ಪರೀಕ್ಷಾ ಪೇ ಚರ್ಚಾ 2026ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ AI (Artificial intelligence) ಕುರಿತು ಮಾತನಾಡಿದ ಅವರು, "AI ನಿಮ್ಮ ಸಹಾಯ ವಾಗಿರಬೇಕು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ನಿಮ್ಮ ಕೈಯಲ್ಲಿ ಇರಬೇಕು ಎಂಬುದೇ ಅವರ ಸಂದೇಶವಾಗಿದೆ. ಪರೀಕ್ಷಾ ಸಮಯದಲ್ಲಿ ಒತ್ತಡ ಆತಂಕ ಮತ್ತು ಭವಿಷ್ಯದ ಚಿಂತನೆಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಆತ್ಮವಿಶ್ವಾಸ, ಶಿಸ್ತು ಮತ್ತು ಸಮತೋಲನದ ಜೀವನಶೈಲಿ ಯಶಸ್ವಿನ ಗುಟ್ಟು ಎಂದು ಹೇಳಿದರು.
AI ಗೆ ಗುಲಾಮರಾಗದೆ, ಅದನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಿದರು ಪರೀಕ್ಷಾ ಒತ್ತಡ ನಿರ್ವಹಣೆ ಸುಸ್ತಿನ ಮಹತ್ವದ ಮತ್ತು ಸಣ್ಣ ಸ್ವಾರ್ಟಪ್ ಗಳನ್ನು ಪ್ರಾರಂಭಿಸುವ ಬಗ್ಗೆಯೂ ಚರ್ಚಿಸಿದರು. ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸಿಕೊಂಡು ತಮ್ಮ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಫೆಬ್ರವರಿ 9: ಕೃತಕ ಬುದ್ಧಿಮತಿಯನ್ನು ನಿಮ್ಮ ಯಜಮಾನನನ್ನಾಗಿ ಮಾಡಿಕೊಂಡು ಅದರ ಗುಲಾಮರಾಗಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ. ತಂತ್ರಜ್ಞಾನ ಬಂದ ಪ್ರತಿ ಒಂದು ಯುಗದಲ್ಲೂ ಇಂತಹ ಚರ್ಚೆಗಳು ಉದ್ಭವಿಸುತ್ತವೆ, ನಾವು ಅದರ ಬಗ್ಗೆ ಭಯಪಡಬಾರದು. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಎರಡನೇ ಹಂಚಿಕೆಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರ ಸ್ವಾರ್ಟ್ ಅಪ್ ಗಳಿಂದ ಹಿಡಿದು ಪರೀಕ್ಷಾ ತಯಾರಿಯ ವರೆಗೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ್ದರು. ಅದರ ಗುಲಾಮರಾಗಲು ನಾವು ಶ್ರಮಿಸಬಾರದು. ಅದು ನಮ್ಮ ಯಜಮಾನರಾಗಲು ನಾವು ಬಿಡುವುದಿಲ್ಲ.
ಪರೀಕ್ಷಾ ಪಿ ಚರ್ಚೆ 2026ರ 2ನೇ ಸಂಚಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ತಮಿಳ್ನಾಡಿನ ವಿದ್ಯಾರ್ಥಿಗಳೊಂದಿಗೆ ತಮ್ಮ ಸಂವಾದವನ್ನು ಪ್ರಾರಂಭಿಸಿದರು. ಛತ್ತೀಸ್ಗಡದ ವಿದ್ಯಾರ್ಥಿ ಒಬ್ಬಳು ಭಾರತದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳ ಬಗ್ಗೆ ಕೇಳಿದರು. ಪ್ರಧಾನಿ ಮೋದಿ ಕೆಲವು ಉಪಯುಕ್ತ ಸಲಹೆಗಳನ್ನು ಮೋದಿ ನೀಡಿದರು.
ಸ್ಪೂರ್ತಿ ಮತ್ತು ಪ್ರೇರಣೆಯ ನಡುವೆ ಏನು ಆರಿಸಬೇಕು? ಪೂರ್ತಿಯ ಜೊತೆಗೆ ಶಿಸ್ತು ಕೂಡ ಅತ್ಯಗತ್ಯ ಎಂದು ಮೋದಿಯವರು ಹೇಳಿದರು. ಶಿಸ್ತು ಇಲ್ಲದೆ, ಸ್ಪೂರ್ತಿ ಕೆಲಸ ಮಾಡುವುದಿಲ್ಲ, ನೋಡಿದಾಕ್ಷಣ ಸ್ಪೂರ್ತಿ ಸಿಗುವುದಿಲ್ಲ, ಆ ಹಾದಿಯಲ್ಲಿ ನಡೆಯುವುದು ಕೂಡ ಮುಖ್ಯವಾಗಿರುತ್ತದೆ. ಶಿಸ್ತು ಇಲ್ಲದಿದ್ದರೆ ಯಾವುದೇ ಸ್ಪೂರ್ತಿ ಕೆಲಸ ಮಾಡುವುದಿಲ್ಲ, ರೈತ ತನ್ನ ಪಕ್ಕದಲ್ಲಿರುವ ರೈತನಿಂದ ಸ್ಫೂರ್ತಿ ಪಡೆದು ತಾನು ಕೂಡ ಸಂಪಾದಿಸುವ ಛಲ ಬೆಳೆಸಿಕೊಳ್ಳುತ್ತಾರೆ ಎಂದು ಸ್ಪೂರ್ತಿ ಮತ್ತು ಪ್ರೇರಣೆಯ ಬಗ್ಗೆ ಮೋದಿ ಅವರು ಹೇಳಿದರು.
ನೀವು ಅದರ ಗುಲಾಮರಾಗದಂತೆ ನೋಡಿಕೊಳ್ಳಬೇಕು. ಉದ್ಯೋಗಗಳ ಸ್ವರೂಪ ಬದಲಾಗುತ್ತಲೆ ಇರುತ್ತದೆ. ಆದರಿಂದ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಾವು ಭಯ ಪಡಬೇಕಾಗಿಲ್ಲ ಎಂದು ಸಲಹೆ ನೀಡಿದ್ದಾರೆ. ಬೋರ್ಡ್ ಪರೀಕ್ಷೆಗಳ ಒತ್ತಡದ ವಾತಾವರಣದ ನಡುವೆ ಈ ಸಂಚಿಕೆಯು ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಪೋಷಕರಿಗೆ ಮಾನಸಿಕ ಉತ್ತೇಜನ ನೀಡುತ್ತದೆ.
ಸ್ಟಾರ್ಟ್ ಅಪ್ ಪ್ರಾರಂಭಿಸುವುದು ಹೇಗೆ? ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ನೀವು ಸಣ್ಣ ಸ್ಟಾರ್ಟ್ ಅಪ್ ಶುರು ಮಾಡಬಹುದು. ನೀವು ನಿಮ್ಮ ಅಧ್ಯಯನದ ಮತ್ತು ನಿಮ್ಮ ವೃತ್ತಿಜೀವನ ಎರಡನ್ನು ಮುಂದುವರಿಸಲು ಬಯಸಿದ್ದರೆ ನೀವು ಪ್ರತಿ ವಾರ ನಿಮ್ಮ ವೃತ್ತಿ ಜೀವನನಿಗೆ ಸ್ವಲ್ಪ ಸಮಯವನ್ನು ಮೀಸಲಿಡಲು ಪ್ರಾರಂಭಿಸಬೇಕು ಎಂದರು ಮೋದಿಜಿ. ಈ ವರ್ಷ ಮೊದಲ ಬಾರಿಗೆ ,ಪರೀಕ್ಷಾ ಪೇ ಚರ್ಚಾ, ಒಂದು ಸ್ವರೂಪವನ್ನು ಅಳವಡಿಸಿಕೊಂಡಿದೆ ಇದರಲ್ಲಿ ಪ್ರಧಾನಿಯವರು ನಾಲ್ಕು ರಾಜ್ಯಗಳಾದ ತಮಿಳನಾಡು, ಛತ್ತಿಸ್ಗಡ್, ಗುಜರಾತ್ ಮತ್ತು ಅಸ್ಲಾಂನ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು.
ಇನ್ನಷ್ಟು ಓದಿರಿ:
ಉಚಿತವಾಗಿಯೇ ಶಾಲಾ ಮಕ್ಕಳ ಆಧಾರ್ ಅಪ್ಡೇಟ್ ಯುಐಡಿಎಐ ಮಹತ್ವದ ಘೋಷಣೆ