<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಟಿಎಂಸಿ ಒಳ ರಾಜಕೀಯ ಕದನ:ಸಾಮ್ರಾಜ್ಯ ಕುಸಿತದ ಸೂಚನೆಗಳೇ?

ಟಿಎಂಸಿ ಒಳ ರಾಜಕೀಯ ಕದನ:ಸಾಮ್ರಾಜ್ಯ ಕುಸಿತದ ಸೂಚನೆಗಳೇ?
Summary: There is a lot of talk in political circles that the winds of dissent have intensified within the ruling Trinamool Congress in West Bengal politics.

belagavi news :

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಆಡಳಿತ ರೂಢ ತೃಣಮೂಲ ಕಾಂಗ್ರೆಸ್ಒಳಗೆ ಗಂಭೀರ ಆಂತರಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.ಪಕ್ಷದ ಭವಿಷ್ಯ ಮತ್ತು ಏಕತೆ ಕುರಿತು ಪ್ರಶ್ನೆಗಳು ಹೆಚ್ಚುತ್ತಿರುವ ಹಿನ್ನೆಲೆ,ಟಿಎಂಸಿಯಲ್ಲಿ ಭಿನ್ನಮತದ ಗಾಳಿ ಜೋರಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವಿಧಾನಸಭಾ ಚುನಾವಣೆಯ ನಂತರ ಪಕ್ಷದೊಳಗಿನ ಅ ಸಮಾಧಾನ ಕ್ರಮೇಣ ಹೆಚ್ಚುತ್ತಿದ್ದು,ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಹಲವಾರು ನಾಯಕರನ್ನು ಉಚ್ಛಾಟಿಸಲಾಗಿದೆ. ಈ ಕ್ರಮವೇ ಪಕ್ಷದೊಳಗಿನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಅರ್ಧಕ್ಕಿಂತ ಹೆಚ್ಚು ಶಾಸಕರು ನಾಯಕತ್ವದ ದಿಕ್ಕು ಮತ್ತು ಆಡಳಿತ ಶೈಲಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.ಇದರಿಂದ ಟಿಎಂಸಿಯಲ್ಲಿ ಇಬ್ಬಾಗದ ಲಕ್ಷಣಗಳು ಕಾಣಿಸುತ್ತಿವೆ ಎಂಬ ಊಹಾಪೋಹಗಳು ಹೆಚ್ಚಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೂ ರಾಜಕೀಯವಾಗಿ ದೊಡ್ಡ ಸವಾಲ್ ಆಗಿ ಪರಿಣಮಿಸಬಹುದು ಎಂಬ ವಿಶ್ಲೇಷಣೆ ನಡೆಯುತ್ತಿದೆ.ಪಕ್ಷದ ಒಳ ರಾಜಕೀಯ ತಣಾವಣೆ ಮುಂದಿನ ದಿನಗಳಲ್ಲಿ ಯಾವ ದಿಕ್ಕಿಗೆ ಸಾಗಲಿದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.

ಈಗಾಗಲೇ,ಟಿಎಂಸಿ ನಾಯಕರು ಸಾರ್ವಜನಿಕರಿಂದ ಬ್ಯಾಕ್' ಲ್ಯಾಶ್ ಎದುರಿಸುತ್ತಿದ್ದಾರೆ.ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ದಾಳಿಯ ನಂತರ,ಮತ್ತೋರ್ವ ಸಂಸದ ಕಲ್ಯಾಣ್ ಬ್ಯಾನರ್ಜಿ ಮೇಲು ದಾಳಿ ನಡೆದಿತು.ಈ ಘಟನೆಯನ್ನು ಟಿಎಂಸಿಯು,ಬಿಜೆಪಿಯ ತಲೆಗೆ ಕಟ್ಟಲು ನೋಡಿದರು,ಇಷ್ಟು ವರ್ಷದ ನಿಮ್ಮ ದುರಾಡಳಿತದ ಫಲವನ್ನು ನೀವು ಅನುಭವಿಸಲು ಆರಂಭಿಸಿದ್ದೀರಿ ಎಂದು ಬಿಜೆಪಿ ಪ್ರತ್ಯುತ್ತರ ನೀಡಿದೆ.

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಒಳಗಿನ ಭಿನ್ನಮತ ಬಹಿರಂಗವಾಗಿ ಸ್ಫೋಟಗೊಂಡಿದೆ.ಪಕ್ಷದೊಳಗಿನ ಬಿರುಕುಗಳು ನಿಜವೆಂದು ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಫೇಸ್ ಬುಕ್ ಲೈವ್ ನಲ್ಲಿ ಒಪ್ಪಿಕೊಂಡಿದ್ದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಲೈವ್ ಸಂವಾದದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ,ಪಕ್ಷದ ಕೆಲ ನಾಯಕರು ಪಕ್ಷದ ಹಿತಕಿಂತ ಸ್ವಹಿತಾ ಸತ್ತಿಗೆ ಹೆಚ್ಚು ಒತ್ತು ನೀಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಟಿಎಂಸಿ ಯನ್ನು ವಿಭಾಗ ಮಾಡುವ ರೀತಿಯ ಪಿತೂರಿ ನಡೆಯುತ್ತಿದೆ ಎಂಬುದನ್ನು ಅವರು ಸ್ಪಷ್ಟವಾಗಿ ಕಿಡಿಕಾರಿದ್ದಾರೆ.

ಇದೇ ವೇಳೆ,ಪಕ್ಷದ ನಾಯಕರಿಗೆ ಪೊಲೀಸ್ ವ್ಯವಸ್ಥೆಯ ಮೂಲಕ ಒತ್ತಡ ಹಾಕಲಾಗುತ್ತಿದೆ ಹಾಗೂ ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಸೂಚನೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಅವರು ಫೇಸ್ಬುಕ್ ನಲ್ಲಿ ಹೊರ ಹಾಕಿದ್ದಾರೆ.

ಈ ಹೇಳಿಕೆಗಳು ಟಿಎಂಸಿ ಒಳ ರಾಜಕೀಯ ಬಿಕ್ಕಟ್ಟನ್ನು ಬಹಿರಂಗಗೊಳಿಸಿದ್ದು,ಪಕ್ಷದ ಏಕತೆ ಮತ್ತು ನಾಯಕತ್ವದ ಮೇಲೆ ಹೊಸ ಪ್ರಶ್ನೆಗಳನ್ನು ಎತ್ತಿವೆ.ಮುಂದಿನ ದಿನಗಳಲ್ಲಿ ಈ ವಿವಾದ ಯಾವ ದಿಕ್ಕಿಗೆ ಸಲಿದೆ ಎಂಬುದರ ಬಗ್ಗೆ ರಾಜಕೀಯ ವಲಯದ ಗಮನ ಸೆಳೆದಿದೆ.

ವಿಶೇಷವಾಗಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಪಾತ್ರದ ಬಗ್ಗೆ ಕೆಲವು ನಾಯಕರಲ್ಲಿ ಅಸಮಾಧಾನ ಇದೆ ಎಂಬ ಪಕ್ಷದ ಒಳಗಡೆ ಚರ್ಚೆಯಾಗುತ್ತಿದೆ.ಇತ್ತೀಚಿನ ಚುನಾವಣಾ ಫಲಿತಾಂಶಗಳ ಬಳಿಕ ಈ ಅಸಮಾಧಾನ ಹೆಚ್ಚಾಗಿದೆ ಎಂದು ಕೆಲ ನಾಯಕರು ಪರೋಕ್ಷವಾಗಿ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.

ಪಕ್ಷದ ಹಿರಿಯ ನಾಯಕರುಗಳಾದ sangata Roy, Santanu sen ಮತ್ತು Arup chakraborty ಸೇರಿದಂತೆ ಕೆಲವು ಪ್ರಮುಖ ನಾಯಕರು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.ಇದರ ಜೊತೆಗೆ ಕೆಲವು ಪಕ್ಷದ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ ಎಂಬ ಮಾಹಿತಿಯು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಅದೇ ವೇಳೆ, manoj Tiwari, Raj chakraborty ಮತ್ತು ಅಭಿಷೇಕ್ ಮಜುಂದಾರ ಸೇರಿದಂತೆ ಕೆಲ ನಾಯಕರು ಪಕ್ಷದ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ,ರಾಜೀನಾಮೆಗಳು,ಅಂತರಾಳದ ಅಸಮಾಧಾನ ಮತ್ತು ಸಾರ್ವಜನಿಕ ಪ್ರಕ್ರಿಯೆಯ ಕೊರತೆ ಸೇರಿ ಟಿಎಂಸಿ ಈಗ ಗಂಭೀರ ಸಂಘಟನಾ ಸಂಕಷ್ಟವನ್ನು ಎದುರಿಸುತ್ತಿದೆ ಎಂಬ ಚಿತ್ರಣ ಮೂಡುತ್ತಿದೆ.

ಪಕ್ಷವು "ಇದು ನಾಯಕರಿಂದ ನಡೆಯುವ ಪಾರ್ಟಿಯಲ್ಲ, ಕಾರ್ಯಕರ್ತರಿಂದ ನಡೆಯುವ ಪಕ್ಷ" ಎಂದು ಹೇಳಿಕೆ ನೀಡಿದೆ.ಎಷ್ಟೇ ರೀತಿಯ ವಿಭಜನೆಗೆ ಪ್ರಯತ್ನ ನಡೆದರು,ಪಕ್ಷವನ್ನು ಮತ್ತೆ ಕಟ್ಟಿಕೊಳ್ಳುವ ಶಕ್ತಿ ತಮ್ಮಲ್ಲಿದೆ ಎಂದು ಟಿಎಂಸಿ ನಾಯಕತ್ವವೂ ಒತ್ತಿ ಹೇಳಿದೆ.

ಆದರೆ ಪಕ್ಷದ ಒಳಗಿನ ಕೆಲವು ವಲಯಗಳಲ್ಲಿ,ನಾಯಕತ್ವದ ಕೇಂದ್ರ ಬಿಂದುಗಳಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಇವರ ನಡುವಿನ ಭಿನ್ನಾಭಿಪ್ರಾಯಗಳೆ ಅಸಮಾಧಾನದ ಮೂಲವೆಂದು ಚರ್ಚೆ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ, ಟಿಎಂಸಿ ಸಂಪೂರ್ಣವಾಗಿ ಖುಷಿಯುವ ಸಾಧ್ಯತೆ ಕಡಿಮೆ ಇದ್ದರೂ,ಪಕ್ಷ ಒಳಗೊಳಗೆ ವಿಭಜನೆಯತ್ತ ಸಾಗಬಹುದು ಎಂಬ ಪ್ರಶ್ನೆ ರಾಜಕೀಯ ವಿಶ್ಲೇಷಕರಲ್ಲಿ ಎದ್ದಿದೆ.

ಇದನ್ನು ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳೊಂದಿಗೆ ಹೋಲಿಸಲಾಗುತ್ತಿದೆ ಅಲ್ಲಿ uddhar Thackeray ಮತ್ತು Sharad Pawar ಅವರ ಪಕ್ಷಗಳಲ್ಲಿ ನಾಯಕತ್ವ ಮತ್ತು ಸಂಘಟನಾ ನಿಯಂತ್ರಣದ ಪ್ರಶ್ನೆಗಳು ಗಂಭೀರ ಚರ್ಚೆಗೆ ಕಾರಣವಾಗಿದ್ದವು.

ಒಟ್ಟಿನಲ್ಲಿ,ಟಿಎಂಸಿ ಒಳಗಿನ ಶಕ್ತಿ ಸಮತೋಲನ,ನಾಯಕತ್ವದ ಪಾತ್ರ ಮತ್ತು ಕಾರ್ಯಕರ್ತರ ನಿಷ್ಠೆ ಈ ಮೂರು ಅಂಶಗಳು ಮುಂದಿನ ದಿನಗಳಲ್ಲಿ ಪಕ್ಷದ ಭವಿಷ್ಯವನ್ನು ನಿರ್ಧರಿಸಬಹುದಾದ ಪ್ರಮುಖ ಅಂಶಗಳಾಗಿ ಕಾಣಿಸುತ್ತಿವೆ.

Also Read:

ಸಮುದ್ರವನ್ನು ಮೊದಲ ಬಾರಿ ಕಂಡ 87 ವರ್ಷದ ಅಜ್ಜಿ : ಅಜ್ಜಿಯ ಖುಷಿ ನೋಡಿ ಹೇಗಿದೆ..

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online