ಚೆನ್ನೈನಲ್ಲಿ ನಡೆದ ಟಿ20 ವಿಶ್ವಕಪ್ 4ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಐದು ವಿಕೆಟ್ ಗಳಿಂದ ಸೋತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ಗಳಲ್ಲಿ 182 ರನ್ ಗಳಿಸಿತು.ಕಿವೀಸ್ 17.5 ಓವರ್ ಗಳಲ್ಲಿ 183 ರನ್ ಗಳ ಗುರಿಯನ್ನು ತಲುಪಿ ಗೆಲುವನ್ನು ಪಡೆದುಕೊಂಡರು. ಕಳೆದ ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ತಂಡವು ಈಗ ಸೇಡು ತೀರಿಸಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಯನ್ನು ಆಫ್ಘಾನಿಸ್ತಾನ ತಂಡವು ಮಾಡಿಕೊಂಡಿತು.
183 ರನ್ಗಳ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. ನಂತರ ಟಿಮ್ ಸೀಪರ್ಟ್ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅರ್ಧಶತಕವದೊಂದಿಗೆ ಇನ್ನಿಂಗ್ಸ್ ಅನ್ನು ಮುಂದುವರಿಸಿದರು. ಅವರು 65 ರನ್ಗಳನ್ನು ಪಡೆದು ಔಟಾದರು. ನ್ಯೂಜಿಲೆಂಡ್ ತಂಡ 16 ಓವರ್ ಗಳಲ್ಲಿ ಐದು ವಿಕೆಟ್ ಗಳಿಗೆ 155 ರನ್ ಗಳಿಸಿತು. ನಂತರ ಮಿಚೆಲ್ ಸ್ಯಾಂಟ್ನರ್ 17 ರನ್ ಮತ್ತು ಡ್ಯಾರಿಲ್ ಮಿಚೆಲ್ 25 ರನ್ ಗಳನ್ನು ಬಾರಿಸಿ ತಂಡವನ್ನು 17.5 ಓವರ್ ಗಳಿಗೆ ಗೆಲುವನ್ನು ಸಾಧಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭವನ್ನು ಕಳಪೆಯಾಗಿ ಶುರುಮಾಡಿದ್ದು ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು. ಇಬ್ರಾಹಿಂ ಝದ್ರಾನ್ ಅವರು 10 ಓವರ್ ಗಳಲ್ಲಿ ಔಟಾದರು. ಆ ಓವರ್ ನಲ್ಲಿ ಕೊನೆಯ ಎಸೆತದಲ್ಲಿ ಗುರ್ಬಾಜ್ ಅವರು ಔಟಾದರು. ಲಾಕಿ ಫರ್ಗುಸನ್ ಎರಡು ವಿಕೆಟ್ ಪಡೆದುಕೊಂಡರು. ತದನಂತರ ಗುಲ್ಬಾದೀನ್ ಮತ್ತು ಸೆಡಿಕುಲ್ಲಾ ಅವರ ಜೊತೆ ಆಟದಿಂದ 79 ರನ್ ಗಳಿಸಿ 150ರ ಗಳಿಸಿದರು. ನಂತರ ಅಫ್ಘಾನಿಸ್ತಾನವನ್ನು 20 ಓವರ್ ಗಳಲ್ಲಿ 182/6ಕ್ಕೆ ಆಟವನ್ನು ಮುಗಿಸಿದರು.
ಅಪಘಾನಿಸ್ತಾನವು ಟಿ -20 ಅಂತರಾಷ್ಟ್ರೀಯ ಪಂದ್ಯದಲ್ಲಿ 175ಕ್ಕೂ ಹೆಚ್ಚು ರನ್ ಗಳಿಸಿ ಇದೇ ಮೊದಲ ಬಾರಿಗೆ ಸೋತಿದೆ. 83 ರನ್ ಗಳ ಗುರಿಯು ಇದುವರೆಗೆ ಅಪಘಾನಿಸ್ತಾನ ವಿರುದ್ಧದ ಅತ್ಯಧಿಕ ರನ್ ಚೇಂಜ್ ಆಗಿದೆ. ಇದುವರೆಗೆ 27 ಪಂದ್ಯಗಳಲ್ಲಿ ವಿರುದ್ಧ ತಂಡಗಳ 175ಕ್ಕೂ ಹೆಚ್ಚು ರನ್ ಗಳ ಗುರಿಯನ್ನು ನೀಡಿ ಅದರಲ್ಲಿ 26 ಬಾರಿ ಗೆಲುವನ್ನು ಸಾಧಿಸಿದ್ದಾರೆ. ಇದೇ ಮೊದಲ ಬಾರಿಗೆ ಹೆಚ್ಚು ರನ್ ಗಳಿಸಿ ಸೋತಿದ್ದು. ನ್ಯೂಜಿಲೆಂಡ್ ತಂಡ ಈಗ ಒಂದು ದೊಡ್ಡ ಸಾಧನೆಯನ್ನು ಮಾಡಿದೆ. ಈ ಸಾಧನನ್ನು ಮಾಡಿದ ಮೊದಲ ತಂಡವಾಗಿದೆ.
ಇನ್ನಷ್ಟು ಓದಿರಿ:
ಅಪ್ಪು ವಿಚಾರದಲ್ಲಿ ತಾಳ್ಮೆ ಇಲ್ಲ : ನಟ ಶ್ರೀ ಮುರಳಿ ಕಠಿಣ ಎಚ್ಚರಿಕೆ