BLAGAVI NEWS :
ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಇರಾನ್ ರಾಜಧಾನಿ ಪ್ರಧಾನ ಬೃಹತ್ ಜಾಹೀರಾತು ಫಲಕವೊಂದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಟ್ರೆಹಾನ್ ನ ಪ್ರಸಿದ್ಧ ಎಂಘೆಲಾಬ್ ಚೌಕದಲ್ಲಿ ಅಳವಡಿಸಲಾಗಿರುವ ಈ ದೈತ್ಯ ಹೋರ್ಡಿಂಗ್ ನಲ್ಲಿ ಅಮೇರಿಕ ಅಧ್ಯಕ್ಷ ಅವರನ್ನು ಕಪ್ಪು ಶವಪೆಟ್ಟಿಗೆಯೊಳಗೆ ಮಲಗಿಸುವಂತೆ ಚಿತ್ರಿಸಲಾಗಿದೆ ಎಂದು ವರದಿಯಾಗಿದೆ. ಈ ಚಿತ್ರವು ಅಮೆರಿಕದ ವಿರುದ್ಧ ಇರಾನ್ ನ ತೀವ್ರ ರಾಜಕೀಯ ಸಂದೇಶವನ್ನು ಪ್ರತಿಬಿಂಬಿಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೇರಿಕ-ಇರಾನ್ ಸಂಘರ್ಷದ ನಡುವೆ ಇಂತಹ ಪ್ರಚಾರಾತ್ಮಕ ಪೋಸ್ಟರ್ಗಳು ಮತ್ತು ಸಾರ್ವಜನಿಕ ಪ್ರದರ್ಶನವು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಟ್ರೆಹಾನ್ ನ ಪ್ರಮುಖ ಸ್ಥಳದಲ್ಲಿ ಕಾಣಿಸಿಕೊಂಡಿರುವ ಈ ಹೋರ್ಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷದ ನಡುವೆ, ಟ್ರೆಹಾನ್ ನಲ್ಲಿರುವ ಬೃಹತ್ ಹೋರ್ಡಿಂಗ್ ವೊಂದು ಬಾರಿ ಚರ್ಚೆಗೆ ಕಾರಣವಾಗಿದೆ. ಈ ಫಲಕದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರದ್ದು ಶವಪೆಟ್ಟಿಗೆಯೊಳಗೆ ಚಿತ್ರಿಸಲಾಗಿದ್ದು, ಅವರ ವಿರುದ್ಧ ಬೆದರಿಕೆಯ ಸಂದೇಶವಿದೆ ಎಂದು ವರದಿಯಾಗಿದೆ.
ಅಮೆರಿಕಾದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಈ ಹೋರ್ಡಿಂಗ್ ಪ್ರದರ್ಶಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇರಾನ್ ಪ್ರಮುಖ ನಗರಗಳು ಬಂದರುಗಳು ಹಾಗೂ ನಾಗರೀಕ ಪರಮಾಣು ಸ್ಥಾವರಗಳ ಮೇಲೆ ಅಮೆರಿಕ ದಾಳಿ ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಸಂದೇಶವನ್ನು ಪ್ರದರ್ಶಿಸಲಾಗಿದೆ ಎಂದು ಹೇಳಲಾಗಿದೆ.
ಹಾರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉಭಯ ರಾಷ್ಟ್ರಗಳ ಪಡೆಗಳ ನಡುವೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಮುಂದುವರೆದಿವೆ. ಅಮೆರಿಕ ಮತ್ತು ಇರಾನ್ ನಡುವಿನ ಈ ಸಂಘರ್ಷವೂ ಮಧ್ಯಪ್ರಾಚ್ಯದಲ್ಲಿ ಯುದ್ಧದ ಆತಂಕವನ್ನು ಹೆಚ್ಚಿಸಿದ್ದು, ಜಾಗತಿಕ ಇಂಧನ ಮಾರುಕಟ್ಟೆಯ ಮೇಲು ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಟ್ರೆಹಾನ್ ನ ಪ್ರಮುಖ ಸ್ಥಳಗಳಲ್ಲಿ ಅಮೆರಿಕ ಅಧ್ಯಕ್ಷರ ವಿರುದ್ಧ ಇಂತಹ ತೀವ್ರ ಸಂದೇಶದ ಪ್ರದರ್ಶನವು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಗಂಭೀರಗೊಂಡಿರುವುದರ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಮೆರಿಕದ ಭದ್ರತಾ ಸಂಸ್ಥೆಗಳು ಈ ಬೆಳವಣಿಗೆಯನ್ನು ಗಂಭೀರವಾಗಿ ಗಮನಿಸುತ್ತಿವೆ ಎಂದು ವರದಿಯಾಗಿದೆ.
ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಪರಿಣಾಮ; ಇರಾನ್ ನ ವಿವಾದಾತ್ಮಕ ಬಿಲ್ ಬೋರ್ಡ್ ಗಳ ಇತಿಹಾಸ
ಇರಾನ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಒಮಾನ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದ್ದ ತೆರೆ ಮರೆಯ ಶಾಂತಿ ಮಾತುಕತೆಗಳ ಮೇಲು ಪರಿಣಾಮ ಬೀರಿದೆ ಎಂದು ವರದಿಯಾಗಿದೆ. ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕದ ಹಿನ್ನೆಲೆಯಲ್ಲಿ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.
ಮಧ್ಯಪ್ರಾಚ್ಯದಲ್ಲಿ ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ಕೈಮೀರುವ ಸಾಧ್ಯತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಹಾರ್ಮುಜ್ ಜಲಸಂದಿ ಸೇರಿದಂತೆ ಪ್ರಮುಖ ಇಂಧನ ಮಾರ್ಗಗಳ ಭದ್ರತೆ ಕುರಿತು ಆತಂಕ ಹೆಚ್ಚಾಗಿದೆ.
ಇರಾನ್ ನ ಬಿಲ್ ಬೋರ್ಡ್ ರಾಜಕೀಯ ಮತ್ತು ಖಾಸಿಂ ಸುಲೈಮಾನಿ ನೆರಳು
ಟ್ರೆಹಾನ್ ನ ಎಂಘೆಲಾಬ್ ಚೌಕದಲ್ಲಿ ವಿವಾದಾತ್ಮಕ ಬಿಲ್ ಬೋರ್ಡ್ ಗಳನ್ನು ಪ್ರದರ್ಶಿಸುವುದು ಇದೇ ಮೊದಲಲ್ಲ. ಈ ಪ್ರದೇಶವು ಇರಾನ್ ಸರ್ಕಾರದ ರಾಜಕೀಯ ಸಂದೇಶಗಳು ಮತ್ತು ಅಧಿಕೃತ ಪ್ರಚಾರಗಳ ಮೂಲಕ ವೇದಿಕೆಯಾಗಿ ಗುರುತಿಸಿಕೊಂಡಿದೆ.
ಹಿಂದೆಯೂ ಅಮೆರಿಕ ವಿರೋಧಿ ಸಂದೇಶಗಳನ್ನು ಒಳಗೊಂಡ ಪೋಸ್ಟರ್ಗಳು ಇಲ್ಲಿ ಕಾಣಿಸಿಕೊಂಡಿವೆ. ವಿಶೇಷವಾಗಿ ಇರಾನ್ನ ಪ್ರಮುಖ ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಅವರ ಹತ್ಯೆಯ ನಂತರ, ಅಮೇರಿಕಾದ ವಿರುದ್ಧದ ಪ್ರಚಾರ ಮತ್ತು ಪ್ರತಿಕಾರದ ಸಂದೇಶಗಳು ಇರಾನ್ ನಲ್ಲಿ ವ್ಯಾಪಕವಾಗಿ ಕಂಡುಬಂದಿದ್ದವು. ಈಗಿನ ಬಿಲ್ ಬೋರ್ಡ್ ಕೂಡ ಇದೇ ರೀತಿಯ ರಾಜಕೀಯ ಸಂದೇಶದ ಭಾಗವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸುಲೇಮಾನಿ ಹತ್ಯೆಯ ಸೇಡು : ಟ್ರಂಪ್ ವಿರುದ್ಧ ಇರಾನ್ ನ ಹಳೆಯ ಆಕ್ರೋಶ ಮತ್ತೆ ಮುನ್ನೆಲೆಗೆ
ಅಮೇರಿಕ-ಇರಾನ್ ನಡುವಿನ ಉದ್ವಿಗ್ನತೆಯ ನಡುವೆ, ಜನರಲ್ ಖಾಸಿಂ ಸುಲೇಮನಿ ಹತ್ಯೆಯ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಡ್ರೋನಾಲ್ಡ್ ಟ್ರಂಪ್ ತಮ್ಮ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ ಇರಾನ್ ನ ಪ್ರಭಾವಿ ಸೇನಾ ಕಮಾಂಡರ್ ಜನರಲ್ ಖಾಸಿಂ ಸುಲೇಮನಿ ಅವರನ್ನು ಬಾಗ್ದಾದ್ ನಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಹತ್ಯೆಗೈದಿದ್ದರು. ಈ ಘಟನೆಯ ಬಳಿಕ ಇರಾನ್ ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ಸ್ ಡ್ರಮ್ಪ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿತ್ತು.
ಅಮೇರಿಕದಲ್ಲಿ ಭದ್ರತಾ ಆತಂಕ ಹೆಚ್ಚಳ
ಟ್ರೆಹಾನ್‌ನಲ್ಲಿ ಟ್ರಂಪ್ ವಿರುದ್ಧದ ಬೆದರಿಕೆಯ ಸಂದೇಶವಿರುವ ಬಿಲ್ ಬೋರ್ಡ್ ಪ್ರದರ್ಶನದ ಬೆನ್ನೆಲೆ, ಅಮೆರಿಕಾದ ಭದ್ರತಾ ಸಂಸ್ಥೆಗಳು ಈ ಬೆಳವಣಿಗೆಯನ್ನು ಗಂಭೀರವಾಗಿ ಗಮನಿಸುತ್ತಿವೆ ಎಂದು ವರದಿಯಾಗಿದೆ. ಇರಾನ್ ಪ್ರೇರಿತ ಬೆದರಿಕೆಗಳ ಸಾಧ್ಯತೆ ಕುರಿತು ಅಮೆರಿಕಾದ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಪರಿಶೀಲನೆ ನಡೆಸುತ್ತಿವೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಅಮೆರಿಕದ ನೆಲದಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಸಂಭವಿಸಬಹುದಾದ ಯಾವುದೇ ಬೆದರಿಕೆಗಳನ್ನು ತಡೆಯಲು ಭದ್ರತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ತಿಳಿಸಲಾಗಿದೆ. ಇರಾನ್-ಅಮೆರಿಕ ನಡುವಿನ ಈ ರಾಜತಾಂತ್ರಿಕ ಬಿಕ್ಕಟ್ಟು ಮುಂದಿನ ದಿನಗಳಲ್ಲಿ ಯಾವ ದಿಕ್ಕಿಗೆ ಸಾಗಲಿದೆ ಎಂಬುವುದು ಜಾಗತಿಕ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.