<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಕಾಲವೇ ಉತ್ತರ ಕೊಡುತ್ತದೆ: ಡಿಸಿಎಂ ಡಿಕೆ ಶಿವಕುಮಾರ್

ಕಾಲವೇ ಉತ್ತರ ಕೊಡುತ್ತದೆ: ಡಿಸಿಎಂ ಡಿಕೆ ಶಿವಕುಮಾರ್
Summary: ಮಂಗಳೂರಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಮಾದ್ಯಮದವರು ಕೇಳಿದ ಪ್ರಶ್ನೆಗೆ 'ಕಾಲವೇ ಉತ್ತರ ಕೊಡುತ್ತದೆ' ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
BELAGAVI NEWS

ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿರುವ ಡಿಕೆ ಶಿವಕುಮಾರ್ ಅವರು ಮಂಗಳೂರಿನ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಸಿಎಂ ಆಗುವಿರಾ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ‘ಕಾಲವೇ ಉತ್ತರ ಕೊಡುತ್ತದೆ’ ಪಕ್ಷದವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕು ಎಂದು ಅವರು ತಿಳಿಸಿದರು. ನಾನು ಸಿಎಂ ಆಗಬೇಕೆ ಎಂಬ ಹಂಬಲ ಎಲ್ಲರಲ್ಲೂ ಇದೆ. ಜನರಿಗೆ, ಶಾಸಕರಿಗೆ ಇದೆ, ಮಾಧ್ಯಮದವರಿಗೆ ಇದೆ. ಆದರೆ ಪಕ್ಷದ ತೀರ್ಮಾನವೇ ಅಂತಿಮ.


ಕರಾವಳಿ ಭಾಗದಲ್ಲಿ ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಕೂಗು ಹೆಚ್ಚಾಗಿದೆ ಮಾತಿಗೆ ಉತ್ತರಿಸಿದರು. ಪರಮೇಶ್ವರ್ ಅವರು ಸಿಎಂ ಆಗಬೇಕೆಂಬ ಒತ್ತಾಯ ಬಹಳ ಇದೆ ಎಂದು ಹೇಳಿದಾಗ. ಇರ್ಲಿ ಬಿಡಿ “ತಪ್ಪೇನಿದೆ”ಅವರವರ ಅಭಿಮಾನಿಗಳಿಗೂ ಆಸೆ ಇದ್ದೇ ಇರುತ್ತದೆ. ಅದಕ್ಕೆಲ್ಲ ನಾನು ಬೇಡ ಎನ್ನಲು ಸಾಧ್ಯವಿಲ್ಲ ಎಂದು ಡಿಕೆಶಿ ಮಾಧ್ಯಮಗಳಿಗೆ ಉತ್ತರಿಸಿದರು. ಡಿಕೆ ಶಿವಕುಮಾರ್ ಅವರಿಗೆ ಸಿಎಂ ನಿರೀಕ್ಷೆ ಇದೆ ಎಂಬ ಪ್ರಶ್ನೆಯನ್ನು ಕೇಳಿದಾಗ ‘ಕಾಲವೇ ಉತ್ತರ ಕೊಡುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

ದರ ಪರಿಷ್ಕರಣೆ ವೇಳೆ ಬಿಎಂಆರ್ಸಿಎಲ್ ನಮ್ಮನ್ನು ಸಂಪರ್ಕಿಸಿಲ್ಲ. ದರ ಪರಿಷ್ಕರಿಸಲು ಅಧಿಕಾರ ಅವರಿಗಿದೆ. ಕೇಂದ್ರ ಸರ್ಕಾರದ ಸೆಕ್ಯೂರಿಟಿ ಇದಕ್ಕೆ ಅಧ್ಯಕ್ಷರಾಗಿದ್ದಾರೆ. ಈ ತೀರ್ಮಾನವನ್ನು ಸೆಕ್ರೆಟರಿ ಅವರೇ ತೆಗೆದುಕೊಂಡಿದ್ದಾರೆ. ನಾನು ಅದರ ಬಗ್ಗೆ ಇಂದು ಅಥವಾ ನಾಡಿದ್ದು ಹೋಗಿ ಚರ್ಚೆ ಮಾಡುತ್ತೇನೆ. ಜನರಿಗೆ ತೊಂದರೆಯಾಗುವುದು ನಮಗೂ ಇಷ್ಟವಿಲ್ಲ ಆದ್ದರಿಂದ ಹಣಕಾಸಿನ ವ್ಯವಸ್ಥೆಯಲ್ಲಿ ಏನಾಗಿದೆ ಅದನ್ನು ನಾನು ನೋಡುತ್ತೇನೆ” ಎಂದು ಡಿಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.


ಶುಕ್ರವಾರದಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಅವರು ಮೈಸೂರಿನಲ್ಲಿ ಹೇಳಿದ ಹೇಳಿಕೆಯಿಂದ ಮತ್ತೆ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗುತ್ತಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಅವರನ್ನು ಸದ್ಯಕ್ಕೆ ಇಳಿಸಿ ಎಂದು ಯಾರು ಹೇಳುತ್ತಿಲ್ಲ. ಸದ್ಯಕ್ಕೆ ನಾಯಕತ್ವದಲ್ಲಿ ಬದಲಾವಣೆ ಮಾಡಲ್ಲ ಎಂದು ಸ್ಪಷ್ಟವಾಗಿದೆ. ಹೈಕಮಾಂಡ್ ನೇರವಾಗಿ ಹೇಳಿಲ್ಲ . ಆದ್ದರಿಂದ “ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ನಾನು ನಂಬುತ್ತೇನೆ” ಎಂದು ಯತೀಂದ್ರ ರವರು ಹೇಳಿದರು.


ಯತೀಂದ್ರ ಅವರ ಮಾತಿಗೆ ಡಿಕೆ ಶಿವಕುಮಾರ್ ಅವರು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಯತೀಂದ್ರರೇ ನಮ್ಮ ಈಗ ನಮ್ಮ ಹೈಕಮಾಂಡ್ ಅವರು ಹೇಳಿದ ಮೇಲೆ ಅವರ ಮಾತನ್ನೇ ಗೌರವದಿಂದ ಸ್ವೀಕರಿಸೋಣ ಇದರ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ” ಹೈಕಮಾಂಡ ಅದಕ್ಕೆ ಸರಿಯಾದ ನಿರ್ಧಾರ ನೀಡಲಿ ಎಂದು ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಸಿದರು. ಶುಕ್ರವಾರದಂದು ಕೇಂದ್ರ ಮಾಜಿ ಸಚಿವ ಬಿ ಜನಾರ್ಧನ್ ಪೂಜಾರಿ ಅವರ ಮನೆಗೆ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದರು. ಅವರನ್ನು ಭೇಟಿ ಮಾಡಿ ಕೆಲವು ಗಂಟೆಗಳ ಕಾಲ ಮಾತುಕತೆಯನ್ನು ಮಾಡಿದರು.


ಹಿರಿಯ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಮಾಜಿ ಅಧ್ಯಕ್ಷ ರಾಗಿರುವ ಪೂಜಾರಿಯವರು ಮಾರ್ಗದರ್ಶನವನ್ನು ಪಡೆದ ಡಿಕೆ ಶಿವಕುಮಾರ್ ಅವರ ಅನುಭವದ ಬಗ್ಗೆ ಚರ್ಚೆ ಮಾಡುತ್ತಾ ಮತ್ತು ರಾಜಕೀಯ ಚರ್ಚೆ ಮಾಡಿ ಮತ್ತು ಇನ್ನೂ ಹಲವು ಬೇರೆ ಬೇರೆ ವಿಷಯಗಳ ಕುರಿತು ಚರ್ಚೆಗಳು ನಡೆದವು. ಈ ಸಮಯದಲ್ಲಿ ಮಾಜಿ ಸಚಿವ ಬಿ ರಾಮನಾಥ್ ರೈ,ಹರೀಶ್ ಕುಮಾರ್, ವಿನಯ್ ಕುಮಾರ್ ಸೊರಕೆ, ಆರ್.ಪದ್ಮರಾಜ್, ಇಬ್ರಾಹಿಂ ನವಾ,ಜ್ ಇನಾಯತ್ ಆಲಿ, ಬೇಬಿ ಕುಂದರ್ ಜೊತೆಗೆ ಇನ್ನೂ ಹಲವು ಮುಖಂಡರು ಅಲ್ಲಿ ಸೇರಿದ್ದರು. ಡಿಕೆ ಶಿವಕುಮಾರ್ ಅವರು ಸಿಎಂ ಆಗಲು ಹಲವು ಜನ ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಅವರು ಪಕ್ಷದ ತೀರ್ಮಾನವನ್ನು ಗೌರವಿಸುತ್ತೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.


ಇನ್ನಷ್ಟು ಓದಿರಿ:
ಅಂಡರ್ ೧೯ ವಿಶ್ವಕಪ್ : ೬ ನೇ ಬಾರಿ ಚಾಂಪಿಯನ್ ಆದ ಭಾರತ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online