<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಚಿನ್ನಸ್ವಾಮಿ ಸ್ಟೇಡಿಯಂಗೆ ಶಾಕ್: ಐಪಿಎಲ್ ಫೈನಲ್ ಅಹಮದಾಬಾದ್ ಗೆ ಹೋಗಿದ್ದೇಕೆ?

ಚಿನ್ನಸ್ವಾಮಿ ಸ್ಟೇಡಿಯಂಗೆ ಶಾಕ್: ಐಪಿಎಲ್ ಫೈನಲ್ ಅಹಮದಾಬಾದ್ ಗೆ ಹೋಗಿದ್ದೇಕೆ?
Summary: Home Minister Dr. G Parameshwara has clarified the decision to shift the IPL final from Bengaluru to Ahmedabad. He said that security, logistical challenges and the BCCI's decision were the main reasons for the change of venue.

Belagavi news:

ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಹ್ಮದಾಬಾದ್ ಗೆ ಸ್ಥಳಾಂತರಿತ್ತಿರುವ ವಿಚಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಇದೀಗ ಈ ಕುರಿತು ಕರ್ನಾಟಕ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಭದ್ರತಾ ವ್ಯವಸ್ಥೆ ಆಡಳಿತಾತ್ಮಕ ಸವಾಲುಗಳು ಮತ್ತು ಬಿಸಿಸಿಐ ತೀರ್ಮಾನವೇ ವೇದಿಕೆ ಬದಲಾವಣೆಗೆ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪಂದ್ಯವನ್ನು ಅಹಮದಾಬಾದ್ ನ ರೇಂದ್ರ ಮೋದಿ ಸ್ಟೇಡಿಯಂ ಗೆ ಸ್ಥಳಾಂತರಿಸಿದ ನಿರ್ಧಾರ ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್,"ರಾಜ್ಯ ಸರ್ಕಾರದ ಮಟ್ಟದಲ್ಲಿ ಅಗತ್ಯ ಸಹಕಾರ ನೀಡಲಾಗಿತ್ತು. ಆದರೆ ಭದ್ರತಾ ವ್ಯವಸ್ಥೆ ಹಾಗೂ ದೊಡ್ಡ ಮಟ್ಟದ ಜನಸ್ತೋಮ ನಿರ್ವಹಣೆ ವಿಚಾರದಲ್ಲಿ ಬಿಸಿಸಿಐ ಅಂತಿಮ ನಿರ್ಧಾರ ಕೈಗೊಂಡಿದೆ"ಎಂದು ಹೇಳಿದ್ದಾರೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾಗಿರುವುದರಿಂದ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿಕೊಳ್ಳುವ ಸಾಮರ್ಥ್ಯವಿದೆ. ಇದೆ ಕಾರಣದಿಂದ ಬಿಸಿಸಿಐ ಫೈನಲ್ ಪಂದ್ಯಕ್ಕೆ ಆ ವೇದಿಕೆಯನ್ನು ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ. ಜೊತೆಗೆ ಭದ್ರತಾ ಏಜೆನ್ಸಿ ಗಳ ಸಲಹೆಯನ್ನು ಪರಿಗಣಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Sponsored

ಈ ಬೆಳವಣಿಗೆಯಿಂದ ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದ್ದರು, ಮುಂದಿನ ದಿನಗಳಲ್ಲಿ ದೊಡ್ಡ ಟೂರ್ನಿಗಳ ಆತಿತ್ಯಕ್ಕೆ ಕರ್ನಾಟಕ ಸರ್ಕಾರ ಮತ್ತು ಕೆ.ಎಸ್.ಸಿ.ಎ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲುವೆ ಎಂದು ಮೂಲಗಳು ತಿಳಿಸಿವೆ.

ಐಪಿಎಲ್ ಫೈನಲ್ ವೇದಿಕೆ ಬದಲಾವಣೆ ಇದೀಗ ಕ್ರೀಡಾ ವಲಯದ ಜೊತೆಗೆ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಪರಮೇಶ್ವರ್ ನೀಡಿದ ಸ್ಪಷ್ಟನೆ ಹೊಸ ಚರ್ಚೆಗೆ ಕಾರಣವಾಗಿದೆ.

ಐಪಿಎಲ್ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಿಂದ ಅಹಮದಾಬಾದ್ ಗೆ ಸ್ಥಳಾಂತರಿಸಿದ ವಿಚಾರಕ್ಕೆ ಸಂಬಂಧಿಸಿದ ಕರ್ನಾಟಕ ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದವರು, ಪಂದ್ಯ ಸ್ಥಳಾಂತರಕ್ಕೆ ಭದ್ರತಾ ವೈಫಲ್ಯ ಅಥವಾ ಆಡಳಿತಾತ್ಮಕ ಸಮಸ್ಯೆಗಳು ಕಾರಣವಲ್ಲ ಎಂದು ತಿಳಿಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಗತ್ಯ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಿತ್ತು. ಯಾವುದೇ ರೀತಿಯ ಲೋಪ ದೋಷಗಳಿಲ್ಲ. ಪಂದ್ಯಗಳನ್ನು ಸ್ಥಳಾಂತರಿಸುವ ನಿರ್ಧಾರ ಸಂಪೂರ್ಣವಾಗಿ ವಾಣಿಜ್ಯ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ"ಎಂದು ಪರಮೇಶ್ವರ್ ಹೇಳಿದ್ದಾರೆ.

Sponsored

ಐಪಿಎಲ್ ಫೈನಲ್ ಮತ್ತು ಕ್ವಾಲಿಫೈಯರ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿತ್ತು. ಆದರೆ ಬಿಸಿಸಿಐ ಕೊನೆಯ ಕ್ಷಣದಲ್ಲಿ ಪಂದ್ಯಗಳನ್ನು ಅಹಮದಾಬಾದ್ ನ ರೇಂದ್ರ ಮೋದಿ ಸ್ಟೇಡಿಯಂ ಗೆ ವರ್ಗಾಯಿಸಿದ ಬಳಿಕ ಸಾಕಷ್ಟು ಚರ್ಚೆಗಳು ನಡೆದಿದ್ದವು. ವಿಶೇಷವಾಗಿ ಭದ್ರತಾ ಕಾರಣಗಳೇ ಇದಕ್ಕೆ ಮೂಲ ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ ಪರಮೇಶ್ವರ್ ಅವರ ಹೇಳಿಕೆಯಂತೆ ಆ ಎಲ್ಲಾ ಊಹಾಪೋಗಳಿಗೆ ತೆರೆ ಬಿದ್ದಂತಾಗಿದೆ. ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ಹೆಚ್ಚು ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವುದರಿಂದ ಹಾಗೂ ಹೆಚ್ಚಿನ ಆದಾಯ ಗಳಿಸುವ ಸಾಧ್ಯತೆ ಇರುವ ಕಾರಣ ಬಿಸಿಸಿಐ ವಾಣಿಜ್ಯದ ದೃಷ್ಟಿಯಿಂದ ಆ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

ಈ ಬೆಳವಣಿಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಬೆಂಗಳೂರಿಗೆ ದೊಡ್ಡ ಪಂದ್ಯಗಳ ಆತಿತ್ಯ ತಪ್ಪಿದ ಬಗ್ಗೆ ನಿರಾಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಬಿಸಿಸಿಐ ವಾಣಿಜ್ಯ ಲೆಕ್ಕಾಚಾರವನ್ನು ಟೀಕಿಸಿದ್ದಾರೆ.

ಭಟ್ಟಾರಿ ಐಪಿಎಲ್ ನ ಮಹತ್ವದ ಪಂದ್ಯಗಳು ಬೆಂಗಳೂರಿನಿಂದ ಸ್ಥಳಾಂತರ ವಾದ ಹಿಂದೆ ಭದ್ರತಾ ಸಮಸ್ಯೆ ಗಿಂತ ವಾಣಿಜ್ಯ ಉದ್ದೇಶವೇ ಪ್ರಮುಖ ಕಾರಣ ಎಂದು ಗ್ರಹ ಸಚಿವ ಪರಮೇಶ್ವರ ಸ್ಪಷ್ಟವಾಗಿ ತಿಳಿಸಿದ್ದಾರೆ.

Sponsored

ಐಪಿಎಲ್ ಪಂದ್ಯ ಸ್ಥಳಾಂತರದ ಹಿಂದಿನ ಅಸಲಿ ಕಾರಣ ಏನು ?

ಐಪಿಎಲ್ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಅಹಮದಾಬಾದ್ ಗೆ ಸ್ಥಳಾಂತರಿಸುವ ಕುರಿತು ಹೊಸ ವಿವರಣೆ ಹೊರ ಬಂದಿದೆ. ಕರ್ನಾಟಕ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಈ ನಿರ್ಧಾರಕ್ಕೆ ಭದ್ರತಾ ಕಾರಣಗಳಿಗಿಂತ ಆರ್ಥಿಕ ಹಾಗು ವಾಣಿಜ್ಯ ಅಂಶಗಳೇ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಪರಮೇಶ್ವರ್ ಅವರ ಹೇಳಿಕೆಯಂತೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುಮಾರು 32 ಸಾವಿರ ಆಸನಗಳ ಸಾಮರ್ಥ್ಯವಿದೆ. ಆದರೆ ಇದರಲ್ಲಿ ಏಳರಿಂದ ಎಂಟು ಸಾವಿರ ಸೀಟುಗಳನ್ನು ವಿಐಪಿ ಗಳು, ಸ್ಪಾನ್ಸರ್ ಗಳು ಮತ್ತು ಆರ್ಸಿಬಿ ತಂಡಕ್ಕಾಗಿ ಮೀಸಲಿಡಲಾಗುತ್ತದೆ. ಇದರ ಪರಿಣಾಮವಾಗಿ ಸಾರ್ವಜನಿಕರಿಗೆ ಟಿಕೆಟ್ ಮಾರಾಟಕ್ಕೆ ಲಭ್ಯವಾಗಿರುವ ಸೀಟುಗಳು ಕೇವಲ 25000 ಕ್ಕೆ ಇಳಿಯುತ್ತವೆ.

Sponsored

ಈ ಪರಿಸ್ಥಿತಿಯಲ್ಲಿ ಪಂದ್ಯ ಆ ಯೋಜನೆ ಆರ್ಥಿಕವಾಗಿ ಅಷ್ಟೊಂದು ಲಾಭದಾಯಕವಾಗುವುದಿಲ್ಲ ಎಂಬುದು ಆಯೋಜಕರ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಇತ್ತ ಅಹಮದಾಬಾದ್ ನ ನರೇಂದ್ರ ಮೋದಿ ಕೆಡಿಎಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹಾಸನ ಸಮರ್ಥ್ಯವಿರುವುದರಿಂದ ಹೆಚ್ಚಿನ ಪ್ರೇಕ್ಷಕರಿಗೆ ಅವಕಾಶ ಸಿಗುತ್ತದೆ ಹಾಗೂ ಟಿಕೆಟ ಆದಾಯವು ಹೆಚ್ಚಾಗುತ್ತದೆ ಎಂಬ ವಾಣಿಜ್ಯ ಲೆಕ್ಕಾಚಾರವೇ ಸ್ಥಳಾಂತರದ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

ಶಾಸಕರಿಗೆ ನೀಡುವ ಟಿಕೆಟಗಳ ದುರ್ಬಳಕೆ ಅಥವಾ ರಾಜಕೀಯ ಕಾರಣಗಳಿಂದ ಪಂದ್ಯ ಸ್ಥಳಾಂತರಗೊಂಡಿದೆ ಎಂಬ ಊಹಾಪೋಹಗಳನ್ನು ಪರಮೇಶ್ವರ್ ತಳ್ಳಿ ಹಾಕಿದ್ದಾರೆ. ಶಾಸಕರಿಗೆ ನೀಡುವ ಅಲ್ಪ ಪ್ರಮಾಣದ ಪಾಸುಗಳು ಇಂತಹ ದೊಡ್ಡ ಮಟ್ಟದಲ್ಲಿ ನಿರ್ಧಾರಗಳನ್ನು ಪ್ರಭಾವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಐಪಿಎಲ್ ಪಂದ್ಯ ಸ್ಥಳಾಂತರದ ಹಿಂದಿ ರಾಜಕೀಯಕ್ಕಿಂತ ಹೆಚ್ಚು ಕಮರ್ಷಿಯಲ್ ಲಾಭ ಮತ್ತು ದೊಡ್ಡ ಮೈದಾನದ ಸಾಮರ್ಥ್ಯವೇ ಮುಖ್ಯ ಕಾರಣ ಎಂಬುದು ಸ್ಪಷ್ಟವಾಗುತ್ತಿದೆ. ಈ ವಿಚಾರವು ಈಗ ಕ್ರಿಕೆಟ್ ಅಭಿಮಾನಿಗಳ ಹಾಗೂ ಕ್ರೀಡಾ ವಲಯದ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Also Read:

Sponsored

Karnataka Politics: ನಾಯಕತ್ವ ಗೊಂದಲ ಬಗೆಹರಿಸಲು ರಾಜಣ್ಣ ಒತ್ತಾಯ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online