Belagavi news:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಫೈನಲ್ ಕ್ಷಣಗಣನೆ ಆರಂಭವಾಗಿದೆ. ಮೊದಲ ಕ್ವಾಲಿಫೈಯರ್ ನಲ್ಲಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದ್ವಿತೀಯ ಕ್ವಾಲಿಫೈಯರ್ ನಲ್ಲಿ ಗೆದ್ದಿರುವ ಗುಜರಾತ್ ಟೈಟಲ್ ತಂಡಗಳು ಇಂದು ಅಹಮದಾಬಾದ್ ನ ರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಮುಖಾಮುಖಿಯಾಗಲಿವೆ.
ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದಲ್ಲಿ ಪ್ರಮುಖ ಪ್ರಶ್ನೆ ಎದ್ದಿದೆ. ತಂಡದ ಪ್ರಮುಖ ಆಟಗಾರ ಫಿಲ್ ಸಾಲ್ಟ್ ಕಣಕ್ಕಿಳಿಯಲಿದ್ದಾರಾ ಎಂಬ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಕುರಿತು ಆರ್‌ಸಿಬಿ ನಾಯಕ ರಜತ್ ಪಟಿದಾರ್ ನೀಡಿರುವ ಹೇಳಿಕೆ ಅಭಿಮಾನಿಗಳಲ್ಲಿ ಇನ್ನಷ್ಟು ಸಸ್ಪೆನ್ಸ್ ಸ್ಪಷ್ಟಿಸಿದೆ.
ಪಂದ್ಯದ ತಂಡದ ಸಂಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ಪಟಿದಾರ್ ನಿಗೂಢತೆಯನ್ನು ಕಾಯ್ದುಕೊಂಡಿದ್ದಾರೆ. ಫೈನಲ್ ನಂತಹ ಮಹತ್ವದ ಪಂದ್ಯದಲ್ಲಿ ಅಂತಿಮ ಪ್ಲೇಯಿಂಗ್ ಬಗ್ಗೆ ನಿರ್ಧಾರವನ್ನು ಕೊನೆ ಕ್ಷಣದಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸುವೆ.
ಈ ನಡುವೆ ಆರ್‌ಸಿಬಿ ಮತ್ತು ಜಿಟಿ ನಡುವಿನ ಈ ಹೈ ವೋಲ್ಟೇಜ್ ಫೈನಲ್ ಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪ್ರಮುಖ ಆಟಗಾರ ಫಿಲ್ ಸಾಲ್ಟ್ ಅವರ ಭಾಗವಹಿಸುವಿಕೆ ಕುರಿತು ಕುತೂಹಲ ಮುಂದುವರಿದಿದೆ.
ಏಪ್ರಿಲ್ 18ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಬೆರಳಿಗೆ ಗಾಯಗೊಂಡಿದ್ದ ಫಿಲ್ ಸಾಲ್ಟ್ ಚಿಕಿತ್ಸೆಗಾಗಿ ಇಂಗ್ಲೆಂಡ್ ಗೆ ತೆರಳಿದ್ದರು. ನಂತರ ಅವರು ತಂಡವನ್ನು ಮತ್ತೆ ಸೇರಿಸಿಕೊಂಡಿದ್ದರು, ಮೊದಲು ಕ್ವಾಲಿಫಯರ್ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸಲಾಗಿರಲಿಲ್ಲ.
ಈ ನಡುವೆ ಆರ್‌ಸಿಬಿ ಫೈನಲ್ ಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ, ಫಿಲ್ ಸಾಲ್ಟ್ ಅವರನ್ನು ಅಂತಿಮ ಪ್ಲೇಯಿಂಗ್ ಇಲೆವೆನ್ ನಲ್ಲಿ ಸೇರಿಸಲಾಗುತ್ತದೆ ಎಂಬ ಪ್ರಶ್ನೆಗೆ ನಾಯಕ ರಜತ್ ಪಟಿದಾರ್ ಕಷ್ಟ ಉತ್ತರ ನೀಡಿದ್ದಾರೆ.
ಫೈನಲ್ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಟಿದಾರ್, ಫಿಲ್ ಸಾಲ್ಟ್ ಸಂಪೂರ್ಣ ಕ್ಟ್ ಆಗಿದ್ದಾರೆ ಮತ್ತು ಅಭ್ಯಾಸ ಸ್ಪೆಷಲ್ ಗಳಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರವೇ ಅಂತಿಮ ಪ್ಲೇಯಿಂಗ್ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೀಗಾಗಿ ಫೈನಲ್ ಪಂದ್ಯದಲ್ಲಿ ಫಿಲ್ ಸಾಲ್ಟ್ ಕಣಕ್ಕಿಳಿಯುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂಬುದು ಸ್ಪಷ್ಟವಾಗಿದ್ದು, ಅಭಿಮಾನಿಗಳ ಕುತೂಹಲ ಇನ್ನು ಮುಂದುವರೆದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಸಂಯೋಜನೆ ಕುರಿತು ಕುತೂಹಲ ಹೆಚ್ಚಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ಫಿಲ್ ಸಾಲ್ಟ್ ಅವರ ಬದಲಿಗೆ ಯಾರು ಕಣಕ್ಕಿಳಿಯುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಚರ್ಚೆಗೆ ಕಾರಣವಾಗಿದೆ.
ಒಂದು ವೇಳೆ ಫೀಲ್ ಸಾಲ್ಟ್ ಫೈನಲ್ ಪಂದ್ಯದಲ್ಲಿ ಆಡದೆ ಇದ್ದರೆ, ವಿರಾಟ್ ಕೊಹ್ಲಿ ಜೊತೆ ಆರಂಭಿಕನಾಗಿ ವೆಂಕಟೇಶ್ ಅಯ್ಯರ್ ಮುಂದುವರೆಯುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿ ಅಯ್ಯರ್ ಸ್ಪೋಟಕ ಆರಂಭ ನೀಡಿ ತಂಡಕ್ಕೆ ಉತ್ತಮ ವೇಗ ನೀಡಿದ್ದರು. ಹೀಗಾಗಿ ಅವರು ಮತ್ತೊಮ್ಮೆ ಈವನಿಂಗ್ ಆರಂಭಿಸುವ ನಿರೀಕ್ಷೆ ಇದೆ.
ತಂಡದ ನಾಯಕ ರಜತ್ ಪಟಿದಾರ್ ಅವರ ತಂತ್ರದ ಪ್ರಕಾರ, ಆರಂಭಿಕ ಜೋಡಿ ಕೊಹ್ಲಿ ಮತ್ತು ಅಯ್ಯರ್ ಆಗುವ ಸಾಧ್ಯತೆ ಹೆಚ್ಚಾಗಿ ಇದೆ ಎಂದು ಮೂಲಗಳು ತಿಳಿಸುವೆ.
ಇನ್ನೊಂದೆಡೆ ವಿದೇಶಿ ಆಟಗಾರರ ಸಂಯೋಜನೆ ಕುರಿತು ಕೂಡ ಚರ್ಚೆ ನಡೆಯುತ್ತಿದ್ದು, ಟೀಮ್ ಡೆವಿಡ್, ಜೋಶ್ ಹೆಝಲ್ ವುಡ್ , ರೋಮಾರಿಯೋ ಶೆಫರ್ಡ್ ಹಾಗೂ ಜೆಕೆಬ್ ಡಫಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಪಿಚ್ ಪರಿಸ್ಥಿತಿ ಮತ್ತು ಎದುರಾಳಿ ತಂಡದ ತಂತ್ರವನ್ನು ಗಮನಿಸಿ ಅಂತಿಮ ಪ್ಲೇಯಿಂಗ್ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಂಡದ ಮೂಲಗಳು ತಿಳಿಸಿವೆ.
ಫೈನಲ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಅಂತಿಮ ಸಂಯೋಜನೆ ಕುರಿತು ಕುತೂಹಲ ಇನ್ನೂ ಮುಂದುವರೆದಿದೆ.
Also Read:
ಕೆಪಿಸಿಸಿ ಅಧ್ಯಕ್ಷ ಯಾರಾಗಬಹುದು ? ಮಲ್ಲಿಕಾರ್ಜುನ್ ಖರ್ಗೆ ನೀಡಿದ ಹೊಸ ಸುಳಿವು