Belagavi News:
ಐಸಿಸ್ ಗೆ ಭಾರೀ ಹೊಡಿತ: ಅಬು - ಬಿಲಾಲ್ ಅಲ್ - ಮಿನುಕಿ ಹತ್ಯೆಯಾಗಿದೆ ಎಂದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಮೇ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕನ್ ಪಡೆಗಳು ಹಾಗೂ ನೈಜೀರಿಯಾದ ಸಶಸ್ತ್ರ, ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್ ನ ಎರಡನೇ ಕಮಾಂಡ್ ಎಂದು ಗುರುತಿಸಲ್ಪಟ್ಟಿದ್ದ ಅಬು- ಬಿಲಾಲ್ ಅಲ್ -ಮಿನುಕಿಯನ್ನು ಹತ್ಯೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್, "ಅಬು ಬಿಲಾಲ್ ಆಫ್ರಿಕಾದಲ್ಲಿ ಅಡಗಿಕೊಂಡ ಸುರಕ್ಷಿತವಾಗಿರಬಹುದು ಎಂದು ಭಾವಿಸಿದ್ದ. ಆದರೆ ಆತ ಏನು ಮಾಡುತ್ತಿದ್ದಾನೆ ಎಂಬುದರ ಸಂಪೂರ್ಣ ಮಾಹಿತಿ ತಮ್ಮ ಮೂಲಗಳಿಗೆ ಲಭ್ಯವಿತ್ತು ಅವರಿಗೆ ತಿಳಿದಿರಲಿಲ್ಲ" ಎಂದು ಹೇಳಿದ್ದಾರೆ.
"ಇನ್ನು ಮುಂದೆ ಆ ಉಗ್ರ ಯಾರನ್ನೂ ಭಯಪಡಿಸಲು ಸಾಧ್ಯವಿಲ್ಲ" ಎಂದು ಟ್ರಂಪ್ ಹೇಳಿದ್ದು, ಈ ಕಾರ್ಯಾಚರಣೆಯನ್ನು ಉಗ್ರವಾದದ ವಿರುದ್ಧದ ದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ.
ಐಸಿಸ್ ವಿರುದ್ಧ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ನಡೆಸುತ್ತಿರುವ ಕಾರ್ಯಾಚರಣೆಗಳ ಭಾಗವಾಗಿ ಈ ಬೆಳವಣಿಗೆಗೆ ಮಹತ್ವ ನೀಡಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕನ ಮತ್ತು ನೈಜೀರಿಯನ್ ಪಡೆಗಳು ಜಂಟಿಯಾಗಿ ನಡೆಸಿದ ಕಾರ್ಯಚರಣೆಯಲ್ಲಿ ಈ ಹಿರಿಯ ಇಸ್ಲಾಮಿಕ್ ಸ್ಟೇಟ್ ನಾಯಕನನ್ನು ಹೊಡೆದುರುಳಿಸಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಇಎಸ್ಎಸ್ವಿ ಕಾರ್ಯಾಚರಣೆಯಲ್ಲಿ ಸಹಕರಿಸಿದ ನೈಜೀರಿಯಾ ಸರ್ಕಾರಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.
ಐಸಿಸ್ ವಿರುದ್ಧದ ಜಾಗತಿಕ ಹೋರಾಟದಲ್ಲಿ ಇದು ಮಹತ್ವದ ಬೆಳವಣಿಗೆಯಾದ ಪರಿಗಣಿಸಲಾಗುತ್ತಿದ್ದು, ಉಗ್ರ ಸಂಘಟನೆಗೆ ಇದೊಂದು ದೊಡ್ಡ ಹೊಡೆತ ಎಂದು ವಿಶ್ಲೇಷಿಸಲಾಗುತ್ತಿದೆ.
ನಿನ್ನೆ ರಾತ್ರಿ (ಅಮೆರಿಕದ ಕಾಲಮಾನ ಪ್ರಕಾರ) ಈ ಬಗ್ಗೆ ಪೋಸ್ಟ್ ಮಾಡಿರುವ ಟ್ರಂಪ್,"ಇಂದು ರಾತ್ರಿ ನನ್ನ ಸೂಚನೆಯ ಮೇರೆಗೆ ಧೈರ್ಯಶಾಲಿಯಾದ ಅಮೆರಿಕನ್ ಪಡೆಗಳು ಮತ್ತು ನೈಜೀರಿಯಾದ ಸಶಸ್ತ್ರ ಪಡೆಗಳು ಯುದ್ಧಭೂಮಿಯಿಂದ ವಿಶ್ವದ ಅತ್ಯಂತ ಸಕ್ರಿಯ ಭಯೋತ್ಪಾದಕನನ್ನು ಹತ್ಯೆ ಮಾಡಲು ಯಶಸ್ವಿಯಾದ ಕಾರ್ಯಚರಣೆ ನಡೆಸಿದವು" ಎಂದು ಟ್ರಂಪ್ ಟ್ರೂತ್ ಸೋಶಿಯಲ್ ನಲ್ಲಿ ಹೇಳಿದ್ದಾರೆ.
ಪಶ್ಚಿಮ ಆಫ್ರಿಕಾದ ಕೆಲವು ಭಾಗಗಳಲ್ಲಿ ಪ್ರಮುಖ ಜಾಲವನ್ನು ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಗುಂಪಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆ ಅಲ್ -ಮಿನುಕಿಯನ್ನು 2023ರಲ್ಲಿ ಅಮೆರಿಕ ನಿರ್ಬಂಧಗಳ ಪಟ್ಟಿಗೆ ಸೇರಿಸಲಾಗಿತ್ತು.
"ಅವರು ಇನ್ನು ಮುಂದೆ ಆಫ್ರಿಕಾದ ಜನರನ್ನು ಭಯ ಭೀತಿಗೊಳಿಸುವುದಿಲ್ಲ ಅಥವಾ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಗಳನ್ನು ರೂಪಿಸಲು ಸಹಾಯ ಮಾಡುವುದಿಲ್ಲ. ಆತನನ್ನು ಹತ್ಯೆ ಮಾಡಲಾಗಿದೆ" ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
2023ರಲ್ಲಿ ಅಮೆರಿಕ ಸರ್ಕಾರವು ಅಬು - ಬಿಲಾಲ್ ಅಲ್ - ಮಿನುಕಿಯನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತ್ತು. ಆಗಿನ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ಆಡಳಿತಾವಧಿಯಲ್ಲಿ ಜೂನ್ 2023ರಲ್ಲಿ ಈ ಘೋಷಣೆ ಮಾಡಲಾಗಿತ್ತು.
ಅಬು ಬಕರ್ ಮೊಹಮ್ಮದ್ ಅಲ್ -ಮೈನುಕಿ ಎಂದು ಪರಿಚಿತರಾಗಿದ್ದ ಅಬು -ಬಿಲಾಲ್ ಅಲ್ ಮಿನುಕಿ, ಆಫ್ರಿಕಾದ ಸಹೇಲ್ ಪ್ರದೇಶದಲ್ಲಿ ನೆಲೆಸಿದ್ದಾನೆ ಎಂದು ತಿಳಿದು ಬಂದಿತ್ತು.
Also Read:
ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಆಟೋ ಚಾಲಕರು : ಏಕದರ ನೀತಿ ಜಾರಿಗೆ ಆಗ್ರಹ