<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಟಿವಿಕೆ ಮುಖ್ಯಸ್ಥ ವಿಜಯ ದೊಡ್ಡ ರಾಜಕೀಯ ಹೆಜ್ಜೆ - ಸರ್ಕಾರ ರಚನೆಗೆ ಹಕ್ಕು ಸಲ್ಲಿಕೆ

ಟಿವಿಕೆ ಮುಖ್ಯಸ್ಥ ವಿಜಯ ದೊಡ್ಡ ರಾಜಕೀಯ ಹೆಜ್ಜೆ - ಸರ್ಕಾರ ರಚನೆಗೆ ಹಕ್ಕು ಸಲ್ಲಿಕೆ
Summary: Vijay's meeting with the Governor and stake claim to form the government in Tamil Nadu has caused a huge debate in state politics. His political move has increased curiosity about the future developments.

Belagavi News :

ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದ್ದು, ನಟ ಹಾಗೂ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಸರ್ಕಾರ ರಚನೆಗೆ ಅಧಿಕೃತ ಹಕ್ಕು ಮಂಡಿಸಿದೆ.

ಇಂದು ಚೆನ್ನೈನ ಲೋಕಭವನದಲ್ಲಿ ರಾಜ್ಯಪಾಲ ಆರ್ ಎನ್ ರವಿ ಅವರನ್ನು ಭೇಟಿಯಾದ ವಿಜಯ್, ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು. ಈ ಮೂಲಕ ಕಳೆದ ಎರಡು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಇದ್ದ ಅನಿಶ್ಚಿತತೆಗೆ ಅಂತ್ಯಕಂಡಂತಾಗಿದೆ.

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳೊಂದಿಗೆ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸ್ವತಂತ್ರವಾಗಿ ಸರ್ಕಾರ ರಚಿಸಲು ಬಹುಮತ ಲಭ್ಯವಾಗಿರಲಿಲ್ಲ, ಈ ಹಿನ್ನೆಲೆಯಲ್ಲಿ ವಿಜಯ್ ಹಲವು ಪಕ್ಷಗಳ ಬೆಂಬಲಕ್ಕಾಗಿ ಮಾತುಕತೆ ನಡೆಸಿದರು.

Sponsored

ಈ ನಡುವೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಇದರೊಂದಿಗೆ ದೀರ್ಘಕಾಲದ ಡ್ರಾವಿಡ್ ಮುನೇತ್ರ ಕಳಗಂ ಕಾಂಗ್ರೆಸ್ ಮೈತ್ರಿ ಮುರಿದು ಬಿದ್ದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಸ್ಪಷ್ಟತೆ ಬಂದಿರುವ ಹಿನ್ನೆಲೆಯಲ್ಲಿ, ವಿಜಯ್ ರಾಜ್ಯಪಾಲರಿಗೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಅಧಿಕೃತವಾಗಿ ಹಕ್ಕು ಮಂಡಿಸಿದ್ದಾರೆ.

ಒಟ್ಟಾರೆ, ತಮಿಳುನಾಡು ರಾಜಕೀಯದಲ್ಲಿ ಹೊಸ ಮೈತ್ರಿ ಸಮೀಕರಣಗಳು ರೂಪಗೊಳ್ಳುತ್ತಿದ್ದು, ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆಗೆ ದಾರಿ ಸುಗಮವಾಗುವ ಸಾಧ್ಯತೆ ಹೇಗೆ ಕಾಣುತ್ತಿದೆ.

ತಮಿಳುನಾಡು ರಾಜಕೀಯದಲ್ಲಿ ಹೊಸ ಸಮೀಕರಣಗಳು ರೂಪಗೊಳ್ಳುತ್ತಿದ್ದು, ವಿಜಯ್ ನೇತೃತ್ವದ ಟಿವಿಕೆ ಪಕ್ಷವು ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Sponsored

ಪಟ್ಟು 234 ಸದಸ್ಯರನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡಪಕ್ಷವಾಗಿದ್ದರೂ, ಸರ್ಕಾರ ರಚಿಸಲು ಅಗತ್ಯವಾದ 118 ಸದಸ್ಯರ ಬಹುಮತವನ್ನು ಪಡೆದುಕೊಳ್ಳಲು ವಿಫಲವಾಗಿದೆ.

ಈ ಹಿನ್ನಲೆಯಲ್ಲಿ ವಿಜಯ್ ಇತರ ಪಕ್ಷಗಳ ಬೆಂಬಲಕ್ಕಾಗಿ ಮಾತುಕತೆ ನಡೆಸಿದ್ದು, ಅಗತ್ಯ ಸಂಖ್ಯೆಯನ್ನು ಸೇರ್ಪಡೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಹೊಸ ಮೈತ್ರಿ ಸಮೀಕರಣಗಳತ್ತ ದಾರಿ ಮಾಡಿಕೊಡುತ್ತಿದೆ.

ಒಟ್ಟಾರೆ, ಟಿವಿಕೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು ಬಹುಮತದ ಕೊರತೆಯಿಂದ ತಮಿಳುನಾಡು ಸರ್ಕಾರ ರಚನೆ ಕುರಿತು ಅನಿಶ್ಚಿತತೆ ಮುಂದುವರಿದಿದೆ.

ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಇದೀಗ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ತಂಡ ಅಧಿಕೃತ ಬೆಂಬಲ ಘೋಷಿಸಿದೆ.

Sponsored

ಈ ಬೆಂಬಲದೊಂದಿಗೆ ದೀರ್ಘಕಾಲದಿಂದ ಮುಂದುವರೆದಿದ್ದ ಡ್ರಾವಿಡ್ ಮುನೇತ್ರ ಕಳಗಂ ಕಾಂಗ್ರೆಸ್ ಮೈತ್ರಿಗೆ ಅಂತ್ಯವಾಗಿರುವುದು ತಿರುವಾಗಿ ಕಾಣಿಸಿದೆ.

ಆದರೆ, ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಿದ ಇತರ ಪಕ್ಷಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಈ ಕುರಿತು ರಾಜಕೀಯ ವಲಯದಲ್ಲಿ ಮುಂದುವರೆದಿದೆ.

ಕಾಂಗ್ರೆಸ್ ಪಕ್ಷವು ಟಿವಿಕೆಗೆ ಬೆಂಬಲ ನೀಡುವ ಸಂದರ್ಭದಲ್ಲಿ ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಸಂವಿಧಾನ ವಿರೋಧಿ ಹಾಗೂ ಕೋಮುವಾದಿ ಶಕ್ತಿಗಳನ್ನು ಮೈತ್ರಿಯಿಂದ ಹೊರಗಿಡಬೇಕು ಎಂಬುದು ಪ್ರಮುಖ ಶರತ್ತಾಗಿದೆ ಎಂದು ತಿಳಿದುಬಂದಿದೆ.

ಈ ರಾಜಕೀಯ ಬೆಳವಣಿಗೆಯ ಮಧ್ಯೆ ವಿಜಯ್ ಅವರು ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆದಿದೆ. ವರದಿಗಳ ಪ್ರಕಾರ, ಪ್ರಮಾಣವಚನ ಸಮಾರಂಭ ಮೇ 7 ಗುರುವಾರ ಬೆಳಿಗ್ಗೆ 10 ರಿಂದ 11.15ರ ನಡುವೆ ಶುಭ ಮುಹೂರ್ತದಲ್ಲಿ ನಡೆಯಲಿದೆ.

Sponsored

ಒಟ್ಟಾರೆ, ತಮಿಳುನಾಡಿನಲ್ಲಿ ಹೊಸ ರಾಜಕೀಯ ಮೈತ್ರಿ ಮತ್ತು ಅಧಿಕಾರ ಬದಲಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಉಂಟಾಗಿದೆ.

Also read :

Summer Special: ಕೂಲ್ ಕೂಲ್ ಕಲ್ಲಂಗಡಿ ಶರಬತ್ ರೆಸಿಪಿ 🍉🍹

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online