.ಈ ಕಾರ್ಯಾಚರಣೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಡೆಯುತ್ತಿದ್ದು, ಮುಂದುವರೆಯಲಿದೆ" ಎಂದು ಹೇಳಿದರು.

"ನಮ್ಮ ಉದ್ದೇಶ ಬೀದಿಬದಿ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಲ್ಲ. ಇದು ಯಾವುದೇ ವೈಯಕ್ತಿಕ ನಿರ್ಧಾರವು ಅಲ್ಲ, ಬೆಂಗಳೂರು ನಗರ ಸ್ವಲ್ಪವಾದರೂ ಸುಧಾರಿಸಬೇಕು ಎಂಬುದೇ ಸರ್ಕಾರದ ಉದ್ದೇಶ" ಎಂದು ಸಚಿವರು ತಿಳಿಸಿದರು.

ಪಾದಚಾರಿಗಳ ಸುರಕ್ಷತೆಯ ಕುರಿತು ಆತಂಕ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ,ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ 930 ಪಾದಚಾರಿಗಳು ರಸ್ತೆಯ ಅಪಘಾತಗಳಲ್ಲಿ ಮೃತಪಟ್ಟಿದ್ದು, ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು.

ಈ ಅಂಕಿ ಅಂಶಗಳು ನಗರದಲ್ಲಿ ಸುರಕ್ಷಿತ ಪಾದಚಾರಿ ಮಾರ್ಗಗಳ ಅಗತ್ಯವನ್ನು ಸ್ಪಷ್ಟಪಡಿಸುತ್ತವೆ. ಇದೇ ಕಾರಣಕ್ಕೆ ಫುಟ್ಪಾತ್ ಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವ ಕಾರ್ಯಾಚರಣೆಯನ್ನು ಸರ್ಕಾರ ಆದ್ಯತೆಯೊಂದಿಗೆ ಮುಂದುವರೆಸುತ್ತಿದೆ ಎಂದು ಅವರು ತಿಳಿಸಿದರು.

ಸರ್ಕಾರದ ಉದ್ದೇಶ ಪಾದಚಾರಿಗಳಿಗೆ ಸುರಕ್ಷಿತ ಮತ್ತು ಅಡೆತಡೆ ಇಲ್ಲದ ಸಂಚಾರ ವ್ಯವಸ್ಥೆ ಕಲ್ಪಿಸುವುದಾಗಿದ್ದು,ಸುಪ್ರೀಂ ಕೋರ್ಟ್ ಮಾರ್ಗ ಸೂಚಿಗಳ ಅನುಸಾರ ಫುಟ್ಬಾತ್ ಮತ್ತು ವರಿ ತೆರಬು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಚಿವರು ಪುನರುಚ್ಚರಿಸಿದರು.

Also Read:

ಚಂಡೀಗಢ ಕೊಲೆ ಪ್ರಕರಣದಲ್ಲಿ ಪಾಕಿಸ್ತಾನ ಸಂಪರ್ಕ ಶಂಕೆ: ಮೂವರು ಅರೆಸ್ಟ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online