BELAGAVI NEWS :
ವೆನೆಜುವೆಲಾದಲ್ಲಿ ಒಂದೇ ನಿಮಿಷದ ಅಂತರದಲ್ಲಿ 7.1 ಮತ್ತು 7.5 ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸಿ ದೇಶವನ್ನೇ ನಡುಗಿಸಿರುವ ಘಟನೆ ನಡೆದಿದೆ. ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವುಡೆ ಬಾರಿ ಹಾನಿ ಸಂಭವಿಸಿದ್ದು, ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿವೆ.
ಕ್ಷಣಾರ್ಧದಲ್ಲಿ ನಗರಗಳು ಧೂಳಿನ ಮಾಯವಾಗಿದ್ದು, ಜನರು ಭಯದಿಂದ ಮನೆಗಳನ್ನು ತೊರೆದು ರಾತ್ರಿ ಪೂರ್ತಿ ಬೀದಿಗಳಲ್ಲೇ ಕಳೆದಿದ್ದಾರೆ. ಈ ಭೂಕಂಪವು ಕಳೆದ ಶತಮಾನದಲ್ಲಿ ವೆನೆಜುವೆಲಾವನ್ನು ಅಪ್ಪಳಿಸಿದ ಅತ್ಯಂತ ಭೀಕರ ಘಟನೆಯೊಂದಾಗಿ ಪರಿಗಣಿಸಲಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇದೇ ವೇಳೆ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ತೀರ ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ತೀವ್ರಗೊಳಿಸಲಾಗಿದ್ದು, ಸೈನ್ಯ ಮತ್ತು ತುರ್ತು ಸೇವಾ ತಂಡಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸ್ಥಳೀಯ ಆಡಳಿತವು ಹಾನಿಯ ಅಂದಾಜು ಹಾಗೂ ಸಂತ್ರಸ್ತರ ರಕ್ಷಣೆಗೆ ವೇಗವಾಗಿ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ಇನ್ನೂ ಗಂಭೀರವಾಗಿರುವುದಾಗಿ ವರದಿಗಳು ಹೇಳುತ್ತಿವೆ.
ವೆನೆಜುವೆಲಾದಲ್ಲಿ ಸಂಜೆ 6 ಗಂಟೆಯ ಬಳಿಕ ಸಂಭವಿಸಿದ ಪ್ರಬಲ ಭೂಕಂಪ ಸರಣಿ ಬಾರಿ ವಿನಾಶವನ್ನು ಉಂಟುಮಾಡಿದೆ. ಮೊದಲಿಗೆ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು,ಇದರ ಕೇಂದ್ರಬಿಂದು ಕ್ಯಾರಕಾಸ್ ನಿಂದ ಸುಮಾರು 168 ಕಿ.ಮೀ ದೂರದ ಮೊರೊನ್ ಕರಾವಳಿಯ 22 ಕಿ.ಮೀ ಆಳದಲ್ಲಿತ್ತು ಎಂದು ವರದಿಯಾಗಿದೆ. ಇದರ ನಂತರ ಕೇವಲ ಒಂದು ನಿಮಿಷದ ಅಂತರದಲ್ಲಿ ಮತ್ತೊಂದು 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು,ಇದು ಕೇವಲ 10 ಕಿ.ಮೀ ಆಳದಲ್ಲಿದ್ದ ಕಾರಣ ವಿನಾಶದ ತೀವ್ರತೆ ಹೆಚ್ಚಾಗಿದೆ.
ಈ ಸರಣಿ ಭೂಕಂಪಗಳಿಂದ ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.
ಕ್ಯಾರಕಾಸ್ ನಗರದಲ್ಲಿ ಕಂಪನ ಆರಂಭವಾಗುತ್ತಿದ್ದಂತೆಯೇ ಜನರು ದಿಕ್ಕಾಪಾಲಾಗಿ ಓಡಿದ್ದು, ಅನೇಕರು ರಾತ್ರಿ ಪೂರ್ತಿ ಬೀದಿಗಳಲ್ಲಿ ಕಾಲ ಕಳೆಯುವಂತಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳ ಗೋಡೆಗಳು ಕುಸಿದು ಬಿದ್ದು ಬಾರಿ ಆತಂಕ ಸೃಷ್ಟಿಸಿವೆ.
ಮನೆಗಳ ಗೋಡೆಗಳು ಧ್ವಂಸಗೊಂಡು ಕೆಳಗಿನ ಪೀಠೋಪಕರಣಗಳು ನೇರವಾಗಿ ರಸ್ತೆಯಿಂದ ಕಾಣಿಸುವಷ್ಟು ಭೀಕರ ಪರಿಸ್ಥಿತಿ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಳಿಸಲಾಗಿದೆ.
ರಾತ್ರಿಯಲ್ಲಿ ಜನರು ಮನೆಗಳ ಒಳಗೆ ಹೋಗಲು ಹೆದರಿ ಬೀದಿಗಳಲ್ಲಿ ಕಾಲ ಕಳೆದರು. ಅನೇಕರು ಆಘಾತದಿಂದ ತಮ್ಮ ಸಾಕು ಪ್ರಾಣಿಗಳನ್ನು ಬಿಗಿಯಾಗಿ ಅಪ್ಪಿಕೊಂಡು ರಸ್ತೆಯ ಮೇಲೆ ಕುಳಿತಿದ್ದ ದೃಶ್ಯಗಳು ಕಂಡುಬಂದವು.
ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪಗಳ ಬೆನ್ನಲ್ಲೇ ಜಾಗತಿಕವಾಗಿ ಸುನಾಮಿ ಎಚ್ಚರಿಕೆ ಹೊರಡಿಸಲಾಗಿದೆ. ಈ ಮಟ್ಟದ ಪ್ರಬಲ ಭೂಕಂಪಗಳು ವೆನೆಜುವೆಲಾದಲ್ಲಿ ಅಪರೂಪವಾಗಿದ್ದು, ಘಟನೆಯ ತೀವ್ರತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕದ ಪೆಸಿಪಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ವರ್ಜಿನ್ ದೀಪಗಳು ಹಾಗೂ ಡೊಮಿನಿಕನ್ ಗಣರಾಜ್ಯದ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಿದೆ. ಆದರೆ ಫೋರ್ಟೊ ರಿಕೊಗೆ ನೀಡಲಾಗಿದೆ ಎಚ್ಚರಿಕೆಯನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ.
ಭೂಕಂಪದ ಬಳಿಕ ಯುದ್ಧೋಪಾದಿಯಲ್ಲಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳ ಅಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು, ತುರ್ತು ಸಹಾಯ ಮತ್ತು ಪರಿಹಾರ ಕಾರ್ಯಗಳು ಮುಂದುವರೆದಿವೆ.
Also Read:
ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ : ಪ್ರಿಯಾ ಆನಂದ್ ಹೇಳಿಕೆ ವೈರಲ್