Belagavi news:
ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಷ್ಟೇ ಅಲ್ಲದೆ ಜನರಿಗೂ ಸಹ ಮನೆ ಬಿಟ್ಟು ಹೊರಗೆ ಬರದಂತಾಗಿದೆ. ದೈನಂದಿನ ಕೆಲಸಗಳಿಗೆ ಹೊರಟ ಜನರು ಮಳೆಯಿಂದ ಪರದಾಟ ಅನುಭವಿಸಿದ್ದಾರೆ.
ಮಳೆಯ ತೀವ್ರತೆಗೆ ಹಲವಡೆ ದೃಶ್ಯತೆ ಕಡಿಮೆಯಾಗಿದ್ದು, ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಗಿದೆ. ಕೆಲವು ಕಡಿಮೆ ಎತ್ತರದ ಪ್ರದೇಶಗಳಲ್ಲಿ ನೀರು ಜಮೆಯಾಗಿದ್ದು, ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗುಡುಗು ಮಿಂಚಿನ ಮಳೆ ಹಿನ್ನೆಲೆಯಲ್ಲಿ ನಾಗರಿಕರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಹವಾಮಾನ ಇಲಾಖೆ ಮುಂದಿನ ಗಂಟೆಗಳಲ್ಲಿ ಇನ್ನಷ್ಟು ಮಳೆಯ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಿದ್ದು, ನಗರದಲ್ಲಿ ಮುನ್ನೆಚ್ಚರಿಕ ಅಕ್ರಮಗಳನ್ನು ಕೈಗೊಳ್ಳಲಾಗಿದೆ ಮಳೆ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿದಿದ್ದಾರೆ.
ಆಶ್ಚರ್ಯವೇನೆಂದರೆ ಇಂತಹ ಈ ಬೇಸಿಗೆಯಲ್ಲಿ ಸಹ ಮಳೆ ಬರುತ್ತಿರುವುದು ಆಶ್ಚರ್ಯಕರವಾಗಿದೆ. ಬೇಸಿಗೆಯಿಂದ ಕಂಗೆಟ್ಟ ಜನರಿಗೆ ಈ ಮಳೆ ಒಂದು ಸಂತಸವನ್ನು ತಂದಿದೆ. ಸಂತಸದ ಜೊತೆಗೆ ಟ್ರಾಫಿಕ್ ತೊಂದರೆ ಹಾಗೂ ದೈನಂದಿನ ಕೆಲಸಕ್ಕೆ ಹೋಗುವ ಜನರಿಗೆ ಮನೆಗೆ ತೆರಳಲು ಪರದಾಟ ಉಂಟಾಗಿದೆ.
ಕೆಲ ದಿನಗಳಿಂದ ತೀವ್ರ ಬಿಸಿಲಿನಿಂದ ಕಂಗೆಟ್ಟ ಬೆಂಗಳೂರಿನ ಜನತೆಗೆ ವರುಣದೇವನು ಮತ್ತೆ ಶಾಕ್ ನೀಡಿದ್ದಾನೆ. ಸಂಜೆ ವೇಳೆಗೆ ನಗರದ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು , ತಾಪಮಾನದಿಂದ ಹೋರಾಟ ಮಾಡುತ್ತಿದ್ದ ಜನರಿಗೆ ತಾತ್ಕಾಲಿಕ ಶಮನ ದೊರೆತಿದೆ.
ನಗರದ ಪ್ರಮುಖ ಪ್ರದೇಶಗಳಾದ ಮೆಜೆಸ್ಟಿಕ್, ಶಾಂತಿನಗರ ಮತ್ತು ಕೋರಮಂಗಲ್ ಸೇರಿದಂತೆ ಹಲವಡೆ ಭಾರಿ ಮಳೆ ದಾಖಲಾಗಿದ್ದು, ರಸ್ತೆಗಳಲ್ಲಿ ನೀರು ಜಮೆಯಾಗಿರುವ ದೃಶ್ಯಗಳು ಕಂಡುಬಂದಿವೆ. ತೀವ್ರ ಮಳೆ ಹಿನ್ನಲೆಯಲ್ಲಿ ವಾಹನ ಸಂಚಾರ ನಿಧಾನಗೊಂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು.
ಅಕಸ್ಮಾತ್ ಸುರಿದ ಮಳೆಯಿಂದಾಗಿ ಸಂಜೆ ವೇಳೆ ಸಂಚಾರ ವ್ಯವಸ್ಥೆ ಅರ್ಥವ್ಯಸ್ತಗೊಂಡಿದ್ದು, ಕೆಲವೆಡೆ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಗಿದೆ. ಮಿಂಚು ಗುಡುಗು ಸಹಿತ ಮಳೆಯ ಹಿನ್ನೆಲೆ ನಾಗರಿಕರಿಗೂ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಹೈರಾಣ ಆಗಿದ್ದ ಬೆಂಗಳೂರಿನ ಜನತೆಗೆ ಇದೀಗ ವರುಣದೇವ ಶಾಕ್ ನೀಡಿದ್ದಾನೆ ಸಂಜೆಯಾಗುತ್ತಿದ್ದಂತೆ ನಗರದಾದ್ಯಂತ ಬಿರುಗಾಳಿ ಗುಡುಗು ಮತ್ತು ಮಿಂಚು ಸಹಿತಧಾರ ಆಲಿಕಲ್ಲು ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತ ಆಗಿದೆ.
ಅಕಸ್ಮಾತ್ ಸುರಿದ ಈ ಮಳೆ ಆರ್ಭಟಕ್ಕೆ ವಾಹನ ಸಮಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿದೆ. ರಸ್ತೆಗಳಲ್ಲಿ ನೀರು ಜಮೆಯಾಗಿದ್ದು, ಹಲೋ ಪ್ರದೇಶಗಳಲ್ಲಿ ಸಂಚಾರ ನಿಧಾನಗೊಂಡಿದೆ. ದಿಢೀರ್ ಮಳೆಯಿಂದ ಜನರು ಬೆಚ್ಚಿ ಬಿದ್ದಿರುವ ದೃಶ್ಯ ನಗರದಾದ್ಯಂತ ಕಂಡುಬಂದಿದೆ.
ಮೆಜೆಸ್ಟಿಕ್, ಮಾರುಕಟ್ಟೆ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ್, ಮಲ್ಲೇಶ್ವರಂ, ಶಿವಾನಂದ್ ಸರ್ಕಲ್, ಗುಟ್ಟಹಳ್ಳಿ, ವಸಂತನಗರ, ಆರ್ ಟಿ ನಗರ, ಜಯನಗರ, ಜೆಪಿ ನಗರ್, ಹೆಬ್ಬಾಳ, ಶಿವಾಜಿನಗರ್, ಬನಶಂಕರಿ ಸದಾಶಿವನಗರ್, ವಿಲ್ಸನ್ ಗಾರ್ಡನ್, ಲಾಲ್ ಬಾಗ್, ಡಬಲ್ ರೋಡ್ ಹಾಗೂ ವಿಧಾನಸೌಧ ಸುತ್ತಮುತ್ತ ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿ ಕಂಡುಬಂದಿದೆ.
ನಗರದ ಹಲವು ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ಸಂಜೆ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಗುಡುಗು, ಮಿಂಚಿನೊಂದಿಗೆ ಸುರಿದ ಮಳೆಯ ಹಿನ್ನೆಲೆಯಲ್ಲಿ ನಾಗರಿಕರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಸಂಜೆಯಿಂದ ಆರಂಭವಾದ ದಿಢೀರ್ ಆಗಿ ಸುರಿದ ಮಳೆ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳಲಿಕ್ಕೆ ಕಾರಣವಾಗಿದೆ. ಅಕಾಲಿಕವಾಗಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ರಸ್ತೆ ಬದಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಫ್ಲೈ ಓವರ್ ಮತ್ತು ಸ್ಕೈ ವಾಕ್ ಕೆಳಗೆ ಬೈಕ್ ಸವಾರರು ಆಶ್ರಯ ಪಡೆದಿದ್ದಾರೆ.
ತಗ್ಗು ಪ್ರದೇಶಗಳ ನಿವಾಸಿಗಳಿಗೆ ಮನೆಗಳಿಗೆ ನೀರು ನುಗ್ಗಿ ಆತಂಕ ಎದುರಾಗಿದ್ದು, ಹಲವೆಡೆ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಅಕಾಲಿಕ ಮಳೆಯ ಆರ್ಭಟದಿಂದ ನಗರದ ಹಲವೆಡೆ ಸಾಮಾನ್ಯ ಜೀವನಕ್ಕೆ ವ್ಯಥೆಯ ಉಂಟಾಗಿದೆ.
ಧಾರಾಕಾರ ಮಳೆಯಿಂದ ನಗರದಲ್ಲಿ ಹಲವು ಅವಂದರಗಳು ಸಂಭವಿಸಿವೆ. ಕೆಲವೆಡೆ ಬೃಹತ್ ಮರಗಳು ಧರೆಗುರುಳಿದ್ದು, ಶೇಷಾದ್ರಿಪುರಂ-ಮಲೇಶ್ವರಂ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸಂಪೂರ್ಣ ಬಂದಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತೆ ಆಯಿತು.
ಗೊರಗುಂಟೆಪಾಳ್ಯ ಪ್ರದೇಶದಲ್ಲಿಯೂ ಭಾರಿ ಮಳೆ ಪರಿಣಾಮವಾಗಿ ಮರ ಬಿದ್ದು ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಕಮ್ ಗೊಂಡಿದೆ. ಅದೃಷ್ಟಾವರ್ಷ ಕಾರಿನಲ್ಲಿ ಯಾರು ಇಲ್ಲದಿದ್ದ ಕಾರಣ ದೊಡ್ಡ ಆನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.
Also Read: