belagavi news :
ರಷ್ಯಾ ಉಕ್ರೇನ್ ಯುದ್ಧ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ರಷ್ಯಾ ಅಧ್ಯಕ್ಷರ ಹತ್ಯೆಗೆ ಸಂಚು ನಡೆಯುತ್ತಿದೆ ಎಂಬ ವರದಿಗಳ ನಡುವೆಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭದ್ರತೆಯನ್ನು ರಷ್ಯಾದ ಫೆಡರಲ್ ಪ್ರೊಟೆಕ್ಟಿವ್ ಸರ್ವಿಸ್ ಗಣನೀಯವಾಗಿ ಹೆಚ್ಚಿಸಿದೆ. ಈ ಭದ್ರತಾ ಕ್ರಮಗಳ ಪರಿಣಾಮವಾಗಿ ಪುಟಿನ್ ತಮ್ಮ ಅಧಿಕೃತ ನಿವಾಸ ಗಳಿಗಿಂತ ಹೆಚ್ಚು ಸಮಯವನ್ನು ಬಂಕರಗಳಲ್ಲಿ ಕಳೆಯುತ್ತಿದ್ದಾರೆ ಎಂದು ವರದಿಗಳು ಕೇಳುತ್ತಿವೆ. ಜೊತೆಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಪ್ರಮಾಣವು ಕಡಿಮೆಯಾಗಿದೆ. ಅವರ ಸುತ್ತಲಿನ ಸಿಬ್ಬಂದಿ ಗಳಿಗೂ ಭದ್ರತಾ ತಪಾಸನೆ ಕಠಿಣ ಗೊಳಿಸಲಾಗಿದ್ದು , ಯಾವುದೇ ಸಾಧ್ಯತೆಯ ಅಪಾಯವನ್ನು ತಡೆಯಲು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಭದ್ರತಾ ಕಾರಣಗಳಿಂದ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ತಮ್ಮ ಅಧಿಕೃತ ನಿವಾಸಗಳಿಗಿಂತ ಹೆಚ್ಚು ಸಮಯ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಪ್ರಾದೇಶಿಕವಾಗಿ ಹೆಚ್ಚುತ್ತಿರುವ ಸಂಘರ್ಷ ಹಾಗೂ ಅವರ ನಿವಾಸಗಳ ಮೇಲಿನ ಸಾಧ್ಯ ದಾಳಿಗಳ ಆತಂಕದ ಹಿನ್ನೆಲೆಯಲ್ಲಿ, ಮಾಸ್ಕೋ ಸಮೀಪದ ಒ ಬ್ಲಾಸ್ಟ್ ಮತ್ತು ನಾವ್ಗೊರೊಡ್ ಒಬ್ಲಾಸ್ಟ್ ನ ವಾಲ್ಡೈ ಪ್ರದೇಶದಲ್ಲಿರುವ ನಿವಾಸಿಗಳಿಗೆ ಅವರ ಭೇಟಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಪುಟಿನ್ ಬಹುತೇಕ ಸಮಯ ಬಂಕರ್ ಗಳಲ್ಲಿ ವಾಸಿಸಿ, ಅಲ್ಲಿಂದಲೇ ಮಿಲಿಟರಿ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂಬ ಅವರೊಂದಿಗೆ ಪರಿಚಿತರಾಗಿರುವ ಮೂಲಗಳು ಹಾಗೂ ಯುರೋಪಿಯನ್ ಗುಪ್ತಚರಕ್ಕೆ ಹತ್ತಿರವಿರುವ ವ್ಯಕ್ತಿಯನ್ನು ಉಲ್ಲೇಖಿಸಿ ಪೈನಾನ್ಷಿಯಲ್ ವರದಿ ಮಾಡಿದೆ.
ಮಾಸ್ಕೋ: ರಷ್ಯಾ ಉಕ್ರೇನ್ ಸಂಘರ್ಷದ ನಡುವೆ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಹಲವು ದೇಶಗಳಿಂದ ವಿಧಿಸಲಾಗುತ್ತಿರುವ ನಿರ್ಬಂಧಗಳು ಹಾಗೂ ಉಕ್ರೇನ ನ ಡ್ರೋನ್ ದಾಳಿಗಳ ಹೆಚ್ಚುತ್ತಿರುವ ಬೆದರಿಕೆಗಳು ರಷ್ಯಾದಲ್ಲಿ ಭದ್ರತಾ ಆತಂಕವನ್ನು ಹೆಚ್ಚಿಸಿವೆ. ಇದರ ನಡುವೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಖಾತೆಗೆ ಪ್ರಯತ್ನಗಳು ನಡೆಯುತ್ತಿರುವುದಾಗಿ ವರದಿಗಳು ಹರಡುತ್ತಿರುವುದರಿಂದ ಕ್ರೈಮಿನ ಅಧಿಕಾರಿಗಳಲ್ಲಿ ಆತಂಕ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಫೆಡರಲ್ ಪ್ರೊಟೆಕ್ಟಿವ್ ಸರ್ವಿಸ್ ಕಳೆದ ಕೆಲ ತಿಂಗಳುಗಳಲ್ಲಿ ಅಧ್ಯಕ್ಷ ಪುಟಿನವರ ನಿವಾಸ ಹಾಗೂ ಸುತ್ತಮುತ್ತಲಿನ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಿದೆ ಎಂದು ವರದಿಯಾಗಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಕಾಡುತ್ತಿರುವ ಭದ್ರತಾ ಆತಂಕಗಳ ಕುರಿತು ಹಲವು ವರದಿಗಳು ಹೊರ ಬಂದಿದೆ. ವರದಿಗಳ ಪ್ರಕಾರ, ಕೋವಿಡ್ -೧೯ ಸಂಕ್ರಾಮಿಕ ಕಾಲದಿಂದಲೂ ಪುಟಿನ್ ವಿರುದ್ಧದ ಅಸಮಾಧಾನ ಮತ್ತು ವಿರೋಧದ ಅಲೆ ಹೆಚ್ಚಾಗುತ್ತದೆ ಬಂದಿದೆ. ನಂತರ ಉಕ್ರೇನ್ ಜೊತೆಗಿನ ಯುದ್ಧದಿಂದ ಉಂಟಾದ ಜಾಗತಿಕ ನಿರ್ಬಂಧಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸಿದವು ಎಂದು ಹೇಳಲಾಗುತ್ತಿದೆ.
ಇದಕ್ಕೆ ಜೊತೆಯಾಗಿ, ಇತ್ತೀಚಿಗೆ ರಷ್ಯಾದ ವಿರುದ್ಧ ನಡೆದ ಡ್ರೋನ್ ಆಪರೇಷನ್ 'ಸ್ಪೈಡರ್ ವೆಬ್'ಸೇರಿದಂತೆ ಹಲವು ಕಾರ್ಯಾಚರಣೆಗಳು ಅವರ ನಿವಾಸಗಳ ಮೇಲೆ ದಾಳಿಯ ಸಾಧ್ಯತೆ ಹೆಚ್ಚಿಸಬಹುದು ಎಂಬ ಆತಂಕವನ್ನು ಭದ್ರತಾ ವಲಯದಲ್ಲಿ ಹುಟ್ಟಿಸಿವೆ. ಇದೇ ಕಾರಣದಿಂದ ಪುಟಿನವರ ಸುತ್ತಲಿನ ಭದ್ರತೆಯನ್ನು ಅತ್ಯಂತ ಕಠಿಣ ಗೊಳಿಸಲಾಗಿದೆ ಎಂದು ವರದಿಗಳು ಹೇಳುತ್ತವೆ.
ಪುಟಿನ ಸುತ್ತಲಿನ ಭದ್ರತಾ ಆತಂಕಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದ ಫೆಡರಲ್ ಪ್ರೊಟೆಕ್ಟಿವ್ ಸರ್ವಿಸ್ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಕಠಿಣ ಗೊಳಿಸಿದೆ. ಇದರ ಪರಿಣಾಮವಾಗಿ ಅಧ್ಯಕ್ಷ ವ್ಲಾದಿಮಿರ್ ಪುಟಿನವರು ಸಾರ್ವಜನಿಕ ಬೇಟೆಯನ್ನು ಗಣನೀಯವಾಗಿ ಕಡಿಮೆ ಮಾಡಿರುವುದು ವರದಿಯಾಗಿದೆ. ಅವರನ್ನು ಭೇಟಿ ಮಾಡುವವರಿಗಾಗಿ ಭದ್ರತಾ ತಪಾಸನೆಗಳನ್ನು ಹೆಚ್ಚುಕಟ್ಟಿನ ಗೊಳಿಸಲಾಗಿದ್ದು, ಪುಟಿನ ಜೊತೆ ನಿಕಟವಾಗಿ ಕೆಲಸ ಮಾಡುವ ಅಡುಗೆಯವರು, ಛಾಯಾಗ್ರಹಕರು ಮತ್ತು ಅಂಗರಕ್ಷಕರು ಸೇರಿದಂತೆ ಸಿಬ್ಬಂದಿಗಳು ಹೊಸ ನಿರ್ಬಂಧಗಳು ಅನ್ವಯವಾಗುತ್ತಿವೆ. ವರದಿಗಳ ಪ್ರಕಾರ, ಪುಟಿನ ಸಮೀಪದಲ್ಲಿರುವಾಗ ಮೊಬೈಲ್ ಫೋನ್ ಗಳು ಅಥವಾ ಇಂಟರ್ನೆಟ್ ಸಕ್ರಿಯ ಸಾಧನಗಳನ್ನು ಬಳಸುವುದಕ್ಕೆ ಅನುಮತಿ ಇಲ್ಲ, ಜೊತೆಗೆ ಈ ಸಿಬ್ಬಂದಿಗೆ ಸಾರ್ವಜನಿಕ ಸಾರಿಗೆ ಬಳಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವರದಿಗಳಲ್ಲಿ ಉಲ್ಲೇಖವಾಗಿರುವ ಹಲವು ಭದ್ರತಾ ಬೆದರಿಕೆಗಳು ಮತ್ತು ಗುಪ್ತಚರ ಮಾಹಿತಿಗಳು ಸ್ವತಂತ್ರವಾಗಿ ಪರಿಶೀಲಸಲ್ಪಟ್ಟಿಲ್ಲವಾದರೂ, ಪ್ರಾದೇಶಿಕವಾಗಿ ಹೆಚ್ಚುತ್ತಿರುವ ಉದ್ವಿಗ್ನತೆ ಪುಟಿನ್ ಸುತ್ತಲಿನ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಿರುವುದನ್ನು ಸೂಚಿಸುತ್ತಿದೆ.
ಇದಕ್ಕೆ ಜೊತೆಯಾಗಿ ಕಳೆದ ಡಿಸೆಂಬರ್ ನಲ್ಲಿ ರಷ್ಯಾ ಸೇನೆಯ ಲೆಫ್ಟಿನೆಂಟ್ ಜನರಲ್ ಫನಿಲ್ ಸರ್ವರೋವ್ ಅವರ ಕಾರಿನ ಕೆಳಗೆ ಇರಿಸಲಾಗಿದ್ದ ಬಾಂಬ್ ಸ್ಪೋಟದಿಂದ ಅವರು ಸಾವನ್ನಪ್ಪಿದ ಘಟನೆ ಭದ್ರತಾ ವಲಯದಲ್ಲಿ ಆತಂಕ ಹೆಚ್ಚಿಸಿದೆ.
ಈ ಘಟನೆ ಪುಟಿನ್ ನಿವಾಸದ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಉನ್ನತ ಅಧಿಕಾರಿಗಳ ಭದ್ರತೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿವೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಪುಟಿನ್ ಹತ್ಯೆಯ ಸಂಚುಗಳ ಬಗ್ಗೆ ಕೇಳಿ ಬರುತ್ತಿರುವ ವರದಿಗಳು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರ ಗೊಳಿಸುತ್ತಿವೆ. ಜೊತೆಗೆ ಜನವರಿಯಲ್ಲಿ ವೆನಿಜುವಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ್ದ ಘಟನೆ ನಂತರ ಮಾಸ್ಕೋದಲ್ಲಿ ಭದ್ರತಾ ಆತಂಕಗಳು ಹೆಚ್ಚಾಗಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಷ್ಯಾದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.
Also Read:
ಅಭಿಮಾನೋತ್ಸವದಲ್ಲಿ ಬಿಎಸ್ ವೈ ಲಕ್ಕಿ ಕಾರಿನ ಭರ್ಜರಿ ಪ್ರದರ್ಶನ