belagavi news:
ಇಂಡಿಯನ್ ಪ್ರೀಮಿಯರ್ ಲೀಗ್ 20260ರ 49ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈದರಾಬಾದ್ ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಆತಿಥೇಯ ಹೈದರಾಬಾದ್ ಭರ್ಜರಿ ಜಯಸಾಧಿಸಿದೆ.ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಗಳಲ್ಲಿ ಬೃಹತ್ ಮೊತ್ತ ಕಲೆ ಹಾಕಿ ಪಂಜಾಬ್ ಕಿಂಗ್ಸ್ ಗೆ 236 ರನ್ ಗಳ ಕಠಿಣ ಗುರಿ ನೀಡಿತು. ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಉತ್ತಮ ಪ್ರಯತ್ನ ಮಾಡಿದರು 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 202 ರನ್ ಗಳಷ್ಟೇ ಗಳಿಸಲು ಸಾಧ್ಯವಾಯಿತು. ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ 33 ರನ್ ಗಳ ಅಂತರದಲ್ಲಿ ಭರ್ಜರಿ ಜಯಸಾಧಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2026ರ 49ನೇ ಪಂದ್ಯದಲ್ಲಿ ಹೈದರಾಬಾದ್ ತಂಡದ ಮೊದಲ ಬ್ಯಾಟಿಂಗ್ ಕಾಯ್ದುಕೊಂಡು ನಿಗದಿತ 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 235 ರನ್ ಗಳ ಬೃಹತ್ ಮತ ದಾಖಲಿಸಿದೆ. ಆರಂಭದಲ್ಲೇ ತಂಡಕ್ಕೆ ಉತ್ತಮ ಚಾಲನೆ ನೀಡಿರುವ ಅಭಿಷೇಕ್ ಶರ್ಮ ಮತ್ತು ಟ್ರಾವಿಸ್ ಹೆಡ್. ಇಬ್ಬರು ಕೇವಲ 3.3 ಓವರ್ ಗಳಲ್ಲಿ 54 ರನ್ ಗಳ ವೇಗದ ಜೊತೆಯಾಟ ನಡೆಸಿದರು.
ಅಭಿಷೇಕ್ ಶರ್ಮ 13 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು 35 ರನ್ ಗಳಿಸಿ ಔಟಾದರು. ನಂತರ ಟ್ರಾವಿಸ್ ಹೆಡ್ ಮತ್ತು ಇಶಾಂತ್ 2ನೆಯ ವಿಕೇಟಿಗೆ 19 ಎಸೆತಗಳಲ್ಲಿ 30 ರನ್ ಸೇರಿಸಿದರು. ಟ್ರಾವಿಸ್ 19 ಎಸೆತಗಳಲ್ಲಿ 38 ರನ್ ಗಳಿಸಿ ಮೂರು ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ ಪೆವಿಲಿಯನ್ ಗೆ ಮರಳಿದರು.
ಮಧ್ಯ ಕ್ರಮದಲ್ಲಿ ಇಶಾನ್ ಕಿಶನ್ ಮತ್ತು ಹೆನ್ರಿ ಕ್ಲಾಸೆನ್ ತಂಡದ ವೇಗ ನೀಡಿದರು. ಇಬ್ಬರು ಸೇರಿ 48 ಎಸೆತಗಳಲ್ಲಿ 88 ರನ್ ಗಳ ಜೊತೆ ಆಟ ನಡೆಸಿದರು. ಇಶಾನ್ ಕಿಶನ್ 32 ಎಸೆತಗಳಲ್ಲಿ 55 ರನ್ ಗಳಿಸಿ 46 ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಅದ್ಭುತ ಫಾರ್ಮ್ ತೋರಿಸಿದ ಹೆನ್ರಿ ಕ್ಲಾಸೆನ್ 43 ಎಸೆತಗಳಲ್ಲಿ 69 ರನ್ ಗಳನ್ನು ಅಜಯವಾಗಿ ದಾಖಲಿಸಿದರು. ನಂತರ ನಿತೀಶ್ ಕುಮಾರ್ ರೆಡ್ಡಿ ಅವರೊಂದಿಗೆ 32 ಎಸೆತಗಳಲ್ಲಿ 63 ರನ್ ಗಳ ಜೊತೆಯಾಟ ನಡೆಸಿದರು. ನಿತೀಶ್ ರೆಡ್ಡಿ 13 ಎಸೆತಗಳಲ್ಲಿ 29 ರನ್ ಗಳಿಸಿ ಅಜೇಯರಾ ಗುಳಿದರು. ಪಂಜಾಬ್ ಕಿಂಗ್ಸ್ ಪರ ಅರ್ಶ್ ದೀಪ್ ಸಿಂಗ್, ಲಾಕಿ ಪರ್ಗುಸನ್, ಯುಜೇಂದ್ರ ಚಾಹಲ್ ಮತ್ತು ವಿಜಯ್ ಕುಮಾರ್ ವೈಶಾಕ್ ತಲಾ ಒಂದು ವಿಕೆಟ್ ಪಡೆದರು. ಈ ಬೃಹತ್ ಮೊತ್ತದೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಭರ್ಜರಿ ಸವಾಲು ನೀಡಿದೆ.
ಸನ್ ರೈಸರ್ಸ್ ಹೈದರಾಬಾದ್ ನೀಡಿದ ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಲ್ಲಿ ಕುಸಿತ ಕಂಡಿತು. ಪ್ರಿಯಾಂಶ್ ಆರ್ಯ (1) ಮತ್ತು ಪ್ರಭ್ಸಿಮ್ರಾನ್(3) ಸಿಂಗ್ ಬೇಗನೇ ಔಟ್ ಆಗಿ ತಂಡಕ್ಕೆ ದೊಡ್ಡ ಆಘಾತ ನೀಡಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ 5 ರನ್ಗಳಿಗೆ ನಿರ್ಗಮಿಸಿದರು. ಆದರೆ ಕೂಪರ್ ಕೊನೊಲಿ ಮಾತ್ರ ಒಂದೇ ಬದಿಯಲ್ಲಿ ಹೋರಾಟ ಮುಂದುವರೆಸಿದರು. ಅವರು 59 ಎಸೆತಗಳಲ್ಲಿ ಅಜಯ 107 ರನ್ ಗಳಿಸಿ ಅದ್ಭುತ ಶತಕ ದಾಖಲಿಸಿದರು. ಅವರ ಇನ್ನಿಂಗ್ಸ್ ನಲ್ಲಿ ಏಳು ಬೌಂಡರಿ ಹಾಗೂ ೮ ಸಿಕ್ಸರ್ ಸೇರಿದವು. ಆದರೆ ಅವರ ಪ್ರಯತ್ನಕ್ಕೆ ಉಳಿದ ಬ್ಯಾಟ್ಸ್ಮನ್ ಗಳಿಂದ ಸಾಕಷ್ಟು ಬೆಂಬಲ ಸಿಗಲಿಲ್ಲ. ಕೊನೊಲಿ ಹೊರತುಪಡಿಸಿ ಮಾರ್ಕ ಸ್ಟೊಯಿನಿಸ 28, ಸೂರ್ಯಾಂಶ ಶೆಡ್ಜ್ 25 ಮತ್ತು ಮಾರ್ಕೊ ಯಾನ್ಸನ್ 19 ರನ್ಗಳನ್ನು ಗಳಿಸಿದರು.
ಸನ್ ರೈಸರ್ಸ್ ಹೈದರಾಬಾದ್ ಬೌಲಿಂಗ್ ವಿಭಾಗದಲ್ಲಿ ಪ್ಯಾ ಟ್ ಕಮಿನ್ಸ್ ಮತ್ತು ಶಿವಂ ಕುಮಾರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ನಿತೀಶ್ ರೆಡ್ಡಿ, ಇಶಾನ್ ಮಲಿಂಗ ಮತ್ತು ಶಬೀರ್ ಹುಸೇನ್ ತಲಾ ಒಂದು ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್ ಈ ಪಂದ್ಯದಲ್ಲಿ ಸೋಲುವ ಮೂಲಕ ಟೂರ್ನಿಯಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿದೆ. ಇದರಿಂದ ಪಂಜಾಬ್ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಇನ್ನೊಂದಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನಕ್ಕೆ ಇಳಿದಿದೆ. ಈ ಗೆಲುವಿನೊಂದಿಗೆ ಸನ್ ರೈಸರ್ಸ್ ಹೈದರಾಬಾದ್ ಈ ಋತುವಿನಲ್ಲಿ ಏಳನೇ ಜಯ ದಾಖಲಿಸಿದ್ದು, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಏರಿದೆ.
Also Read:
ವರುಣನ ಆರ್ಭಟ ಮುಂದುವರಿಕೆ : ಬೆಂಗಳೂರಿನಲ್ಲಿ ಇಂದೂ ಮಳೆ, ಕೊಡಗು ಹಾಸನದಲ್ಲಿ ಹವಾಮಾನ ಬದಲಾವಣೆ!