<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Corporate

ಇಂಜಿನಿಯರಿಂಗ್ ಕೋರ್ಸ್ ಆಯ್ಕೆ ಮಾಡುವ ಮೊದಲು ಇದನ್ನು ಓದಿ

ಇಂಜಿನಿಯರಿಂಗ್ ಕೋರ್ಸ್ ಆಯ್ಕೆ ಮಾಡುವ ಮೊದಲು ಇದನ್ನು ಓದಿ
Summary: With the number of students taking admission in engineering courses increasing day by day, it is important for parents and students to keep some important points in mind. Before deciding on a degree, it is important to know the field of interest, job opportunities and industrial demand before making a decision. Education experts have advised that engineering education can be successful only if the right decision is taken according to the interest and ability of the child.

belagavi news:

ಕರ್ನಾಟಕದ ಇಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ.17ರಷ್ಟು ಮಂದಿ ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ ಎಂದು ತಜ್ಞರ ಸಮಿತಿ ವರದಿ ತಿಳಿಸಿದೆ. ಶಿಕ್ಷಣದ ಗುಣಮಟ್ಟ ಕುಸಿತ ಹಾಗೂ ಕಂಪ್ಯೂಟರ್ ಸೈನ್ಸ್ ಕಡೆ ಹೆಚ್ಚುತ್ತಿರುವ ವ್ಯಾಮೋಹವೇ ರಾಜ್ಯದಲ್ಲಿ ಉದ್ಯೋಗ ಬಿಕಟ್ಟಿಗೆ ಪ್ರಮುಖ ಕಾರಣಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ 'ಕೀರಾ' KEERA ಎಂಬ ಹೊಸ ಪ್ರಾಧಿಕಾರವನ್ನು ರಚಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಇಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟ ಹೆಚ್ಚುವುದು ಪಠ್ಯಕ್ರಮವನ್ನು ಉದ್ಯೋಗಾನ್ಮುಖಗೊಳಿಸುವುದು ಹಾಗೂ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡುವುದು ಈ ಪ್ರಾಧಿಕಾರದ ಮುಖ್ಯ ಉದ್ದೇಶವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಮೇ 01: ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು ಸಿ ಇ ಟಿ ಯಲ್ಲಿ ರ್ಯಾಂಕ್ ಬಂದ ತಕ್ಷಣ ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸಿಗೆ ಸೇರಿಸಿದರೆ 4 ವರ್ಷಗಳ ಬಳಿಕ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆ ಬಹುತೇಕ ಪೋಷಕರಲ್ಲಿದೆ ಆದರೆ ಆ ಭಾವನೆಗೆ ತದ್ವಿರುದ್ಧವಾದ ಹಾಗೂ ಆತಂಕಕಾರಿ ಸಂಗತಿ ಇದೀಗ ಬಹಿರಂಗವಾಗಿದೆ. ಕರ್ನಾಟಕದ ಇಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇಕಡ 17ರಷ್ಟು ಮಂದಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂದು ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಪರಿವರ್ತನೆ ಸುಧಾರಣಾ ಸಮಿತಿ ಸಲ್ಲಿಸಿರುವ ವರದಿ ತಿಳಿಸಿದೆ. ಅಂದರೆ ರಾಜದ ಸುಮಾರು ಶೇ. 83 ರಷ್ಟು ಇಂಜಿನಿಯರಿಂಗ್ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲ್ಯಗಳನ್ನು ಹೊಂದಿದಲ್ಲದೆ ನಿರುದ್ಯೋಗಿಗಳಾಗುತ್ತಿದ್ದಾರೆ ಎಂಬ ಆತಂಕಕಾರಿ ತಿಥಿ ಎದುರಾಗಿದೆ.

ಉದ್ಯೋಗ ಬಿಕ್ಕಟ್ಟಿಗೆ ಕಾರಣವೇನು?

Sponsored

ಪ್ರೊ . ಸಾದಗೋಪನ್ ನೇತೃತ್ವದ ತಜ್ಞರ ಸಮಿತಿ ಉದ್ಯೋಗದ ಈ ಗಂಭೀರ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ. ಕಂಪ್ಯೂಟರ್ ಸೈನ್ಸ್ ಪದವೀಧರರಿಗೆ ಉದ್ಯೋಗವಕಾಶಗಳ ಕೊರತೆಯಿಂದಾಗಿ ಹೆಚ್ಚಿನ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ನಂತಹ ಮೂಳೆ ಇಂಜಿನಿಯರಿಂಗ್ ವಿಭಾಗಗಳಿಗೆ ದಾಖಲಾತಿ ತೀವ್ರವಾಗಿ ಕುಸಿದಿದೆ. ಒಂದು ಕಾಲದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈಗ ಶಿಕ್ಷಣದ ಗುಣಮಟ್ಟ ಕುಸಿತಿದೆ. ವಿದ್ಯಾರ್ಥಿಗಳಲ್ಲಿ ಇಂದಿನ ಮಾರುಕಟ್ಟೆಗೆ ಬೇಕಾದ ಸ್ಪರ್ಧಾತ್ಮಕ ಕೌಶಲ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಸೆಮಿಕಂಡಕ್ಟರ್ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರಿ ಬೇಡಿಕೆ

ಆಶ್ಚರ್ಯಕರ ವಿಷಯವೆಂದರೆ ಕಂಪ್ಯೂಟರ್ ಸೈನ್ಸ್ ಹೊರತುಪಡಿಸಿ ಇತರ ತಾಂತ್ರಿಕ ಕ್ಷೇತ್ರ ಗಳಲ್ಲಿ ತಜ್ಞರ ಕೊರತೆ ತೀವ್ರ ವಾಗಿದೆ. 2027ರ ವೇಳೆಗೆ ಭಾರತದಲ್ಲಿ ಸುಮಾರು 2.50 ರಿಂದ 3 ಲಕ್ಷ ವೃತ್ತಿಪರ ಅಗತ್ಯವಿದ್ದು, ಕರ್ನಾಟಕದಲ್ಲಿ ಸುಮಾರು 10,000 ದಿಂದ 15,000 ಮಂದಿ ಪರಿನಿತರ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತಿವೆ. ವಿಶೇಷವಾಗಿ ಏರೋ ಸ್ಪೇಸ್ ಮತ್ತು ಡಿಫೆನ್ಸ್ ಕ್ಷೇತ್ರದಲ್ಲಿ 45,000 ರಿಂದ 8,500 ವೃತ್ತಿಪರ ಬೇಡಿಕೆ ಇದ್ದರೆ ಎಲೆಕ್ಟ್ರಿಕ್ ವಾಹನ (EV) ಕ್ಷೇತ್ರದಲ್ಲಿ 6,000 ರಿಂದ 11,000 ಮಂದಿ ಹಾಗೂ ಕ್ಲೀನ್ ಎನರ್ಜಿ ಕ್ಷೇತ್ರದಲ್ಲಿಯೂ ತಜ್ಞರ ದೊಡ್ಡ ಬೇಡಿಕೆ ಕಾಣಿಸಿಕೊಂಡಿದೆ. ಆದರೆ ಈ ಬೇಡಿಕೆಯನ್ನು ಕೇವಲ ಕಂಪ್ಯೂಟರ್ ಸೈನ್ಸ್ ಅಥವಾ ಐ ಟಿ ಪದವೀಧರರಿಂದ ಪೂರೈಸುವುದು ಸಾಧ್ಯವಿಲ್ಲ ಎಂದು ತಜ್ಞರ ಎಚ್ಚರಿಸಿದ್ದಾರೆ.

Sponsored

'ಕೀರಾ' (KEERA) ರಚನೆ:

ಈ ಶಿಕ್ಷಣ ವಿಕಟನ್ನು ಸರಿಪಡಿಸಲು ರಾಜ್ಯ ಸರ್ಕಾರವು ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಸುಧಾರಣಾ ಪ್ರಾಧಿಕಾರ(KEERA) ರಚಿಸಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಸಚಿವ ಡಾ .ಎಂ. ಸಿ. ಸುಧಾಕರ್ ಅವರು ಈ ಕುರಿತು ಶೀಘ್ರವೇ ಪ್ರತ್ಯೇಕ ಕಾಯ್ದೆ ತರುವುದಾಗಿ ತಿಳಿಸಿದ್ದಾರೆ.

ಪ್ರಮುಖ ಶಿಫಾರಸುಗಳು: ಸಮಿತಿಯ ಪ್ರಕಾರ ಖಾಸ್ಕಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹೊಸ ಕೋರ್ಸ್ ಆರಂಭಿಸುವಾಗ ಆರಂಭದಲ್ಲಿ ಗರಿಷ್ಠ 60 ಸೀಟುಗಳಿಗೆ ಮಾತ್ರ ಅನುಮತಿ ನೀಡಬೇಕು. ನಂತರ ಶೀಟುಗಳನ್ನು ಹೆಚ್ಚಿಸಲು ಕಾಲೇಜುಗಳು ಕಡ್ಡಾಯವಾಗಿ ಎನ್ ಬಿಎ (NBA) ಮಾನ್ಯತೆ ಪಡೆಯುವುದು ಅಗತ್ಯವಾಗಿದೆ. ಇದಲ್ಲದೆ, ಬಾರಿ ಯಾವುದೇ ವಿಭಾಗದಲ್ಲಿ ಗರಿಷ್ಠ ಸೀಟುಗಳ ಸಂಖ್ಯೆ 300 ಮೀರಬಾರದು ಎಂದು ಶಿಫಾರಸು ಮಾಡಲಾಗಿದೆ. ಒಂದು ಸಂಸ್ಥೆಯಲ್ಲಿ ಇದಕ್ಕಿಂತ ಹೆಚ್ಚು ಕಂಪ್ಯೂಟರ್ ಸಂಬಂಧಿತ ವಿಭಾಗಗಳನ್ನು ಆರಂಭಿಸಲು ಅವಕಾಶ ಇರಬಾರದು ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 900ಕ್ಕಿಂತ ಹೆಚ್ಚಾಗಬಾರದು ಎಂಬ ನಿಯಮವನ್ನು ಸೂಚಿಸಲಾಗಿದೆ.

ಪಠ್ಯಕ್ರಮದಲ್ಲಿ 'ಕೋರ್+ಎಐ (CORE+ AI) ಮಾದರಿಯನ್ನು ಜಾರಿಗೆ ತರಬೇಕು ಎಂಬ ಪ್ರಮುಖ ಸಲಹೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕೇವಲ ಕಂಪ್ಯೂಟರ್ ಸೈನ್ಸ್ ಎಂಬ ಆಕರ್ಷಣೆಗೆ ಒಳಗಾಗಿ ಕಾಲೇಜುಗಳಲ್ಲಿ ಸೇರಿಸುವ ಮೊದಲು ಮಾರುಕಟ್ಟೆಯ ವಾಸ್ತವತೆ ಹಾಗೂ ಕಾಲೇಜಿನ ಗುಣಮಟ್ಟವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅಗತ್ಯವಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

Sponsored

Also Read:

ಶಿವಣ್ಣನ ಪೆದ್ದಿ ಫಿಲಂ ಶೂಟಿಂಗ್ ಕಂಪ್ಲೀಟ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online