ಟೆಸ್ಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ
Temba Bavuma World Records: ಸೌತ್ ಆಫ್ರಿಕಾ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದು ಕೊಟ್ಟ ನಾಯಕ ಟೆಂಬಾ ಬವುಮಾ ಇದೀಗ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾರೂ ಸಹ ನಿರ್ಮಿಸದ ವಿಶ್ವ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು 30 ರನ್ಗಳ ಜಯ ಸಾಧಿಸಿತು. ಇದು ಟೆಂಬಾ ಬವುಮಾ ನಾಯಕತ್ವದಲ್ಲಿ ಸೌತ್ ಆಫ್ರಿಕಾ ತಂಡದ 10ನೇ ಟೆಸ್ಟ್ ಗೆಲುವು. ವಿಶೇಷ ಎಂದರೆ ಬವುಮಾ ಮುಂದಾಳತ್ವದಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ಒಂದೇ ಒಂದು ಮ್ಯಾಚ್ನಲ್ಲಿ ಸೋತಿಲ್ಲ.
ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯೊಂದನ್ನು ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ (Temba Bavuma) ನಿರ್ಮಿಸಿದ್ದಾರೆ. ಅದು ಸಹ ಸೋಲಿಲ್ಲದ ಸರದಾರನಾಗಿ ಎಂಬುದು ವಿಶೇಷ.
ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಹಾಗೂ ಆಸ್ಟ್ರೇಲಿಯಾದ ಲಿಂಡೆ ಹಸ್ಸೆಟ್ ಹೆಸರಿನಲ್ಲಿತ್ತು. ಈ ಇಬ್ಬರು ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕರಾದ ಬಳಿಕ ಮೊದಲ 12 ಪಂದ್ಯಗಳಲ್ಲೇ 10 ಗೆಲುವು ಸಾಧಿಸಿದ್ದರು. ಇದೀಗ ಈ ದಾಖಲೆಗಳನ್ನು ಬವುಮಾ ಅಳಿಸಿ ಹಾಕಿದ್ದಾರೆ.
ಇದರೊಂದಿಗೆ ಟೆಸ್ಟ್ ಇತಿಹಾಸದಲ್ಲೇ ಒಂದೇ ಒಂದು ಟೆಸ್ಟ್ ಪಂದ್ಯ ಸೋಲದೇ ಮೊದಲ 10 ಮ್ಯಾಚ್ಗಳನ್ನು ಗೆದ್ದ ವಿಶ್ವದ ಮೊದಲ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅತೀ ಕಡಿಮೆ ಪಂದ್ಯಗಳ ಮೂಲಕ ಮೊದಲ 10 ಗೆಲುವು ಕಂಡ ನಾಯಕನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಟೆಂಬಾ ಬವುಮಾ ಮುಂದಾಳತ್ವದಲ್ಲಿ ಈವರೆಗೆ 11 ಟೆಸ್ಟ್ ಪಂದ್ಯಗಳನ್ನಾಡಿರುವ ಸೌತ್ ಆಫ್ರಿಕಾ ತಂಡವು 10 ಗೆಲುವು ಹಾಗೂ 1 ಡ್ರಾ ಸಾಧಿಸಿದೆ. ಅಂದರೆ ಮೊದಲ 11 ಪಂದ್ಯಗಳಲ್ಲಿ ಬವುಮಾ ಸೋಲಿನ ರುಚಿಯೇ ನೋಡಿಲ್ಲ. ಹೀಗೆ ಸೋಲಿಲ್ಲದ ಸರದಾರನಾಗಿ ಟೆಸ್ಟ್ ಇತಿಹಾಸದಲ್ಲಿ ಮೊದಲ 10 ಗೆಲುವು ಕಂಡ ವಿಶ್ವದ ಏಕೈಕ ಕ್ಯಾಪ್ಟನ್ ಎಂಬ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ನಿರ್ಮಿಸಿದ್ದಾರೆ.
ಇನ್ನಷ್ಟು ಓದಿರಿ:
WPL 2026: 2 ನಗರಗಳಲ್ಲಿ ನಡೆಯಲಿದೆ ವುಮೆನ್ಸ್ ಪ್ರೀಮಿಯರ್ ಲೀಗ್