<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಅಪ್ಪು ವಿಚಾರದಲ್ಲಿ ತಾಳ್ಮೆ ಇಲ್ಲ : ನಟ ಶ್ರೀ ಮುರಳಿ ಕಠಿಣ ಎಚ್ಚರಿಕೆ

ಅಪ್ಪು ವಿಚಾರದಲ್ಲಿ ತಾಳ್ಮೆ ಇಲ್ಲ : ನಟ ಶ್ರೀ ಮುರಳಿ ಕಠಿಣ ಎಚ್ಚರಿಕೆ
Summary: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕುರಿತು ಅವಹೇಳನಕಾರಿ ಮಾತುಗಳು ಸಹಿಸುವುದಿಲ್ಲ ಎಂದು ಶ್ರೀಮುರಳಿ ತೀವ್ರ ಪ್ರತಿಕ್ರಿಯಿಸಿದ್ದಾರೆ.

Belagavi news:

ನಟ ಶ್ರೀಮುರುಳಿ ಅವರು ಅಪ್ಪು ಕೇವಲ ನಟನಲ್ಲ ,ಕನ್ನಡಿಗರ ಹೃದಯದ ಭಾವನೆಯನ್ನು ಹೇಳಿದರು. ಅವರ ಗೌರವಕ್ಕೆ ಧಕ್ಕೆ ಆಗುವ ಯಾವುದೇ ಮಾತುಗಳಿಗೆ ಕಠಿಣ ಪ್ರತಿಕ್ರಿಯೆ ಖಚಿತ ಎಂದು ಎಚ್ಚರಿಸಿದ್ದಾರೆ.

ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರ ಇತ್ತೀಚಿನ ಹೇಳಿಕೆಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ. ಈ ವಿಚಾರಕ್ಕೆ ಸಂಬಂಧಿಸಿದ ನಟ ಶ್ರೀಮುರುಳಿ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಗೌರವ ಮೌಲ್ಯಗಳು ಮತ್ತು ಭಾವನೆಗಳಿಗೆ ಧಕ್ಕೆ ಆಗುವ ಮಾತುಗಳನ್ನು ಸಹಿಸುವುದಿಲ್ಲ ಎಂಬ ನಿಲುವನ್ನು ಶ್ರೀ ಮುರಳಿ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ಪಡೆಯುತ್ತಿದ್ದು,ಅಭಿಮಾನಿಗಳು ಕೂಡ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಕನಕಪುರ ಶ್ರೀನಿವಾಸ ಮಾತನಾಡಿದ್ದು ತುಂಬಾ ತಪ್ಪು. ನನ್ನ ಮನಸ್ಸಿಗೆ ಬಹಳ ನೋವಾಗಿದೆ ನಾವು ಅವರನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ರೋರಿಂಗ್ ಸ್ಟಾರ್ ಶ್ರೀ ಮುರಳಿ ತಿಳಿಸಿದ್ದಾರೆ.

Sponsored

ಈ ವಿಷಯದ ಕುರಿತಾಗಿ ದೊಡ್ಡಬಳ್ಳಾಪುರದಲ್ಲಿಂದು ನಟ ಶ್ರೀಮುರುಳಿ ಪ್ರತಿಕ್ರಿಯಿಸಿ, ನಮಗೆಲ್ಲಾ ದೊಡ್ಡವರು ಡಾ. ರಾಜಕುಮಾರ್ ಒಂದು ಮಾತು ಹೇಳಿದ್ದರು.ಕಲಾವಿದರ ಹತ್ತಿರ ಕೆಲಸ ಮಾಡಿಸಿಕೊಳ್ಳುವಾಗ ಒಂದು ರೀತಿ , ಕೆಲಸ ಮುಗಿದ ನಂತರ ಒಂದು ರೀತಿ ಯಾವುದು ಒಂದು ಘಟನೆ ಇಟ್ಟುಕೊಂಡು ಬೇಜವಾಬ್ದಾರಿತನದಿಂದ ಮಾತನಾಡಿರುವುದನ್ನು ನಮಗೆ ಇಷ್ಟವಾಗುತ್ತಿಲ್ಲ.ಕಲಾವಿದರು ಎಂದ ಮೇಲೆ ಕಲಾವಿದರೆ ಅಷ್ಟೇ ಎಂದು ಹೇಳಿದರು. ನಿರ್ಮಾಪಕರು ಅನ್ನದಾತರು.ಅವರ ಮಾತನ್ನು ಚಾಚು ತಪ್ಪದೇ ಪಾಲಿಸಿ ನಿರ್ಮಾಪಕರನ್ನು ಗೌರವದಿಂದ ಕಾಣುತ್ತೇವೆ ಎಂದು ಹೇಳಿದರು.

ಕಲಾವಿದರಿಗೆ ಮನೆ ಸಂಸಾರ ಜವಾಬ್ದಾರಿ ಎಲ್ಲವೂ ಇರುತ್ತೆ.ಇಲ್ಲದೆ ಇರುವವರ ಬಗ್ಗೆ ಮಾತನಾಡುವುದು ಇನ್ಯಾರದೋ ಬಗ್ಗೆ ಮಾತನಾಡುವುದು ಇದನ್ನೆಲ್ಲ ಏಕೆ ಮಾಡಬೇಕು.ನಾವೆಲ್ಲಾ ಕೆಲಸ ಮಾಡುತ್ತಿರುವುದು ತಾಯಿ ಭುವನೇಶ್ವರಿಗೋಸ್ಕರ.ಕಷ್ಟ ಯಾರಿಗೆ ಬರಲ್ಲ? ನಮಗೂ ಕಷ್ಟ ಇದೆ ಈಗಲೂ ಕಷ್ಟ ಇದೆ ಎಂದು ಸ್ಪಷ್ಟವಾಗಿ ತಿಳಿಸಿದರು.

ಶ್ರೀಮುರುಳಿಯವರು ಹೇಳಿಕೆಯಂತೆ, ನಿರ್ಮಾಪಕ ಕನಕಪುರ ಶ್ರೀನಿವಾಸ ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅನೇಕರ ಬಗ್ಗೆ ವಿವಾದಿತ ಹೇಳಿಕೆಗಳನ್ನು ನೀಡಿದ್ದರು.ಡಿಸಿಎಂ ಡಿಕೆ ಶಿವಕುಮಾರ್, ಧ್ರುವ ಸರ್ಜಾ,ಜೋಗಿ ಪ್ರೇಮ್,ಪುನೀತ್ ರಾಜಕುಮಾರ್ ಸೇರಿದಂತೆ ಹಲವರ ವಿರುದ್ಧ ಮಾತನಾಡಿದರು.

ನಟ ಶ್ರೀಮುರುಳಿಯವರು ಅಪ್ಪು ಅವರ ಬಗ್ಗೆ ಮಾತನಾಡಿರುವುದಕ್ಕೆ ಕ್ಷಮಾರ್ಪಣೆ ನೀಡುವುದಿಲ್ಲ,ಈ ವಿಚಾರದಲ್ಲಿ ನಾವು ಕ್ಷಮಿಸೋದೇ ಇಲ್ಲ ನಾವು ಯಾರಿಗೆ ಏನು ಮಾಡಿದ್ದೀವಿ? ಇಷ್ಟೊಂದು ದಿನಗಳಿಂದ ಇಂಡಸ್ಟ್ರಿಗೋಸ್ಕರ ಮತ್ತು ಸಿನಿಮಾಗೋಸ್ಕರ ಕಲೆಯನ್ನು ಉಳಿಸಲು ಕೆಲಸ ಮಾಡಿಕೊಂಡು ಬಂದಿದ್ದೇವೆ. ಸಿನಿಮಾದಿಂದ ಬದುಕುತ್ತಿದ್ದೇವೆ. ಕಷ್ಟಾನೋ ಸುಖಾನು ಇಲ್ಲಿ ಮುಳುಗುತ್ತಿದ್ದೇವೆ ಎಂದು ಹೇಳಿದರು.ಇದರ ಜೊತೆಗೆ ನಿರ್ಮಾಪಕರು ಹಿರಿಯರು ಹಿರಿಯರ ಸ್ಥಾನದಲ್ಲಿದ್ದಾರೆ.ಸ್ವಲ್ಪ ಯೋಚಿಸಿ ಮಾತನಾಡಬೇಕು ಬಹಳ ಸೂಕ್ಷ್ಮ ವಿಚಾರಗಳು,ವ್ಯಕ್ತಿಗಳ ಬಗ್ಗೆ ಮಾತನಾಡಿದ್ದಾರೆ.ಇದು ಬಹಳ ತಪ್ಪು.ಅದರಲ್ಲೂ ಅಪ್ಪು ಅವರ ಬಗ್ಗೆ ಮಾತನಾಡಿರುವುದಕ್ಕೆ ಕ್ಷಮೆಯೇ ಇಲ್ಲ ಎಂದು ಶ್ರೀಮುರಳಿಯವರು ಸ್ಪಷ್ಟವಾಗಿ ತಿಳಿಸಿದ್ದಾರೆ.

Sponsored

ಇದರ ಜೊತೆಗೆ ಸಿನಿಮಾ ಇಂಡಸ್ಟ್ರಿ ಎಂಬ ಮನೆಯಲ್ಲಿ ಹಿರಿಯರು ಕೆಲವರು ಇಲ್ಲ.ಅವರ ಬದಲಿಗೆ ಕೆಲವರು ಮನೆಯ ಜವಾಬ್ದಾರಿ ತಗೊಂಡಿದ್ದಾರೆ.ಇದನ್ನೆಲ್ಲಾ ಅವರು ಗಮನಿಸುತ್ತಿದ್ದಾರೆ. ಇದಕ್ಕೆ ಕ್ರಮ ತಗೋತಾರೆ ಎಂದು ಗಂಭೀರತೆಯಿಂದ ಶ್ರೀಮುರುಳಿಯವರು ಹೇಳಿದರು.

ಇನ್ನಷ್ಟು ಓದಿರಿ:

ತಿರುಮಲ ಲಡ್ಡು ಪ್ರಕರಣದಲ್ಲಿ ತಿರುವು : ಸತ್ಯ ಒಪ್ಪಿಕೊಂಡ ಟಿಟಿಡಿ ಮಾಜಿ ಅಧ್ಯಕ್ಷ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online