ರಾಜ್ಯದಲ್ಲಿ ಪದೇ ಪದೇ ಸಿಎಂ ಕುರ್ಚಿ ವಿಚಾರವು ನಡೆಯುತ್ತಿರುವುದರಿಂದ ಬೇಸರವು ಉಂಟಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹೇಳಿದರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿ .ಸೋಮಣ್ಣ ಅವರು ‘ಅಧಿಕಾರ ಯಾರಿಗೂ ಶಾಶ್ವತವಲ್ಲ’ ಎಂದು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ಯತೀಂದ್ರ ಅವರ ಹೇಳಿಕೆಗೆ ‘ಕಾಲವೇ ಉತ್ತರ ಕೊಡುತ್ತದೆ´,ಮಾಜಿ ಮುಖ್ಯಮಂತ್ರಿಗಳಾದ ಜಿಎಸ್ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ದೇವರಾಜ್ ಅರಸು ಅಂತ ಮಹಾನುಭಾವರು ರಾಜ್ಯದಲ್ಲಿ ಇದ್ದರು. ಅವರಿಗೆ ಈ ತರಹದ ಚಾಳಿ ಇರಲಿಲ್ಲ. ‘ಅಧಿಕಾರ ಯಾರಿಗೂ ಶಾಶ್ವತವಲ್ಲ’ ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ ಎಂದು ವಿ ಸೋಮಣ್ಣ ಅವರು ಸ್ಪಷ್ಟಪಡಿಸಿದರು. ಇತ್ತೀಚಿಗೆ ಫೆಬ್ರುವರಿ 6ರಂದು ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಅವರ ಹೇಳಿಕೆ ಸೋಮಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.
'ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ, ಸದ್ಯಕ್ಕೆ ಅವರನ್ನು ಇಳಿಸಿ ಎಂದು ಯಾರು ಹೇಳುತ್ತಿಲ್ಲ, ನಾಯಕತ್ವದಲ್ಲಿ ಬದಲಾವಣೆ ಮಾಡಲ್ಲ ಮತ್ತು ಹೈಕಮಾಂಡ್ ನೇರವಾಗಿ ಹೇಳದೆ ಎಂದು ಸ್ಪಷ್ಟತೆಯನ್ನು ಕೊಟ್ಟಿದೆ. ಅದರಿಂದ ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುತ್ತಾರೆ ಎಂದು ನಾನು ನಂಬಿದ್ದೇನೆ’ ಎಂದು ಯತಿಂದ್ರ ಸಿದ್ದರಾಮಯ್ಯನವರು ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಕಾಲವೇ ಉತ್ತರ ಕೊಡುತ್ತದೆ ಎಂದು ವಿ ಸೋಮಣ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ವಿ ಸೋಮಣ್ಣ ಅವರು ಮಾತನಾಡಿದರು, ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಏನು ಮಾಹಿತಿ ಇಲ್ಲ’ ಇವತ್ತು ರಾತ್ರಿ ನಾನು ದೆಹಲಿಗೆ ಹೋಗುವೆ. ನಮ್ಮಲ್ಲಿ ಬಲಿಷ್ಠ ಹೈಕಮಾಂಡ್ ಇದೆ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಲ್ಲವನ್ನು ಹೈಕಮಾಂಡ್ ನಿರ್ಧರಿಸುತ್ತಾರೆ ಎಂದು ಅವರು ತಿಳಿಸಿದರು.
ಮೆಟ್ರೋ ಮೇಲೆ ಯಾಕೆ ಕಣ್ಣು? ಎಂದು ವಿ.ಸೋಮಣ್ಣ ಪ್ರಶ್ನಿಸಿದರು. ತಮ್ಮ ಮೆಟ್ರೋ ಟಿಕೆಟ್ ವಿಚಾರವಾಗಿ ವಿ ಸೋಮಣ್ಣ ತುಂಬಾ ಕೆಂಡಮಂಡಲವಾದರು. ಬಡ ಜನರು ಎಲ್ಲಿಗೆ ಹೋಗಬೇಕಾದರೂ ಮೆಟ್ರೋದಲ್ಲಿ ಓಡಾಡಬಾರದ...? ಮೆಟ್ರೋ ದರ ನಿಗದಿ ಮಾಡಿದ್ದು, ಮುಂಚೆ ಕೇಂದ್ರ ಸರ್ಕಾರ ಈಗಾಗಲೇ ಸಂಬಂಧಪಟ್ಟ ಸಚಿವಾಲಯ ಅದನ್ನು ಮಾಡಬೇಡಿ ಅಂತ ತಡೆ ನೀಡಿದೆ. ಈ ಹಿಂದೆ ವೀರಪ್ಪ ಮೊಯ್ಲಿ ಇದ್ದಾಗ ಇದೊಂದು ಬಿಳಿಯಾನೆ ಅಂತ ಹೇಳಿದ್ರು. ಜಾರಿಗೆ ತಂದಿದ್ದು ನಾವೇ. ಇದರಿಂದ ಪ್ರತಿನಿತ್ಯ ಐದಾರು ಲಕ್ಷ ಜನ ಮೆಟ್ರೋದಲ್ಲಿ ಓಡಾಡುತ್ತಾರೆ ಇದರಿಂದ ಟ್ರಾಫಿಕ್ ನ ಕಿರಿ ಕಿರಿ ನಿಲ್ಲಿಸಲು ಸಹಾಯವಾಗಿದೆ ಎಂದು ಹೇಳಿದರು.
ಇನ್ನಷ್ಟು ಓದಿರಿ:
ಸಹಕಾರಿ ಸವಾರಿ-ಸೇವೆ ಆ್ಯಪ್ ಬಿಡುಗಡೆ ಮಾಡಿದ ಅಮಿತ್ ಶಾ