belagavi news :
ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕನ ಭರ್ಜರಿ ಎಂಟ್ರಿ! 🎬
ಅಭಿನಯ ಚಕ್ರವರ್ತಿ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್, 'ಮ್ಯಾಂಗೋ ಪಚ್ಚ ' ಆಧುನಿಕ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಪೋಸ್ಟರ್, ಗ್ಲಿಂಪ್ಸ್ , ಹಾಡುಗಳು ಹಾಗೂ ಟ್ರೇಲರ್ ಗಳಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ.
ಚಿತ್ರದ ಮೊದಲ ದಿನವೇ ಪ್ರೇಕ್ಷಕರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಂಚಿತ್ ಅವರ ಚೊಚ್ಚಲ ಸಿನಿಮಾವನ್ನು ಹರ್ಷದಿಂದ ಸ್ವಾಗತಿಸಿದ್ದಾರೆ. ಬೆಂಗಳೂರಿನ ಸಂತೋಷ್ ಥಿಯೇಟರ್ ನಲ್ಲಿ ಬೆಳಿಗ್ಗೆ 7.30 ರ ಪ್ರದೇಶನ ಆರಂಭವಾಗಿದ್ದು, ವಿಶೇಷವಾಗಿ ಅಳಿಯನ ಮೊದಲ ಸಿನಿಮಾವನ್ನು ವೀಕ್ಷಿಸಲು ಸುದೀಪ್, ಪತ್ನಿ ಪ್ರಿಯಾ ಸುದೀಪ್ ಅವರ ಮಗಳು ಸಾನ್ವಿ ಭೇಟಿ ನೀಡಿದರು.
ಥಿಯೇಟರ್ ಗೆ ಆಗಮಿಸಿದ ಸುದೀಪ್ ಕುಟುಂಬದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಂಚಿತ್ ಅವರ ಹೊಸ ಸಿನಿ ಪ್ರಯಣಕ್ಕೆ ಶುಭ ಹಾರೈಸುತ್ತಿದ್ದಾರೆ. 'ಮ್ಯಾಂಗೋ ಪಚ್ಚ' ಮೂಲಕ ಕನ್ನಡ ಚಿತ್ರ ರಂಗಕ್ಕೆ ಮತ್ತೊಬ್ಬ ಯುವ ನಾಯಕನ ಸೇರ್ಪಡೆ ಆಗಿದ್ದು, ಚಿತ್ರದ ಯಶಸ್ಸಿನ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿದೆ.
ನಟ ಸಂಚಿತ್ ಸಂಜೀವ್ ತಮ್ಮ ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. "ಬಹಳ ದಿನಗಳಿಂದ ಕಾಯುವಿಕೆ ನಂತರ ಇದು ಸಂಭವಿಸುತ್ತಿದೆ. ಜೂನ್ 5 ನನಗೆ ಸದಾ ನೆನಪಿನಲ್ಲುಳಿಯುವ ದಿನಾಂಕ ನನ್ನ ಸ್ನೇಹಿತರು ಕುಟುಂಬ ಮತ್ತು ಇಷ್ಟು ವರ್ಷಗಳಿಂದ ನನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಎಲ್ಲದಕ್ಕೂ ಋಣಿ, ದೀಪು ಮಾಮ. ಲೆಟ್ಸ್ ಗೋ!" ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಈ ಸಿನಿಮಾಗೆ ವಿವೇಕ್ ನಿರ್ದೇಶನ ಮಾಡಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಹೊಸ ಪ್ರತಿಭೆಯಾಗಿ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. 2001 ರಿಂದ 2011ರವರೆಗೆ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳನ್ನು ಆದರಿಸಿದ ಕಥಾಹಂದರ ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.
ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಹೊಸ ಕಥಾಹಂದರ ಮತ್ತು ನೈಜ ಘಟನೆಗಳ ಹಿನ್ನೆಲೆ ಹೊಂದಿರುವ ಈ ಸಿನಿಮಾ ಈಗಾಗಲೇ ಸಿನಿ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಸಂಚಿತ್ ಸಂಜೀವ್ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಂಡಿದ್ದಾರೆ. ಮಯೂರ್ ಪಟೇಲ್, ಮ್ಯಾಕ್ಸ್ ಮಂಜು, ಹರಿಣಿ ಶ್ರೀಕಾಂತ್, ಭಾವನಾ, ವಿಜಯ್ ರಾಘವೇಂದ್ರ ಅವರ ಅಕ್ಕನ ಮಗ ಜೇಯ್ , ಬಿಗ್ ಬಾಸ್ ಖ್ಯಾತಿಯ ನಟಿ ಹಂಸಾ, ಪ್ರಶಾಂತ್ ಹಿರೇಮಠ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.
ಈ ಸಿನಿಮಾದ ಮತ್ತೊಂದು ಆಕರ್ಷಣೆಯಂದ್ರೆ ಚರಣ್ ರಾಜ್ ಸಂಗೀತ ಹಾಗೂ ಶೇಖರ್ ಚಂದ್ರ ಅವರ ಕ್ಯಾಮೆರಾ ಕೈಚಳಕ. ವಿಶ್ವಾಸ್ ಈ ಚಿತ್ರಕ್ಕೆ ಆರ್ಟ್ ವರ್ಕ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರು ಸಂಚಿತ್ ಮೊದಲ ಕನಸಿಗೆ ಸಾಥ್ ಕೊಟ್ಟಿದ್ದಾರೆ. ಉಳಿದಂತೆ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ತಾರಾ ಅನುರಾಧ, ನಿರ್ಮಾಪಕ ಕೆ.ಮಂಜು ಸೇರಿದಂತೆ ಸುದೀಪ ಆತ್ಮೀಯರು ಈಗಾಗಲೇ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಸೋದರಳಿಯನ ಮೊದಲ ಸಿನಿಮಾ 'ಮ್ಯಾಂಗೋ ಪಚ್ಚ ' ಇದೀಗ ಬಿಡುಗಡೆ ಮುನ್ನವೇ ಭಾರಿಗಮನ ಸೆಳೆಯುತ್ತಿದೆ. ಚಿತ್ರತಂಡ ಅನಾವರಣಗೊಳಿಸಿರುವ ಹೊಸ ಪೋಸ್ಟರ್ ಮತ್ತು ಬ್ಯಾನರ್ ಗಳು ಅಭಿಮಾನಿಗಳಲ್ಲಿ ದೊಡ್ಡ ಕುತೂಹಲ ಮೂಡಿಸಿದೆ.
ವಿಶೇಷವಾಗಿ, ಈ ಸಿನಿಮಾದ ಬ್ಯಾನರ್ ನಲ್ಲಿ ಕನ್ನಡ ಚಿತ್ರರಂಗದ ಹಲವು ಹಿರಿಯ ನಟ - ನಟಿಯರ ಚಿತ್ರಗಳು ಸ್ಥಾನ ಪಡೆದಿದ್ದು, ಇದು ಅಭಿಮಾನಿಗಳ ಗಮನ ಸೆಳೆಯುತ್ತಿರುವ ಪ್ರಮುಖ ಅಂಶವಾಗಿದೆ. ನಗರದ ಸಂತೋಷ ಚಿತ್ರಮಂದಿರ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ "ಪಚ್ಚ" ನನ್ನು ಸ್ವಾಗತಿಸುವ ಸ್ಟಾರ್ ಫೋಟೋಗಳಿರುವ ಬ್ಯಾನರ್ ಗಳು ರಾರಾಜಿಸುತ್ತಿವೆ.
ಇನ್ನು ವಿಶೇಷವೆಂದರೆ, ಬ್ಯಾನರ್ ನಲ್ಲಿ ಕಿಚ್ಚ ಸುದೀಪ್ ಜೊತೆ ನಟ ದರ್ಶನ್ ಅವರ ಫೋಟೋ ಕೂಡ ಕಾಣಿಸಿಕೊಂಡಿದ್ದು, ಈ ದೃಶ್ಯ ಅಭಿಮಾನಿಗಳಲ್ಲಿ ಸಂತೋಷ ಮತ್ತು ಚರ್ಚೆಗೆ ಕಾರಣವಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬ್ಯಾನರ್ ಗಳ ಫೋಟೋಗಳು ಈಗ ವೈರಲ್ ಆಗುತ್ತಿವೆ.
"ಮ್ಯಾಂಗೋ ಪಚ್ಚ "ಸಿನಿಮಾ ಬಿಡುಗಡೆಗೂ ಮುನ್ನವೇ ಇಂತಹ ಸ್ಟಾರ್ ಫೀಚರ್ ಬ್ಯಾನರ್ ಗಳಿಂದ ಭರ್ಜರಿ ಹೈಪ್ ಕ್ರಿಯೇಟ್ ಮಾಡಿದೆ.
ಒಟ್ಟಾರೆ ಸುದೀಪ್ ಮ್ಯಾನರಿಸಂನಂತೆ ಕಾಣುವ ಸಂಚಿತ್ ಸಂಜೀವ್ ಅಭಿನಯಕ್ಕೆ ಪ್ರೇಕ್ಷಕರು ಏನಂತಾರೆ ಅನ್ನೋದು ಇಂದು ಗೊತ್ತಾಗಲಿದೆ. ನಾಳೆ ಮುಂಜಾನೆ ಲಭ್ಯವಾಗುವ ಕಲೆಕ್ಷನ್ ಅಂಕಿ ಅಂಶಗಳ ಮೇಲೆ ಎಲ್ಲರ ಗಮನವಿದೆ. ಭರ್ಜರಿ ಯಶಸ್ಸು ಸಿಗಲಿ ಎಂಬುದು ಅಭಿಮಾನಿಗಳ ಹಾರೈಕೆ.
Also Read:
ರಷ್ಯಾದಿಂದ ಭಾರತಕ್ಕೆ ಬೆಂಬಲದ ಸಂದೇಶ: ಚೀನಾ ವಿಚಾರದಲ್ಲಿ ಹಸ್ತಕ್ಷೇಪ ಇಲ್ಲ ಎಂದ ಪುಟಿನ್