bealagavi news :
ಜೂನ್ 5 ರಂದು ವಿಶ್ವದಾದ್ಯಂತ ಸಜ್ಜಾಗಿರುವ 'Bandar' ಸಿನಿಮಾ ಈಗಾಗಲೇ ಗಮನ ಸೆಳೆಯುತ್ತಿದೆ.ಖ್ಯಾತ ಬಾಲಿವುಡ್ ನಟ Bobby Deol ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸ್ಯಾಂಡಲ್ ವುಡ್ ನಟ - ನಿರ್ದೇಶಕ Raj B Shetty ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.ಜೊತೆಗೆ ನಟೇಶ್ ಹೆಗಡೆ ಅವರು ಕಾಣಿಸಿಕೊಂಡಿರುವ ಹಾಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖ್ಯಾತ ನಿರ್ದೇಶಕ anurag kashyap ನಿರ್ದೇಶನದಲ್ಲಿ ಮೂಡಿಬಂದಿರುವ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ,ಲೈಂಗಿಕ್ ದೌರ್ಜನ್ಯದ ಆರೋಪದಲ್ಲಿ ಸಿಲುಕುವ ಖ್ಯಾತ ಸೆಲೆಬ್ರಿಟಿಯ ಜೀವನದ ಏರುಪೇರುಗಳನ್ನು ಹಾಗೂ ಡಿಜಿಟಲ್ ಯುಗದಲ್ಲಿ ಸತ್ಯ - ನ್ಯಾಯದ ಸುತ್ತ ಸಮಾಜ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ವಿಷಯವನ್ನು ಆಧರಿಸಿದೆ.
ಚಿತ್ರದ ವಿಷಯದ ಬಗ್ಗೆ ಹರಡಿದ್ದ "ಮಹಿಳಾ ವಿರೋಧಿ" ಎಂಬ ಆರೋಪಗಳಿಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಸಿನಿಮಾ ಅಂತಹ ಉದ್ದೇಶ ಹೊಂದಿಲ್ಲ ಎಂದು ತಿಳಿಸಿದೆ.ಕಥೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ನಿರ್ಮಾಪಕರು ಹೇಳಿದ್ದು, ಚಿತ್ರವು ಸಾಮಾಜಿಕ ವಾಸ್ತವ್ಯ ಮತ್ತು ನ್ಯಾಯದ ಸಂಕೀರ್ಣತೆಯನ್ನು ಪ್ರತಿಬಿಂಬಿಸುವ ಪ್ರಯತ್ನವಾಗಿದೆ ಎಂದು ತಿಳಿಸಿದ್ದಾರೆ.
ಈ ಸ್ಪಷ್ಟನೆಯೊಂದಿಗೆ 'bandar ಸಿನಿಮಾ ಬಿಡುಗಡೆಗೂ ಮುನ್ನದ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.
ಚಿತ್ರದ ಬಿಡುಗಡೆಗೆ ಮುನ್ನ ನಟ ಬಾಬಿ ಡಿಯೋಲ್ ಮತ್ತು ನಿರ್ಮಾಪಕ ನಿಖಿಲ್ ದ್ವಿವೇದಿ ಅವರು 'ಟೈಮ್ಸ್ ನೌ' ವಾಹಿನಿಯ' ದೀ ನ್ಯೂಸ್ ಅವರ್ ಅಟ್ 9 'ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂವಾದವು ಚಿತ್ರದ ಕಥೆಯನ್ನು ಮೀರಿ, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಲಿಂಗ ಸಮಾನತೆ, ಸಮಾನ ಹಕ್ಕುಗಳು ಮತ್ತು ಕಾನೂನು ಹೊಣೆಗಾರಿಕೆಯಂತಹ ಗಂಭೀರ ವಿಷಯಗಳತ್ತ ಹೊರಳಿತು.
ಖ್ಯಾತ ನಿರ್ಮಾಪಕ nikhil Dwivedi ಅವರು ಬಂದರ್ ಸಿನಿಮಾದ ಕುರಿತು ಹರಡಿದ್ದ ಮಹಿಳಾ ವಿರೋಧಿ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.ಸಂದರ್ಶನ ದಲ್ಲಿ ಮಾತನಾಡಿದ ಅವರು, ಚಿತ್ರದ ಕಥೆ ತಮ್ಮಿಗೆ ಭಾವನಾತ್ಮಕವಾಗಿ ಬಹಳ ಹತ್ತಿರವಾಗಿದ್ದು, ಯಾವುದೇ ಕಾರಣಕ್ಕೂ ಸಿನಿಮಾ ಮಹಿಳೆಯರ ವಿರುದ್ಧವಲ್ಲ ಎಂದು ಹೇಳಿದರು.
ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿರುವ ನಟಿ - ಮಾಡೆಲ್ ಟ್ವಿಶಾ ಶರ್ಮಾ ಸಾವಿನ ಪ್ರಕರಣವನ್ನು ಉಲ್ಲೇಖಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು,"ನಮ್ಮ ಚಿತ್ರ ಮಹಿಳೆಯರ ವಿರುದ್ಧವಾಗಿಲ್ಲ. ದೇಶಾದ್ಯಂತ ನಡೆಯುತ್ತಿರುವ ಈ ಪ್ರಕರಣವನ್ನು ನಾವು ಗಮನಿಸಿದ್ದೇವೆ. ಅದು ನಿಜಕ್ಕೂ ದುರದೃಷ್ಟಕರ ಘಟನೆ. ಸೂಕ್ತ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು,"ಎಂದು ಹೇಳಿದರು.
ಅವರು ಮುಂದುವರಿಸಿ,"ನಮ್ಮ ಸಿನಿಮಾ ಮಹಿಳಾ ವಿರೋಧಿ ಕಥೆ ಅಲ್ಲ. ಇದು ನ್ಯಾಯದ ಪರವಾದ ಸಿನಿಮಾ. ಸಮೀಕರಾಗಿದೆ ಮಹಿಳೆಗೆ ಅನ್ಯಾಯವಾಗಿದಾಗ ಅವಳನ್ನು ನಂಬಬೇಡಿ ಎಂದು ಯಾರೂ ಹೇಳುತ್ತಿಲ್ಲ,"ಇಂದು ಸ್ಪಷ್ಟಪಡಿಸಿದರು.
ಈ ಸ್ಪಷ್ಟನೆಯೊಂದಿಗೆ' ಬಂದರ್'ಸಿನಿಮಾ ಕುರಿತ ವಿವಾದಗಳಿಗೆ ಮತ್ತೊಮ್ಮೆ ಸ್ಪಷ್ಟ ಉತ್ತರ ದೊರೆತಂತಾಗಿದೆ. ಮುಂದುವರೆದು ಮಾತನಾಡಿದ ಅವರು,'ಆದರೆ ನಾವು ನ್ಯಾಯದ ಮೇಲು ನಂಬಿಕೆ ಇಡಬೇಕಾಗುತ್ತದೆ. ನಮಗೆ ಒಂದು ನಿರ್ದಿಷ್ಟ ಲಿಂಗಕ್ಕಿಂತ ಹೆಚ್ಚಾಗಿ ನ್ಯಾಯದ ಮೇಲೆ ನಂಬಿಕೆ ಇರಬೇಕು. ಅದೇ ನಮ್ಮ ಸಂವಿಧಾನ, ನಮ್ಮ ಕಾನೂನು ಮತ್ತು ಪ್ರಜಾಪ್ರಭುತ್ವದ ಮೂಲಕ ತತ್ವವಾಗಿದೆ. ಕೊನೆಗೆ ನ್ಯಾಯವೇ ಗೆಲ್ಲಬೇಕು'ಎಂದು ನಿರ್ಮಾಪಕ ನಿಖಿಲ್ ದ್ವಿವೇದಿ ಅವರು ಹೇಳಿದ್ದಾರೆ.
ಬಂದರ್ ಚಿತ್ರದ ಮೂಲಕ ನಟ Bobby Deol ಮತ್ತು ನಿರ್ದೇಶಕ anurag kashyap ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕೆ ಖ್ಯಾತ ಲೇಖಕರು ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಚಿತ್ರಕಥೆ ಬರೆದಿದ್ದಾರೆ.
Also Read:
ಹರಕೆ ಈಡೇರಿದ ಸಂತಸ: ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿದ ವಸಿಷ್ಠ ಸಿಂಹ- ಹರಿಪ್ರಿಯಾ