<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಶಾರುಖ್ ಖಾನ್ ಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ : ತುಳು ಮಾತು,ಬಾಲ್ಯದ ಫೋಟೋ ಪ್ರದರ್ಶಿಸಿ ಬಾವುಕರಾದ ನಟ

ಶಾರುಖ್ ಖಾನ್ ಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ : ತುಳು ಮಾತು,ಬಾಲ್ಯದ ಫೋಟೋ ಪ್ರದರ್ಶಿಸಿ ಬಾವುಕರಾದ ನಟ
Summary: King Khan entertained his fans by speaking in Tamil on the show 'An Evening with Shah Rukh Khan'. During the event, he showed off a rare photo taken in Mangalore as a child and shared old memories.

belagavi news :

ಮಂಗಳೂರು : "ಎಂಚಾ ಉಲ್ಲಾರ್?" ಎಂದು ತಮಿಳಿನಲ್ಲೇ ಮಾತು ಆರಂಭಿಸಿದ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಸಾವಿರಾರು ಅಭಿಮಾನಿಗಳ ಮನ ಗೆದ್ದರು. ಮಂಗಳೂರಿನೊಂದಿಗೆ ತಮ್ಮ ಬಾಲ್ಯದ ಭಾವನಾತ್ಮಕ ಬಾಂಧವ್ಯವನ್ನು ನೆನಪಿಸಿಕೊಂಡ ಅವರು, ತಾವು ಎರಡು ವರ್ಷದ ಆಸು ಪಾಸಿನಲ್ಲಿದ್ದಾಗ ನಗರದಲ್ಲಿ ತೆಗೆದಿದ್ದ ಅಪರೂಪದ ಬಾಲ್ಯದ ಫೋಟೋವನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು.

"ನನ್ನ ಬಳಿ ಇರುವ ಬಾಲದ ಏಕೈಕ ಫೋಟೋಗಳು ಮಂಗಳೂರಿನಲ್ಲಿ ತೆಗೆದವು. ಆದ್ದರಿಂದ ಈ ನಗರ ನನಗೆ ತುಂಬಾ ವಿಶೇಷ," ಎಂದು ಹೇಳಿದ ಶಾರುಖ್ ಖಾನ್, ತಮ್ಮ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.

'ಆನ್ ಈವಿನಿಂಗ್ ವಿಥ್ ಶಾರುಖ್ ಖಾನ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಗಳೂರು ತಲುಪಿದ ಕ್ಷಣದಿಂದಲೇ ಜನರು ತೋರಿಸಿದ ಪ್ರೀತಿ ಮತ್ತು ಆತ್ಮೀಯ ಸ್ವಾಗತ ತಮ್ಮ ಮನಸ್ಸನ್ನು ಸ್ಪರ್ಶಿಸಿದೆ ಎಂದು ಹೇಳಿದರು.

Sponsored

ತುಳುವಿನಲ್ಲಿ ಶುಭಾಶಯ ಕೋರಿದ ಕ್ಷಣವೇ ಸಭಾಂಗಣ ಕರತಾಡನ ಮತ್ತು ಹರ್ಷೋದ್ಧಾರಗಳಿಂದ ಮೊಳಗಿತು. ಬಾಲ್ಯದ ಫೋಟೋ ಪ್ರದರ್ಶನದೊಂದಿಗೆ ಮಂಗಳೂರಿನೊಂದಿಗೆ ತಮ್ಮ ವಿಶೇಷ ನಂಟನ್ನು ಹಂಚಿಕೊಂಡ ಶಾರುಖ್ ಖಾನ್, ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಪಡೆದರು.

ವೇದಿಕೆಯಲ್ಲಿ ಮಾತನಾಡಿದ ಶಾರುಖ್ ಖಾನ್, ಮಂಗಳೂರಿನ ಜನರ ಪ್ರೀತಿ ಮತ್ತು ಆತ್ಮೀಯತೆಯನ್ನು ಮನದಾಳದಿಂದ ಕೊಂಡಾಡಿದರು.

"ವಿಮಾನ ನಿಲ್ದಾನದಿಂದ ಕಾರ್ಯಕ್ರಮದ ಸ್ಥಳದವರೆಗೆ ಎಲ್ಲೆಡೆ ಜನರು ತೋರಿದ ಪ್ರೀತಿ,ಆತ್ಮೀಯತೆ ಮತ್ತು ಉತ್ಸಾಹ ನನ್ನ ಮನಸ್ಸನ್ನು ಸ್ಪರ್ಶಿಸಿದೆ. ಮಂಗಳೂರಿಗೆ ಬಂದಿರುವುದು ನನಗೆ ಅಪಾರ ಸಂತೋಷ ತಂದಿದೆ. ಇಂತಹ ಅದ್ಭುತ ಸ್ವಾಗತ ನೀಡಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು," ಎಂದು ಅವರು ಹೇಳಿದರು.

Sponsored

ಶಾರುಖ್ ಖಾನ್ ಅವರಈ ಮಾತುಗಳಿಗೆ ಸಭಾಂಗಣದಲ್ಲಿದ್ದ ಅಭಿಮಾನಿಗಳು ಬಾರಿ ಕರತಾಡನದ ಮೂಲಕ ಪ್ರತಿಕ್ರಿಯಿಸಿದರು. ಕಾರ್ಯಕ್ರಮದ ವೇಳೆ ಅವರು ಮಂಗಳೂರಿನೊಂದಿಗೆ ತಮ್ಮ ವಿಶೇಷ ಭಾಂದವ್ಯವನ್ನು ನೆನಪಿಸಿಕೊಂಡು, ನಗರದ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದರ

ರೋಹನ್ ಕಾರ್ಪೊರೇಷನ್ ಸಂಸ್ಥಾಪಕ ಡಾ. ರೋಹನ್ ಮೊಂತೇರೊ, ನಿರ್ದೇಶಕ ಡಿಯಾನ್ ಮಾಂತೇರೊ ಹಾಗೂ ಸಂಸ್ಥೆಯ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.

ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಬಾಲಿವುಡ್ ನಟ ಶಾರುಖ್ ಖಾನ್, ಮಂಗಳೂರಿನೊಂದಿಗೆ ತಮ್ಮ ಕುಟುಂಬದ ಗಾಢವಾದ ನಂಟನ್ನು ಬಾವುಕರಾಗಿ ನೆನಪಿಸಿಕೊಂಡರು.

Sponsored

ನಾನು ತುಂಬಾ ಚಿಕ್ಕವನಾಗಿದ್ದ ಕಾರಣ ಇಲ್ಲಿನ ನೆನಪುಗಳು ಸ್ಪಷ್ಟವಾಗಿ ಇಲ್ಲ ಎಂದು ಹೇಳಿದವರು, ತಮ್ಮ ತಾತ ಆಗಿನ ಮಂಗಳೂರು ಬಂದರು ನಿರ್ಮಾಣ ಕಾರ್ಯದಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದ ಕಾರಣ ಕುಟುಂಬವು ಕೆಲವು ವರ್ಷಗಳ ಕಾಲ ಮಂಗಳೂರಿನಲ್ಲಿ ವಾಸಿಸುತ್ತಿತ್ತು ಎಂದು ವಿವರಿಸಿದ್ದರು.

ಆ ಕಾಲದಲ್ಲಿ ಇಂದಿನಂತೆ ಸುಲಭವಾಗಿ ಫೋಟೋ ತೆಗೆಯುವ ವ್ಯವಸ್ಥೆ ಇರಲಿಲ್ಲ. ಹಲವು ವರ್ಷಗಳ ನಂತರ ನನ್ನ ಬಾಲ್ಯದ ಫೋಟೋಗಳನ್ನು ಹುಡುಕಿದಾಗ ಸಿಕ್ಕಿದ್ದು ಮಂಗಳೂರಿನಲ್ಲಿ ತೆಗೆದ ಚಿತ್ರಗಳಷ್ಟೇ. ಆದ್ದರಿಂದ ಮಂಗಳೂರು ನನ್ನ ಬದುಕಿನಲ್ಲಿ ವಿಶೇಷ ಸ್ಥಾನ ಹೊಂದಿದೆ ಎಂದು ಶಾರುಖ್ ಖಾನ್ ಭಾವುಕರಾದರು.

ಮಂಗಳೂರಿಗೆ ಮತ್ತೆ ಮತ್ತೆ ಭೇಟಿ ನೀಡುವ ಆಸೆ ವ್ಯಕ್ತಪಡಿಸಿದ ಬಾಲಿವುಡ್ ನಟ ಶಾರುಖ್ ಖಾನ್, ನಗರ ಹಾಗೂ ಅಲ್ಲಿನ ಜನರ ಆತ್ಮೀಯತೆಗೆ ಮನಸೋತು ತಮ್ಮ ಮುಂದಿನ ಯೋಜನೆಗಳನ್ನು ಹಂಚಿಕೊಂಡರು

ರೋಹನ್ ಮೊಂತೇರೊ ಅವರು ತಮ್ಮನ್ನು ಮಂಗಳೂರಿನ ಬಗ್ಗೆ ಪರಿಚಯಿಸಿದ್ದನ್ನು ನೆನಪಿಸಿಕೊಂಡ ಶಾರುಖ್ ಖಾನ್, ಈ ಬಾರಿ ಹಳೆಯ ನೆನಪುಗಳು ಹೆಚ್ಚು ಸ್ಪಷ್ಟವಾಗಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಮಂಗಳೂರಿಗೆ ಬಂದು ಹೊಸ ನೆನಪುಗಳನ್ನು ಕಟ್ಟಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು.

Sponsored

ಮಂಗಳೂರಿನ ಸಂಸ್ಕೃತಿ, ಭಾಷೆ ಹಾಗೂ ಜನರ ಆತಿತ್ಯವನ್ನು ಮುಕ್ತ ಕಂಠದಿಂದ ಪ್ರಶಂಶಿಸಿದ ಅವರು, "ಮುಂದೆ ಹೆಚ್ಚು ಸಮಯ ತೆಗೆದುಕೊಂಡು ಅಲ್ಲಿಗೆ ಬಂದು ನಿಮ್ಮ ಸಂಸ್ಕೃತಿಯನ್ನು ಇನ್ನಷ್ಟು ತಿಳಿದುಕೊಳ್ಳುತ್ತೇನೆ. ನಿಮ್ಮ ಭಾಷೆ ನಮಗೆ ತುಂಬಾ ಇಷ್ಟವಾಯಿತು. ಮುಂಬೈನಲ್ಲಿಯೂ ಮಂಗಳೂರಿನ ಅನೇಕ ಜನರು ಇದ್ದಾರೆ," ಎಂದರು.

ವೇದಿಕೆಯಲ್ಲಿ ಹಾಸ್ಯಮಯ ಕ್ಷಣಗಳನ್ನು ಸೃಷ್ಟಿಸಿದ ಅವರು, "ನನ್ನ ಮಗಳಿಗೆ ಕಳುಹಿಸಲು ಮಂಗಳೂರಿನ ವಿಡಿಯೋಗಳನ್ನು ತೆಗೆದುಕೊಂಡಿದ್ದೇನೆ. ರೋಹನ್ ಅವರು ಸಮುದ್ರದತ್ತ ಮುಖ ಮಾಡಿದ ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂಗಳೂರಿಗೆ ಆಗಾಗ ಬರುತ್ತೇನೆ. ಅಲ್ಲಿನ ರುಚಿಕರ ನೀರ್ ದೋಸೆ ಸವಿಯುತ್ತೇವೆ," ಎಂದು ಹೇಳುತ್ತಿದ್ದಂತೆ ಸಭಾಂಗಣ ಕರತಾಡನ ದಿಂದ ಮೊಳಗಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಿವುಡ್ ನಟ ಶಾರುಖ್ ಖಾನ್,ಮಂಗಳೂರಿನಂತಹ ನಗರಗಳಿಂದಲೂ ಜಾಗತಿಕ ಮಟ್ಟದ ಸಾಧನೆ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವನ್ನು ನೀಡಿ ಯುವಕರಿಗೆ ಸ್ಪೂರ್ತಿದಾಯಕ ಸಂದೇಶ ನೀಡಿದರು.

"ಖಂಡಿತ ಸಾಧ್ಯ. ನಿಮ್ಮ ಕನಸುಗಳನ್ನು ಎಂದಿಗೂ ಕೈ ಬಿಡಬೇಡಿ.ಜನರು ಹಲವು ಕಾರಣಗಳನ್ನು ಹೇಳಿ ನಿಮ್ಮನ್ನು ತಡೆಯಲು ಪ್ರಯತ್ನಿಸಬಹುದು. ಆದರೆ ನಿಮ್ಮ ಕನಸಿಗೆ ಕನಿಷ್ಠ ಒಂದು ಅವಕಾಶ ಕೊಡಿ. ಪ್ರಯತ್ನಿಸದೆ ಹಿಂದೆ ಸರಿಯಬೇಡಿ," ಎಂದು ಅವರು ಹೇಳಿದರು.

Sponsored

ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡ ಅವಸ್ನೇಹಿತರಿಗೂ ಹಾಗೂ ಯಾವಾಗಲೂ ಇದೇ ಸಲಹೆ ನೀಡುತ್ತೇನೆರು,"ನನ್ನ ಮಕ್ಕಳಿಗೂ, ಸ್ನೇಹಿತರಿಗೂ ನಾನು ಯಾವಾಗಲೂ ಇದೇ ಸಲಹೆ ನೀಡುತ್ತೇನೆ. ಎಷ್ಟೇ ವಿಚಿತ್ರ ಕನಸುಗಳ ಆಗಿದ್ದರು ಅದನ್ನು ಸಾಧಿಸಲು ಧೈರ್ಯವಾಗಿ ಪ್ರಯತ್ನಿಸಿ. ಕನಸುಗಳನ್ನು ಹಿಂಬಾಲಿಸಿದಾಗ ಮಾತ್ರ ಯಶಸ್ಸು ಸಿಗುತ್ತದೆ," ಎಂದು ಯುವಕರಿಗೆ ಪ್ರೇರಣೆ ನೀಡಿದರು.

ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಉದ್ಯಮಿಗಳು,ವಿವಿಧ ಕ್ಷೇತ್ರಗಳ ಗಣ್ಯರು, ಆಹ್ವಾನಿತ ಅತಿಥಿಗಳು ಹಾಗೂ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲೇ ತುಳುವಿನಲ್ಲಿ ಮಾತನಾಡಿ ಕರಾವಳಿಯ ಜನರ ಮನ ಗೆದ್ದ ಶಾರುಖ್ ಖಾನ್,ಮಂಗಳೂರಿನೊಂದಿಗೆ ತಮ್ಮ ಭಾವನಾತ್ಮಕ ನಂಟನ್ನು ಮತ್ತೊಮ್ಮೆ ಹಂಚಿಕೊಂಡು ಜನರ ಪ್ರೀತಿ ಮತ್ತು ಆತಿತ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.

Also Read:

Sponsored

ದಳಪತಿ ವಿಜಯ್ ರನ್ನಿಂಗ್ ವಿಡಿಯೋ ವೈರಲ್ : 6 ಕಿ.ಮೀ ಓಡಿದ ನಟ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online