BELAGVI NEWS :
ಕಾಂಗ್ರೆಸ್ ಸಿಎಂಗಳ ಎದುರೇ ಮೋದಿ ಗುಣಗಾನ! ತುಂಗಭದ್ರಾ ವೇದಿಕೆಯಲ್ಲಿ ಎನ್.ಚಂದ್ರ ಬಾಬು ನಾಯ್ಡು ಮಾತು ರಾಜಕೀಯ ಸಂಚಲನ
ಕೊಪ್ಪಳದ ಮುನಿರಾಬಾದ್ ನಲ್ಲಿ ನಡೆದ ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ಕಾರ್ಯಕ್ರಮ ರಾಜಕೀಯವಾಗಿ ಸಾಕಷ್ಟು ಗಮನ ಸೆಳೆಯಿತು. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ವೇಳೆ, ಆಂಧ್ರಪ್ರದೇಶ ಸಿಎಂ ಎನ್.ಚಂದ್ರ ಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಬಹಿರಂಗವಾಗಿ ಶ್ಲಾಘಿಸಿದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ನಾಯ್ಡು, ನದಿಗಳ ಜೋಡಣೆ ದೇಶದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬಹುದು ಎಂದು ಹೇಳಿ, ಈ ಮಹತ್ವಕಾಂಕ್ಷಿ ಯೋಜನೆಯನ್ನು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಾಕಾರಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಮೋದಿ ಕುರಿತು ಮಾಡಿದ ಪ್ರಶಂಸೆ ಕಾರ್ಯಕ್ರಮದ ಪ್ರಮುಖ ಹೈಲೈಟ್ ಆಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ತುಂಗಭದ್ರಾ ಜಲಾಶಯದ ನೂತನ ಗೇಟ್ ಗಳ ಲೋಕಾರ್ಪಣೆಯ ಜೊತೆಗೆ, ನದಿಗಳ ಜೋಡಣೆ, ನೀರಾವರಿ ಅಭಿವೃದ್ಧಿ ಮತ್ತು ಅಂತರರಾಜ್ಯ ಸಹಕಾರದ ಕುರಿತು ನಡೆದ ಚರ್ಚೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮಹತ್ವ ತಂದಿವೆ.
"ಸರಿಯಾದ ವ್ಯಕ್ತಿ, ಸರಿಯಾದ ಸಮಯ, ಸರಿಯಾದ ಸ್ಥಳ...ಅದು ನರೇಂದ್ರ ಮೋದಿ!"- ಕಾಂಗ್ರೆಸ್ ಸಿಎಂಗಳ ಎದುರೆ ಚಂದ್ರಬಾಬು ನಾಯ್ಡು ಹೊಗಳಿಕೆ
ಕೊಪ್ಪಳದ ಮುನಿರಾಬಾದ್ ನಲ್ಲಿ ನಡೆದ ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಭಾಷಣ ಎಲ್ಲರ ಗಮನ ಸೆಳೆಯಿತು. "ನನಗೆ ಕನ್ನಡ ಇನ್ನೂ ಚೆನ್ನಾಗಿ ಬಂದಿದ್ದರೆ ಮತ್ತಷ್ಟು ಉತ್ತಮವಾಗಿ ಮಾತನಾಡುತ್ತಿದ್ದೆ" ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ನಾಯ್ಡು, ತುಂಗಭದ್ರ ತಾಯಿಗೆ ಶಿರಭಾಗಿ ನಮಸ್ಕಾರ ಸಲ್ಲಿಸಿದರು.
"ತುಂಗಭದ್ರಾ ಪಾನಃ ಗಂಗಾ ಸ್ನಾನಃ" ಎಂಬ ಪ್ರಸಿದ್ಧ ಮಾತನ್ನು ಉಲ್ಲೇಖಿಸಿದ ಅವರು, ತುಂಗಭದ್ರಾ ನೀರಿನ ಮಹತ್ವವನ್ನು ಬಣ್ಣಿಸಿದರು. ಕಳೆದ ವರ್ಷ ಕೊಚ್ಚಿ ಹೋಗಿದ್ದ ಗೇಟ್ ಘಟನೆಯ ಬಳಿಕ ಕೇವಲ ಒಂದು ಗೇಟ್ ಬದಲಿಸುವ ಬದಲು, ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್ಗಳನ್ನು ಹೊಸದಾಗಿ ಅಳವಡಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಕೇವಲ ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡಿರುವುದನ್ನು ಅವರು ಶ್ಲಾಘಿಸಿದರು.
ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಸೇರಿರುವುದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ನಾಯ್ಡು, ಗೇಟ್ ಅಳವಡಿಕೆ ವಿಳಂಬವಾಗಿದ್ದರೆ ದೊಡ್ಡ ಅಪಾಯ ಎದುರಾಗುತ್ತಿತ್ತು, ಆದರೆ ಈಗ ಆ ಅಪಾಯ ದೂರವಾಗಿದೆ ಎಂದು ಹೇಳಿದರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಕೊಂಡಾಡಿದ ನಾಯ್ಡು, "ಸರಿಯಾದ ವ್ಯಕ್ತಿ, ಸರಿಯಾದ ಸ್ಥಳ ಮತ್ತು ಸರಿಯಾದ ಸಮಯ ಒಂದಾದರೆ ಯಾವುದೇ ಗುರಿ ಸಾಧಿಸಬಹುದು. ಆ ನಾಯಕತ್ವ ಇಂದು ನರೇಂದ್ರ ಮೋದಿ ಅವರಲ್ಲಿದೆ. ಅವರ ನೇತೃತ್ವದಲ್ಲಿ ದೇಶ ವೇಗವಾಗಿ ಮುನ್ನಡೆಯುತ್ತಿದೆ" ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತುಂಗಭದ್ರಾ ನೂತನ ಕ್ರಸ್ಟ್ ಗೇಟ್ ಕಾಮಗಾರಿ ಯಶಸ್ಸು : ಕನ್ನಯ್ಯ ನಾಯ್ಡು ಸೇರಿ 12 ಮಂದಿ ಸನ್ಮಾನ, ಮೂರು ರಾಜ್ಯಗಳ ಸಿಎಂ ಗಳಿಂದ ಗೌರವ
ಕೊಪ್ಪಳದ ಮುನಿರಾಬಾದ್ ನಲ್ಲಿ ನಡೆದ ತುಂಗಭದ್ರ ಜಲಾಶಯದ 33 ನೂತನ ಟ್ರಸ್ಟ್ ಗೇಟ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಇಂಜಿನಿಯರ್ ಗಳು ಹಾಗೂ ತಾಂತ್ರಿಕ ಸಿಬ್ಬಂದಿಗೆ ವಿಶೇಷ ಗೌರವ ಸಲ್ಲಿಸಲಾಯಿತು.ನೂತನ ಕ್ರಸ್ಟ್ ಗೇಟ್ ಗಳ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕನ್ನಯ್ಯ ನಾಯ್ಡು ಸೇರಿದಂತೆ ಒಟ್ಟು 12 ಮಂದಿಯನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಾಗಿ ಸನ್ಮಾನ ನೆರವೇರಿಸಿದ್ದು ವಿಶೇಷವಾಗಿತ್ತು. ಜಲಾಶಯದ ಸುರಕ್ಷತೆ ಮತ್ತು ರೈತರ ಹಿತ ದೃಷ್ಟಿಯಿಂದ ಅತ್ಯಂತ ಮಹತ್ವದ ಈ ಕಾಮಗಾರಿಯನ್ನು ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ತಂಡದ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದರು.
ವೇದಿಕೆಯಲ್ಲಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ಉಪಸ್ಥಿತರಿದ್ದು, ಮೂರು ರಾಜ್ಯಗಳ ನಡುವಿನ ಸಮನ್ವಯ ಹಾಗೂ ತಾಂತ್ರಿಕ ಪರಿಮಿತಿಯ ಫಲವಾಗಿ ಈ ಯೋಜನೆ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜಲ ಸಂಪನ್ಮೂಲ ಸಚಿವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ತುಂಗಭದ್ರಾ ಜಲಾಶಯದ ಅಭಿವೃದ್ಧಿಗೆ ಕೈಜೋಡಿಸಿದ ಎಲ್ಲರ ಸೇವೆಯನ್ನು ಗೌರವಿಸಿದರು.
33 ನೂತನ ಕ್ರಸ್ಟ್ ಗೇಟ್ ಗಳ ಅಳವಡಿಕೆಯಿಂದ ಜಲಾಶಯದ ಸುರಕ್ಷತೆ ಮತ್ತಷ್ಟು ಬಲಗೊಂಡಿದ್ದು, ಲಕ್ಷಾಂತರ ರೈತರಿಗೆ ಭರವಸೆ ಮೂಡಿದೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಸೇರಿ ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮ ಐತಿಹಾಸಿಕ ಕ್ಷಣಕ್ಕೆ ದಾಖಲೆಯಾಗಿದೆ.
Also Read: