Balagavi News:
ವಾಷಿಂಗ್ಟನ್ ಡಿಸಿ: ಇರಾನ್ ಜೊತೆಗಿನ ಸಂಘರ್ಷವನ್ನು ಕೊನೆಗೂಳಿಸುವ ಉದ್ದೇಶದಿಂದ ರೂಪಿಸಲಾಗಿರುವ ಕದನ ವಿರಾಮ ಒಪ್ಪಂದದ ಅಂಶಗಳಲ್ಲಿ ಮತ್ತಷ್ಟು ತಿದ್ದುಪಡಿ ತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ. ಮಧ್ಯ ಪ್ರಾಂತ್ಯದಲ್ಲಿ ಶಾಂತಿ ಸ್ಥಾಪನೆಗೆ ಹೊಸ ಭರವಸೆ ಮೂಡಿಸಿದೆ.
ಸಿಬಿಎಸ್ ನ್ಯೂಸ್ ವರದಿ ಪ್ರಕಾರ, ಪರಿಷ್ಕೃತ ಕರಡಿನಲ್ಲಿ 60 ದಿನಗಳ ಯುದ್ಧ ವಿರಾಮ, ಹಾರ್ಮೋಜ್ ಜಲಸಂದಿಯನ್ನು ಪುನಃ ಮುಕ್ಕಗೋಳಿಸುವುದು ಹಾಗೂ ಇರಾನ್ ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳನ್ನು ಮರು ಪ್ರಾರಂಭಿಸುವಂತಹ ಪ್ರಮುಖ ಅಂಶಗಳು ಸೇರಿವೆ. ಆದರೆ ಇವರಿಗೆ ಯಾವುದೇ ಅಂತಿಮ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಿಲ್ಲ.
ಶ್ವೇತ ಭವನ ಸಭೆ ಫಲಿತಾಂಶವಿಲ್ಲದೆ ಅಂತ್ಯ:
ಒಪ್ಪಂದದ ಅಂತಿಮ ರೂಪುರೇಷೆ ಕುರಿತು ಚರ್ಚಿಸಲು ಶುಕ್ರವಾರ ಶ್ವೇತ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆ ಯಾವುದೇ ನಿರ್ಣಾಯಕ ತೀರ್ಮಾನವಿಲ್ಲದೆ ಮುಕ್ತಾಯಗೊಂಡಿದೆ. ಆದಾಗ್ಯೂ ರಾಜತಾಂತ್ರಿಕ ಮಾತುಕತೆಗಳು ಮುಂದುವರಿದಿದ್ದು. ಎರಡು ಪಕ್ಷಗಳು ತಮ್ಮ ತಮ್ಮ ಷರತ್ತುಗಳ ಮೇಲೆ ಒತ್ತಡ ಹೇರುತ್ತಿವೆ.
ಪ್ರಮಾಣ ಶಸ್ತ್ರಾಸ್ತ್ರಗಳೇ ಪ್ರಮುಖ ಅಂಶ:
ಸಂಭಾವ್ಯ ಒಪ್ಪಂದದಲ್ಲಿ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿರುವುದು ಪ್ರಮುಖ ಷರತ್ತಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, "ಇರಾನ್ ಯಾವುದೇ ರೀತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲ ಎಂಬ ಖಾತರಿ ಅಗತ್ಯ" ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟ್ರಂಪ್ ಪ್ರಸ್ತುತ ಕರಡಿನ ಹಲವು ಅಂಶಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು. ಹೆಚ್ಚುವರಿ ಪರಿಷ್ಕಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇರಾನ್ ಗೆ ಬಿಲಿಯನ್ ಡಾಲರ್ ನೆರವು ಸಾಧ್ಯತೆ:
ಒಪ್ಪಂದ ಯಶಸ್ವಿಯಾದರೆ ಇರಾನ್ ಮೇಲಿನ ಕೆಲವು ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವ ಸಾಧ್ಯತೆಯಿದ್ದು,ಇದರ ಪರಿಣಾಮವಾಗಿ ಟೆಹ್ರಾನ್ ಗೆ ಬಿಲಿಯನ್ ಡಾಲರ್ ಗಳಷ್ಟು ಆರ್ಥಿಕ ನೆರವು ದೊರಯಬಹುದು ಎಂದು ರಾಜತಾಂತ್ರಿಕ ವಲಯಗಳು ಅಂದಾಜಿಸಿವೆ.
ಖಾತರಿಗಳಿಲ್ಲದೇ ಒಪ್ಪಂದಕ್ಕೆ ಇರಾನ್ ನಿರಾಕರಣೆ:
ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ನಾಯಕತ್ವ, ಸ್ಪಷ್ಟ ಭದ್ರತಾ ಮತ್ತು ರಾಜಕೀಯ ಖಾತರಿಗಳಿಲ್ಲದೆ ಯಾವುದೇ ಒಪ್ಪಂದವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದೆ.
ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಮಾತನಾಡಿ, "ಟೆಹ್ರಾನ್ ನ ಹಕ್ಕುಗಳು ಸಂಪೂರ್ಣವಾಗಿ ರಕ್ಷಿಸಲ್ಪಡದ ಹೊರತು ಯಾವುದೇ ಷರತ್ತುಗಳನ್ನು ನಾವು ಒಪ್ಪುವುದಿಲ್ಲ"ಎಂದು ಹೇಳಿದ್ದಾರೆ.
ಮಧ್ಯ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಈ ಹೊಸ ಶಾಂತಿ ಪ್ರಸ್ತಾಪ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು. ಮುಂದಿನ ಕೆಲವು ವಾರಗಳಲ್ಲಿ ನಡೆಯುವ ಮಾತುಕತೆಗಳು ನಿರ್ಣಾಯಕವಾಗುವ ಸಾಧ್ಯತೆ ಇದೆ.
ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಭಾವ್ಯ ಕದನ ವಿರಾಮ ಹಾಗೂ ಪರಮಾಣು ಒಪ್ಪಂದದ ಬಗ್ಗೆ ಹರಿದಾಡುತ್ತಿರುವ ವರದಿಗಳ ನಡುವೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಜಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಅಂತಿಮ ನಿರ್ಧಾರಕ್ಕೆ ಬರುವವರೆಗೆ ಪುಸ್ತುತ ಪ್ರಸಾರವಾಗುತ್ತಿರುವ ಹೆಚ್ಚಿನ ಮಾಹಿತಿಗಳು ಕೇವಲ ಉಹಾಪೋಹಗಳಾಗಿವೆ ಎಂದು ಅವರು ಹೇಳಿದ್ದಾರೆ.
ಇರಾನಿನ ಮಾಧ್ಯಮಗಳ ವರದಿ ಪ್ರಕಾರ, ಎರಡು ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆಗಳು ನಿರಂತರವಾಗಿ ನಡೆಯುತ್ತಿವೆ. ಅಮೆರಿಕ ಮತ್ತು ಇರಾನ್ ತಮ್ಮ ತಮ್ಮ ಬೇಡಿಕೆಗಳು ಹಾಗೂ ಷರತ್ತುಗಳನ್ನು ಮುಂದಿಟ್ಟುಕೊಂಡು ಒಪ್ಪಂದದ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿವೆ.
ಏಪ್ರಿಲ್ ನಿಂದ ಮಾತುಕತೆಗಳಿಗೆ ವೇಗ:
ತಿಂಗಳುಗಳ ಕಾಲ ನಡೆದ ಸಂಘರ್ಷದ ಬಳಿಕ ಏಪ್ರಿಲ್ 8ರಂದು ಜಾರಿಯಾದ ತಾತ್ಕಾಲಿನ ಕದನ ವಿರಾಮದ ನಂತರ ಮಾತುಕತೆಗಳು ಹೊಸ ಹಂತ ತಲುಪಿವೆ. ಇದಾದ ಬಳಿಕ ಹಲವು ಸುತ್ತಿನ ಉನ್ನತ ಮಟ್ಟದ ರಾಜ ತಾಂತ್ರಿಕ ಚರ್ಚೆಗಳು ನಡೆದಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಮುಂದುವರಿದಿವೆ.
ಟ್ರಂಪ್ ಹೇಳಿಕೆಗಳ ನಡುವೆಯೋ ಅಂತಿಮ ಒಪ್ಪಂದ ಬಾಕಿ:
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ "ಅಂತಿಮ ಒಪ್ಪಂದ ಸನ್ನಿಹಿತವಾಗಿದೆ " ಎಂದು ಹೇಳಿಕೆ ನೀಡಿದ್ದರೂ, ಇದುವರೆಗೆ ಯಾವುದೇ ಔಪಚಾರಿಕ ಒಪ್ಪಂದಕ್ಕೆ ಸಹಿ ಬಿದ್ದಿಲ್ಲ. ಒಪ್ಪಂದದ ಕೆಲವು ಪ್ರಮುಖ ಅಂಶಗಳ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳು ಉಳಿದಿವೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಕುತೂಹಲ ಕೆರಳಿಸಿರುವ ಮಾತುಕತೆ:
60 ದಿನಗಳ ಕದನ ವಿರಾಮ, ಹಾರ್ಮೋಜ್ ಜಲಸಂಧಿಯ ಮುಕ್ತ ಸಂಚಾರ ಮತ್ತು ಇರಾನ್ ನ ಪರಮಾಣು ಕಾರ್ಯಕ್ರಮದ ಭವಿಷ್ಯದಂತಹ ವಿಷಯಗಳು ಮಾತುಕತೆಯ ಕೇಂದ್ರಬಿಂದುವಾಗಿವೆ. ಬೇಡ ಅವನಿಗೆಗಳು ಮಧ್ಯ ಪ್ರಾಚ್ಯದ ರಾಜಕೀಯ ಪರಿಸ್ಥಿತಿಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಗತ್ತಿನ ಗಮನ ಸೆಳೆದಿವೆ.
ರಾಜತಾಂತ್ರಿಕ ಮಾತು ಕತೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಅಂತಿಮ ಒಪ್ಪಂದ ಯಾವಾಗ ರೂಪುಗೊಳ್ಳಲಿದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರನ ದೊರೆಯುವ ನಿರೀಕ್ಷೆ ಇದೆ.
Also Read:
ಪಹಲ್ಗಾಮ್ ದಾಳಿ ತನಿಖೆಯಲ್ಲಿ ಹೊಸ ಟ್ವಿಸ್ಟ್ : ಉಗ್ರರು ಬಳಸಿದ್ದ ಮೊಬೈಲ್ಗೆ ಪಾಕ್ ಬ್ಯಾಂಕ್ ಸಂಪರ್ಕ