ರಾಜ್ಯದ ಎರಡನೇ ಅತಿ ದೊಡ್ಡ ಮಾರಿ ಜಾತ್ರೆ ಎಂದು ಪ್ರಖ್ಯಾತಿ ಹೊಂದಿರುವ ಸಾಗರದ ಮಾರಿಕಾಂಬಾ ಜಾತ್ರೆ ಮಂಗಳವಾರದಿಂದ ಶುರುವಾಗಿದೆ. ಮಾರಿಕಾಂಬ ದೇವಿಯ ತವರು ಮನೆಯು ಸಾಗರದ ಮಾರಿಕಾಂಬಾ ದೇವಾಲಯದ ಪಕ್ಕದಲ್ಲಿಯೇ ಇದೆ ಅಲ್ಲಿ ತಾಯಿಗೆ ದೃಷ್ಟಿ ಇಡುವ ಶಾಸ್ತ್ರದ ಮೂಲಕ ಜಾತ್ರೆಯು ಆರಂಭವಾಗುತ್ತದೆ. ಪರದೆಯನ್ನು ಬಿಟ್ಟು ದೇವಿಗೆ ಅಲಂಕಾರ ಮಾಡಿದ ನಂತರ, ದೇವಿಗೆ ದೃಷ್ಟಿ ಇಡುತ್ತಿದ್ದಂತೆಯೇ ಪರದೆಯನ್ನು ತೆರೆಯಲಾಯಿತು. ಅದೇ ಸಂದರ್ಭದಲ್ಲಿ ದೇವಿಗೆ ಚಿನ್ನಾಭರಣಗಳಿಂದ ಶೃಂಗಾರ ಮಾಡಿ ಮಾಡಲಾಗುತ್ತದೆ.
ದೇವಿಯ ದರ್ಶನ ಪಡೆಯಲು ಬೆಳಗಿನ ಜಾವದಿಂದಲೇ ಕಿಲೋಮೀಟರ್ ಗಟ್ಟಲೆ ದೂರದಿಂದ ಸಾಲಿನಲ್ಲಿ ನಿಂತು ಸಾವಿರಾರು ಭಕ್ತರು ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಿದ್ದಾರೆ. ಮಂಗಳವಾರ ರಾತ್ರಿ ತನಕ ಭಕ್ತರಿಗೆ ತವರು ಮನೆಯಲ್ಲಿ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ತಡರಾತ್ರಿ ನಂತರ ದೇವಿಯನ್ನು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ನಂತರ ಗಂಡನ ಮನೆಗೆ ದೇವಿಯನ್ನು ಕರೆತರಲಾಗುತ್ತದೆ.
ಮುಂಜಾನೆ ಸಮಯದಲ್ಲಿ ದೇವಿಯನ್ನು ಗಂಡನ ಮನೆಯಲ್ಲಿ ಆವರಣದಲ್ಲಿ ಬೃಹತ್ ಪೆಂಡಾಲ್ ನಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ನಂತರ ಅನೇಕರು ತಮ್ಮ ಹರಕೆಯಂತೆ ಬೇವಿನ ಉಡುಗೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ, ದೇವಿಯನ್ನು ದರ್ಶನ ಮಾಡಿಕೊಂಡು ಹೋಗುತ್ತಾರೆ ಮತ್ತು ನೈವೇದ್ಯವನ್ನು ಸಹ ಅವಳಿಗೆ ಅರ್ಪಿಸುತ್ತಾರೆ, ನಂತರ ಮನೆಗೆ ಹೋಗಿ ಮಾಡಿದ ಅಡುಗೆಯನ್ನು ಮನೆಯ ಸದಸ್ಯರೆಲ್ಲರೂ ಕೂಡಿ ಸಂಭ್ರಮದಿಂದ ಭೋಜನ ಸ್ವೀಕರಿಸುತ್ತಾರೆ.
ಈ ಸಾಗರದ ಮಹಾರಿಕಾಂಬಾ ದೇವಿಯ ಜಾತ್ರೆಯು ಒಂಬತ್ತು ದಿನಗಳ ಕಾಲ ನಡೆಯುತ್ತದೆ. ಜಾತ್ರೆ ಸಂದರ್ಭದಲ್ಲಿ ಕೆಲವು ನಿಷೇಧಗಳನ್ನು ಮಾಡಲಾಗಿರುತ್ತದೆ 9 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿರುತ್ತದೆ. ಹಗಲು ರಾತ್ರಿ ಎನ್ನದೆ ಎಲ್ಲಾ ಸಮಯದಲ್ಲೂ ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಷೇಧವಾಗಿರುತ್ತದೆ. ಪೊಲೀಸ್ ಇಲಾಖೆಯು ಬಿಗಿಬದ್ರತೆಯಿಂದ ಈ ವ್ಯವಸ್ಥೆಯನ್ನು ಕಟ್ಟುವಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ.
ಪ್ರಸಿದ್ಧ ಸಾಗರದ ಮಾರಿಕಾಂಬಾದೇವಿ ಜಾತ್ರೆಯು ಅತಿ ಅದ್ದೂರಿಯಾಗಿ ನಡೆಯುವ ಸಲುವಾಗಿ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಜಾತ್ರಾ ಮಹೋತ್ಸವದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಶಿರಸಿಯ ಮಾರಿಕಾಂಬ ಜಾತ್ರೆಯು ರಾಜ್ಯದ ಅತಿ ದೊಡ್ಡ ಜಾತ್ರೆಯಾಗಿದೆ. ಸಾಗರದ ಮಾರಿಕಾಂಬ ಜಾತ್ರೆಯು ರಾಜ್ಯದ ಎರಡನೇ ಅತಿ ದೊಡ್ಡ ಮಾರಿ ಜಾತ್ರೆಯೆಂದು ಹೆಸರುವಾಸಿಯಾಗಿದೆ. ಆದ್ದರಿಂದ ಲಕ್ಷಾಂತರ ಜನ ಜನರು ದರ್ಶನಕ್ಕೆ ಆಗಮಿಸುತ್ತಾರೆ.
ಅದರ ಸಲುವಾಗಿ ತಾಲೂಕಾ ಆಡಳಿತವು ಜನರಿಗೆ ಅನುಕೂಲವಾಗುವಂತೆ ಭಕ್ತರು ಆಗಮಿಸುತ್ತಿರುವ ಸಾಲಿನ ಮೇಲೆ ನೆರಳಿಗೆ ಪರದೆಯನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈಗ ಬಿಸಿಲಿನ ಕಾಲ ಹೆಚ್ಚು ಬಿಸಿಲಿನ ಧಗೆ ಇರುವುದರಿಂದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ತಾಲೂಕು ಆಡಳಿತವು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ದೇವಿಯ ತವರು ಮನೆಯಲ್ಲಿ ಶಾಸಕರೇ ಮುಂದೆ ನಿಂತು ದೇವಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಟ್ಟರು. 9 ದಿನಗಳ ಕಾಲ ಅತಿ ವಿಜ್ರಂಭಣೆಯಿಂದ ಈ ಪ್ರಸಿದ್ಧ ಸಾಗರದ ಮಾರಿಕಾಂಬಾ ದೇವಿ ಜಾತ್ರೆಯು ನಡೆಯುತ್ತದೆ. ಇದು ರಾಜ್ಯದ ಅತಿ ದೊಡ್ಡ ಎರಡನೆಯ ಮಾರಿ ಜಾತ್ರೆ ಎಂದು ಪ್ರಸಿದ್ಧವಾಗಿದೆ. ಲಕ್ಷಾಂತರ ಜನರು ಈ ಜಾತ್ರೆಗೆ ಆಗಮಿಸುತ್ತಾರೆ. ದೇವಿಯ ಆಶೀರ್ವಾದವನ್ನು ಪಡೆದು ಎಲ್ಲರೂ ಧನ್ಯರಾಗುತ್ತಾರೆ.
ಇನ್ನಷ್ಟು ಓದಿರಿ:
Union Budget Big Announcement: ವಿದ್ಯಾರ್ಥಿನಿಯರಿಗೆ ಹಾಸ್ಟೆಲ್, ರಾಜ್ಯದಲ್ಲಿ 5 ವಿವಿ ಟೌನ್ ಶಿಪ್ ಸ್ಥಾಪನೆ