<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಭಾರತಕ್ಕೆ ರಿಲೀಫ್: ರಷ್ಯಾ ತೈಲ ಖರೀದಿ ವಿನಾಯಿತಿ ಅವಧಿ ವಿಸ್ತರಣೆ

ಭಾರತಕ್ಕೆ ರಿಲೀಫ್: ರಷ್ಯಾ ತೈಲ ಖರೀದಿ ವಿನಾಯಿತಿ ಅವಧಿ ವಿಸ್ತರಣೆ
Summary: The exemption period granted for purchasing Russian oil has been extended for another month. This decision is likely to have a significant impact on global oil market fuel prices and import policies of many countries, including India. The relaxation of restrictions on purchasing Russian oil has started new discussions in the global political and economic circles.

Belagavi News:

ವಾಷಿಂಗ್ಟನ್: ರಷ್ಯಾದಿಂದ ತೈಲ ಆಮದು ಮೇಲೆ ವಿಧಿಸಿದ್ದ ನಿರ್ಬಂಧಗಳಿಗೆ ಅಮೆರಿಕ ಮತ್ತೊಮ್ಮೆ ವಿನಾಯಿತಿ ನೀಡಿದ್ದು , ಅದನ್ನು ಮತ್ತೊಮ್ಮೆ ತಿಂಗಳಿಗೆ ವಿಸ್ತರಿಸಿದೆ. ಈಗಾಗಲೇ ಸಮುದ್ರದಲ್ಲಿ ಸಾಗಣೆಯಲ್ಲಿರುವ ರಷ್ಯಾದ ತೈಲದ ಮೇಲೆ ಇರುವ ನಿರ್ಬಂಧಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

ಅಮೆರಿಕದ ಖಜಾನೆ ಇಲಾಖೆ ಸೋಮವಾರ ಹೊರಡಿಸಿದ ಆದೇಶದ ಪ್ರಕಾರ, ಏಪ್ರಿಲ್ 17 ಅಥವಾ ಅದಕ್ಕೂ ಮೊದಲು ಸಮುದ್ರದಲ್ಲಿ ಸಿಲುಕಿರುವ ರಷ್ಯಾದ ತೈಲದ ಮೇಲಿನ ನಿರ್ಬಂಧ ವಿನಾಯಿತಿಯನ್ನು ಜೂನ್ 17ರವರೆಗೆ ವಿಸ್ತರಿಸಲಾಗಿದೆ.

ಅದೇ ವೇಳೆ, ಮೇ 18ರವರೆಗೆ ಜಾರಿಗೆ ಬರುವಂತೆ ಈ ವಿನಾಯಿತಿಯನ್ನು ಮತ್ತಷ್ಟು ಮುಂದುವರಿಸಲಾಗಿದೆ ಎಂದು ಅಮೆರಿಕದ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ಪ್ರಕಟಿಸಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ನಿರ್ಧಾರ ಜಾಗತಿಕ ತೈಲ ಮಾರುಕಟ್ಟೆ ಸರಬರಾಜು ಸರಣಿ ಹಾಗೂ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೇ ರಷ್ಯಾ ತೈಲ ಖರೀದಿಗೆ ಸಂಬಂಧಿಸಿದ ಅಮೆರಿಕಾದ ನಿರ್ಬಂಧಗಳಲ್ಲಿ ಮತ್ತೆ ವಿನಾಯಿತಿ ನೀಡಲಾಗಿದ್ದು, ಭಾರತ ಸೇರಿದಂತೆ ಹಲವು ದೇಶ ಗಳಿಗೆ ತಾತ್ಕಾಲಿಕ ರಿಲೀಫ್ ಮುಂದುವರೆದಿದೆ.

ಈ ಹಿಂದೆ ಏಪ್ರಿಲ್ 17 ರಿಂದ ಮೇ16ರವರೆಗೆ ಒಂದು ತಿಂಗಳ ಕಾಲ ರಷ್ಯಾ ತೈಲ ಖರೀದಿಗೆ ವಿನಾಯಿತಿ ನೀಡಲಾಗಿತ್ತು. ಇದೀಗ ಆ ಅವಧಿ ಮುಕ್ತಾಯದ ಹಂತದಲ್ಲಿದ್ದು, ತೈಲ ಸರಬರಾಜು ಬಿಕ್ಕಟ್ಟಿನ ಪರಿಸ್ಥಿತಿ ಮುಂದುವರೆದ ಕಾರಣ ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಇದಕ್ಕೂ ಮುನ್ನ ಮಾರ್ಚ್ 5ರಿಂದ ಆರಂಭವಾದ ಒಂದು ತಿಂಗಳ ಅವಧಿಗೆ ರಷ್ಯಾದ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿತ್ತು. ನಂತರ ಇದೇ ರೀತಿಯ ವಿನಾಯಿತಿಯನ್ನು ಹಲವು ದೇಶಗಳಲ್ಲಿ ವಿಸ್ತರಿಸಲಾಗಿದ್ದು, ಅದು ಏಪ್ರಿಲ್ 11ರಂದು ಅಂತ್ಯಗೊಂಡಿತು.

ಈ ನಿರಂತರ ವಿನಾಯಿತಿ ವಿಸ್ತರಣೆ ಜಾಗತಿಕ ತೈಲ ಮಾರುಕಟ್ಟೆ, ಸರಬರಾಜು ಸರಣಿ ಹಾಗೂ ಇಂಧನ ದರಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಕರ ಅಭಿಪ್ರಾಯ ಪಟ್ಟಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಗತ್ತು ತೈಲ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಅಮೆರಿಕ ರಷ್ಯಾ ತೈಲ ಖರೀದಿ ಮೇಲಿನ ನಿರ್ಬಂಧಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿದೆ ಎಂದು ತಿಳಿಸಿದೆ .

ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳ ನಡುವೆಯೂ, ಸಮುದ್ರದಲ್ಲಿ ಸಾಗಣೆಯಲ್ಲಿರುವ ರಷ್ಯಾದ ತೈಲವನ್ನು ಇತರೆ ದೇಶಗಳು ತಾತ್ಕಾಲಿಕವಾಗಿ ಖರೀದಿಸಲು ಅವಕಾಶ ನೀಡಲಾಗುತ್ತಿದೆ. ಇದು ಅಲ್ಪಾವಧಿಯ ಕ್ರಮವಾಗಿದ್ದು, ಈಗಾಗಲೇ ಸಾಗಣೆಯಲ್ಲಿರುವ ತೈಲಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಈ ವಿನಾಯಿತಿಯಿಂದ ರಷ್ಯಾ ಸರ್ಕಾರಕ್ಕೆ ಗಮನಾರ್ಹ ಆರ್ಥಿಕ ಲಾಭ ಆಗುವುದಿಲ್ಲ ಎಂದು ಹೇಳಲಾಗಿದೆ.

ಇರಾನ್ - ಅಮೆರಿಕ ಸಂಘರ್ಷದ ಪರಿಣಾಮವಾಗಿ ಹಾರ್ಮುಜ್ ಜಲಮಾರ್ಗದ ಮೇಲೆ ಉದ್ವಿಗ್ನತೆ ಹೆಚ್ಚಿದ್ದು, ತೈಲ ಸರಬರಾಜು ಮೇಲೆ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಪೂರೈಕೆ ಕುಸಿತ ಹಾಗೂ ಬೆಲೆ ಅಸ್ಥಿರತೆ ಉಂಟಾಗಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಈ ಹಿನ್ನೆಲೆಗಳಲ್ಲಿ ಜಾಗತಿಕ ಪೂರೈಕೆಯನ್ನು ಸ್ಥಿರಗೊಳಿಸಲು ಅಮೆರಿಕ ಈ ತಾತ್ಕಾಲಿಕ ವಿನಾಯಿತಿ ಕ್ರಮಗಳನ್ನು ಮುಂದುವರಿಸುತ್ತಿದೆ.

Also Read:

ರಾಜ್ಯದ್ಯಂತ ನಾಳೆ ಬಸ್ ಸಂಚಾರ ಯಥಾಸ್ಥಿತಿ : ಮುಷ್ಕರ ವಾಪಸ್ ಪಡೆದ ಸಾರಿಗೆ ನೌಕರರು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online