<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಆನ್ ಲೈನ್ ಔಷಧ ಮಾರಾಟಕ್ಕೆ ವಿರೋಧ: ಶಿವಮೊಗ್ಗದಲ್ಲಿ ಬೃಹತ ಪ್ರತಿಭಟನೆ

ಆನ್ ಲೈನ್ ಔಷಧ ಮಾರಾಟಕ್ಕೆ ವಿರೋಧ: ಶಿವಮೊಗ್ಗದಲ್ಲಿ ಬೃಹತ ಪ್ರತಿಭಟನೆ
Summary: Various organizations and traders have protested against the online sale of drugs in Shivamogga. Alleging violation of rules and damage to local drug stores, the protesters have demanded that the government take immediate action. This protest has received a wide response at the local level.

Balagavi News:

ಶಿವಮೊಗ್ಗ: ಆನ್ಲೈನ್ ಮೂಲಕ ಔಷದ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿ ಇಲ್ಲಿ ಶಿವಮೊಗ್ಗ ಜಿಲ್ಲಾಧ್ಯಂತ ಔಷಧ ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ದೊಡ್ಡ ಕಾರ್ಪೊರೇಟ್ ಕಂಪನಿಗಳು ಭಾರಿ ರಿಯಾಯಿತಿ ನೀಡುವ ಮೂಲಕ ಮಾರುಕಟ್ಟೆ ಹಿಡಿಯುತ್ತಿದ್ದು, ಇದರ ಪರಿಣಾಮವಾಗಿ ನಕಲಿ ಔಷಧಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ ಎಂದು ಆರೋಪಿಸಿದ ವ್ಯಾಪಾರಿಗಳು, ಕೇಂದ್ರ ಸರ್ಕಾರ ತಕ್ಷಣ ಆನ್ಲೈನ್ ಔಷಧ ಮಾರಾಟವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗನಲ್ಲಿ ಎಲ್ಲಾ ಔಷಧಿ ವ್ಯಾಪಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದರು ಧರಣಿ ನಡೆಸಿ, ಅಪರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ಮೇಲೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆನ್ಲೈನ್ ಫಾರ್ಮಸಿ ವ್ಯವಸ್ಥೆ ರದ್ದುಗೊಳಿಸುವಂತೆ ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಮಧು ಕುಮಾರ್, "ಆನ್ಲೈನ್ ಮೂಲಕ ಔಷದ ಮಾರಾಟವನ್ನು ಸಂಪೂರ್ಣವಾಗಿ ರದ್ದು ಪಡಿಸಬೇಕು. ಕಾರ್ಪೊರೇಟ್ ಕಂಪನಿಗಳು ಭಾರಿ ರಿಯಾಲಿತಿ ನೀಡುವುದರಿಂದ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಅಲ್ಲದೆ, ನಕಲಿ ಔಷಧಿಗಳು ಆನ್ಲೈನ್ ಮೂಲಕ ಮಾರುಕಟ್ಟೆಗೆ ಬರುತ್ತಿವೆ" ಎಂದು ಆತಂಕ ವ್ಯಕ್ತಪಡಿಸಿದರು.

ಇದೇ ವೇಳೆ, ದೇಶವ್ಯಾಪಿ ಸುಮಾರು 14 ಲಕ್ಷ ಔಷಧಿ ಅಂಗಡಿ ಮಾಲೀಕರು ಈ ಹೋರಾಟಕ್ಕೆ ಬೆಂಬಲ ನೀಡಿದ್ದು, ಕರ್ನಾಟಕದಲ್ಲಿಯೂ ನೂರಾರು ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಪ್ರಧಾನ ಮಂತ್ರಿ Pradhan Mantri Bhartiya Janaushadhi Pariyojana ಕೇಂದ್ರಗಳು ಉತ್ತಮ ಯೋಜನೆಯಾಗಿದ್ದು ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಔಷಧ ಲಭ್ಯವಾಗಬೇಕು ಎಂಬುದು ಪ್ರಧಾನಮಂತ್ರಿಗಳ ಕನಸಾಗಿದೆ. ಆದರೆ ಕೆಲವು ಕಡೆಗಳಲ್ಲಿ ಜ ಔಷಧಿ ಕೇಂದ್ರಗಳ ಹೆಸರಿನಲ್ಲಿ ಬೇರೆ ಬ್ರ್ಯಾಂಡ್ ಗಳ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಯೋಜನೆಯ ಉದ್ದೇಶವೇ ಹಾಳಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಕುರಿತು ಮಾತನಾಡಿದ Madhu Kumar, "ಈ ಅವ್ಯವಸ್ಥೆ ನಿಲ್ಲಬೇಕು ಎಂಬ ಕಾರಣಕ್ಕೆ ನಾವು ಬಂದ್ ಗೆ ಕರೆ ನೀಡಿದ್ದೇವೆ. ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಜಿಲ್ಲೆಯಾದ್ಯಂತ್ ವ್ಯಾಪಾರಿಗಳು ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ" ಎಂದು ಹೇಳಿದರು.

ಇದೇ ವೇಳೆ, ಅಂಗಡಿ ಬಂದ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ತುರ್ತು ಔಷಧಗಳನ್ನು ನೀಡುವಂತೆ ಸಹಕಾರ ಔಷಧ ನಿಬಂಧಕರು ಸಲಹೆ ನೀಡಿದ್ದಾರೆ. ಅದರಂತೆ ಅಗತ್ಯವಿರುವ ತುರ್ತು ಔಷಧಗಳನ್ನು ಪೂರೈಸಲು ಸಿದ್ಧವಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ಕಳೆದ 15 ದಿನಗಳಿಂದ ಬಂದ್ ಕುರಿತು ಮುಂಚಿತವಾಗಿ ಮಾಹಿತಿ ನೀಡಿ ಇದರಿಂದ ಜನರು ಅಗತ್ಯ ಔಷಧಗಳನ್ನು ಮೊದಲೇ ಖರೀದಿಸಿಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಗಳಲ್ಲಿಯೂ ಮೆಡಿಕಲ್ ಸೌಲಭ್ಯ ಲಭ್ಯವಿರುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆಯಾಗುವುದಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Also Read:

Bollywood shock hospital ಬಳಿ ಸಲ್ಮಾನ್ ಖಾನ್ ಗರಂ ಆಗಿದ್ದೇಕೆ?

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online