<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಸಮುದ್ರವನ್ನು ಮೊದಲ ಬಾರಿ ಕಂಡ 87 ವರ್ಷದ ಅಜ್ಜಿ : ಅಜ್ಜಿಯ ಖುಷಿ ನೋಡಿ ಹೇಗಿದೆ..

ಸಮುದ್ರವನ್ನು ಮೊದಲ ಬಾರಿ ಕಂಡ 87 ವರ್ಷದ ಅಜ್ಜಿ : ಅಜ್ಜಿಯ ಖುಷಿ ನೋಡಿ ಹೇಗಿದೆ..
Summary: 87-year-old grandmother visits the beach for the first time in her life. Her emotional reaction to seeing the waves is now going viral on social media

Belagavi news:

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಕೆಲವೊಂದು ವಿಡಿಯೋಗಳು ಮಾತ್ರ ಹೃದಯವನ್ನು ಮುಟ್ಟುವ ಮೂಲಕ ವಿಶೇಷ ಸ್ಥಾನ ಪಡೆಯುತ್ತವೆ. ಅಂತಹದೇ ಒಂದು ಭಾವನಾತ್ಮಕ ಫೋಟೋ ಇದೀಗ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದ್ದು, ಲಕ್ಷಾಂತರ ಜನರ ಮನ ಗೆದ್ದಿದೆ.

87 ವರ್ಷದ ಅಜ್ಜಿಯವರು ತಮ್ಮ ಜೀವನದಲ್ಲೇ ಮೊದಲ ಬಾರಿಗೆ ಸಮುದ್ರ ತೀರಕ್ಕೆ ಭೇಟಿ ನೀಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಟುಂಬ ಸದಸ್ಯರ ಪ್ರೀತಿ, ಕಾಳಜಿ ಮತ್ತು ಬೆಂಬಲದಿಂದ ಅಜ್ಜಿಯ ಬಹುಕಾಲದ ಕನಸು ನನಸಾಗಿದ್ದು, ಈ ಕ್ಷಣವನ್ನು ಕಂಡ ನೆಟ್ಟಿಗರು ಭಾವುಕರಾಗಿದ್ದಾರೆ.

ವಿಡಿಯೋದಲ್ಲಿ ಅಜ್ಜಿ ಮೊದಲ ಬಾರಿಗೆ ಸಮುದ್ರದ ಅಲೆಗಳನ್ನು ನೋಡಿ ಅನುಭವಿಸುವ ದೃಶ್ಯಗಳು ಕಾಣಿಸುತ್ತವೆ. ಸಮುದ್ರದ ಸೌಂದರ್ಯವನ್ನು ಕಣ್ತುಂಬಿ ಕೊಂಡ ಅವರು ಮಗುವಿನಂತೆ ಖುಷಿಪಟ್ಟಿದ್ದು, ಅವರ ಮುಖದಲ್ಲಿ ಸಂತಸ ನೋಡುಗರ ಹೃದಯವನ್ನು ಸ್ಪರ್ಶಿಸಿದೆ.

ಈ ವಿಶೇಷ ಕ್ಷಣವನ್ನು ಕುಟುಂಬ ಸದಸ್ಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರ ಕೆಲವೊಂದು ಫೋಟೋಗಳನ್ನು ನೀವು ಈಗ ನೋಡುತ್ತಿದ್ದೀರಿ, ವಿಡಿಯೋವನ್ನು ನೋಡಿದ ಅನೇಕರು" ಹಿರಿಯರ ಆಸೆಗಳನ್ನು ಈಡೇರಿಸುವುದೇ ನಿಜವಾದ ಪ್ರೀತಿ", " ಇಂತಹ ಕ್ಷಣಗಳೇ ಜೀವನದ ನಿಜವಾದ ಸಂತೋಷ" ಎಂದು ಕಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಇಂದಿನ ವೇಗದ ಜೀವನದಲ್ಲಿ ಹಿರಿಯರ ಕನಸುಗಳು ಮತ್ತು ಆಸೆಗಳಿಗೆ ಸಮಯ ನೀಡುವುದು ಎಷ್ಟು ಮುಖ್ಯ ಎಂಬುದನ್ನು ಈ ಒಂದು ಫೋಟೋಗಳ ಮುಖಾಂತರ ನೆನಪಿಸಿದೆ. ವಯಸ್ಸು ಎಷ್ಟೇ ಆಗಿರಲಿ, ಕನಸುಗಳಿಗೆ ಅಂತ್ಯವಿಲ್ಲ ಎಂಬ ಸಂದೇಶವನ್ನು ಕೂಡ ಇದು ಸಾರುತ್ತಿದೆ.

ಸದ್ಯ ಈ ಹೃದಯ ಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ನಟಿಗರ ಮನ ಗೆಲ್ಲುತ್ತಿದೆ. ಕುಟುಂಬದ ಪ್ರೀತಿ ಮತ್ತು ಕಾಳಜಿಯಿಂದ ಅಜ್ಜಿಯ ಚಿಕ್ಕ ಕನಸು ನನಸಾಗರ ಈ ಕ್ಷಣ ಹಲವರ ಕಣ್ಣಾಲಿಗಳನ್ನೂ ಒದ್ದೆ ಮಾಡಿದೆ.

87ರ ಅಜ್ಜಿಯ ಸಮುದ್ರ ಕನಸು ನನಸು ಮಾಡಿದ ಕುಟುಂಬ :

ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ವಿಡಿಯೋಗಳು ಅಪಾರವಾಗಿ ಮಾತ್ರ ಹೃದಯವನ್ನು ಮುಟ್ಟುತ್ತವೆ. ಅಂತಹದೇ ಒಂದು ಮನಮುಟ್ಟುವ ವಿಡಿಯೋ ಇದೀಗ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಮನ ಗೆದ್ದಿದೆ.

"ಹರ್ಷೆ ಇನೇನಿ" ಎಂಬ ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ 87 ವರ್ಷದ ಅಜ್ಜಿ ತಮ್ಮ ಜೀವನದಲ್ಲೇ ಮೊದಲ ಬಾರಿಗೆ ಸಮುದ್ರ ತೀರಕ್ಕೆ ಭೇಟಿ ನೀಡುತ್ತಿರುವ ದೃಶ್ಯ ಕಾಣಿಸುತ್ತದೆ. ತಮ್ಮ ಇಡೀ ಜೀವನವನ್ನು ಕುಟುಂಬದವರ ಆರೈಕೆ ಮತ್ತು ಜವಾಬ್ದಾರಿಗಳಲ್ಲೇ ಕಳೆದಿದ್ದ ಅಜ್ಜಿಗೆ ಸಮುದ್ರವನ್ನು ನೋಡುವ ಅವಕಾಶ ಎಂದಿಗೂ ಸಿಕ್ಕಿರಲಿಲ್ಲ.

ಈ ವಿಚಾರವನ್ನು ಅರಿತ ಕುಟುಂಬ ಸದಸ್ಯರು ಅಜ್ಜಿಯ ಕನಸನ್ನು ನನಸಾಗಿಸಲು ವಿಶೇಷ ಯೋಜನೆ, ರೂಪಿಸಿದ್ದರು. ಅಜ್ಜ-ಅಜ್ಜಿ, ತಾಯಿ ಸೇರಿದಂತೆ ಹಲವು ತಲೆಮಾರುಗಳ ಕುಟುಂಬ ಸದಸ್ಯರು ಒಟ್ಟಾಗಿ ಸಮುದ್ರ ತೀರಕ್ಕೆ ತೆರಳಿ ಒಂದು ಕನಸನ್ನು ಸಾಕಾರಗೊಳಿಸಿದ್ದಾರೆ. ಕುಟುಂಬದ ಪ್ರೀತಿ ಮತ್ತು ಒಗ್ಗಟ್ಟು ಈ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಿದೆ.

ಫೋಟೋದಲ್ಲಿ ಅಜ್ಜಿ ಸಮುದ್ರದ ಅಲೆಗಳನ್ನು ನೋಡಿ ಖುಷಿಯಿಂದ ಪ್ರತಿಕ್ರಿಯಿಸುವ ದೃಶ್ಯಗಳು ನೋಡುಗರ ಹೃದಯವನ್ನು ಮುಟ್ಟಿವೆ. ಅವರ ಸಂತೋಷದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ.

ಈ ಹೃದಯ ಸ್ಪರ್ಶಿ ವಿಡಿಯೋ ನಟ್ಟಿಗರಲ್ಲಿ ಭಾರಿ ಭಾವನಾತ್ಮಕ ಪ್ರತಿಕ್ರಿಯೆ ಮೂಡಿಸಿದೆ. ಅನೇಕರು ತಮ್ಮ ಅಜ್ಜ-ಅಜ್ಜಿಯರ ಆಸೆಗಳನ್ನು ಈಡೇರಿಸಲು ಈ ವಿಡಿಯೋ ಪ್ರೇರಣೆ ನೀಡಿದೆ ಎಂದು ಹೇಳಿಕೊಂಡಿದ್ದಾರೆ. "ಹಿರಿಯರು ನಮಗಾಗಿ ಮಾಡಿದ ತ್ಯಾಗಗಳನ್ನು ಮರೆಯಬಾರದು" ಎಂಬ ಸಂದೇಶವನ್ನು ಹಲವರು ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಪ್ರೀತಿ, ಕೃತಜ್ಞತೆ ಮತ್ತು ಕುಟುಂಬದ ಒಗ್ಗಟ್ಟಿನ ಈ ಅಪರೂಪದ ಕ್ಷಣ ಸತ್ಯ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನಸಿಗೆ ಹತ್ತಿರವಾಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ.

87ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಶಾಲವಾದ ಸಾಗರವನ್ನು ಎದುರಿನಿಂದ ನೋಡುವುದು ಅಜ್ಜಿಗೆ ಅತ್ಯಂತ ಮಾಂತ್ರಿಕ ಹಾಗೂ ಆಳವಾದ ಭಾವನಾತ್ಮಕ ಕ್ಷಣವಾಗಿದೆ. ಸಮುದ್ರದ ಅಲೆಗಳನ್ನು ನೋಡುತ್ತಿದ್ದಂತೆಯೇ ಅವರ ಮುಖದಲ್ಲಿ ನೋಡಿದ ಆಶ್ಚರ್ಯ ಮತ್ತು ಸಂತೋಷದ ಪ್ರತಿಕ್ರಿಯೆ ನೋಡುಗರ ಹೃದಯವನ್ನು ಮುಟ್ಟಿದೆ.

ವಿಡಿಯೋದಲ್ಲಿ ಕುಟುಂಬ ಸದಸ್ಯರು ಎಲ್ಲರೂ ಅಜ್ಜಿಯ ಸುತ್ತಮುತ್ತಲು ಸೇರಿಕೊಂಡು ಆ ವಿಶೇಷ ಕ್ಷಣವನ್ನು ಜೊತೆಯಾಗಿ ಅನುಭವಿಸುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ಕುಟುಂಬದ ಪ್ರೀತಿ ಒಗ್ಗಟ್ಟು ಮತ್ತು ಕಾಳಜಿಯ ಈ ಚಿತ್ರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹೆಚ್ಚುತೆಗೆ ಪಾತ್ರವಾಗಿದೆ.

ಈ ವಿಡಿಯೋವನ್ನು ಹಂಚಿಕೊಂಡಿರುವ ಮೊಮ್ಮಗಳು, ಜನರು ತಮ್ಮ ಅಜ್ಜ ಅಜ್ಜಿಯರೊಂದಿಗೆ ಹೆಚ್ಚು ಸಮಯ ಕಳೆಯಬೇಕು ಮತ್ತು ಅವರ ಪುಟ್ಟ ಆಸೆಗಳನ್ನು ಈಡೇರಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ. ಇಂತಹ ಕ್ಷಣಗಳೇ ಜೀವನದಲ್ಲಿ ಅತ್ಯಂತ ಅಮೂಲ್ಯ ಎಂದು ಅವರು ಹೇಳಿದ್ದಾರೆ.

ಈ ಭಾವನಾತ್ಮಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅನೇಕರು ತಮ್ಮ ಕುಟುಂಬದ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂದೇಶವನ್ನು ಇದರಿಂದ ಪಡೆದಿದ್ದಾರೆ ಎಂದು ಪ್ರತಿಕ್ರಿಸುತ್ತಿದ್ದಾರೆ.

ಪ್ರೀತಿ ಕೃತಜ್ಞತೆ ಮತ್ತು ಕುಟುಂಬ ಬಂಧಗಳ ಮಹತ್ವವನ್ನು ಸಾರುವ ಈ ಕ್ಷಣ ಸದ್ಯ ನೆಟ್ಟಿಗರ ಮನಸ್ಸಿನಲ್ಲಿ ಆಳವಾದ ಪರಿಣಾಮ ಬೀರಿದೆ.

Also Read:

ಡೀಪ್ ಫೇಕ್ ವಿಡಿಯೋ ಕೇಸ್ :ರುಕ್ಮಿಣಿ ವಸಂತ ಪ್ರಕರಣದಲ್ಲಿ 29 ಅಕೌಂಟ್ ಗಳಿಗೆ ಎಫ್ಐಆರ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online