<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

IPL 2026 ಫೈನಲ್ ಬಳಿಕ ಆಘಾತಕಾರಿ ಘಟನೆ: ಗುಜರಾತ್ ಟೈಟನ್ಸ್ ತಂಡದ ಬಸ್ ನಲ್ಲಿ ಬೆಂಕಿ

IPL 2026 ಫೈನಲ್ ಬಳಿಕ ಆಘಾತಕಾರಿ ಘಟನೆ: ಗುಜರಾತ್ ಟೈಟನ್ಸ್ ತಂಡದ ಬಸ್ ನಲ್ಲಿ ಬೆಂಕಿ
Summary: The news of a sudden fire in the bus in which the IPL team players were travelling has created panic among cricket fans. The incident of smoke appearing from the bus during the journey and the fire spreading within a few moments has gone viral on social media.

Balagavi News:

ಅಹಮದಾಬಾದ್ ಗುಜರಾತ್: IPL 2026ರ ಗ್ರಾಂಡ್ ಫಿನಾಲೆ ಮುಗಿದ ಬೆನ್ನಲ್ಲೇ ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಆತಂಕಕಾರಿ ಘಟನೆ ಸಂಭವಿಸಿದೆ. ರನ್ನರ್-ಅಪ್ ಆಗಿ ಹೊರಹೊಮ್ಮಿದ್ದ ಗುಜರಾತ್ ಟೈಟನ್ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದ್ದು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಭಾನುವಾರ ತಡರಾತ್ರಿ ಫೈನಲ್ ಪಂದ್ಯ ಮುಗಿದ ಬಳಿಕ ಆಟಗಾರರನ್ನು ಕ್ರೀಡಾಂಗಣದಿಂದ ಹೋಟೆಲ್ ಗೆ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಸ್ ನ ಎಂಜಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಹೊಗೆ ಹೊರಬರಲು ಆರಂಭಿಸಿತು. ಇದನ್ನು ಗಮನಿಸಿದ ಚಾಲಕ ಹಾಗೂ ಭದ್ರತಾ ಸಿಬ್ಬಂದಿ ತಕ್ಷಣವೇ ಬಸ್ ನಿಲ್ಲಿಸಿ ಎಲ್ಲರನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.

ಈ ಹಠಾತ್ ಘಟನೆಯಿಂದಾಗಿ ನಾಯಕ ಶುಭಮನ್ ಗಿಲ್ ಸೇರಿದಂತೆ ಗುಜರಾತ್ ಟೈಟನ್ಸ್ ತಂಡದ ಎಲ್ಲಾ ಆಟಗಾರರು ಮತ್ತು ಅಧಿಕಾರಿಗಳು ಸುಮಾರು ಒಂದು ಗಂಟೆ ಕಾಲ ರಸ್ತೆಯಲ್ಲೇ ಕಾಯಬೇಕಾಯಿತು. ಬಳಿಕ ಆಡಳಿತವು ತಕ್ಷಣವೇ ಪರ್ಯಾಯ ಬಸ್ ವ್ಯವಸ್ಥೆ ಮಾಡಿ ಆಟಗಾರರನ್ನು ಸುರಕ್ಷಿತವಾಗಿ ಹೋಟೆಲ್ ಗೆ ತಲುಪಿಸಿತು.

Sponsored

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಆಟಗಾರರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ. ಎಲ್ಲಾ ಸದಸ್ಯರು ಸುರಕ್ಷಿತರಾಗಿದ್ದಾರೆ ಎಂದು ಸಂಬಂಧಿತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. IPL 2026 ಫೈನಲ್ ನಂತರ ನಡೆದ ಈ ಘಟನೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದರು, ತ್ವರಿತ ಕ್ರಮದಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ. ಘಟನೆಯ ನಿಖರ ಕಾರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

IPL 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ತಂಡ ಭರ್ಜರಿ ಪ್ರದರ್ಶನ ನೀಡಿ ಗುಜರಾತ್ ಟೈಟನ್ಸ್ ವಿರುದ್ಧ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ನಿರ್ಣಾಯಕ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿಯ ಅಜೇಯ ಅರ್ಧಶತಕ ಆರ್ ಸಿಬಿ ಗೆಲುವಿನ ರೂವಾರಿಯಾಯಿತು.

ಗುಜರಾತ್ ಬ್ಯಾಟಿಂಗ್ ವೈಫಲ್ಯ:

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಆರ್ ಸಿಬಿ ಬೌಲರ್ ಗಳ ಶಿಸ್ತು ಬದ್ಧ ದಾಳಿಗೆ ತತ್ತರಿಸಿತು.

Sponsored

ನಾಯಕ ಶುಭಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ರಂತಹ ಪ್ರಮುಖ ಬ್ಯಾಟ್ಸ್ ಮನ್ ಗಳು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದ ಆಟಗಾರರು ಕೂಡ ನೀರಿಕ್ಷಿತ ಪ್ರದರ್ಶನ ನೀಡಲಿಲ್ಲ.

ತಂಡ ಸಂಕಷ್ಟದಲ್ಲಿದ್ದ ವೇಳೆ ವಾಷಿಂಗ್ವನ್ ಸುಂದರ್ ಹೋರಾಟದ ಮನೋಭಾವ ತೋರಿಸಿ 37ಎಸೆತಗಳಲ್ಲಿ 50ರನ್ ಗಳ ಅಮೂಲ್ಯ ಅರ್ಧ ಶತಕ ದಾಖಲಿಸಿದರು. ಆದರೆ ಅವರ ಪ್ರಯತ್ನದಿಂದಲೂ ಗುಜರಾತ್ ತಂಡ 20 ಓವರ್ ಗಳಲ್ಲಿ ಕೇವಲ 155 ರನ್ ಗಳಿಗೆ ಸಿಮಿತವಾಯಿತು.

ಆರ್ ಸಿ ಬಿ ಪರ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ ವುಡ್ ಮತ್ತು ರಸಿಕ್ ಸಲಾಂದಾರ್ ಅದ್ಭುತ ಬೋಲಿಂಗ್ ಪ್ರದರ್ಶಿಸಿ ಒಟ್ಟಾಗಿ 7 ವಿಕೆಟ್ ಗಳನ್ನು ಕಬಳಿಸಿದರು. ಇವರ ಬೌಲಿಂಗ್ ದಾಳಿಯೇ ಪಂದ್ಯದ ಗತಿಯನ್ನೇ ಬದಲಿಸಿತು.

ವಿರಾಟ್ ಕೊಹ್ಲಿಯ ಸ್ಪೋಟಕ ಇನ್ನಿಂಗ್ಸ್:

Sponsored

156 ರನ್ ಗಳ ಗುರಿ ಬೆನ್ನತ್ತಿದ ಆರ್ ಸಿಬಿಗೆ ಅನುಭವಿ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಬ್ರಾಂಡ್ ಆಸರೆಯಾದರು. ಜವಾಬ್ದಾರಿಯುತ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಕೂಹ್ಲಿ ಅಜೇಯ 75 ರನ್ ಗಳನ್ನು ಸಿಡಿಸಿ ತಂಡವನ್ನು ಸುಲಭ ಗೆಲುವಿನತ್ತ ಮುನ್ನಡೆಸಿದರು.

ಕೊಹ್ಲಿಗೆ ವೆಂಕಟೇಶ್ ಅಯ್ಯರ್ 32 ರನ್ ಹಾಗೂ ಟೀಮ್ ಡೇವಿಡ್ 24ರನ್ ಗಳ ಅಮೂಲ್ಯ ಬೆಂಬಲ ನೀಡಿದರು. ಈ ಜೋಡಿಗಳ ಉತ್ತಮ ಆಟದಿಂದ ಆರ್ ಸಿಬಿ ಗುರಿಯನ್ನುಯಶಸ್ವಿಯಾಗಿ ಬೆನ್ನಟ್ಟಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ದಾಖಲೆ ಬರೆದ ಆರ್‌ಸಿಬಿ :

ಈಗೇಲುವಿನೊಂದಿಗೆ ಆರ್‌ಸಿಬಿ ಸತತ ಎರಡನೇ ಬಾರಿ IPL ಟ್ರೋಫಿ ಗೆದ್ದ ಸಾಧನೆ ಮಾಡಿತು. ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಗೆದ್ದ ಮೂರನೇ ತಂಡ ಎಂಬ ವಿಶೇಷ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು.

Sponsored

ವಿರಾಟ್ ಕೊಹ್ಲಿಯ ನಾಯಕತ್ವದ ಗುಣಮಟ್ಟದ ಇನ್ನಿಂಗ್ಸ್ ಹಾಗೂ ಬಾಲರ್ ಗಳ ಸಂಘಟಿತ ಪ್ರದರ್ಶನವೇ ಆರ್‌ಸಿಬಿ ಚಾಂಪಿಯನ್ ಆಗಲು ಪ್ರಮುಖ ಕಾರಣವಾಯಿತು.

Also Read:

ಇತಿಹಾಸ ನಿರ್ಮಿಸಿದ RCB : ಮೂರು ವರ್ಷಗಳಲ್ಲಿ ನಾಲ್ಕು ಕಿರೀಟಗಳ ಭರ್ಜರಿ ಸಾಧನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online