BELAGAVI NEWS :
ಪೆರಿಯಾರ್ ಅವರ ಸಾಮಾಜಿಕ ತತ್ವಗಳನ್ನು ನಾವು ಸ್ವೀಕರಿಸುತ್ತೇವೆ. ಆದರೆ ಅವರ ನಾಸ್ತಿಕತೆಯನ್ನು ಒಪ್ಪುವುದಿಲ್ಲ. ನಮಗೆ ದೇವರಲ್ಲಿ ನಂಬಿಕೆ ಇದೆ" ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳಿಗ ವೆಟ್ರಿ ಕಳಗಂ ಪಕ್ಷದ ನಾಯಕ ದಳಪತಿ ವಿಜಯ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್, ತಮ್ಮ ಪಕ್ಷವು ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು, ಡಾ.ಬಿ.ಆರ್. ಅಂಬೇಡ್ಕರ್ ಅವರ ಸಮಾನತೆಯ ತತ್ವಗಳು ಹಾಗೂ ಕಾಮರಾಜ್ ಅವರ ಪ್ರಾಮಾಣಿಕ ಆಡಳಿತದ ಮಾದರಿಯಿಂದ ಪ್ರೇರಿತವಾಗಿದೆ ಎಂದು ತಿಳಿಸಿದ್ದಾರೆ. ಆದರೆ ಧರ್ಮ ಮತ್ತು ದೇವರ ನಂಬಿಕೆಯ ವಿಚಾರದಲ್ಲಿ ಪೆರಿಯಾರ್ ಅವರ ನಿಲುವುಗಳನ್ನು ತಮ್ಮ ಪಕ್ಷ ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ.
ವಿಜಯ್ ಅವರ ಈ ಹೇಳಿಕೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ದ್ರಾವಿಡ ರಾಜಕಾರಣ, ಸಾಮಾಜಿಕ ನ್ಯಾಯ ಮತ್ತು ಆಧ್ಯಾತ್ಮಿಕ ನಂಬಿಕೆಗಳ ನಡುವಿನ ಸಮತೋಲನದ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿವೆ. ಅವರ ಪಕ್ಷದ ಸಿದ್ಧಾಂತಗಳ ಕುರಿತು ಈ ಹೇಳಿಕೆ ಮಹತ್ವದ ಸಂದೇಶವೆಂದು ರಾಜಕೀಯ ವಲಯ ವಿಶ್ಲೇಷಿಸುತ್ತಿದೆ.
"ಪೆರಿಯಾರ್ ಅವರ ಸಾಮಾಜಿಕ ತತ್ವಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದೇವೆ. ಆದರೆ ಅವರ ಧರ್ಮ ನಿರಾಕರಣೆ ಮತ್ತು ನಾಸ್ತಿಕತೆಯ ನಿಲುವನ್ನು ನಾವು ಒಪ್ಪುವುದಿಲ್ಲ. ನನಗೆ ದೇವರಲ್ಲಿ ನಂಬಿಕೆ ಇದೆ" ಎಂಬ ತಮಿಳನಾಡು ಮುಖ್ಯಮಂತ್ರಿ ದಳಪತಿ ವಿಜಯ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆಯಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷವು ಪೆರಿಯಾರ್ ಅವರ ಸಾಮಾಜಿಕ ಸುಧಾರಣೆಯ ವಿಚಾರಗಳನ್ನು ಸ್ವೀಕರಿಸಿದ್ದರು, ಧರ್ಮ ಮತ್ತು ದೇವರ ಬಗ್ಗೆ ಅವರ ನಿಲುವುಗಳನ್ನು ಅನುಸರಿಸುವುದಿಲ್ಲ ಎಂದು ಹೇಳಿದ್ದಾರೆ. "ನಾವು ಯಾರ ಸಿದ್ಧಾಂತಕ್ಕೂ ವಿರುದ್ಧವಾಗಿಲ್ಲ. ಪೆರಿಯಾರ್ ಅವರ ಬೋಧನೆಗಳನ್ನು ಅಳವಡಿಸಿಕೊಂಡಿದ್ದೇವೆ, ಜೊತೆಗೆ ನಾವು ದೇವರನ್ನು ನಂಬುವವರು ಎಂಬುದನ್ನು ಸ್ಪಷ್ಟಪಡಿಸಿದ್ದೇವೆ" ಎಂದು ವಿಜಯ ತಿಳಿಸಿದ್ದಾರೆ
ಈ ವೇಳೆ ತಮ್ಮ ಸರ್ಕಾರದ ಚಿಂತನೆಗಳಿಗೆ ಪೆರಿಯಾರ್,ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಾಜಿ ಮುಖ್ಯಮಂತ್ರಿ ಕೆ.ಕಾಮರಾಜ್ ಅವರ ಸಿದ್ಧಾಂತಗಳ ಪ್ರೇರಣೆ ಎಂದು ಅವರು ಹೇಳಿದರು.ಅಂಬೇಡ್ಕರ್ ಅವರ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳು,ಕಾಮರಾಜ ಅವರ ಪ್ರಾಮಾಣಿಕ ಆಡಳಿತದ ಮಾದರಿ ಹಾಗೂ ಪೆರಿಯಾರ್ ಅವರ ಸಾಮಾಜಿಕ ಪರಿವರ್ತನೆಯ ಚಿಂತನೆಗಳು ತಮ್ಮ ರಾಜಕೀಯ ಮಾರ್ಗದರ್ಶಕ ತತ್ವಗಳಾಗಿವೆ ಎಂದು ವಿಜಯ್ ವಿವರಿಸಿದರು.
ವಿಜಯ್ ಅವರ ಈ ಹೇಳಿಕೆ ತಮಿಳುನಾಡಿನ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ದ್ರಾವಿಡ ಚಿಂತನೆ, ಸಾಮಾಜಿಕ ನ್ಯಾಯ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಕುರಿತು ಹೊಸ ಸಂವಾದಕ್ಕೆ ವೇದಿಕೆ ಸೃಷ್ಟಿಸಿದೆ.
"ನಾವು ಮೊದಲು ಜನರ ಬಳಿಗೆ ಹೋಗಿದ್ದೇವೆ, ನಂತರ ಪಕ್ಷವನ್ನು ಪ್ರಾರಂಭಿಸಿದ್ದೇವೆ. ಇದು ಸಾಮಾನ್ಯ ಜನರ ಸರ್ಕಾರ" ಎಂದು ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್, ತಮ್ಮ ಪಕ್ಷವನ್ನು ಕೇವಲ ಒಬ್ಬ ನಟನ ನೇತೃತ್ವದ ರಾಜಕೀಯ ಸಂಘಟನೆ ಎಂದು ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ. "ಬಹುತೇಕರು ಮೊದಲು ಪಕ್ಷ ಸ್ಥಾಪಿಸಿ ನಂತರ ಜನರ ಬೆಂಬಲ ಕೇಳುತ್ತಾರೆ. ಆದರೆ ನಾವು ಮೊದಲು ಜನರ ಸಮಸ್ಯೆಗಳನ್ನು ಅರಿತು ಅವರ ನಡುವೆ ಕೆಲಸ ಮಾಡಿದ್ದೇವೆ. ಬಳಿಕ ಪಕ್ಷವನ್ನು ಆರಂಭಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಅಣ್ಣದೊರೈ ಮತ್ತು ಎಂ.ಜಿ.ರಾಮಚಂದ್ರನ್ ಅವರ ಆಡಳಿತದಲ್ಲಿ ಸಾಮಾನ್ಯ ಜನರ ಸರ್ಕಾರವಿತ್ತು. ಅದೇ ಮಾದರಿಯಲ್ಲಿ ನಮ್ಮ ಸರಕಾರವು ಜನಸಾಮಾನ್ಯರ ಹಿತಾಸಕ್ತಿಗೆ ಬದ್ಧವಾಗಿದೆ ಎಂದು ವಿಜಯ್ ತಿಳಿಸಿದ್ದಾರೆ. ನಮ್ಮ ಸರ್ಕಾರವು ಜನರ ನಿರೀಕ್ಷೆಗಳನ್ನು ಈಡೇರಿಸುವ, ಸಾಮಾಜಿಕ ನ್ಯಾಯ ಮತ್ತು ಅಭ್ಯರ್ಥಿಗೆ ಆದ್ಯತೆ ನೀಡುವ ಆಡಳಿತವಾಗಿರಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ವಿಜಯ್ ಅವರ ಈ ಹೇಳಿಕೆ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಜನಪರ ಆಡಳಿತ ಮತ್ತು ಪರ್ಯಾಯ ರಾಜಕೀಯದ ಬಗ್ಗೆ ಅವರ ಪಕ್ಷದ ದೃಷ್ಟಿಕೋನವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
Also Read:
ತುಂಗಭದ್ರಾ ಡ್ಯಾಮ್ ಅಪ್ ಡೇಟ್ : ಹೊಸ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ದಿನ ಶಾಲೆಗಳಿಗೆ ರಜೆ