<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಬಿಸಿಲಿನ ಬಿಸಿ ಹೆಚ್ಚಳ : ಮೈಸೂರಿನಲ್ಲಿ ಎರಡು ನಾಯಿಗಳು ಬಲಿ

ಬಿಸಿಲಿನ ಬಿಸಿ ಹೆಚ್ಚಳ : ಮೈಸೂರಿನಲ್ಲಿ ಎರಡು ನಾಯಿಗಳು ಬಲಿ
Summary: The rising heatwave in Mysore has put the lives of animals at risk. Two dogs have died and another is undergoing treatment in a critical condition. This incident shows the intensity of the heatwave.

Belagavi news:

ಇತ್ತೀಚಿನ ದಿನಗಳಲ್ಲಿ ಬಿಸಿಲು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗಿದ್ದು ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ ಕೂಡ ತೊಂದರೆಯನ್ನು ಉಂಟುಮಾಡುತ್ತಿದೆ. ಮೈಸೂರಿನಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನದಿಂದಾಗಿ ಪ್ರಾಣಿಗಳ ಜೀವಕ್ಕೆ ಭಾರಿ ಅಪಾಯ ತಂದೊಡ್ಡಿದೆ. ನಗರದಲ್ಲಿ ಉಗ್ರ ಹೀಟ್ ವೇವ್ ಪರಿಣಾಮವಾಗಿ ಎರಡು ನಾಯಿಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಇನ್ನೊಂದು ನಾಯಿ ತೀವ್ರ ಸ್ವಸ್ಥತೆಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ತಾಪಮಾನ ಏರಿಕೆ ದಾಖಲೆ ಮಟ್ಟ ತಲುಪುತ್ತಿದ್ದು, ಜನಜೀವನದ ಜೊತೆಗೆ ಪ್ರಾಣಿಗಳ ಮೇಲು ಪರಿಣಾಮ ಬೀರುತ್ತಿದೆ. ಬಿಸಿಲಿನ ತೀವ್ರತೆಗೆ ಆಹಾರ ಮತ್ತು ನೀರಿನ ಕೊರತೆ ಎದುರಿಸುತ್ತಿರುವ ಬೀದಿ ಪ್ರಾಣಿಗಳು ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಿವೆ. ಇದರ ಜೊತೆಗೆ ಪಶು ವೈದ್ಯರು ಮತ್ತು ಪ್ರಾಣಿ ರಕ್ಷಣಾ ಸಂಘಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಬಿಸಿಲಿನ ಸಮಯದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ನೆರಳು ವ್ಯವಸ್ಥೆ ಕಲ್ಪಿಸಬೇಕೆಂದು ಹೇಳಿದ್ದಾರೆ. ಹೀಟ್ ವೇವ್ ಸಮಯದಲ್ಲಿ ಪ್ರಾಣಿಗಳ ರಕ್ಷಣೆಗೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಹ ತಿಳಿಸಿದ್ದಾರೆ.

ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ವಾತಾವರಣ ಇನ್ನಷ್ಟು ಹೆರಿಗೆಯಾಗುವ ಸಾಧ್ಯತೆಯಿದ್ದು, ಜನರು ಹಾಗೂ ಪ್ರಾಣಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Sponsored

ಬೇಸಿಗೆ ಬಿರುಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಜನರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ತೊಂದರೆ ಉಂಟಾಗಿದೆ. ಈ ಬಿಸಿಲಿನ ಹೆಚ್ಚಳದಿಂದಾಗಿ ಮೈಸೂರಿನಲ್ಲಿ ಒಂದು ಎರಡು ಸಾಕು ನಾಯಿಗಳು ಬಲಿಯಾಗಿದ್ದು, ಮತ್ತೊಂದು ನಾಯಿ ಸ್ಥಿತಿ ಗಂಭೀರ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ ಇದೆಲ್ಲದಕ್ಕೂ ಒಂದೇ ಕಾರಣ ಅದೇನೆಂದರೆ ಈ ಬಿಸಿಲಿನ ತಾಪಮಾನ ಹೆಚ್ಚಳ.

ಪ್ರಾಣವನ್ನು ಬಿಟ್ಟ ನಾಯಿಯನ್ನು ಸಾಕಿದ ಮನೆಯವರು ತುಂಬಾ ಬೇಸರಗೊಂಡಿದ್ದಾರೆ. ಗೋಲ್ಡನ್ ರಿಟ್ರೀವರ್ ಜಾತಿಗೆ ಸೇರಿದ ಏಳು ವರ್ಷದ ರೋನಿ ಹಾಗೂ ಬೀಗಲ್ ಜಾತಿಗೆ ಸೇರಿದ ನಾಲ್ಕು ವರ್ಷದ ಸೋನು ಎಂಬ ಎರಡು ನಾಯಿಗಳು ಬಿಸಿಲಿನ ತಾಪದಿಂದಾಗಿ ಪ್ರಾಣವನ್ನು ಬಿಟ್ಟಿವೆ. ಇನ್ನೊಂದು ನಾಯಿಯು ಆಸ್ಪತ್ರೆಯಲ್ಲಿ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯುತ್ತಿದೆ. ಆ ನಾಯಿಯ ಸ್ಥಿತಿಯು ತೀವ್ರ ಗಂಭೀರವಾಗಿದೆ.

ಪಶು ವೈದ್ಯರು ನೀಡಿದ ಮಾಹಿತಿಯ ಪ್ರಕಾರ ನೋಡಿದರೆ, ತೀವ್ರ ಉಷ್ಣಾಂಶ ಮತ್ತು ನೀರಿನ ಕೊರತೆ ಕಾರಣದಿಂದಾಗಿ ಪ್ರಾಣಿಗಳಲ್ಲಿ ಹೀಟ್ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ಕೂದಲು ಹೆಚ್ಚು ಇರುವ ಹಾಗೂ ವಿದೇಶಿ ಜಾತಿಯ ನಾಯಿಗಳು ಬಿಸಿಲಿನ ಹೊಡೆತಕ್ಕೆ ಬೇಗ ಒಳಗಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಒಂದು ಕಾರಣದಿಂದಾಗಿ ನಾಯಿಗಳನ್ನು ಪರಿಶೀಲಿಸಿದಂತಹ ಪಶು ವೈದ್ಯರು ಹಲವು ಸಲಹೆಗಳನ್ನು ಸಾರ್ವಜನಿಕರಿಗೆ ನೀಡಿದ್ದಾರೆ ಅವುಗಳೆಂದರೆ :

Sponsored

೧ ಸಾಕು ಪ್ರಾಣಿಗಳಿಗೆ ಸಾಕಷ್ಟು ತಣ್ಣಿರನ್ನು ಒದಗಿಸಬೇಕು.

೨. ಮಧ್ಯಾಹ್ನದ ಬಿಸಿಲಿನಲ್ಲಿ ಹೊರಗೆ ತೆಗೆದುಕೊಂಡು ಹೋಗುವುದನ್ನು ತಪ್ಪಿಸಬೇಕು.

3. ನೆರಳು ಮತ್ತು ತಂಪಾದ ವಾತಾವರಣದಲ್ಲಿ ನಾಯಿಗಳನ್ನು ವಾಸಿಸಲು ಬಿಡಬೇಕು.

4. ಹೀಟ್ ಸ್ಟ್ರೋಕ್ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಪಶು ವೈದ್ಯರನ್ನು ಸಂಪರ್ಕಿಸಬೇಕೆಂದು ಸಲಹೆಗಳನ್ನು ನೀಡಿದ್ದಾರೆ.

Sponsored

ಮೈಸೂರಿನ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆ, ಸಾಕು ಪ್ರಾಣಿಗಳ ಆರೈಕೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯವಾಗಿದೆ ಎಂದು ಸಹ ಹೇಳಿದ್ದಾರೆ.

ದಿನದಿಂದ ದಿನಕ್ಕೆ ಮೈಸೂರಿನಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ಅದರ ಪರಿಣಾಮ ಗಂಭೀರವಾಗಿ ಕಾಣಿಸಿಕೊಳ್ಳುತ್ತಿವೆ. ಶನಿವಾರ ನಡೆದ ಈ ಘಟನೆಯು ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಸಾಕು ನಾಯಿಗಳು ಹೀಟ್ ಸ್ಟ್ರೋಕ್ ಗೆ ಬಲಿಯಾಗಿವೆ.

ಮೈಸೂರಿನ ವಿಜಯನಗರ ಮೂರನೇ ಹಂತದ ನಿವಾಸಿಯಾಗಿರುವಂತಹ ತೇಜಸ್ ಅವರು ಸಾಕಿದ್ದ ಏಳು ವರ್ಷದ ಗೋಲ್ಡನ್ ರಿಟ್ರೀವರ್ ಜಾತಿಯ ರೋನಿ ಇದು ಶನಿವಾರ ಕುವೆಂಪು ನಗರದಲ್ಲಿರುವ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿತ್ತು. ಪ್ರದರ್ಶನದ ನಂತರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ರೋನಿ ಅಸ್ವಸ್ಥಗೊಂಡಿತು. ತಕ್ಷಣವೇ ಅಂಬುಲೆನ್ಸ್ ಮೂಲಕ ವಿಜಯನಗರದಲ್ಲಿರುವ ಶ್ರೀ ಪೆಟ್ ಚಿಕಿತ್ಸಾಹ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಫಲಕಾರಿಯಾಗದೆ ಸಂಜೆ 5 ಗಂಟೆ ವೇಳೆಗೆ ರೂಮಿನ್ ಸಾವನ್ನಪ್ಪಿತು. ಇದು ಒಂದು ನಾಯಕತೆಯಾದರೆ. ಇನ್ನೊಂದು ನಾಯಕತೆಯನ್ನು ನೋಡೋಣ ಬನ್ನಿ.

ಇನ್ನೊಂದು ಘಟನೆಯಲ್ಲಿ, ಮೋಹನ್ ಅವರು ತಮ್ಮ ನಾಲ್ಕು ವರ್ಷದ ಬೀಗಲ್ ಜಾತಿಯ ಸೋನು ಎಂಬ ನಾಯಿಯನ್ನು ಶನಿವಾರ ಮಧ್ಯಾಹ್ನ ವಾಕಿಂಗ್ ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆಯಲ್ಲಿ ತೀವ್ರ ಬಿಸಿಲಿನ ತಾಪಕೆ ಸೋನು ಅಸ್ವಸ್ಥಗೊಂಡಿತು. ತಕ್ಷಣವೇ ಪೆಟ್ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಅದು ಕೂಡ ಮೃತಪಟ್ಟಿದೇ.. ಇನ್ನು ಮತ್ತೊಂದು ನಾಯಿಯನ್ನು ನೋಡುವುದಾದರೆ ಸಾಕು ನಾಯಿ ಒಂದು ಹೀಟ್ ಸ್ಟ್ರೋಕ್ ನಿಂದ ಅಸ್ವಸ್ಥಗೊಂಡಿದ್ದು , ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶ್ರೀಪೆಟ್ ಆಸ್ಪತ್ರೆಯ ವೈದ್ಯ ಡಾ. ದೀಪಕ್ ತಿಳಿಸಿದ್ದಾರೆ.

Sponsored

ಈ ಹೀಟ್ ಸ್ಟ್ರೋಕ್ ಬಗ್ಗೆ ತಿಳಿಯೋಣ...

ಮಾನವರಂತೆ ನಾಯಿಗಳು ಬೆವರುವುದು ಸಾಧ್ಯವಿಲ್ಲ. ಎಂಬುದು ಹೀಟ್ ಸ್ಟ್ರೋಕ್ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ನಾಯಿಗಳು ತಮ್ಮ ದೇಹದ ತಾಪಮಾನವನ್ನು ಉಸಿರಾಟ ಮೂಲಕವೇ ನಿಯಂತ್ರಿಸುತ್ತವೆ. ಆದರೆ ಹೆಚ್ಚು ಉಷ್ಣತೆ ಮತ್ತು ತೇವಾಂಶ ಇರುವ ಸಂದರ್ಭಗಳಲ್ಲಿ ವಿಶೇಷವಾಗಿ ಮಧ್ಯಾಹ್ನದ ವೇಳೆಯಲ್ಲಿ ಈ ಸಹಜ ತಂಪಾಗಿಸುವ ವಿಧಾನ ಪರಿಣಾಮಕಾರಿಯಾಗುವುದಿಲ್ಲ. ಇದರಿಂದ ದೇಹದ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಏರಿ ಹೀಟ್ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.

ಮೈಸೂರು ಅಷ್ಟೇ ಅಲ್ಲದೆ ಹಾವೇರಿಯಲ್ಲಿಯೂ ಸಹ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾವೇರಿಯಲ್ಲಿ ನಡೆದ ಘಟನೆಯನ್ನು ನೋಡುವುದಾದರೆ ಕೋಳಿ ಫಾರ್ಮ್ ಗಳಲ್ಲಿ ಪಾಪಮ್ಮನ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಹಾವೇರಿಯ ಕೋಳಿ ಫಾರ್ಮ್ ಮಾಲಿಕ ಪ್ರಭು ಪತ್ರಿ ಅವರು ಹೊಸ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಕೋಳಿ ಫಾರ್ಮ್ ಮೇಲ್ಚಾವಣಿಯಲ್ಲಿ ಇರುವ ಸಿಮೆಂಟ್ ತಗಡುಗಳನ್ನು ತಂಪಾಗಿಡಲು ಅವರು ಸ್ಟ್ರಿಂಕ್ಲರ್ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಈ ವ್ಯವಸ್ಥೆ ನಿರಂತರವಾಗಿ ನೀರನ್ನು ಚಿಮ್ಮಿಸುವ ಮೂಲಕ ಮೇಲ್ಚಾವಣಿಯ ತಾಪಮಾನವನ್ನು ಕಡಿಮೆ ಮಾಡುತ್ತದೆ. ಇದರಿಂದ ಒಳ ಭಾಗದಲ್ಲಿ ಉಂಟಾಗುವ ಉಷ್ಣತೆ ನಿಯಂತ್ರಣವಾಗಿದ್ದು ಕೋಳಿಗಳಿಗೆ ಸಂಪಾದ ವಾತಾವರಣ ಸಿಗುತ್ತಿದೆ.

ಬೇಸಿಗೆ ಕಾಲದಲ್ಲಿ ಹೆಚ್ಚುವರಿ ತಾಪಮಾನದಿಂದ ಕೋಳಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಉತ್ಪಾದನೆಯಲ್ಲಿಯೂ ಕುಸಿತ ಉಂಟಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಸ್ಟ್ರಿಂಕ್ಲರ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿದೆ ಎಂದು ಪ್ರಭು ಪತ್ರಿ ತಿಳಿಸಿದ್ದಾರೆ. ಸ್ಥಳೀಯ ರೈತರು ಕೂಡ ಈ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ನವೀನ ಕ್ರಮಗಳು ಬಿಸಿಲಿನ ತೀವ್ರತೆಗೆ ತಕ್ಕ ಉತ್ತರ ನೀಡುತ್ತವೆ ಎಂದು ಅಭಿಪ್ರಾಯಗಳನ್ನು ನೀಡಿದ್ದಾರೆ.

Sponsored

ನಡುವೆಯೂ ಪಶು ಸಂಗೋಪನೆ ಮತ್ತು ಕೋಳಿ ಪಾಲನೆಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

Also Read:

"ಪ್ರಿಯಾಂಕಾ ಗಾಂಧಿ ಸಂಸತ್ತಿನಲ್ಲಿ ಭಾಷಣ: ಅವರ ಭಾಷಣ ಮತ್ತು ನೀತಿ ಹೇಳಿಕೆಗಳ ಪ್ರಮುಖ ಮುಖ್ಯಾಂಶಗಳು"

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online