<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಶರದ್ ಪವಾರ್ ಬಣಕ್ಕೆ ಹೊಸ ಸಂಕಷ್ಟ? ತಡರಾತ್ರಿ ಫಡ್ನವೀಸ್ ಜೊತೆ ರೆಬೆಲ್ಸ್ ಸಭೆ

ಶರದ್ ಪವಾರ್ ಬಣಕ್ಕೆ ಹೊಸ ಸಂಕಷ್ಟ? ತಡರಾತ್ರಿ ಫಡ್ನವೀಸ್ ಜೊತೆ ರೆಬೆಲ್ಸ್ ಸಭೆ
Summary: In a new development in Maharashtra politics, some rebel leaders of Sharad Pawar's NCP faction met Chief Minister Devendra Fadnavis late at night. This meeting has once again led to a discussion of differences in the NCP and has increased curiosity in the political circle.

belaagvi news :

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ. " ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ ಪಿ)ಯಲ್ಲಿ ಮತ್ತೆ ಭಿನ್ನಮತದ ಚರ್ಚೆಗಳು ಜೋರಾಗಿದ್ದು, ಪಕ್ಷದ ಹಿರಿಯ ನಾಯಕ "ಜಯಂತ್ ಪಾಟೀಲ್" ಮುಖ್ಯಮಂತ್ರಿ " ದೇವೇಂದ್ರ ಫಡ್ನವೀಸ್" ಅವರನ್ನು ಮಂಗಳವಾರ ತಡರಾತ್ರಿ ಅವರು ಅಧಿಕೃತ ನಿವಾಸ "ವರ್ಷ"ದಲ್ಲಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಸಾಂಗ್ಲಿ ಜಿಲ್ಲೆಯ "ಉರಾನ್- ಈಶ್ವರಪುರ ಕ್ಷೇತ್ರದ" ಅಭಿವೃದ್ಧಿ ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲು ಜಯಂತ್ ಪಾಟೀಲ್ ಭೇಟಿ ನೀಡಿದ್ದರು ಎನ್ನಲಾಗಿದೆ. ಆದರೆ, ಈ ಭೇಟಿಯ ರಾಜಕೀಯ ಮಹತ್ವದ ಬಗ್ಗೆ ವಿವಿಧ ಊಹಾಪೋಹಗಳು ವ್ಯಕ್ತವಾಗುತ್ತಿವೆ.

ಈ ಬೆಳವಣಿಗೆ ಮಹಾಯುತಿ ಸರ್ಕಾರವು ಪ್ರತಿಪಕ್ಷ ನಾಯಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಗಳ ನಡುವೆಯೇ ನಡೆದಿರುವುದರಿಂದ, ಶರದ್ ಪವಾರ್ ಬಣದ ಎನ್ಸಿಪಿಯಲ್ಲಿ ಮತ್ತೆ ಬಿರುಕು ಮೂಡಲಿದೆಯೇ ಎಂಬ ಪ್ರಶ್ನೆ ಉದ್ಬವಿಸಿದೆ. ಇದೇ ವೇಳೆ, ಎನ್ಸಿಪಿಯ ಎರಡು ಬಣಗಳಾದ " ಶರದ್ ಪವಾರ್ ಬಣ" ಮತ್ತು " ಅಜಿತ್ ಪವಾರ್ ಬಣ" ಮತ್ತೆ ಒಂದಾಗುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಜಯಂತ್ ಪಾಟೀಲ್ ಅವರು ಆಡಳಿತಾರೂಢ ಎನ್ ಸಿಪಿ (ಅಜಿತ್ ಪವಾರ್ ಬಣ) ನಾಯಕರು " ಪ್ರಫುಲ್ ಪಟೇಲ್" ಮತ್ತು " ಸುನಿಲ್ ತತ್ಕರೆ" ಅವರೊಂದಿಗೆ ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ಭೇಟಿಯಾಗಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು. ಆದರೆ, ಈ ಸುದ್ದಿಯನ್ನು ಜಯಂತ್ ಪಾಟೀಲ್ ನಿರಾಕರಿಸಿದ್ದು, ಭೇಟಿಯ ಕುರಿತು ಹೆಚ್ಚಿನ ವಿವರ ನೀಡಲು ನಿರಾಕರಿಸಿದ್ದಾರೆ.

ಈ ಬೆಳವಣಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ಕಾರಣವಾಗಬಹುದೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಕೇಂದ್ರಬಿಂದುವಾಗಿದೆ.

ಈ ಬೆಳವಣಿಗೆ ನಡುವೆ ಕಾಂಗ್ರೆಸ್ ನಾಯಕ "ಪಿ. ಚಿದಂಬರಂ" ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರವು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ " 131ನೇ ಸಂವಿಧಾನ ತಿದ್ದುಪಡಿ ಮಸೂದೆಗೆ" ಬೆಂಬಲ ಪಡೆಯುವ ಉದ್ದೇಶದಿಂದ " ಶರದ್ ಪವಾರ್ ನೇತೃತ್ವದ ಎನ್ಸಿಪಿ (ಎಸ್ ಪಿ) ಹಾಗೂ " ಡಿಎಂಕೆ"ಪಕ್ಷಗಳನ್ನು ಓಲೈಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರೋ ಚಿದಂಬರಂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಲ್ಲಿ ಬಿರುಕು ಮೂಡಿಸಿದ ಬಳಿಕ, ಹಿಂದಿನ ಅಧಿವೇಶನದಲ್ಲಿ ಯಶಸ್ವಿಯಾಗದ ಮಸೂದೆಯನ್ನು ಮತ್ತೆ ಮಂಡಿಸಲು ಬಿಜೆಪಿ ನಿರ್ಣಾಯಕ ಮತಗಳನ್ನು ಸಂಗ್ರಹಿಸುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಮಸೂದೆಗೆ ಬೆಂಬಲ ನೀಡದಂತೆ ಎನ್ ಸಿಪಿ ( ಎಸ್ ಪಿ) ಮತ್ತು ಡಿಎಂಕೆ ಪಕ್ಷಗಳಿಗೆ ಅವರು ಮನವಿ ಮಾಡಿದ್ದಾರೆ.

ಕೇಂದ್ರ ಪುನರ ವಿಂಗಡಣೆಗೆ ಪ್ರಸ್ತಾಪಿಸಿರುವ ಸೂತ್ರವು ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಪರಿಣಾಮಕಾರಿಯಾಗಿ ಅನುಸರಿಸಿ ಜನಸಂಖ್ಯೆ ನಿಯಂತ್ರಣದಲ್ಲಿ ಸಾಧನೆ ಮಾಡಿದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯಗಳ ಹಕ್ಕುಗಳ ಮೇಲೆ ಇದು ಪರಿಣಾಮ ಬೀರುವ ಸಾದ್ಯತೆ ಇರುವುದರಿಂದ, ಎಲ್ಲ ಪ್ರಾದೇಶಿಕ ಪಕ್ಷಗಳು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಇದೇ ವೇಳೆ, ಜುಲೈ 20 ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧವೇಶನದಲ್ಲಿ " ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು" 850ಕ್ಕೆ ಹೆಚ್ಚಿಸುವುದು ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶದಿಂದ 131ನೇ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸುವ ಸಾಧಿಸಿ ಇದೆ ಎಂಬ ರಾಜಕೀಯ ಚರ್ಚೆಗಳು ಜೋರಾಗಿದೆ. ಆದರೆ ಈ ಕುರಿತು ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online