<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ತುಂಗಭದ್ರಾ ಡ್ಯಾಮ್ ಅಪ್ ಡೇಟ್ : ಹೊಸ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ದಿನ ಶಾಲೆಗಳಿಗೆ ರಜೆ

ತುಂಗಭದ್ರಾ ಡ್ಯಾಮ್ ಅಪ್ ಡೇಟ್ : ಹೊಸ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ದಿನ ಶಾಲೆಗಳಿಗೆ ರಜೆ
Summary: Schools have been declared closed on June 25 in view of the inauguration of new crest gates of Tungabhadra reservoir. This decision has been taken due to security measures and necessary precautions have been taken for the public.

Belagavi News :

ಕರ್ನಾಟಕ ಸೇರಿದಂತೆ ನೆರೆಯ ಮೂರು ರಾಜ್ಯಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಇದೀಗ ಮತ್ತೊಮ್ಮೆ ಮಹತ್ವದ ಅಧ್ಯಾಯಕ್ಕೆ ಸಾಕ್ಷಿಯಾಗುತ್ತಿದೆ. 51 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ 33 ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ನಾಳೆ ನಡೆಯಲಿದ್ದು, ಈ ಮೂಲಕ ಡ್ಯಾಮ್ ನಿರ್ವಹಣೆಯ ಪ್ರಮುಖ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲ ಸಿದ್ದತೆಗಳು ಪೂರ್ಣಗೊಂಡಿದ್ದು, ಭವ್ಯ ವೇದಿಕೆ ನಿರ್ಮಿಸಲಾಗಿದೆ. ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಲೋಕಾರ್ಪಣೆ ಸಮಾರಂಭವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಸ್ಟ್ ಗೇಟ್ ದುರಂತದಿಂದ ಉಂಟಾಗಿದ್ದ ಆತಂಕಗಳಿಗೆ ಅಂತ್ಯ ಹಾಡುವಂತೆ ಈ ಹೊಸ ಗೇಟ್ ಗಳ ಸ್ಥಾಪನೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಜಲಾಶಯದ ಸುರಕ್ಷತೆ ಮತ್ತು ನೀರಿನ ನಿರ್ವಹಣೆಯಲ್ಲಿ ಇದು ಪ್ರಮುಖ ಸುಧಾರಣೆ ಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Sponsored

ಈ ಹಿನ್ನೆಲೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪ್ರದೇಶದ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಎಲ್ಲಾ ಶಾಲೆಗಳಿಗೆ ಜೂನ್ 25ರಂದು ರಜೆ ಘೋಷಿಸಲಾಗಿದೆ. ಕಾರ್ಯಕ್ರಮದ ಸಮಯದಲ್ಲಿ ಭದ್ರತೆ ಮತ್ತು ಜನಸಂದಣಿ ನಿಯಂತ್ರಣದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮುನಿರಾಬಾದ್ ನಲ್ಲಿ ನಡೆಯಲಿರುವ ಈ ಲೋಕಾರ್ಪಣೆ ಸಮಾರಂಭ ಸ್ಥಳೀಯರ ಜೊತೆಗೆ ರೈತ ಸಮುದಾಯದಲ್ಲೂ ಭಾರಿ ನಿರೀಕ್ಷೆ ಮೂಡಿಸಿದೆ. ಹೊಸ ಕ್ರಸ್ಟ್ ಗೇಟ್ ಗಳ ಕಾರ್ಯರಂಭದಿಂದ ನೀರಾವರಿ ವ್ಯವಸ್ಥೆ ಮತ್ತಷ್ಟು ಬಲಪಡಲಿದೆ ಎಂಬ ಆಶಾವಾದ ವ್ಯಕ್ತವಾಗಿದೆ.

ತುಂಗಭದ್ರಾ 33 ಕ್ರಸ್ಟ್ ಗೇಟ್ ಲೋಕಾರ್ಪಣೆ - ಮುನಿರಾಬಾದ್ ನಲ್ಲಿ ಬೃಹತ್ ವೇದಿಕೆ ಸಿದ್ಧ, 5 ಸಾವಿರಕ್ಕೂ ಹೆಚ್ಚು ಹಾಸನ ವ್ಯವಸ್ಥೆ :

ನಾಳೆ ನಡೆಯಲಿರುವ ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್ ಗಳ ಅಧಿಕೃತ ಲೋಕನಿಗೆ ಭವ್ಯಸಿದ್ಧತೆಗಳು ಪೂರ್ಣಗೊಂಡಿವೆ. ಈ ಮಹತ್ವದ ಕಾರ್ಯಕ್ರಮಕ್ಕಾಗಿ ಕೊಪ್ಪಳ ತಾಲೂಕಿನ ಮುನಿರಾಬಾದ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣವನ್ನು ವಿಶೇಷವಾಗಿ ಸಿಂಗಾರಗೊಳಿಸಲಾಗಿದ್ದು, ಮದುವಣಗಿತ್ತಿಯಂತೆ ಅಲಂಕರಿಸಲಾಗಿದೆ.

Sponsored

ಕಾರ್ಯಕ್ರಮದಿಗಾಗಿ ಜರ್ಮನ್ ಮಾದರಿಯ ಬೃಹತ್ ಹವಾಮಾನ ನಿಯಂತ್ರಿತ ಟೆಂಟ್ ಅಳವಡಿಸಲಾಗಿದ್ದು, ವಿಐಪಿ ಗಳಿಗಾಗಿ ಹೈಟೆಕ್ ವೇದಿಕೆಯನ್ನು ನಿರ್ಮಿಸಲಾಗಿದೆ. ಭದ್ರತೆ ಹಾಸನ ವ್ಯವಸ್ಥೆ ಮತ್ತು ಮೂಲಸೌಕರ್ಯಗಳನ್ನು ಅತ್ಯಧುನಿಕ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಲೋಕಾಪಣೆ ಸಮಾರಂಭಕ್ಕೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬಸವರಾಜ್ ರಾಯರೆಡ್ಡಿ ನೇತೃತ್ವದ ನಿಯೋಗ ಖುದ್ದಾಗಿ ಭೇಟಿ ನೀಡಿ ಆಹ್ವಾನ ನೀಡಿದೆ. ಕಾರ್ಯಕ್ರಮಕ್ಕೆ ನೆರೆಯ ರಾಜ್ಯಗಳಿಂದಲೂ ಗಣ್ಯರ ಆಗಮನ ಸಾಧ್ಯತೆ ಇದೆ.

ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಕಾರ್ಯಕ್ರಮವನ್ನು ಬೃಹತ್ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ.

ತುಂಗಭದ್ರಾ ಜಲಾಶಯದ ಈ ಹೊಸ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆಯು ನೀರಾವರಿ ವ್ಯವಸ್ಥೆಗೆ ಹೊಸ ಶಕ್ತಿ ನೀಡಲಿದ್ದು, ರೈತರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

Sponsored

ತುಂಗಭದ್ರಾ 33 ಕ್ರಸ್ಟ್ ಗೇಟ್ ಲೋಕಾರ್ಪಣೆ - ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆಗಮನ ಖಚಿತ್ರ ಐತಿಹಾಸಿಕ ಕ್ಷಣಕ್ಕೆ ಸಜ್ಜು :

ತುಂಗಭದ್ರಾ ಜಲಾಶಯ 33 ನೂತನ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆಗೆ ನಾಳೆ ಐತಿಹಾಸಿಕ ವೇದಿಕೆ ಸಜ್ಜಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳು ಈ ಮಹತ್ವದ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರ ಬಾಬು ನಾಯ್ಡು ಅವರ ಆಗಮನ ಖಚಿತವಾಗಿದೆ ಎಂದು ಅಧಿಕೃತ ಪ್ರವಾಸ ಪಟ್ಟಿ ಪ್ರಕಟವಾಗಿದೆ.

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನಾಳೆ ಬೆಳಗ್ಗೆ 9:40ಕ್ಕೆ ಮುನಿರಾಬಾದ್ ಗೆ ಆಗಮಿಸಲಿದ್ದು, ಬೆಳಿಗ್ಗೆ 10 ಗಂಟೆಗೆ ತುಂಗಭದ್ರ ಡ್ಯಾಮ್ ಗೆ ಭೇಟಿ ನೀಡಿ ನೂತನ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಅವರು ಆಂಧ್ರಪ್ರದೇಶಕ್ಕೆ ವಾಪಸ್ ಪ್ರಯಾಣಿಸುವರು.

2024ರ ಘಟನೆಯ ಹಿನ್ನೆಲೆ :

Sponsored

ಕಳೆದ 2024ರ ಡಿಸೆಂಬರ್ ನಲ್ಲಿ ನಡೆದ ಘಟನೆಯು ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಕರಾಳ ಕ್ಷಣವಾಗಿತ್ತು. ಆ ಸಂದರ್ಭದಲ್ಲಿ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು, ಲಕ್ಷಾಂತರ ಕ್ಯೂಸೆಕ್ ನೀರು ನದಿಗೆ ಹರಿದು ಹೋಗಿತ್ತು. ಇದರ ಪರಿಣಾಮವಾಗಿ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು.

ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಾತ್ಕಾಲಿಕ ದುರಸ್ತಿಗೆ ಬದಲಾಗಿ ದೀರ್ಘಕಾಲಿನ ಪರಿಹಾರಕ್ಕೆ ಮುಂದಾಯಿತು. ಭವಿಷ್ಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಡ್ಯಾಮ್ ನ 33 ಕ್ರಸ್ಟ್ ಗೇಟ್ಗಳನ್ನು ಬದಲಾಯಿಸುವ ಮಾಸ್ಟರ್ ಪ್ಲಾನ್ ರೂಪಿಸಲಾಯಿತು.

ಈ ಯೋಜನೆಗೆ 51 ಕೋಟಿ ರೂ. ವೆಚ್ಚದಲ್ಲಿ ಅತ್ಯಧುನಿಕ ತಂತ್ರಜ್ಞಾನ ಬಳಸಿ ಹೊಸ ಕ್ರೆಸ್ಟ್ ಗೇಟ್ ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಇದು ಡ್ಯಾಮ್ ನ ಭದ್ರತೆ ಮತ್ತು ನೀರಿನ ನಿರ್ವಹಣೆಯಲ್ಲಿ ಮಹತ್ವದ ಸುಧಾರಣೆಯಾಗಿ ಪರಿಣಮಿಸಿದೆ.

ಈ ಐತಿಹಾಸಿಕ ಯೋಜನೆ ರೈತರ ಬದುಕಿಗೆ ಹೊಸ ಆಶಾಕಿರಣ ನೀಡಿದ್ದು, ನೀರಾವರಿ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Sponsored

Also Read:

ಇಂಗ್ಲೆಂಡ್ ನಲ್ಲಿ ವೈಭವ್ ಸೂರ್ಯವಂಶಿಯ ಹೊಸ ದಾಖಲೆ : ವಿಸ್ಡನ್ ಕವರ್ ನಲ್ಲಿ ಸ್ಥಾನ ಪಡೆದ ‘ಬಾಸ್ ಬೇಬಿ’

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online