<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Education

ಎಸ್.ಎಸ್.ಎಲ್.ಸಿ ದ್ವಿತೀಯ ಪರೀಕ್ಷೆ ಪಲಿತಾಂಶ ಪ್ರಕಟ : ಬೆಳಗಾವಿ ವಿಭಾಗದಲ್ಲಿ ಹಾವೇರಿ ನಂ.1

ಎಸ್.ಎಸ್.ಎಲ್.ಸಿ ದ್ವಿತೀಯ ಪರೀಕ್ಷೆ ಪಲಿತಾಂಶ ಪ್ರಕಟ : ಬೆಳಗಾವಿ ವಿಭಾಗದಲ್ಲಿ ಹಾವೇರಿ ನಂ.1
Summary: Haveri district has achieved remarkable achievement in the overall results of SSLC First and Second exams. Haveri, which has secured first position in Belgaum Division, has also risen to 7th position at the state level, proving its leadership in the field of education once again. The hard work, education, guidance and cooperation of the students, are the main reasons for this achievement.

belagavi news :

ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಹಾವೇರಿ ಜಿಲ್ಲೆ ಮಿಂಚು ಸಾಧನೆ !

ಪ್ರಸ್ತುತ ಪ್ರಕಟಗೊಂಡಿರುವ ಎಸೆಸೆಲ್ಸಿ ಎರಡನೇ ಫಲಿತಾಂಶ ದಲ್ಲಿ ಹಾವೇರಿ ಜಿಲ್ಲೆ ಬೆಳಗಾವಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ. ಮೊದಲ ಮತ್ತು ಎರಡನೇ ಪರೀಕ್ಷೆಗಳ ಒಟ್ಟಾರೆ ಫಲಿತಾಂಶ ಆಧಾರದಲ್ಲಿ ಹಾವೇರಿ ಜಿಲ್ಲೆ, ರಾಜ್ಯಮಟ್ಟದಲ್ಲಿ ಏಳನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಹಾವೇರಿ ಜಿಲ್ಲೆ ಎಸ್.ಎಸ್.ಎಲ್.ಸಿ ಮೊದಲ ಪರೀಕ್ಷೆಯಲ್ಲಿ ಶೇ.98.87 ಫಲಿತಾಂಶ ದಾಖಲಿಸಿತ್ತು. ಹಾಗೂ ಎರಡನೇ ಪರೀಕ್ಷೆಯಲ್ಲಿ ಜಿಲ್ಲೆಯ 247 ಶಾಲೆಗಳು ಶೇ. ೧೦೦ ರಷ್ಟು ಫಲಿತಾಂಶ ಸಾಧಿಸಿದೆ. ಮರು ಮೌಲ್ಯಮಾಪನ ಹಾಗೂ ಮರು ಎಣಿಕೆ ನಂತರ ಜಿಲ್ಲೆಯ ಫಲಿತಾಂಶ ಶೇ. 97.17 ಕ್ಕೆ ತಲುಪಿದ್ದು, 265 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿರುವುದು ವಿಶೇಷ.

Sponsored

ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಸಮರ್ಪಿತ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರದಿಂದ ಈ ಸಾಧನೆವಾಗಿದೆ ಎಂದು ಹಾವೇರಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ್ ದಂಡಿನ್ ತಿಳಿಸಿದ್ದಾರೆ. ಜಿಲ್ಲೆಯ ಶಿಕ್ಷಣ ಕ್ಷೇತ್ರದ ಈ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಎರಡನೇ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ ಶೇ.78 ಮೊದಲ ಮತ್ತು ಎರಡನೇ ಪರೀಕ್ಷೆಗಳ ಫಲಿತಾಂಶ ಕೂಡಿಸಿದಾಗ ಶೇ. 19.18 ಆಗುತ್ತದೆ. ಬೆಳಗಾವಿ ವಿಭಾಗಕ್ಕೆ ಹಾವೇರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಏಳನೆಯ ಸ್ಥಾನದಲ್ಲಿದೆ. ಹಾವೇರಿ ಜಿಲ್ಲೆಯಲ್ಲಿ 2026 ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 265 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿದೆ. ಅದರಲ್ಲಿ 124 ಸರ್ಕಾರಿ ಶಾಲೆಗಳು, 63 ಅನುದಾನಿತ ಶಾಲೆಗಳು ಮತ್ತು 78 ಅನುದಾನ ರಹಿತ ಶಾಲೆಗಳಿವೆ.

ಪ್ರಸ್ತುತ ಎಸ್.ಎಸ್.ಎಲ್.ಸಿ ಪರೀಕ್ಷಾ ಪಲಿತಾಂಶದಲ್ಲಿ ಹಾವೇರಿ ಜಿಲ್ಲೆ ರಾಜಮಟ್ಟದಲ್ಲಿ 7ನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಕಳೆದ ಹಲವು ವರ್ಷಗಳಿಂದ ಎರಡಕ್ಕಿಂತ ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಿಲ್ಲೆ, ಈ ಬಾರಿ ಒಂದಂಕಿ ಶ್ರೇಯಾಂಕಕ್ಕೆ ಏರಿರುವುದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಈ ಸಾಧನೆ ಹಿಂದಿನ ಕಾರಣಗಳನ್ನು ವಿವರಿಸಿದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ್ ದಂಡಿನ್, ವಿದ್ಯಾರ್ಥಿಗಳ ಕಲಿಕಾ ಮತ್ತು ಸುಧಾರಣೆಗೆ ಕೈಗೊಂಡ ವಿಶೇಷ ಕ್ರಮಗಳೆ ಫಲಿತಾಂಶದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿವೆ ಎಂದು ಹೇಳಿದರು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳನ್ನು ಆಯೋಜಿಸಲಾಗಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬೋಧನೆ ಮತ್ತು ಮಾರ್ಗದರ್ಶನ ನೀಡಲಾಗಿದೆ.

Sponsored

'ಮಿಷನ್ 40' ಯೋಜನೆಯಡಿ ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಠ 40 ಆಂತರಿಕ ಅಂಕಗಳನ್ನು ಗಳಿಸುವ ಗುರಿ ನಿಗದಿಪಡಿಸಲಾಗಿತ್ತು. ಪೋಷಕರ ಸಭೆಗಳನ್ನು ನಡೆಸಿ ಮಕ್ಕಳ ಶಿಕ್ಷಣ ಮತ್ತು ಫಲಿತಾಂಶದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು. ವಿದ್ಯಾರ್ಥಿಗಳು ನಿಯಮಿತವಾಗಿ ಅಧ್ಯಯನ ಮಾಡುವಂತೆ ಹಾಗೂ ಅವರ ಚಟುವಟಿಗಳ ಮೇಲೆ ಗಮನ ಹರಿಸುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಇಲಾಖೆಯಿಂದ ರೂಪಿಸಲಾದ 29 ಅಂಶಗಳ ಮಾರ್ಗಸೂಚಿಯನ್ನು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಪಾಠದಾರಿತ ವ್ಯವಸ್ಥೆ, ಇಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಅಭ್ಯಾಸ, ಗುಂಪು ಬೋಧನೆ ಹಾಗೂ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮರು ಬೋಧನೆ ನಡೆಸುವಂತಹ ಕ್ರಮಗಳು ಪರಿಣಾಮಕಾರಿ ಎನಿಸಿವೆ.

ಹಿಂದಿನ ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಒಂದು ಮಾದರಿ ಪರೀಕ್ಷೆ ಮಾತ್ರ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಮೂರು ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಲಾಯಿತು. ಪ್ರತಿದಿನ ಗುಂಪು ಅಧ್ಯಯನ ಮತ್ತು ನಿರಂತರ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲಾಗಿದ್ದು, ಇದರ ಫಲವಾಗಿ ಜಿಲ್ಲೆ ರಾಜ್ಯ ಮಟ್ಟದಲ್ಲಿ ಏಳನೇ ಸ್ಥಾನ ಗಳಿಸಲು ಸಾಧ್ಯವಾಗಿದೆ ಎಂದು ಡಿಡಿಪಿಐ ಮೋಹನ್ ದಂಡಿನ್ ತಿಳಿಸಿದ್ದಾರೆ.

ಸಾಧನೆಯ ಹಿಂದೆ ಶಿಕ್ಷಕರ ಶ್ರಮ : ಹಾವೇರಿ ಜಿಲ್ಲೆ ಯಶಸ್ಸಿನ ಗುಟ್ಟು

ಹಾವೇರಿ ಜಿಲ್ಲೆ ಈ ವರ್ಷ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಇದರ ಹಿಂದೆ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರ ಅವಿರತ ಪರಿಶ್ರಮ ಪಾತ್ರ ವಹಿಸಿದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ಶಿಕ್ಷಕರು ಕೈಗೊಂಡ ವಿಶೇಷ ಪ್ರಯತ್ನಗಳು ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ಬಲ ತುಂಬಿದೆ.

Sponsored

ಶೇ.100 ಫಲಿತಾಂಶ ದಾಖಲಿಸಿದ ಹಾವೇರಿ ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ. ಬೀರೇಶ್ ಬೇವಿನಮರದ ಮಾತನಾಡಿ, ಹಲವು ವರ್ಷಗಳಿಂದ ನೂರಕ್ಕೆ ನೂರು ಫಲಿತಾಂಶದ ಗುರಿಯೊಂದಿಗೆ ಕೆಲಸ ಮಾಡುತಿದ್ದೆವು. ಈ ಬಾರಿ ಆ ಗುರಿ ಸಾಕಾರಗೊಂಡಿದ್ದು, ಶಿಕ್ಷಕರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತರಗತಿಯಲ್ಲಿ ಎಲ್ ಪಿ ಎ ಅಳವಡಿಸಿಕೊಂಡು ಪಾಠಗಳನ್ನು ಪರಿಣಾಮಕಾರಿಯಾಗಿ ಬೋಧಿಸಲಾಗಿತ್ತು. ಪಾಠಗಳ ಕುರಿತು ಹೆಚ್ಚಿನ ಹೊತ್ತು ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ವಿಷಯಗಳು ಸುಲಭವಾಗಿ ಅರ್ಥವಾಗುವಂತಾಯಿತು. ಅಪರ ಆಯುಕ್ತರು ಜಾರಿಗೊಳಿಸಿದ್ದ 29 ಅಂಶಗಳ ಕಾರ್ಯಕ್ರಮಗಳನ್ನೂ ಶಾಲೆಯಲ್ಲಿ ಕಟ್ಟುನೀಟಾಗಿ ಅನುಷ್ಠಾನಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಇದು ಹೆಚ್ಚಿನ ನೆರವು ನೀಡಿದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಅಭ್ಯಾಸ, ಲಾಗಿನ್ ಪ್ರಶ್ನೆಗಳ ಪರಿಹಾರ ಹಾಗೂ ನಿರಂತರ ಮೌಲ್ಯಮಾಪನ ನಡೆಸಲಾಗಿತ್ತು. ಇಲಾಖೆಯು ಕಲಿಕೆಯನ್ನು ಪರಿಣಾಮಕಾರಿಯಾಗಿ ರೂಪಿಸಲು ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಸಾಮಾನ್ಯ ರಜಾ ದಿನಗಳಲ್ಲಿಯೂ ಹೆಚ್ಚುವರಿ ತರಬೇತಿಗಳನ್ನು ಆಯೋಜಿಸಿತು. ಶನಿವಾರ ಅರ್ಧ ದಿನದ ಬದಲಾಗಿ ಪೂರ್ಣ ದಿನ ಹಾಗೂ ಭಾನುವಾರಗಳಲ್ಲಿಯೂ ವಿಶೇಷ ತರಗತಿಗಳನ್ನು ನಡೆಸಲಾಗಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಇರುವುದರಿಂದ ಶಿಕ್ಷಕರೇ 22 ಗ್ರಾಮಗಳಿಗೆ ಭೇಟಿ ನೀಡಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು. ವಿದ್ಯಾರ್ಥಿಗಳ ಶಿಕ್ಷಣದ ಮಹತ್ವ, ನಿಯಮಿತ ಹಾಜರಾತಿ ಮತ್ತು ಪರೀಕ್ಷಾ ಸಿದ್ಧತೆಯ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು. ವಿಶೇಷ ತರಗತಿಗಳು, ಗುಂಪು ಅಧ್ಯಯನ ಮತ್ತು ನಿರಂತರ ಪರೀಕ್ಷೆಗಳು ವಿದ್ಯಾರ್ಥಿಗಳ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಶಾಲೆಗೆ ಶೇ.100 ಫಲಿತಾಂಶ ತಂದುಕೊಟ್ಟಿವೆ ಎಂದು ಡಾ. ವೀರೇಶ್ ಬೇವಿನಮರದ ತಿಳಿಸಿದ್ದಾರೆ.

Sponsored

ಹೆಚ್ಚಿನ ದಾಖಲಾತಿ: ಶೇಕಡ 100 ಫಲಿತಾಂಶ ಶಾಲೆಗಳತ್ತ ಪೋಷಕರ ಒಲವು

ಈ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಶೇಕಡಾ 100 ಸಾಧನೆ ಮಾಡಿದ ಶಾಲೆಗಳತ್ತ ಪೋಷಕರ ಆಸಕ್ತಿ ಗಮನಾರ್ಹವಾಗಿ ಹೆಚ್ಚಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿರುವ ಶಾಲೆಗಳನ್ನು ಹುಡುಕಿ ತಮ್ಮ ಮಕ್ಕಳಿಗೆ ಪ್ರವೇಶ ಕಲ್ಪಿಸಲು ಪೋಷಕರು ಮುಂದಾಗುತ್ತಿದ್ದಾರೆ. ವಿಶೇಷವಾಗಿ 8ನೇ ತರಗತಿಯಿಂದಲೇ ಉತ್ತಮ ಫಲಿತಾಂಶ ನೀಡುವ ಶಾಲೆಗಳನ್ನು ಆಯ್ಕೆ ಮಾಡಿ ದಾಖಲಾತಿ ಮಾಡಿಸುವ ಪ್ರವೃತ್ತಿ ಹೆಚ್ಚಾಗಿದೆ.

ಹಾವೇರಿ ಜಿಲ್ಲೆಯ ಶೈಕ್ಷಣಿಕ ಸಾಧನೆಯ ಪರಿಣಾಮವಾಗಿ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಏರಿಕೆಯಾಗಿದೆ. ಶೇಕಡಾ ನೂರರ ಫಲಿತಾಂಶ ಪಡೆದ ಶಾಲೆಗಳಲ್ಲಿನ ಶಿಸ್ತು ಗುಣಮಟ್ಟದ ಬೋಧನೆ ಮತ್ತು ವಿದ್ಯಾರ್ಥಿಗಳ ಮೇಲಿನ ವಿಶೇಷ ಕಾಳಜಿ ಪೋಷಕರ ವಿಶ್ವಾಸವನ್ನು ಹೆಚ್ಚಿಸಿದೆ.

ಹಾವೇರಿ ಉರ್ದು ಪ್ರೌಢ ಶಾಲೆಯಲ್ಲಿ ಈಗಾಗಲೇ ತಮ್ಮ ಇಬ್ಬರು ಮಕ್ಕಳನ್ನು ಓದಿಸುತ್ತಿರುವ ದಾವಲ್ ಸಾಬ್, ಈ ವರ್ಷ ತಮ್ಮ ಮೂರನೇ ಮಗಳನ್ನು ಅದೇ ಶಾಲೆಗೆ ಸೇರಿಸಿದ್ದಾರೆ. "ಈ ಶಾಲೆ ಈ ಬಾರಿ ಶೇ. ೧೦೦ ಫಲಿತಾಂಶ ಪಡೆದಿದೆ. ನನ್ನ ಮಗಳನ್ನು ಇಲ್ಲಿಯೇ ಪ್ರವೇಶ ಮಾಡಿದ್ದೇನೆ. ಶಿಕ್ಷಕರು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಬೋಧನೆ ಮಾಡುತ್ತಾರೆ. ಶಿಕ್ಷಣದ ಗುಣಮಟ್ಟ ಉತ್ತಮವಾಗಿದೆ. ಆದರಿಂದ ನನ್ನ ಪರಿಚಯದವರೆಗೂ ಇದೇ ಶಾಲೆಯಲ್ಲಿ ಮಕ್ಕಳನ್ನು ದಾಖಲಿಸಲು ಸಲಹೆ ನೀಡಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

Sponsored

Also Read:

ಉದ್ದವ್ ಬಣಕ್ಕೆ ಹೊಸ ಸಂಕಷ್ಟ? ಸ್ಪೀಕರ್ ಗೆ ಪತ್ರ ಬರೆದ ಯುಬಿಟಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online