ಪ್ರಧಾನಿ ನರೇಂದ್ರ ಮೋದಿಯವರು ಮಲೇಷ್ಯಾ ಗೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಮೋದಿಯವರು ಶನಿವಾರದಂದು ಮಲೇಷ್ಯಾದ ಕೌಲಾಂಪುರಕ್ಕೆ ಆಗಮಿಸಿದರು. ಅವರನ್ನು ಭವ್ಯ ರೆಡ್ ಕಾರ್ಪೆಟ್ ಸ್ವಾಗತ ಕೋರಲಾಯಿತು. ಮಲೇಷ್ಯಾದ ಪ್ರಧಾನಿ ಇಬ್ರಾಹಿಂ ಅವರು ಮೋದಿ ಅವರನ್ನು ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸಿಕೊಂಡರು. ಮಾತುಕತೆಯ ಮುಂಚೆ ಮೋದಿಯವರಿಗೆ ‘ಪದಾರ್ನ ಪುತ್ರ’ ಎಂಬ ಗೌರವ ಪ್ರಧಾನ ಮಾಡಲಾಯಿತು.
ಭಾರತ ಮತ್ತು ಮಲೇಷ್ಯಾ ನಡುವಿನ ಹಲವಾರು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿವೆ. ಭಯೋತ್ಪಾದನೆ ನಿಗ್ರಹ, ಗುಪ್ತಚರ ಹಂಚಿಕೆ ಹಾಗೂ ಕಡಲ ಭದ್ರತೆಯಲ್ಲಿ ಭಾರತ ಮಲೇಷ್ಯಾ ಪರಸ್ಪರವನ್ನು ಸಹಕಾರವನ್ನು ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ. ಇಂದು ಪ್ರಧಾನಿ ಮೋದಿಯವರು ಮಲೇಷ್ಯಾ ಪ್ರಧಾನಿಯಾಗಿರುವ ಅನ್ವರ್ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಎರಡು ದೇಶಗಳ ಒಪ್ಪಂದಗಳ ಬಗ್ಗೆ ಚರ್ಚೆಯನ್ನು ನಡೆಸಿದರು. ಎರಡು ದೇಶಗಳ ಒಪ್ಪಂದಗಳ ಪ್ರಕಾರ ಸೆಮಿ ಕಂಡಕ್ಟರ್ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಒದಗಿಸಲಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ಮೋದಿ ಅವರು ಮಲೇಷ್ಯಾದಲ್ಲಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಭಾರತ ಮತ್ತು ಮಲೇಷ್ಯಾ ನಡುವಿನ ರಕ್ಷಣಾ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿವೆ ಎಂದು ತಿಳಿಸಿದರು. ಎರಡು ದೇಶಗಳು ವಿಶೇಷ ಸಂಬಂಧವನ್ನು ಹಂಚಿಕೊಳ್ಳಲಿವೆ ಎಂದು ಸ್ಪಷ್ಟಪಡಿಸಿದರು. ಇಂಡೋ ಪೆಸಿಫಿಕ್ ಪ್ರದೇಶಗಳು ವಿಶ್ವದ ಬೆಳವಣಿಗೆಯ ಇಂಜಿನ್ ಆಗಿ ಹೊರಹೊಮ್ಮುತ್ತಿದೆ, ಎಐ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಜೊತೆಗೆ, ನಾವು ಅರೆವಾಹಗಳು, ಆರೋಗ್ಯ ಮತ್ತು ಆಹಾರ ಭದ್ರತೆಯಲ್ಲಿ ಪಾಲುದಾರಿಕೆಯನ್ನು ಮುಂದುವರಿಸುತ್ತೇವೆ ಎಂದು ಮಲೇಷ್ಯಾ ಪ್ರಧಾನಿ ಇಬ್ರಾಹಿಂ ಅವರೊಂದಿಗೆ ಚರ್ಚಿಸಿದ ನಂತರ ಪ್ರಧಾನಿ ಮೋದಿ ಅವರು ತಿಳಿಸಿದರು.
ಇದರಿಂದ ಎರಡು ದೇಶಗಳ ನಡುವಿನ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ. ಎರಡು ದೇಶಗಳು ASEAN ಜೊತೆಗೆ ಇಡೀ ಪ್ರದೇಶದಾದ್ಯಂತ ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಗೆ ಬದ್ಧವಾಗಿದೆ ಎಂದು ಮೋದಿಯವರು ತಿಳಿಸಿದರು. ಭಾರತ ಮತ್ತು ಮಲೇಷ್ಯಾ ವ್ಯಾಪಾರ ಹೂಡಿಕೆ ಸಂಪರ್ಕ ಮತ್ತು ರಕ್ಷಣೆಗಳಲ್ಲಿನ ಪ್ರಯೋಗದ ವಿಸ್ತರಣೆಯನ್ನು ಮುಂದುವರೆ ಎಂದು ಮಲೇಷ್ಯಾದ ಪದಾನಿ ಇಬ್ರಾಹಿಂ ತಿಳಿಸಿದರು.
ಜಾಗತಿಕ ವ್ಯಾಪಾರ ಮತ್ತು ಆರ್ಥಿಕ ರಂಗದಲ್ಲಿ ಅದ್ಭುತ ಬೆಳೆಗೆ ಬೆಳವಣಿಗೆ ದಾಖಲಿಸುವ ಬಗ್ಗೆ ಭಾರತವನ್ನು ಅವರು ಹೊಗಳಿದರು. ASEAN ಕೇಂದ್ರೀಕರಣಕ್ಕೆ ಆದ್ಯತೆ ನೀಡುತ್ತದೆ ಎಂದು ಪ್ರಧಾನಿಯವರು ತಿಳಿಸಿದರು. ಎರಡೂ ದೇಶಗಳ ಸಾಮೂಹಿಕ ದೃಷ್ಟಿಕೋನವಾಗಿದೆ. ಭಯೋತ್ಪಾದನೆಯ ಬಗ್ಗೆ ನಮ್ಮ ಸಹ ಸಂದೇಶ ಸ್ಪಷ್ಟವಾಗಿದೆ.
ಅದರ ಬಗ್ಗೆ ದ್ವಿಮುಖ ಮಾಡದಂಡ ಹಾಗೂ ಯಾವುದೇ ರಾಜಿ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸ್ಪಷ್ಟಪಡಿಸಿದರು. ಇಂದಿನ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳನ್ನು ಸುಧಾರಿಸುವುದು ಅಗತ್ಯವಾಗಿದೆ ಎಂಬುವುದು ಎರಡು ದೇಶಗಳ ಒಟ್ಟಿಗಿನ ದೃಷ್ಟಿಕೋನವಾಗಿದೆ. ಭಾರತ ಮತ್ತು ಮಲೇಷ್ಯಾ ನಂಬಿ,ಕೆ ಸ್ನೇಹ ಮತ್ತು ಹಂಚಿಕೆಯ ಆಕಾಂಕ್ಷೆಗಳಲ್ಲಿ ಬೇರೂರು ಇರುವ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಪುತ್ರ ಜಯದಲ್ಲಿನ ಪರ್ದಾನ ಪುತ್ರ ಗೌರವವನ್ನು ಸ್ವೀಕರಿಸಿದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದಾರೆ. ಅಮ್ಮ ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಹೆಚ್ಚಿಸಲು ನಮ್ಮ ಆರ್ಥಿಕ ನಾವಿನ್ಯತೆ ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ನಮ್ಮ ಸಹಯೋಗವನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಅವರು ಸ್ಪಷ್ಟಪಡಿಸಿದರು. ಭಾರತ ಮತ್ತು ಮಲೇಷ್ಯಾ ಆಗಸ್ಟ್ 2024ರಲ್ಲಿ ತಮ್ಮ ದೀಪಕ್ಷಿಯ ಸಂಬಂಧಗಳನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯತ್ತ ಕೊಂಡೊಯ್ಯುತ್ತಿದೆ ಎಂದು ಅವರು ತಿಳಿಸಿದರು.
ಬಾರದ ಮತ್ತು ಮಲೇಷ್ಯಾ ನಡುವಿನ ಐತಿಹಾಸಿಕ ಸಂಬಂಧವು ಇತ್ತೀಚಿನ ವರ್ಷಗಳಲ್ಲಿ ಸ್ಥಿರ ಪ್ರಗತಿಯನ್ನು ಕಂಡಿದೆ. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಪ್ರಧಾನಿ ಮೋದಿಯವರು ಪ್ರಧಾನಿ ಇಬ್ರಾಹಿಂ ಅವರೊಂದಿಗೆ ಚರ್ಚಿಸಿ ಬಳಿಕ ತಿಳಿಸಿದರು.ಎರಡು ದೇಶಗಳು ಹಲವಾರು ಒಪ್ಪಂದದ ಬಗ್ಗೆ ಚರ್ಚೆಯನ್ನು ನಡೆಸಿದವು.
ಇನ್ನಷ್ಟು ಓದಿರಿ:
ಅಗ್ನಿ-3 ಕ್ಷಿಪಣಿ ಪರೀಕ್ಷೆ ಯಶಸ್ವಿ: ಭಾರತದ ಶಕ್ತಿ ಕಂಡು ಶತ್ರು ರಾಷ್ಟ್ರಗಳಿಗೆ ಎದೆ ನಡುಕ