<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಅಥಣಿ ಬೆಚ್ಚಿಬೀಳಿಸಿದ ಘಟನೆ: ಧಾರಾಕಾರ ಮಳೆಗೆ ಕಟ್ಟಡ ಕುಸಿದು ಬಾರಿ ದುರಂತ ತಪ್ಪಿತು

ಅಥಣಿ ಬೆಚ್ಚಿಬೀಳಿಸಿದ ಘಟನೆ: ಧಾರಾಕಾರ ಮಳೆಗೆ ಕಟ್ಟಡ ಕುಸಿದು ಬಾರಿ ದುರಂತ ತಪ್ಪಿತು
Summary: An old building collapsed suddenly due to heavy rain in Athani town of Belagavi district. A major disaster was averted as there was not much traffic in the area when the building collapsed. The incident has created an atmosphere of anxiety among the locals and raised questions about the safety of the old buildings in a dangerous condition. Officials visited the spot and inspected it and are taking precautionary measures.

belagavi news :

ಚಿಕ್ಕೋಡಿ: ಧಾರಾಕಾರ ಮಳೆಯ ಅಬ್ಬರಕ್ಕೆ ಅಥಣಿ ಪಟ್ಟಣದ ಹಳ್ಯಾಳ ರಸ್ತೆಯಲ್ಲಿರುವ ಎರಡು ಅಂತಸ್ತಿನ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಾಂಗ್ರೆಸ್ ಮುಖಂಡ Ravasab Aihole ಅವರಿಗೆ ಸೇರಿದ ಕಚೇರಿ ಕಟ್ಟಡ ನೆಲಕ್ಕುರುಳಿದೆ. ನಿನ್ನೆ ರಾತ್ರಿ ಸುಮಾರು 9 ಗಂಟೆಗೆ ವೇಳೆಗೆ ಈ ಅಪಘಾತ ಸಂಭವಿಸಿದ್ದು ಕಟ್ಟಡ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಅದೃಷ್ಟವಶಾತ ಅಪಘಾತಕ್ಕೂ ಮುನ್ನ ಸಿಬ್ಬಂದಿ ಕಟ್ಟಡದಿಂದ ಹೊರಬಂದಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳಾಗಿಲ್ಲ. ರಾತ್ರಿಯ ಸಮಯವಾಗಿದ್ದ ಕಾರಣ ಜನ ಸಂಚಾರವು ಕಡಿಮೆಯಿದ್ದು ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.

ಧಾರಾಕಾರ ಮಳೆಯಿಂದ ಕಟ್ಟಡದ ಬುನಾದಿ ದುರ್ಬಲ ಗೊಂಡಿರುವ ಸಾಧ್ಯತೆ ವ್ಯಕ್ತವಾಗಿದ್ದು, ಘಟನೆಯು ಸ್ಥಳೀರರಲ್ಲಿ ಆತಂಕ ಮೂಡಿಸಿದೆ. ಕಟ್ಟಡ ಕುಸಿತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಹಳೆಯ ಹಾಗೂ ಅಪಾಯಕಾರಿ ಕಟ್ಟಡಗಳ ಸುರಕ್ಷತೆ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.

ಪಕ್ಕದ ಗುಂಡಿಯಲ್ಲಿ ನೀರು ನಿಂತಿದ್ದೇ ಅವಘಟ್ಟಕ್ಕೆ ಕಾರಣ?

ಅಥಣಿ ಪಟ್ಟಣದ ಹಳ್ಯಾಳ ರಸ್ತೆಯಲ್ಲಿ ಧಾರಾಕಾರ ಮಳೆಯ ಕುಸಿದು ಬಿದ್ದ ಎರಡು ಅಂತಸ್ತಿನ ಕಟ್ಟಡದ ಅಪಘಾತಕ್ಕೆ ಪಕ್ಕದ ನಿವೇಶನದಲ್ಲಿ ತೋಡಿದ್ದ ಆಳವಾದ ಪಯವೇ ಕಾರಣ ಎಂದು ಕಟ್ಟಡದ ಮಾಳಿಕ ಹಾಗೂ ಕಾಂಗ್ರೆಸ್ ಮುಖಂಡ Ravasab Aihole ಆರೋಪಿಸಿದ್ದಾರೆ.

"ನಿನ್ನೆ ತಡರಾತ್ರಿ ಸುರಿದ ಬಾರಿ ಮಳೆಯಿಂದ ನಮ್ಮ ಎರಡು ಅಂತಸ್ತಿನ ಕಟ್ಟಡ ನೆಲಕ್ಕುರುಳಿದೆ. ಪಕ್ಷದ ನಿವೇಶನದ ಮಾಲೀಕರು ಹೊಸ ಕಟ್ಟಡ ನಿರ್ಮಾಣಕ್ಕಾಗಿ ಸುಮಾರು 10 ಅಡಿ ಆಳದ ಪಾಯ ತೋಡಿದ್ದರು. ಮಳೆಯ ನೀರು ಆ ಗುಂಡಿಯಲ್ಲಿ ಸಂಪೂರ್ಣವಾಗಿ ತುಂಬಿಕೊಂಡ ಪರಿಣಾಮ ನಮ್ಮ ಕಟ್ಟಡದ ತಳಪಾಯಕ್ಕೆ ಅಗತ್ಯವಾದ ಬೆಂಬಲ ಸಿಗದೆ ಕಟ್ಟಡ ಕುಸಿದಿದೆ" ಎಂದು ತಿಳಿಸಿದರು.

ಕಟ್ಟಡ ಕುಸಿಯುವ ಮುನ್ನವೇ ಅದರೊಳಗೆ ವಿಲಕ್ಷಣ ಶಬ್ದಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಕಚೇರಿ ಸಿಬ್ಬಂದಿ ಕೂಡಲೇ ಕಟ್ಟಡದಿಂದ ಹೊರ ಬಂದಿದ್ದಾರೆ. ಸಿಬ್ಬಂದಿ ಹೊರಬಂದ ಕೆಲವೇ ಕ್ಷಣಗಳಲ್ಲಿ ಕಟ್ಟಡ ಸಂಪೂರ್ಣವಾಗಿ ಧರೆಗುರುಳಿದೆ. ಹೀಗಾಗಿ ಸಂಭವಿಸಬಹುದಾಗಿದ್ದ ಭಾರಿ ದುರಂತ ಹಾಗೂ ಪ್ರಾಣಾಪಾಯ ಕೂದಲೆಳೆಯ ಅಂತರದಲ್ಲಿ ತಪ್ಪಿದಾಂತಾಗಿದೆ.

ಘಟನೆಯ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಈ ಸಂಬಂಧ ಪ್ರಕರಣವು Athani Police Station ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಅವಘಡದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರೆದಿದೆ. ಸ್ಥಳೀಯರಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಮಳೆಯ ಸಂದರ್ಭದಲ್ಲಿ ಕಟ್ಟಡಗಳ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಉದ್ಭವಿಸಿವೆ.

ಕರ್ನಾಟಕಕ್ಕೂ ಕಾಲಿಟ್ಟ ನೈಋತ್ಯ ಮುಂಗಾರು: ಕರಾವಳಿಯಲ್ಲಿ ಮಳೆ ಚುರುಕು, ಬಿಸಿಲಿನ ಬೇಗೆಯಿಂದ ಜನರಿಗೆ ನಿರಾಳತೆ

ನಿರೀಕ್ಷೆಗಿಂತ ತಡವಾಗಿ ಕೇರಳ ಪ್ರವೇಶಿಸಿದ್ದ ನೈಋತ್ಯ ಮುಂಗಾರು ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಕರಾವಳಿ ಭಾಗಗಳಲ್ಲಿ ಮಳೆಯ ಚಟುವಟಿಕೆಗಳು ಚುರುಕುಗೊಂಡಿವೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಸಾಧಾರಣದಿಂದ ಮಾಧ್ಯಮ ಪ್ರಮಾಣದ ಮಳೆ ಜನರಿಗೆ ಬೇಸಿಗೆಯ ತೀವ್ರ ಸಮೃದ್ಧಿ ಸಿಲಿನಿಂದ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ. ಶುಕ್ರವಾರದಿಂದ ರಾಜ್ಯದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಅಧಿಕೃತವಾಗಿ ಆರಂಭವಾದಂತಾಗಿದೆ.

ಕೇಶವಾಗಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಮಳೆಯ ಆಗಮನದಿಂದ ವಾತಾವರಣ ತಂಪಾಗಿದ್ದು, ಹಲವು ದಿನಗಳಿಂದ ಕಾಡುತ್ತಿದ್ದ ಉಷ್ಣಾಂಶ ಕುಸಿದಿದೆ.

ಸಾಮಾನ್ಯವಾಗಿ ಜೂನ್ 1ರ ವೇಳೆಗೆ ಕೇರಳ ಪ್ರವೇಶಿಸುವ ನೈಋತ್ಯ ಮುಂಗಾರು ಈ ಬಾರಿ ಹಲವು ದಿನಗಳ ವಿಳಂಬದ ಬಳಿಕ ಜೂನ್ 4 ರಂದು ಅಧಿಕೃತವಾಗಿ ಕೇರಳ ತಲುಪಿತು. ಆರಂಭದಲ್ಲಿ ಮೇ 24 ರ ಸುಮಾರಿಗೆ ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು India Meteorological Department ಅಂದಾಜಿಸಿತ್ತು. ಆದರೆ ಅರಬ್ಬಿ ಸಮುದ್ರ ಹಾಗೂ ವಾತಾವರಣದಲ್ಲಿನ ವಿವಿಧ ಬದಲಾವಣೆಗಳ ಪರಿಣಾಮ ಮುಂಗಾರಿನ ಚಲನೆ ನಿಧಾನಗೊಂಡ ನಿರೀಕ್ಷೆಗಿಂತ ತಡವಾಗಿ ಆಗಮಿಸಿತು.

ಈಗ ಮುಂಗಾರು ಕರ್ನಾಟಕ ಪ್ರವೇಶಿಸುವ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜದ ಹಲವು ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿದೆ.

Also Read:

ಅಮೇರಿಕಾದಲ್ಲಿ ಆರಂಭವಾದ 'ಕಾಕ್ರೋಚ್ ಜನತಾ ಪಕ್ಷ' ಈಗ ಭಾರತದಲ್ಲಿ ಹೋರಾಟದ ಕಣಕ್ಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online