belagavi news:
ನವದೆಹಲಿ: ಇದು ಭಾರತವನ್ನು ಡಿಜಿಟಲ್ ಪಾವತಿಗಳಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿದೆ ಎಂದು ಶುಕ್ರವಾರ ಸಂಸತ್ತಿಗೆ ಮಾಹಿತಿ ನೀಡಲಾಗಿದೆ. ಯುಎಇ, ಸಿಂಗಾಪುರ್, ಭೂತಾನ್, ನೇಪಾಲ್, ಶ್ರೀಲಂಕಾ, ಫ್ರಾನ್ಸ್, ಮಾರಿಷಸ್ ಮತ್ತು ಕತಾರ್ ಸೇರಿದಂತೆ ಎಂಟಕ್ಕೂ ಹೆಚ್ಚು ದೇಶಗಳಲ್ಲಿ UPI ಈಗ ಕಾರ್ಯ ನಿರ್ವಹಿಸುತ್ತಿದೆ.ಈ ಒಪ್ಪಂದಗಳು ಇಂಡಿಯಾ ಸ್ಟ್ಯಾಕ್ ಚೌಕಟ್ಟಿನ ಅಡಿ ಭಾರತದ ವಿಶಾಲವಾದ DPI ರಾಜತಾಂತ್ರಿಕತೆಗೆ ಹೊಂದಿಕೆಯಾಗುವ ಡಿಜಿಟಲ್ ಗುರುತು, ಡಿಜಿಟಲ್ ಪಾವತಿಗಳು, ಡೇಟಾ ನಿಯಮ ಮತ್ತು ಸೇವಾ ವಿತರಣಾ ವೇದಿಕೆಗಳಂತ ಕ್ಷೇತ್ರಗಳಲ್ಲಿ ಸಹಕಾರ ನೀಡಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಭಾರತದ G20 ಅಧ್ಯಕ್ಷತೆಯಲ್ಲಿ ಪ್ರಾರಂಭಿಸಲಾದ ಗ್ಲೋಬಲ್ DPI ರೆಪೊಸಿಟರಿಯು ಜಾಗತಿಕ ಜ್ಞಾನ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇಂಡಿಯಾ ಸ್ಟಾಕ್ ಗ್ಲೋಬಲ್ ಭಾರತದ DPI ಪ್ರದರ್ಶಿಸುತ್ತದೆ ಮತ್ತು ಸ್ನೇಹಪರ ದೇಶಗಳಿಂದ ಅದರ ಅಳವಡಿಕೆಗೆ ಅನುಕೂಲ ಮಾಡಿಕೊಡುತ್ತದೆ. ಪೋರ್ಟಲ್ 18 ಪ್ರಮುಖ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಭಾರತವು ಅತ್ಯಧಿಕ ಸಂಖ್ಯೆಯು DPI ಪರಿಹಾರಗಳನ್ನು ಕೊಡುಗೆ ನೀಡುತ್ತದೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು. ಭಾರತದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಈಗ 8ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಈ ದೇಶಗಳಲ್ಲಿ ಯುಎಇ, ಸಿಂಗಾಪುರ್ ಭೂತಾನ್ ನೇಪಾಲ್ ಶ್ರೀಲಂಕಾ ಫ್ರಾನ್ಸ್ ಮಾರಿಷಸ್ ಮತ್ತು ಕತಾರ್ ಸೇರಿವೆ. ಭಾರತದ ಸರ್ಕಾರವು ಇಂಡಿಯಾ ಸ್ಟ್ಯಾಕ್ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ DPI ನಲ್ಲಿ ಹಂಚಿಕೆ ಅಥವಾ ಸಹಕಾರಕ್ಕಾಗಿ 23 ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐ ಟಿ ರಾಜ ಸಚಿವ ನಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
UPI ಈಗ ಅಂತಾರಾಷ್ಟ್ರೀಯವಾಗಿ ಬೆಳವಣಿಗೆ ಕಾಣುತ್ತಿದೆ. ಇದಲ್ಲದೇ ಸರ್ಕಾರ ಇಂಡಿಯಾ ಸ್ಟ್ಯಾಕ್/ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ನಲ್ಲಿ ಹಂಚಿಕೆ ಅಥವಾ ಸಹಕಾರಕ್ಕಾಗಿ 23 ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಎಲೆಕ್ಟ್ರಾನಿಕ್ ಮತ್ತು ಐಟಿ ರಾಜ್ಯ ಸಚಿವ ಜಿತಿನ್ ಪ್ರಸಾದ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಹಣ ರವಾನೆಗೆ ಯುಪಿಐ ಅನ್ನು ವಿದೇಶಗಳಲ್ಲೂ ಹೆಚ್ಚು ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ಜಾಗತಿಕ ಫಿನ್ ಟೆಕ್ ವಲಯದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತಿದೆ. ವಹಿವಾಟಿನ ಮೊತ್ತ ಶೇ.21ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ 28.33 ಲಕ್ಷ ಕೋಟಿಗೆ ತಲುಪಿದೆ, ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ - ಎನ್ ಪಿಸಿಐ ದತ್ತಾಂಶವು ತಿಳಿಸುತ್ತದೆ. ಪ್ರಮುಖ DPI ಮತ್ತು ಡಿಜಿಟಲ್ ಪರಿಹಾರಗಳೆಂದರೆ ಆಧಾರ್,UPI, COWIN, API ಸೇತು, Digilocker, Aarogya Setu, GeM, UMANG, DIKSHA, e-Sanzeevani ಮತ್ತು PM GatiShakti, ಇತ್ಯಾದಿ. ಏತನ್ಮಧ್ಯೆ ಜನೆವರಿ ತಿಂಗಳಲ್ಲಿ ಯುಪಿಐ ವಹಿವಾಟು ಶೇಕಡಾ 28ರಷ್ಟು ಅಂದರೆ 21.70 ಬಿಲಿಯನ್ ಗೆ ತಲುಪಿದೆ.
ಇದರ ಹೊರತಾಗಿ ಭಾರತದ ಡಿಜಿಟಲ್ ಸಾವರ್ಜನಿಕ ಮೂಲಸೌಕರ್ಯದ (DPI) ಯಶಸ್ಸನ್ನು ಜಾಗತಿಕವಾಗಿ ಹಂಚಿಕೊಳ್ಳಲು ಸರ್ಕಾರ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಚಿವರು ತಿಳಿಸಿದರು. ಡಿಜಿಲಾಕರ್ ಗಾಗಿ ಕ್ಯೂಬಾ, ಕೀನ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಲಾವೋ ಪಿಂಪಲ್ಸ್ ಡೆಮಾಕ್ರೆಟಿಕ್ ರಿಪಬ್ಲಿಕ್ (LPDR) ಜೊತೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಇನ್ನಷ್ಟು ಓದಿರಿ: