Belsgavi news:
ಭಾರತದ ಖ್ಯಾತ ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿ ಅವರು ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಆತ್ಮೀಯ ಸಂಬಂಧವನ್ನು ದೇವಕಿ-ಯಶೋದೆಯ ಬಾಂಧವ್ಯಕ್ಕೆ ಹೋಲಿಸಿ ಮಾತನಾಡಿರುವುದು ಗಮನ ಸೆಳೆಯುತ್ತಿದೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸುಧಾ ಮೂರ್ತಿ ಅವರು ತಮ್ಮ ಮಾತಿನಲ್ಲಿ, ಭಾಷೆಗಳು ಕೇವಲ ಸಂವಹನದ ಸಾಧನಗಳಷ್ಟೇ ಅಲ್ಲ, ಅವು ಸಂಸ್ಕೃತಿ ಪರಂಪರೆ ಮತ್ತು ಭಾವನೆಗಳ ಪ್ರತಿಬಿಂಬ ಎಂದು ತಿಳಿಸಿದ್ದಾರೆ. ಕನ್ನಡ ಮತ್ತು ಮರಾಠಿ ಎರಡು ಭಾಷೆಗಳು ವಿಭಿನ್ನ ಮೂಲಗಳನ್ನು ಹೊಂದಿದ್ದರು, ಅವುಗಳ ನಡುವೆ ಇರುವ ಮನೋಭಾವ ಮತ್ತು ಪರಸ್ಪರ ಪ್ರಭಾವವು ದೇವಕಿ ಮತ್ತು ಯಶೋದೆ ಅಂತಹ ತಾಯಿತನದ ಮೆಂಟನ್ನು ನೆನಪಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸುಧಾ ಮೂರ್ತಿ ಅವರ ಈ ಮನದಾಳದ ಮಾತುಗಳು ಭಾಷಾ ಸೌಹಾರ್ದತೆ ಮತ್ತು ಸಂಸ್ಕೃತಿಗಳ ನಡುವಿನ ಒಗ್ಗಟ್ಟಿನ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಈ ಅಭಿಪ್ರಾಯವನ್ನು ಸ್ವಾಗತಿಸಿದ್ದು, ಭಾಷೆಗಳ ನಡುವೆ ಪ್ರೀತಿ ಮತ್ತು ಗೌರವ ಹೆಚ್ಚಿಸುವ ಸಂದೇಶವಾಗಿ ಇದನ್ನು ಕೊಂಡಾಡುತ್ತಿದ್ದಾರೆ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷ ಆಗಿರುವ ಸುಧಾ ಮೂರ್ತಿಯವರು ಕನ್ನಡ ಮತ್ತು ಮರಾಠಿ ಭಾಷೆಗಳ ನಡುವಿನ ಆತ್ಮೀಯ ಸಂಬಂಧವನ್ನು ವಿಶಿಷ್ಟವಾಗಿ ವಿವರಿಸಿ ಮತ್ತೆ ಗಮನ ಸೆಳೆದಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ಈ ಎರಡು ಭಾಷೆಗಳ ಸ್ಥಾನವನ್ನು ಭಾವನಾತ್ಮಕವಾಗಿ ಬಿಂಬಿಸಿದರು.
"ನನಗೆ ಕನ್ನಡ ನನ್ನ ಹೆತ್ತ ತಾಯಿ ಇದ್ದಂತೆ. ಮರಾಠಿ ಭಾಷೆ ನನಗೆ ಚಿಕ್ಕಮ್ಮ ಇದ್ದಂತೆ", ಎಂದು ಹೇಳಿದ ಸುಧಾ ಮೂರ್ತಿ, ಈ ಸಂಬಂಧವನ್ನು ಕೃಷ್ಣನ ದೇವಕಿ ಯಶೋಧೆಯ ಬಾಂಧವ್ಯಕ್ಕೆ ಹೋಲಿಸಿದರು."ಶ್ರೀ ಕೃಷ್ಣನಿಗೆ ದೇವಕಿ ಮತ್ತು ಯಶೋದೆ ಎಂಬ ಇಬ್ಬರು ತಾಯಂದಿರಿದಂತೆ, ನನಗೂ ಈ ಎರಡು ಭಾಷೆಗಳು ಅಷ್ಟೇ ಪ್ರಿಯ", ಎಂಬ ಅವರ ಮಾತುಗಳು ಕೇಳುಗರ ಮನಸ್ಸಿಗೆ ಸ್ಪರ್ಶಿಸಿವೆ.
ಅವರ ಈ ಅಭಿಪ್ರಾಯವೂ ಭಾಷೆಗಳು ಕೇವಲ ಸಂವಹನದ ಸಾಧನೆಗಳಷ್ಟೇ ಅಲ್ಲದೆ ಭಾವನೆ ಸಂಸ್ಕೃತಿ ಮತ್ತು ನಮ್ಮ ಬದುಕಿನ ಅನುಭವಗಳನ್ನು ಹೊತ್ತಿರುವ ಜೀವನ ನಂಟುಗಳಾಗಿವೆ ಎಂಬ ಸಂದೇಶವನ್ನು ನೀಡಿದರು. ಗಡಿಭಾಗಗಳಲ್ಲಿ ಕನ್ನಡ ಮತ್ತು ಮರಾಠಿ ಭಾಷಾಭಿಮಾನಿಗಳ ನಡುವೆ ಇರುವ ಪರಸ್ಪರ ಸಂಬಂಧ, ಸಹಬಾಳ್ವೆ ಮತ್ತು ಗೌರವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಸುಧಾ ಮೂರ್ತಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ಪಡೆಯುತ್ತಿದ್ದು, ಭಾಷಾ ಸೌಹಾರ್ದತೆ ಮತ್ತು ಏಕತೆಯ ಮಹತ್ವವನ್ನು ನೆನಪಿಸುವ ಸಂದೇಶವಾಗಿ ಜನರಿಗೆ ಮೆಚ್ಚುಗೆ ಗಳಿಸಿದೆ.
ಸುಧಾ ಮೂರ್ತಿಯವರ ಈ ಭಾಷಾ ಸೌಹಾರ್ದತೆ ಕುರಿತು ಮಹತ್ವ ಸಂದೇಶ ನೀಡಿದ ಘಟನೆಯು ದೇಶದ ವಿವಿಧ ಭಾಗಗಳಲ್ಲಿ ಚರ್ಚೆಗೆ ಕಾರಣವಾಗಿದೆ. ನಾವು ಎಲ್ಲಿ ವಾಸಿಸುತ್ತೇವೆಯೋ ಆ ರಾಜ್ಯದ ಭಾಷೆಯನ್ನು ಕಲಿಯಬೇಕು ಎಂಬುದನ್ನು ಅವರು ಸ್ಪಷ್ಟವಾಗಿ ಒತ್ತಿ ಹೇಳಿದರು.
ಮಹಾರಾಷ್ಟ್ರದಲ್ಲಿ ವಾಸಿಸುವ ಕನ್ನಡಿಗರು ಮರಾಠಿ ಕಲಿಯಬೇಕು, ಕರ್ನಾಟಕದಲ್ಲಿರುವ ಮರಾಠಿಗರು ಕನ್ನಡ ಕಲಿಯಬೇಕು ಎಂದು ಸಲಹೆ ನೀಡಿದ ಅವರು, ಇದು ಪರಸ್ಪರ ಗೌರವ ಮತ್ತು ಸಹ ಬಾಳ್ವೆಗೆ ಅಗತ್ಯ ಎಂದರು. ಸ್ಥಳೀಯ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಸಮಾಜದೊಂದಿಗೆ ನಂಟು ಬೆಳೆಸಲು ಸಹಾಯ ಮಾಡುತ್ತದೆ ಎಂಬುದನ್ನು ಅವರು ವಿವರಿಸಿದರು.
ಭಾಷೆ ಎಂಬುದು ಮನುಷ್ಯರನ್ನು ಮೆಸೆಯುವ ಸೇತುವೆಯಾಗಬೇಕು, ಹೊರತು ಗೋಡೆಯಾಗಬಾರದು", ಎಂಬ ಸಿದ್ದಾ ಮೂರ್ತಿಯವರ ಮಾತುಗಳು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ. ಈ ಹೇಳಿಕೆ ಭಾರತದಲ್ಲಿ ಭಾಷಾ ವೈವಿಧ್ಯತೆಯ ನಡುವಿನ ಏಕತೆ ಮತ್ತು ಸೌಹಾರ್ದತೆಯ ಮಹತ್ವವನ್ನು ಮತ್ತೆ ಮತ್ತೆ ಹೇಳುತ್ತವೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದು, ವಿವಿಧ ಭಾಷೆಗಳ ನಡುವೆ ಪ್ರೀತಿ ಗೌರವ ಮತ್ತು ಒಗ್ಗಟ್ಟನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ವಿಶೇಷವಾಗಿ ಗಡಿ ಭಾಗಗಳಲ್ಲಿ ಭಾಷಾ ಸಾಮರಸ್ಯ ಕಾಪಾಡಲು ಇಂತಹ ಮನೋಭಾವ ಅತ್ಯಂತ ಅಗತ್ಯವೆಂದು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
Also Read: