<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಪೋಕ್ಸೋ ಆರೋಪ: ವಚನಾನಂದ ಸ್ವಾಮೀಜಿ ವಿಚಾರಣೆ - ಮಠದ ಭಕ್ತರ ಆಕ್ರೋಶ

ಪೋಕ್ಸೋ ಆರೋಪ: ವಚನಾನಂದ ಸ್ವಾಮೀಜಿ ವಿಚಾರಣೆ - ಮಠದ ಭಕ್ತರ ಆಕ್ರೋಶ
Summary: An incident has taken place in which Vachanananda Swamiji has been questioned by the authorities in connection with the POCSO case. This has led to outrage among the devotees of the mutt, resulting in a tense situation at the place.

Belagavi news:

ದಾವಣಗೆರೆ: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಠದ ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೀಡಿರುವ ಈ ಘಟನೆ ಹಿನ್ನೆಲೆಯಲ್ಲಿ ಹರಿಹರ್ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಭಕ್ತರ ದಂಡು ಸುತ್ತುವರಿದಿದೆ.

ಮಠದ ಟ್ರಸ್ಟ್ ನವರ ಷಡ್ಯಂತ್ರದಿಂದಲೇ ಈ ಪ್ರಕರಣ ದಾಖಲಿಸಲಾಗಿದೆ ಎಂದು ಭಕ್ತರು ಗಂಭೀರ ಆರೋಪ ಮಾಡಿದ್ದಾರೆ. ಸ್ವಾಮೀಜಿಯನ್ನು ಜೈಲಿಗೆ ಕಳುಹಿಸಿ ಮಠವನ್ನು ಖಾಲಿ ಮಾಡಿಸುವ ತಂತ್ರ ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಪ್ರಕರಣ ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ ಭಕ್ತರು ಸ್ವಾಮಿ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಸ್ವಾಮೀಜಿಯವರ ಪರವಾಗಿ ನಿಲ್ಲುತ್ತೇವೆ ಎಂದು ಭಕ್ತರು ತಿಳಿಸಿದ್ದಾರೆ.

Sponsored

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಅವರು ಮಾತನಾಡಿ, "ಹರಿಹರದಲ್ಲಿ ಲೆಕ್ಕ ಕೊಡಬೇಕು" ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.

ಹರಿಹರ ಗ್ರಾಮಾಂತರ ಠಾಣೆಯಲ್ಲಿ ವಚನಾನಂದ ಸ್ವಾಮೀಜಿ ವಿಚಾರಣೆ ಮುಂದುವರೆದಿದೆ. ಕಳೆದ ನಾಗು ಗಂಟೆಗಳಿಂದ ಗ್ರಾಮೀಣ ವಿಭಾಗದ ಡಿವೈಎಸ್ ಪಿ ಬಸವರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. ಹರಿಹರ ಗ್ರಾಮಾಂತರ ಠಾಣೆ ಎದುರು ವಚನಾನಂದ ಸ್ವಾಮೀಜಿ ಭಕ್ತರ ಜಮಾವಣೆ ಆಗಿದೆ.

ವಚನಾನಂದ್ ಶ್ರೀಗಳ ಭಕ್ತ ಹಾಗೂ " ಲೆಕ್ಕ ಕೊಡಿ ಚಳವಳಿ ಸಮಿತಿ" ಅಧ್ಯಕ್ಷ ಪರಮೇಶ್ವರ್ ಗೌಡ ಅವರ ಮಠದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಸ್ಟ್ ನವರ ಷಡ್ಯಂತ್ರದಿಂದಲೇ ಈ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಸ್ವಾಮೀಜಿಯನ್ನು ಜೈಲಿಗೆ ಕಳುಹಿಸಿ ಮಠವನ್ನು ಖಾಲಿ ಮಾಡಿಸುವ ತಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದವರು, ಈ ಕೇಸ್ ಸಂಪೂರ್ಣವಾಗಿ ಸುಳ್ಳು ಎಂದು ಹೇಳಿದ್ದಾರೆ. ಸ್ವಾಮೀಜಿ ಯಾರ ಮೇಲೆ ಅನಗತ್ಯ ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sponsored

"ನಾವು ಸ್ವಾಮೀಜಿಯ ಪರವಾಗಿಯೇ ಇರುತ್ತೇವೆ. ಮುಂದೆ ಏನಾಗುತ್ತೋ ನೋಡುತ್ತೇವೆ" ಎಂದು ಅವರು ತಿಳಿಸಿದ್ದಾರೆ. ಜಾಮೀನಿಗಾಗಿ ಒಂದು ಲಕ್ಷ ರೂಪಾಯಿ ಶ್ಯೂರಿಟಿ ಬಾಂಡ್ ನೀಡಲಾಗಿದೆ ಎಂದು ಸಹ ಹೇಳಿದ್ದಾರೆ.

ಮಠದ ಹಣ ತಿಂದವರು ಎಸಿ ರೂಮ್ನಲ್ಲಿ ಇದ್ದಾರೆ, ಆದರೆ ಭಕ್ತರು ಬಿಸಿಲಿನಲ್ಲಿ ನಿಲ್ಲಬೇಕಾಗಿದೆ ಎಂದು ಅವರು ಅಸ ಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನಿನ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ ಶ್ರೀಗಳು ತನಿಖೆಗೆ ಸಹಕಾರಿ ನೀಡುತ್ತಾರೆ ಎಂದು ಪರಮೇಶ್ವರ ಗೌಡ ತಿಳಿಸಿದ್ದಾರೆ.

Also Read:

ಜನ ನಾಯಗನ್ ಚಿತ್ರ ಬಿಡುಗಡೆ ತಡೆ : ನಿರ್ಮಾಪಕ ನೀಡಿದ ಹೊಸ ಮಾಹಿತಿ ಏನು?

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online