ಸೂಪರ್ ಸಂಡೆ! ಇಂದು ಭಾರತ-ಪಾಕ್ ಟಿ20 ಕದನ
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಕ್ರಿಕೆಟ್ ಪಂದ್ಯವಾಳಿಯಲ್ಲಿಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿವೆ. ಪಂದ್ಯ ನೇರಪ್ರಸಾರ,
IND vs PAK T20:
ಇದೀಗ ಪಾಕಿಸ್ತಾನ ಎ ವಿರುದ್ಧದ ಪಂದ್ಯದಲ್ಲೂ ಎಲ್ಲರ ಕಣ್ಣು ವೈಭವ್ ಮೇಲೆ ನೆಟ್ಟಿವೆ. ಅವರು ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಆಡುವ ನಿರೀಕ್ಷೆಯಿದೆ. ಮತ್ತೊಂದೆಡೆ ಪಾಕಿಸ್ತಾನವು ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಓಮನ್ ವಿರುದ್ಧ ಆಡಿ 40 ರನ್ಗಳಿಂದ ಗೆದ್ದಿತು. ಅವರು ಪ್ರಸ್ತುತ 2 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತ A ಮತ್ತು ಪಾಕಿಸ್ತಾನ A ನಡುವಿನ ಪಂದ್ಯ ಯಾವಾಗ ಪ್ರಾರಂಭವಾಗಲಿದೆ, ನೇರ ಪ್ರಸಾರ ಎಲ್ಲಿ ಎಂಬ ಮಾಹಿತಿ ಈ ಸುದ್ದಿಯಲ್ಲಿದೆ.
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025 ಕ್ರಿಕೆಟ್ ಟೂರ್ನಿಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗುತ್ತಿವೆ. ಜಿತೇಶ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ನವೆಂಬರ್ 14 ರಂದು ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ 148 ರನ್ಗಳ ಬೃಹತ್ ಗೆಲುವು ಸಾಧಿಸಿತು. ಇದರಲ್ಲಿ ವೈಭವ್ ಸೂರ್ಯವಂಶಿ 144 ರನ್ಗಳ ಸ್ಫೋಟಕ ಇನ್ನಿಂಗ್ಸ್ ಮೂಲಕ ಗಮನ ಸೆಳೆದಿದ್ದರು.
ಭಾರತ vs ಪಾಕಿಸ್ತಾನ ಪಂದ್ಯ ನೇರ ಪ್ರಸಾರ ಎಲ್ಲಿ?
ಭಾರತ ಮತ್ತು ಪಾಕಿಸ್ತಾನ ಪಂದ್ಯ ಸೋನಿ ಟೆನ್ ನೆಟ್ವರ್ಕ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸೋನಿ ಟೆನ್ 1 ಮತ್ತು ಸೋನಿ ಟೆನ್ 3 ಪಂದ್ಯ ಪ್ರಸಾರ ಆಗಲದೆ. ಅಭಿಮಾನಿಗಳು ಸೋನಿ ಲಿವ್ ಅಪ್ಲಿಕೇಶನ್ಗೆ ಲಾಗಿನ್ ಆಗುವ ಮೂಲಕ ಪಂದ್ಯವನ್ನು ಆನ್ಲೈನ್ನಲ್ಲಿಯೂ ನೇರಪ್ರಸಾರ ವೀಕ್ಷಿಸಬಹುದು.
ಭಾರತ vs ಪಾಕಿಸ್ತಾನ ಪಂದ್ಯ ಯಾವಾಗ, ಎಲ್ಲಿ, ಎಷ್ಟಕ್ಕೆ ಪ್ರಾರಂಭವಾಗಲಿದೆ?
ಭಾರತ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯವು ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಪ್ರಾರಂಭವಾಗಲಿದ್ದು, ಸಂಜೆ 7:30ಕ್ಕೆ ಟಾಸ್ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸಿ ಅಗ್ರ ಸ್ಥಾನದಲ್ಲಿ ಮುಂದುವರೆಯುವ ಯೋಜನೆ ರೂಪಿಸಿಕೊಂಡಿದೆ.
ಪಾಕಿಸ್ತಾನ ಎ:
ಯಾಸಿರ್ ಖಾನ್, ಮೊಹಮ್ಮದ್ ನಯೀಮ್, ಮೊಹಮ್ಮದ್ ಫೈಕ್, ಮಾಜ್ ಸದಾಕತ್, ಗಾಜಿ ಘೋರಿ (ವಿ.ಕೀ), ಇರ್ಫಾನ್ ಖಾನ್ (ನಾಯಕ), ಸಾದ್ ಮಸೂದ್, ಮುಬಾಸಿರ್ ಖಾನ್, ಉಬೈದ್ ಶಾ, ಅಹ್ಮದ್ ದಾನಿಯಾಲ್, ಮೊಹಮ್ಮದ್ ಸಲ್ಮಾನ್, ಪೃಥ್ವಿಕುಮಾರ್ ಮಚ್ಚಿ, ಹಸ್ನೈನ್ ಶಾಹ್, ಶುಐಬ್ ಅಲ್ ಬಲೂಶಿ, ಉಬೈದ್ ಉಲ್ಲಾಹ, ಎಂಡಿ ಯೂಸುಫ್.
ತಂಡಗಳು-ಭಾರತ ಎ:
ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ಜಿತೇಶ್ ಶರ್ಮಾ (ನಾಯಕ), ನೆಹಾಲ್ ವಧೇರಾ, ರಮಣದೀಪ್ ಸಿಂಗ್, ಅಶುತೋಷ್ ಶರ್ಮಾ, ಹರ್ಷ್ ದುಬೆ, ವಿಜಯ್ ಕುಮಾರ್ ವೈಶಾಕ್, ಗುರ್ಜಪ್ನೀತ್ ಸಿಂಗ್, ಸುಯಶ್ ಶರ್ಮಾ, ಯಶ್ ಠಾಕೂರ್, ಯುಧ್ವೀರ್ ಸಿಂಗ್ ಚರಕ್, ಅಭಿಷೇಕ್ ಪೊರೆಲ್, ನಮನ್ ಧೀರ್, ಸೂರ್ಯಾಂಶ್ ಶೆಡ್ಜೆ.
ಇನ್ನಷ್ಟು ಓದಿರಿ :
ಶುಭ್ಮನ್ ಗಿಲ್ ಮೈದಾನಕ್ಕೆ ಮರಳುವುದು ಯಾವಾಗ? ಬಿಸಿಸಿಐ ಹೇಳಿದ್ದೇನು?