Balagavi News:
ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ NASA ಮಂಗಳ ಗ್ರಹಕ್ಕೆ ಕಳಿಸಿದ ತನ್ನ Perseverance Rever ಮೂಲಕ ಮತ್ತೊಂದು ಕುತೂಹಲಕಾರಿ ಚಿತ್ರವನ್ನು ಸೆರೆ ಹಿಡಿದಿದೆ.
ಈ ಛಾಯಾಚಿತ್ರದಲ್ಲಿ ಮಂಗಳದ ಮೇಲ್ಮೈಯಲ್ಲಿರುವ ಮೂರು ಬಂಡೆಗಳು ಒಂದರ ಮೇಲೊಂದು ಜೋಡಿಸಲ್ಪಟ್ಟಿರುವಂತೆ ಕಾಣುತ್ತವೆ.ಈ ಚಿತ್ರ 2026 ರ ಮೇ 13 ರಂದು ತೆಗೆದುಕೊಳ್ಳಲಾಗಿದೆ ಎಂದು ನಾಸಾ ತಿಳಿಸಿದೆ.
ರೋವರ್ ಮಂಗಳ ಗ್ರಹಕ್ಕೆ ಇಳಿದ ನಂತರ ಈಗಾಗಲೇ 1859 ದಿನಗಳನ್ನು ಪೂರೈಸಿದೆ.ಈ ಚಿತ್ರವನ್ನು ರೋವರ್ ನ Mastcam-Z ಕ್ಯಾಮೆರಾಗಳನ್ನು ಬಳಸಿ ಸೆರೆಹಿಡಿಯಲಾಗಿದೆ.ರೋವರ್ ನ "ಕುತ್ತಿಗೆ" ಭಾಗದಲ್ಲಿ ಅಳವಡಿಸಲಾದ ಈ ಎರಡು ಕ್ಯಾಮೆರಾಗಳು ದೂರದ ವಸ್ತುಗಳನ್ನು ಜೂಮ್ ಮಾಡಿ ಸ್ಪಷ್ಟವಾಗಿ ಹಿಡಿಯುವ ಸಾಮರ್ಥ್ಯ ಹೊಂದಿದ್ದು,ಜೊತೆಗೆ ವೈಡ್ - ಆ್ಯಂಗಲ್ ಚಿತ್ರಗಳನ್ನು ಸೆರೆ ಹಿಡಿಯಲು ಸಾಧ್ಯವಾಗುತ್ತದೆ.
ಈ ರೀತಿಯ ಚಿತ್ರಗಳು ಮಂಗಳದ ಭೂಗರ್ಭ ರಚನೆ ಹಾಗೂ ಗಾಳಿ ಕಲ್ಲುಗಳ ನಡುವಿನ ದೀರ್ಘಕಾಲದ ಪ್ರಭಾವಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಹಾಯ ಮಾಡುತ್ತಿವೆ.
ರೋವರ್ ಛಾಯಾಗ್ ಚಿತ್ರದಲ್ಲಿ ಗೋಚರಿಸುವ ಬಂಡೆಗಳ ನಿಜವಾಗಿಯೂ ಗಮನಾರ್ ವೈಶಿಷ್ಟ್ಯವೆಂದರೆ ಅವುಗಳ ಆಕಾರ.ಅವು ಭೂಮಿಯ ಮೇಲಿನ ಟ್ರಕಿಂಗ್ ಗೆ ಹೋಗುವಾಗ ಹಾದಿಗಳನ್ನು ಗುರುತಿಸಲು ಮತ್ತು ದಿಕ್ಕಿನ ಮಾರ್ಗದರ್ಶನವನ್ನು ಒದಗಿಸಲು ಸಮೀಪಿಸುವ ಕೈರ್ನ್ ಗಳಂತೆ ಕಾಣುತ್ತವೆ.ಆದರೆ ಮಾನವರು ಇನ್ನು ಮಂಗಳ ಗ್ರಹದ ಮೇಲೆ ಕಾಲಿಟ್ಟಿಲ್ಲವಾದ್ದರಿಂದ ಈ ಬಂಡಗಳನ್ನು ಯಾರಾದರೂ ಉದ್ದೇಶಪೂರ್ವಕವಾಗಿ ಈ ರೀತಿಯಲ್ಲಿ ಜೋಡಿಸಿರುವ ಶಂಕೆ ಇಲ್ಲ.
ಮಂಗಳದ ಈ ನಿಗೂಢ ಬಂಡೆಗಳ ಹಿಂದೆ ಇರುವ ಕಾರಣ ಬಹುತೇಕವಾಗಿ ಭೂವೈಜ್ಞಾನಿಕ ಪ್ರಕ್ರಿಯೆಗಳೇ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.ಈ ರಚನೆಗಳು ಪ್ರತ್ಯೇಕ ಕಲ್ಲುಗಳಾಗಿರದೆ,ಒಂದೇ ದೊಡ್ಡ ಶಿಲಾ ರಚನೆಯ ಭಾಗಗಳು ಆಗಿರಬಹುದು ಎಂಬ ಸಾಧ್ಯತೆ ಹೆಚ್ಚು. ಲಕ್ಷಾಂತರ ವರ್ಷಗಳ ಕಾಲ ನಡೆದ ಗಾಳಿ ಸವೆತ ಅಥವಾ ಹಿಂದೆ ಮಂಗಳದಲ್ಲಿ ಹರಿದಿದ್ದ ನೀರು ಬಲದಿಂದ ಉಂಟಾದ ಭಂಗ ಕಾರಣವಾಗಿ ಈ ಶಿಲೆ ಹೊಡೆದು ಮೂರು ವಿಭಿನ್ನ ತುಂಡುಗಳಾಗಿ ಕಾಣಿಸಿಕೊಳ್ಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
Perseverance Rover ಜೊತೆಗೆ,ಮಂಗಳದ ಮೇಲ್ಮೈ ಅಧ್ಯಯನ ಮಾಡಿದ Curiosity Roverನೀಡಿದ ಮಾಹಿತಿಯ ಪ್ರಕಾರ,ಮಂಗಳದಲ್ಲಿ ಗಾಳಿಯೇ ಭೂ ವೈಜ್ಞಾನಿಕ ಬದಲಾವಣೆಗಳಿಗೆ ಪ್ರಮುಖ ಚಾಲಕವಾಗಿದೆ. ಶತಕೋಟಿ ವರ್ಷಗಳ ಅವಧಿಯಲ್ಲಿ ನಿರಂತರ ಗಾಳಿ ಸವೆತಕ್ಕೆ ಒಳಗಾದ ಶಿಲೆಗಳು ನಿಧಾನವಾಗಿ ತಮ್ಮ ಮೂಲ ಆಕಾರ ಕಳೆದುಕೊಂಡು ವಿಚಿತ್ರ ಹಾಗೂ ಸಾಮಾನ್ಯ ರೂಪಗಳಲ್ಲಿ ರೂಪಾಂತರಗೊಳ್ಳುತ್ತವೆ.
ಇದರಿಂದ,ಇಂದು ಕಾಣುತ್ತಿರುವ"ಒಂದರ ಮೇಲೊಂದು ಇಟ್ಟಂತೆ"ತೋರುವ ಈ ಕಲ್ಲುಗಳು ಸಹ ಪ್ರಕೃತಿಯ ದೀರ್ಘಕಾಲದ ಸವೆತ ಮತ್ತು ಮಂಗಳದ ಹಳೆಯ ಪರಿಸರದ ಪರಿಣಾಮವಾಗಿರುವ ಸಾಧ್ಯತೆ ಹೆಚ್ಚಾಗಿದೆ.
ಮಂಗಳ ಗ್ರಹದಲ್ಲಿ ಇಂತಹ ವಿಚಿತ್ರ ಶೀಲಾ ರಚನೆಗಳು ಹೊಸದೇನಲ್ಲ.ಇಂದಿನ ಹಲವು ಮಿಷನ್ ಗಳು ಸಹ ಇದೇ ರೀತಿಯ ಅಸಾಮಾನ್ಯ ಬಂಡೆಗಳ ಚಿತ್ರಗಳನ್ನು ದಾಖಲಿಸಿವೆ.ಸಣ್ಣ ಅಮೃತಶಿಲೆಯಂತಿರುವ ಕಲ್ಲುಗಳಿಂದ ತಿಳಿದು ಸಮಾನ ಅಂತರದಲ್ಲಿ ಹರಡಿರುವ ಬಂಡೆಗಳು ಹಾಗೂ ವಿಭಿನ್ನ ರೇಖೆಗಳನ್ನು ಹೊಂದಿರುವ ಶಿಲೆಗಳವರೆಗೆ ವಿವಿಧ ರೂಪಗಳು ಕಂಡುಬಂದಿವೆ.ಪ್ರತಿ ಬಾರಿ ಇಂತಹ ದೃಶ್ಯಗಳು ವಿಜ್ಞಾನಿಗಳಲ್ಲಿ ಹೊಸ ಕುತೂಹಲವನ್ನು ಹುಟ್ಟು ಹಾಕಿವೆ.
ಆದರೆ ಈ ರಚನೆಗಳು ಬಹುಶಃಕ್ಯಾಮೆರಾ ತೆಗೆದ ಕೋನ,ನೆರಳುಗಳು ಮತ್ತು ಮೇಲ್ಮೈಯ ಅಸಮತೋಲನದ ಪರಿಣಾಮವಾಗಿ ವಿಚಿತ್ರವಾಗಿ ಕಾಣಿಸಿಕೊಳ್ಳುತ್ತವೆ.ವಾಸ್ತವದಲ್ಲಿ ಇವು ಬಹುತೇಕ ನೈಸರ್ಗಿಕ ಭೂ ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ರೂಪಾಂತರಗೊಂಡ ಶಿಲೆಗಳೇ ಆಗಿವೆ.ಕೆಲಸ ಸಂದರ್ಭಗಳಲ್ಲಿ ಇಂಥ ದೃಶ್ಯಗಳು ತಪ್ಪು ಅರ್ಥೈಸಿಕೆ ಅಥವಾ ಊಹಾತ್ಮಕ ಸಿದ್ಧಾಂತಗಳಿಗೆ ಕಾರಣವಾಗಿವೆ.
ಇದಕ್ಕೆ ಪ್ರಮುಖ ಉದಾಹರಣೆಯಾಗಿ 1976ರಲ್ಲಿ ನಡೆದ Viking Mission Mars Face Discovery ಅನ್ನು ಉಲ್ಲೇಖಿಸಬಹುದು.ಆ ಸಂದರ್ಭದಲ್ಲಿ NASA ನ ವೈಕಿಂಗ್ ಮಿಷನ್ ಸೆರೆಹಿಡಿದ ಚಿತ್ರದಲ್ಲಿ ಒಂದು ಶಿಲಾದ ರಚನೆ ಮಾನವ ಮುಖದಂತೆ ಕಾಣಿಸಿಕೊಂಡಿತು.ಇದು ವ್ಯಾಪಕ ಚರ್ಚೆಗೆ ಕಾರಣವಾಗಿ,ಮಂಗಳದಲ್ಲಿ ಅನ್ಯಗ್ರಹ ಜೀವಿಗಳ ಉಪಸ್ಥಿತಿ ಕುರಿತು ಹಲವು ವಾದ ಪ್ರತಿವಾದಗಳಿಗೆ ನಾಂದಿ ಹಾಕಿತು.
ಆದರೆ ನಂತರ ದಹೆಚ್ಚಿನ ರೆಸಲ್ಯೂಷನ್ ಅಧ್ಯಯನಗಳು ಇದು ಸಹ ನೈಸರ್ಗಿಕ ಶಿಲಾ ರೂಪವೇ ಎಂಬುದನ್ನು ಸ್ಪಷ್ಟಪಡಿಸಿದೆ.
ಇಂತಹ ಊಹಾತ್ಮಕ ವಿವರಣೆಗಳು ಸಾರ್ವಜನಿಕ ಕುತೂಹಲವನ್ನು ಹೆಚ್ಚಿಸಬಹುದು.ಆದರೆ ವಿಜ್ಞಾನಿಗಳು ಯಾವಾಗಲೂ ಪುರಾವೆಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.ಈ ಬಂಡೆಗಳ ರೂಪ ರಚನೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಮೂಲಕ ಮಂಗಳ ಗ್ರಹದ ಭೂವೈಜ್ಞಾನಿಕ ರಹಸ್ಯಗಳು ಮತ್ತು ಅದರ ಹಳೆಯ ಪರಿಸರದ ಇತಿಹಾಸವನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.ಹಿಂದೆ ಅಲ್ಲಿ ನದಿಗಳು ಹರಿದಿದ್ದವೆಯ ? ಹಾಗೂ ಜೀವದ ಉದ್ಭವಕ್ಕೆ ಅನುಕೂಲಕರ ಪರಿಸ್ಥಿತಿಗಳು ಇದ್ದವೇ? ಎಂಬುವಂತಹ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇದರಿಂದ ಸಾಧ್ಯವಾಗುತ್ತದೆ.
perseverance Rover ಫೆಬ್ರುವರಿ 2021 ರಲ್ಲಿ ಮಂಗಳ ಗ್ರಹದಲ್ಲಿ ಇಳಿದ ನಂತರದಿಂದ ಜೆಜೆರೋ ಕ್ರೇಡರ್ ಪ್ರದೇಶವನ್ನು ನಿರಂತರವಾಗಿ ಅನ್ವೇಷಿಸುತ್ತಿದೆ.ಇದರ ಮುಖ್ಯ ಗುರಿ ಪ್ರಾಚೀನ ಜೀವಕೋಶಗಳ ಜೀವದ ಗುರುತುಗಳನ್ನು ಹುಡುಕುವುದು ಮತ್ತು ಭವಿಷ್ಯದಲ್ಲಿ ಭೂಮಿಗೆ ಮರಳಿಸಬಹುದಾದ ಕಲ್ಲು ಹಾಗೂ ಮಣ್ಣಿನ ಮಾದರಿಯನ್ನು ಸಂಗ್ರಹಿಸುವುದಾಗಿದೆ
Also Read: